ಚುನಾವಣೆ
ಏಕ ವಚನದಲ್ಲೇ ಅವಿತ್ ಶಾ ಅವರನ್ನು ಟೀಕಿಸಿದ ಬಿಜೆಪಿ ಕಾರ್ಯಕರ್ತ ?

ಉತ್ತರ ಪ್ರದೇಶ: ಮಾನ್ಯ ಅಮಿತ್ ಶಾ ಗುಜರಾತಿ ನಕಲಿ ಚಾಣಕ್ಯ ಅಮಿತ್ ಶಾ ಇಷ್ಟು ಅಹಂಕಾರ ಇರಬಾರದು, ನಿನ್ನ ಆರೋಗ್ಯ ಹಾಳಾಗುತ್ತೆ ಯೋಗಿ ಅವರಿಗೆ ಏನು ಹೇಳೋದು ನೀನು, ಯೋಗಿ ಅವರು ಸೋಲಿಸಿದ್ರಾ?
ಇದು ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತನ ಆಕ್ರೋಶ, ಬಿಜೆಪಿಯ ಪ್ರಮುಖ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಕಾರ್ಯಕರ್ತ ಏಕ ವಚನದಲ್ಲೇ ಶಾ ಅವರನ್ನು ಟೀಕಿಸಿದ್ದಾರೆ,
ನೀರಜ್ ಶೇಖರ್ ಸಿಂಗ್ ಯೋಗಿ ಅವರ ಮಿತ್ರರಾ? ಅವರಿಗೆ ಟಿಕೆಟ್ ಕೊಡಿಸಿದ್ದು ಯಾರು? ಓಂ ಪ್ರಕಾಶ್ ರಾಜ್‍ಬಂಧನ್ ಜೊತೆ ದೋಸ್ತಿ ಮಾಡಲು ಯೋಗಿ ಅವರು ಹೇಳಿದ್ರಾ? ಈ ಎಲ್ಲ ದಲ್ಲಾಳಿ ಕೆಲಸ ಮಡಿದ್ದು ಯಾರು?
ಈ ಎಲ್ಲ ದಲ್ಲಾಳಿ ಕೆಲಸ ಮಾಡಿದ್ದು ನೀನು, ಇದೆಲ್ಲ ಕಾರೋಬಾರು ನೀನು ಮಾಡಿದ್ದು ಬನಾರಸ್‍ನಲ್ಲಿ ಕಳ್ಳತನ ಮಾಡಿದ್ದು ನೀನು, ಬನಾರಸ್‍ನಲ್ಲಿ ಗುಜರಾತಿ ವ್ಯಾಪಾರಿಗಳನ್ನು ತಂದಿರಿಸಿದೆ, ಇಲ್ಲಿನ ವ್ಯಾಪಾರಿಗಳ ದಂಧೆ ಕಸಿದುಕೊಂಡುಬಿಟ್ಟೆ ಅದರಿಂದ ನೀನು ಲಾಭ ಹೊಡೆದೆ, ನಿನ್ನ ಮಗನ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಬಿಟ್ಟು ಅಲ್ಲಿದಲ್ಲಾಳಿ ಕೆಲಸ ಆರಂಭಿಸಿದೆ, ಪೂರ್ವಾಂಚಲದ ಎಲ್ಲ ಸೀಟುಗಳನ್ನು ಮಾರಿಕೊಂಡೆ, ಯೋಗಿ ಬೇಡ ಎಂದರೂ ಓಂಪ್ರಕಾಶ್, ಧಾರಾ ಸಿಂಗ್ ಚೌಹಾಣ್ ಅವರೊಂದಿಗೆ ದೋಸ್ತಿ ಮಾಡಿದೆ, ಮತ್ತೆ ಯೋಗಿ ಹೇಳಿದರೆಂದು ಇದನ್ನೆಲ್ಲ ಮಾಡಿದೆ ಎನ್ನುತ್ತಿಯಾ, ನಾಚಿಕೆ ಆಗಬೇಕು ನಿನಗೆ, ನಿನ್ನ ಗೆಲುವಿಗೂ ಬಾಬಾ ಅವರೇ ಪ್ರಮುಖ ಕಾರಣ, ಅದೇನು ಮಾಡ್ತಿಯೋ ಮಾಡು, ಅರ್ಥ ಕಳ್ಳನ್ ತಗೋಬಂದು ಎಂದು ಕಿಡಿ ಕಾರಿದ್ದಾರೆ,