Connect with us

ದೇಶ

Modi 3.0 Cabinet: 81 ಮಂದಿಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ; ಕರ್ನಾಟಕಕ್ಕೆ ಎಷ್ಟು? ಏನಿದರ ಲೆಕ್ಕಾಚಾರ?

ನವದೆಹಲಿ: ಸತತ 3ನೇ ಬಾರಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಲು ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಮೋದಿ ಪದಗ್ರಹಣದ ಜೊತೆಗೆ ಎಷ್ಟು ಮಂದಿಗೆ ಕೇಂದ್ರ ಸಚಿವರಾಗೋ ಅವಕಾಶ ಸಿಗುತ್ತೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಒಟ್ಟು 81 ಮಂದಿ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ. ಕಳೆದ ಬಾರಿ ನರೇಂದ್ರ ಮೋದಿ ಸರ್ಕಾರದಲ್ಲಿ 29 ಕ್ಯಾಬಿನೆಟ್ ಮಂತ್ರಿಗಳು, 3 ಸ್ವತಂತ್ರ ಖಾತೆ ಸಚಿವರು, 47 ಮಂದಿ ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 79 ಮಂದಿ ಇದ್ದರು. ಕ್ಯಾಬಿನೆಟ್, ಸ್ವತಂತ್ರ ಖಾತೆ, ರಾಜ್ಯ ಖಾತೆ ಸೇರಿದಂತೆ 81 ಮಂದಿ ಸಂಸದರಿಗೆ ಈಗ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನದ ಅವಕಾಶ ಸಿಗಲಿದೆ.

ಉತ್ತರ ಪ್ರದೇಶಕ್ಕೆ ಸಿಂಹಪಾಲು!
81 ಸಚಿವ ಸ್ಥಾನದಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ನೀಡಬೇಕು ಅನ್ನೋದು ಪ್ರಧಾನಿ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳಿರುವ ರಾಜ್ಯಕ್ಕೆ ಹೆಚ್ಚಿನ ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತೆ. 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಿಂದ ಬಿಜೆಪಿಯ 33 ಮಂದಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶಕ್ಕೆ ಆರೇಳು ಸಚಿವ ಸ್ಥಾನ ಸಿಗಬಹುದು.

ಉತ್ತರಪ್ರದೇಶ ಹೊರೆತುಪಡಿಸಿದರೆ ಮುಂದಿನ ದಿನಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಹೆಚ್ಚಿನ ಸಚಿವ ಸ್ಥಾನ ನೀಡಲಾಗುತ್ತೆ. ಈ ವರ್ಷ ಅಂತ್ಯಕ್ಕೆ ಮಹಾರಾಷ್ಟ್ರದಲ್ಲಿ ಅಸೆಂಬ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನ ನೀಡುವ ಮನಸು ಮಾಡಬಹುದು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಎನ್‌ಡಿಎ ಗೆದ್ದಿರೋದೇ ಕೇವಲ 17 ಕ್ಷೇತ್ರಗಳು ಮಾತ್ರ. ಹೀಗಾಗಿ ಮಹಾರಾಷ್ಟ್ರಕ್ಕೂ 5-6 ಸಚಿವ ಸ್ಥಾನ ಮೈತ್ರಿಯ ಕಾರಣದಿಂದ ಸಿಗಬಹುದು. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ರಾಜ್ಯಸಭಾ ಸದಸ್ಯರಿಗೆ ಸಚಿವ ಸ್ಥಾನ ನೀಡಬಹುದು.

ಬಿಜೆಪಿ ಮಿತ್ರಪಕ್ಷ ಟಿಡಿಪಿ, ಜೆಡಿಯು, ಶಿಂಧೆ ಶಿವಸೇನಾ, ಎಲ್‌ಜೆಪಿ ಪಕ್ಷಗಳ ಬೇಡಿಕೆ ಈಡೇರಿಸುವುದು ಎನ್‌ಡಿಎಗೆ ಅನಿವಾರ್ಯವಾಗಿದೆ. ಕರ್ನಾಟಕದಿಂದ 19 ಮಂದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಜಾತಿ, ಪ್ರದೇಶವಾರು ಲೆಕ್ಕಾಚಾರ ಹಾಕಿ ಮೂರರಿಂದ ನಾಲ್ಕು ಸಚಿವ ಸ್ಥಾನ ಕರ್ನಾಟಕಕ್ಕೂ ಸಿಗುವ ಸಾಧ್ಯತೆ ಇದೆ.

ದೇಶ

ನಾವು ಉಗ್ರವಾದ ಪೋಷಿಸಿದ್ದು ನಿಜ ಎಂದು ತಪ್ಪೊಪ್ಪಿಕೊಂಡ ಪಾಕ್ ನಾಯಕಿ!

ಪಾಕಿಸ್ತಾನವು ಉಗ್ರರನ್ನು ಹಾಗೂ ಉಗ್ರರ ಚಟುವಟಿಕೆಯನ್ನು ಪೋಷಿಸಿಕೊಂಡು ಬಂದಿರುವುದು ಸತ್ಯ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕಿ ಹಾಗೂ ಸಂಸದೆ ಶೆರ್ರಿ ರೆಹಮಾನ್ ಅವರು ಒಪ್ಪಿಕೊಂಡಿದ್ದಾರೆ,
ಸ್ಕೈ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಂಸದೆ ಶೆರ್ರಿ ರೆಹಮಾನ್ ಭಾಗಿಯಾಗಿದ್ದು, ನಿರೂಪಕಿ ಹಾಗೂ ಸಂಸದೆಯ ನಡುವೆ ಮಾತಿನ ಚಕಮಕಿ ನಡೆದಿದೆ, ಸಂದರ್ಶನದ ಬಿರುಸಿನ ನಡುವೆ ನಿರೂಪಕಿ ಸಾಕ್ಷ್ಯಾಧಾರಗಳನ್ನು ತೋರಿಸಿದ್ದು, ಈ ವೇಳೆ ಪಾಕಿಸ್ತಾನದ ಸಂಸದೆಯ ಬಾಯಿಂದ ಪಾಕಿಸ್ತಾನ ಹಾಗೂ ಉಗ್ರರಿಗೂ ಇರುವ ನಂಟಿನ ಅಸಲಿ ವಿಚಾರಗಳು ಬಹಿರಂಗೊಂಡಿದೆ,
ನಿರೂಪಕಿ ಯಾಲ್ದಾ ಹಕೀಮ್ ಬ್ರಿಗೇಡ್ 313 ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆರ್ರಿ ರೆಹಮಾನ್ ಈ ಹಿಂದೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿದ್ದು ನಿಜ, ಆದರೆ ನಾವು ಈಗ ಉಗ್ರವಾದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ, ಪಾಕಿಸ್ತಾನ ರಾಷ್ಟ್ರವು ಬದಲಾಗಿದೆ ಎಂದರು,
ಇನ್ನು ಕಾಶ್ಮೀರವನ್ನು ಗುರಯಾಗಿಸಿಕೊಂಡು ಭಾರತದಲ್ಲಿ ನಡೆಯುತ್ತಿರುವ ದಾಳಿ ಬಗ್ಗೆ ನಿರೂಪಕಿ ಪ್ರಸ್ತಾಪಿಸದಾಗ ಉತ್ತರಿಸಿದ ಶೆರ್ರಿ ರೆಹಮಾನ್ ಭಾರತದಲ್ಲೂ ಆಂತರಿಕ ಸಂಘರ್ಷಗಳು ನಡೆಯುತ್ತಿವೆ, ಅಲ್ಲಿನ ಭದ್ರತೆಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ನಾವು ಜವಾಬ್ದಾರರೇ? ಎಂದು ಪ್ರಶ್ನಿಸಿದರು,

Continue Reading

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

ಕ್ರೀಡೆ

ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಹೇಗೆ ರೂಪಿಸುತ್ತದೆ ನಾನು ನೇರವಾಗಿ ಅನುಭವಿಸಿದ್ದೇನೆ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಲೆಜೆಂಡ್​​ ಪ್ರಕಾಶ್ ಪಡುಕೋಣೆ ಅವರ 70ನೇ ಹುಟ್ಟುಹಬ್ಬವನ್ನಿಂದು ಬಹಳ ವಿಶೇಷವಾಗಿ ಆಚರಿಸಿದರು.

‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (ಪಿಎಸ್​ಬಿ) ಬೆಂಗಳೂರು, ಎನ್​​ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಇನ್​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.

“ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ” ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ, “ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆಯು ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಮೂಲಕ, ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಹಂತದ ಜನರಿಗೆ ತಲುಪಿಸಲು ಮತ್ತು ಆರೋಗ್ಯಕರ, ಫೋಕಸ್ಡ್​​ ಮತ್ತು ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಅಪ್ಪಾ, ನಿಮ್ಮನ್ನು ಚೆನ್ನಾಗಿ ತಿಳಿದಿರುವವರಿಗೆ ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹವೂ ತಿಳಿದಿದೆ. 70ನೇ ವಯಸ್ಸಿನಲ್ಲಿಯೂ ನೀವು ಬ್ಯಾಡ್ಮಿಂಟನ್​ಗೆ ನಿಮ್ಮನ್ನು ಸಮರ್ಪಿಸಿದ್ದೀರಿ. ನಿಮ್ಮ ಉತ್ಸಾಹವನ್ನು ನಿಜವಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗಾಗಿ ಬ್ಯಾಡ್ಮಿಂಟನ್! 70ನೇ ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ!” ಎಂದು ಬರೆದುಕೊಂಡಿದ್ದಾರೆ.

ನಟಿ ಶೇರ್ ಮಾಡಿದ ಪ್ರಕಟಣೆಯಲ್ಲಿ, ಪಿಎಸ್‌ಬಿಯ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ ತಮ್ಮ ಮನದಾಳವನ್ನೂ ಹಂಚಿಕೊಂಡರು. “ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ಇದು ಶಿಸ್ತು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವಿನ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಪಿಎಸ್‌ಬಿಯೊಂದಿಗೆ, ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದು ಮತ್ತು ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುವುದು ನಮ್ಮ ಗುರಿ” ಎಂದು ಹೇಳಿದರು.

ಭಾರತದ 18 ನಗರಗಳಲ್ಲಿ 75 ಕೇಂದ್ರಗಳು ಆರಂಭಗೊಂಡಿದ್ದು, ಈ ವರ್ಷದ ಕೊನೆಗೆ 100 ಕೇಂದ್ರಗಳು ಮತ್ತು 2027ರ ಹೊತ್ತಿಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ‘ಪಡುಕೋಣೆ ಸ್ಕೂಲ್​ ಆಫ್​​ ಬ್ಯಾಡ್ಮಿಂಟನ್’ ಹೊಂದಿದೆ. ದೀಪಿಕಾ ಪಡುಕೋಣೆ ಇದರ ಸಂಸ್ಥಾಪಕಿಯಾದರೆ, ಪ್ರಕಾಶ್​ ಪಡುಕೋಣೆ ಮಾರ್ಗದರ್ಶಕರಾಗಿ ಪಿಎಸ್​ಬಿಯ ಭಾಗವಾಗಿದ್ದಾರೆ

Continue Reading

Trending