ದೇಶ

ನೀಟ್ ಫಲಿತಾಂಶದ ಬಳಿಕ ಸೀಟ್ ಅಲಾಟ್ ಮೆಂಟ್ – ಎಚ್ ಪ್ರಸನ್ನ

ಬೆಂಗಳೂರು: ಮೆಡಿಕಲ್, ಇಂಜಿನಿಯರ್ ಕೋರ್ಸ್‍ಗೆ ಕಂಬೈನ್ ಸೀಟ್ ಅಲಾಟ್ ಮೆಂಟ್ ಮಾಡಲಾಗಿದೆ, ಅದರೆ ನೀಟ್ ರಿಸಲ್ಟ್ ಇನ್ನೂ ಬಂದಿಲ್ಲ ಹಾಗಾಗಿ ನೀಟ್ ರಿಸಲ್ಟ್ ಬಂದ ಮೇಲೆ ಕಂಬೈನ್ ಸೀಟ್ ಅಲಾಟ್‍ಮೆಂಟ್ ಮಾಡಲಾಗುತ್ತದೆ ಎಂದು ಕೆಇಎ ನಿರ್ದೇಶಕ ಎಚ ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ಆರ್ಕಿಟೆಕ್ಚರ್ ರಿಸಲ್ಟ್‍ನ ಕೂಡ ಇನ್ನು ಬಿಡುಗಡೆ ಮಾಡಿಲ್ಲ, ಎನ್‍ಏಟಿಎ-2024 ಆಧಾರದ ಮೇಲೆ ರ್ಯಾಂಕನ್ನು ಪ್ರಕಟಿಸಲಾಗುವುದು, ಮೆರಿಟ್ ಸ್ಟೂಡೆಂಟ್ಸ್‍ಗೆ ಇರುವ ಸೀಟ್ ಹೆಚ್ಚಿನ ಹಣಕ್ಕೆ ಮಾರುವಂತಿಲ್ಲ, ಕೇವಲ ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಮಾತ್ರ ಆ ರೀತಿ ಸೀಟ್ ಪಡೆಯಬಹುದು, ಯಾವುದೇ ರೀತಿ ಹೆಚ್ಚಿನ ಹಣಕ್ಕೆ ಮೆರಿಟ್ ಸ್ಟೂಡೆಂಟ್‍ನ ಸೀಟ್ ಅನ್ನು ದುರುಪಯೋಗ ಮಾಡ್ಬಾರದು ಎಂದು ಎಚ್ಚರಿಕೆ ನೀಡಿದರು, ಇನ್ನು ನೀತಿ ಸಮ್ಮಿತಿ ಜಾರಿ ಹಿನ್ನೆಲೆ ಸಚಿವರು ಸಿಇಟಿ ರಿಸಲ್ಟ್ ಘೋಷಣೆ ಮಾಡಲಿಲ್ಲ, ಈಗಾಗಲೇ ತಡ ಆಗಿತ್ತು, ಹಾಗಾಗಿ ಶನಿವಾರ ನಾವೇ ಅನೌನ್ಸ್ ಮಾಡಿದ್ದೇವು, ಈ ಬಾರಿ ಔಟ್‍ಆಫ್ ಸಿಲಬಸ್ ಬಂದ ಪ್ರಶ್ನೆಗಳನ್ನು ಹೊರತು ಪಡಿಸಿ ಹಾಗೂ ಪಿಯು ಫಲಿತಾಂಶ 50 % ಅಧಿರಿಸಿ ರಿಸಲ್ಟ್ ನೀಡಲಾಗಿದೆ,
3,49,653 ಅಭ್ಯರ್ಥಿಗಳು ಅರ್ಚಿ ಸಲ್ಲಿಸಿದ್ದು, ಒಟ್ಟು 3,10,314 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು,

Trending

Exit mobile version