ದೇಶ
ಕುಡಿದ ಅಮಲಿನಲ್ಲಿ ಕಾರ್ ಆಕ್ಸಿಡೆಂಟ್ ರವೀನಾ ಟಂಡನ್ ಅಮಾಯಕಿ ಎಂದ ಪೊಲೀಸರು!

ಮುಂಬೈ: ನಟಿ ರಮೀನಾ ಟಂಡನ್ ಅವರ ವಿರುದ್ಧ ದಾಖಲಾದ ದೂರು ಸುಳ್ಳು ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ,
ನಟಿ ರವೀನಾ ವಿರುದ್ಧ ಕುಡಿದು ವಾಹನ ಚಲಾಯಿಸಿದ ಬಗ್ಗೆ ದೂರು ದಾಖಲಾಗಿತ್ತು, ಈ ಬಗ್ಗೆ ದೂರುದಾರರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ, ಅಲ್ಲದೆ ನಟಿ ಕುಡಿದು ವಾಹನ ಚಲಾಯಿಸಿದ್ದು ಅಲ್ಲದೆ ಕುಟುಂಬದ ಮೇಲೆ ಕಾರು ಹಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದರು,
ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿರುವ ಮುಂಬಯಿ ಡಿಸಿಪಿ ರಾಜ್ ತಿಲಕ್ ರೋಶನ್ ನಟಿ ಕುಡಿದು ವಾಹನ ಚಲಾಯಿಸಿಲ್ಲ, ಅವರ ಕಾರು ಚಾಲಕ ರಸ್ತೆಯಿಂದ ತಮ್ಮ ಮನೆ ಕಡೆಗೆ ವಾಹನ ನಿಲ್ಲಿಸುವಾಗ ಅಲ್ಲಿ ಒಂದು ಕುಟುಂಬ ಬಂದಿದೆ, ಯಾವುದೇ ಅನಾಹುತಗಳಾಗಿಲ್ಲ, ನಮ್ಮ ಸಿಬ್ಬಂದಿ ಅಲ್ಲಿನ ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ ಎಂದಿದ್ದಾರೆ, ನಟಿಯ ಬಗ್ಗೆ ಬಂದ ದೂರು ಸುಳ್ಳು ಎಂದು ಸಾಬೀತಾಗಿದೆ ಎಂದು ತಿಳಿಸಿದರು,