Connect with us

ಚುನಾವಣೆ

ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಪ್ರತಿ ಗ್ರಾಮವನ್ನೂ ಅಭಿವೃದ್ಧಿಪಡಿಸಿ- ಪ್ರಧಾನಿ ಮೋದಿ ಕರೆ

Published

on

ಪ್ರಧಾನಿ ಮೋದಿ ಅವರ ಮನ್ ಕಿ ಬಾತ್

ನವದೆಹಲಿದೇಶಾದ್ಯಂತ 600ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಎಂಎನ್‌ಜಿಆರ್‌ಇಜಿಎ (ಮನರೇಗಾ) ನಿಧಿಯನ್ನು ಕೆರೆ ನಿರ್ಮಾಣ, ಮಣ್ಣಿನ ರಸ್ತೆ ಕೆಲಸ ಅಥವಾ ನೆಡುತೋಪು ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಬಳಸಬಹುದು ಎಂದು ಹೇಳಿದರು.

”2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಪ್ರತಿ ಗ್ರಾಮ, ತಾಲೂಕು ಮತ್ತು ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೀಪ ಬೆಳಗಬೇಕು. ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬುದು ಬಿಜೆಪಿಗೆ ಕೇವಲ ಘೋಷಣೆಯಲ್ಲ. ಪ್ರತಿ ಕ್ಷಣವೂ ಅದರ ಅಡಿಯಲ್ಲಿ ನಾವು ಬದುಕಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ಮೊದಲು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ತಮ್ಮದೇ ಅನುಭವ ಉಲ್ಲೇಖಿಸಿದ ಮೋದಿ, ”ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಗ್ರಾಮ ಮತ್ತು ಜಿಲ್ಲೆಗಳಿಗೆ ಆದ್ಯತೆಯಾಗಿ ಕೆಲವು ಕೆಲಸಗಳನ್ನು ಕೈಗೊಳ್ಳಬೇಕು. ಜನರ ಬೆಂಬಲವನ್ನು ಪಡೆಯುವ ಮೂಲಕ ಯಶಸ್ವಿಗೊಳಿಸಲು ಮುಂದಾಗಬೇಕು” ಎಂದು ಸಲಹೆ ಕೊಟ್ಟರು.

”ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಶೌಚಾಲಯ ನಿರ್ಮಿಸಿ, ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದೇವೆ. ಸ್ಥಳೀಯ ಸಂಸ್ಥೆಗಳ ನಿಧಿ ಬಹುಪಟ್ಟು ಏರಿದೆ. ಸಂಪನ್ಮೂಲಗಳ ನಿರ್ಬಂಧವಿಲ್ಲ ಎಂಬುದನ್ನು ಗಮನಿಸಿ ಪ್ರತಿ ವರ್ಷ ಮೂರು ಯೋಜನೆಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಗಳನ್ನು ನಡೆಸಬೇಕು” ಎಂದು ತಿಳಿಸಿದರು.

”ಈ ಹಿಂದೆ 70,000 ಕೋಟಿ ರೂ.ಗಳಷ್ಟಿದ್ದ ಅನುದಾನ ಈಗ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ. ನಾವು 30,000 ಜಿಲ್ಲಾ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. MNREGA (ನರೇಗಾ) ಬಜೆಟ್‌ನ ಒಂದು ಭಾಗವನ್ನು ಆಸ್ತಿಸೃಷ್ಟಿಗೆ ಬಳಸಲು ಒತ್ತು ಕೊಡಲಾಗಿದೆ. ಸ್ಥಳೀಯ ಸಂಸ್ಥೆಗಳ ಬಿಜೆಪಿ ಸದಸ್ಯರು ಇದೇ ರೀತಿಯ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಪಕ್ಷವು ಚುನಾವಣೆಗಳನ್ನು ಗೆಲ್ಲಲು ಮಾಡುತ್ತಿಲ್ಲ. ಆದರೆ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಕೆಲಸ ಮಾಡುತ್ತದೆ” ಎಂದು ಮೋದಿ ವಿವರಿಸಿದರು. “ನಾವು ಸಂಘಟನೆ, ಮೌಲ್ಯಗಳು ಹಾಗು ಸಮರ್ಪಣಾ ಮನೋಭಾವವನ್ನು ನಂಬುತ್ತೇವೆ. ನಾವು ಸಾಮೂಹಿಕ ಜವಾಬ್ದಾರಿಯನ್ನು ಮುಂದುವರಿಯುತ್ತೇವೆ. ನಮಗೆ ನೀಡಿದ ಜವಾಬ್ದಾರಿಗಾಗಿ ನಮ್ಮ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತೇವೆ” ಎಂದು ಪ್ರಧಾನಿ ಭರವಸೆ ನೀಡಿದರು

ಚುನಾವಣೆ

TN 2026 ಟೀಸರ್‌ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ

Published

on

By

ಚೆನ್ನೈ: ಮುಂದಿನ ವಾರ ಬಿಡುಗಡೆಯಾಗಲಿರುವ ತಮಿಳು ಸಿನಿಮಾ TN 2026 – ತಂಗೈ ನಚ್ಚಥಿರಂ ಟೀಸರ್ ಏಪ್ರಿಲ್ 2ರಂದು ಬಿಡುಗಡೆಯಾದ ಬಳಿಕ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಟೀಸರ್‌ನಲ್ಲಿ ನಟ Nataraj (Natti) ಅಭಿನಯಿಸಿರುವ “ಗೋಲ್ಡನ್ ಸ್ಟಾರ್ ಗುಲ್ಕಂದ್ ಕುಮಾರ್” ಎಂಬ ಪಾತ್ರ ರಾಜಕೀಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಟೀಸರ್ ವೈರಲ್ ಆದ ತಕ್ಷಣ, Tamilaga Vettri Kazhagam (ಟಿವಿಕೆ) ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ Vijay ಅವರನ್ನು ಗುರಿಯಾಗಿಸಿಕೊಂಡು ಟೀಸರ್ ರೂಪಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

ಟೀಸರ್‌ನಲ್ಲಿ ಗುಲ್ಕಂದ್ ಕುಮಾರ್ ಪಾತ್ರವು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ, ವಿಜಯ್ ಅವರಂತೆಯೇ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಅವರ ನಡಿಗೆ ಮತ್ತು ಜನರತ್ತ ಕೈ ಬೀಸುವ ಶೈಲಿಯನ್ನು ಅನುಕರಿಸಿರುವುದು ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ನಟ Redin Kingsley ಅವರ ಪಾತ್ರವೊಂದು ವೇದಿಕೆಯಲ್ಲಿ “ಹೇ ಮೂವಿ-ಬಾಯ್…” ಎಂದು ಗೇಲಿ ಮಾಡುವ ಸಂಭಾಷಣೆ ಕೂಡ ಟೀಕೆಗೆ ಗುರಿಯಾಗಿದೆ.

ಟೀಸರ್ ಕೊನೆಯಲ್ಲಿ ಕೇಳಿಬರುವ “ಓಂ ಶಕ್ತಿ ಪರಾಶಕ್ತಿ” ಘೋಷಣೆ ಕೂಡ ವಿಜಯ್ ಇತ್ತೀಚೆಗೆ ರಾಜಕೀಯ ವೇದಿಕೆಯಲ್ಲಿ ಬಳಸಿದ ನುಡಿಗಟ್ಟನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ನಾಯಕ Aadhav Arjun, “ಇದು ವಿಜಯ್ ವರ್ಚಸ್ಸಿಗೆ ಧಕ್ಕೆ ತರಲು Dravida Munnetra Kazhagam (ಡಿಎಂಕೆ) ಮತ್ತು ಬಿಜೆಪಿ ಜಂಟಿಯಾಗಿ ನಡೆಸಿದ ಪಿತೂರಿ” ಎಂದು ಆರೋಪಿಸಿದ್ದಾರೆ. ಜನರು ಇಂತಹ ಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

Umapathy Ramaiah ನಿರ್ದೇಶನದ ಈ ಚಿತ್ರದಲ್ಲಿ Thambi Ramaiah, M. S. Bhaskar, Ilavarasu, Yashika Aannand ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ. ಏಪ್ರಿಲ್ 10ರಂದು ಬಿಡುಗಡೆಯಾಗಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

Continue Reading

ಚುನಾವಣೆ

“ನಾಲ್ಕು ಮದುವೆಗೆ ಬ್ರೇಕ್” – ಶಾ ಘೋಷಣೆ ಸಂಚಲನ

Published

on

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯ ಕಾವು ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಗೃಹ ಸಚಿವ Amit Shah ಮಹತ್ವದ ಘೋಷಣೆ ಮಾಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಗೋಲ್ಪಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶಾ, “ಅಕ್ರಮ ನುಸುಳುಕೋರರು ನಾಲ್ಕು ಮದುವೆಯಾಗುವುದನ್ನು ತಡೆಯಲು ಯುಸಿಸಿ ಅಗತ್ಯ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು. ಪ್ರಧಾನಿ Narendra Modi ಮತ್ತು ಅಸ್ಸಾಂ ಮುಖ್ಯಮಂತ್ರಿ Himanta Biswa Sarma ಬುಡಕಟ್ಟು ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದ್ದಾರೆ ಎಂದರು.

ಬುಡಕಟ್ಟು ಪ್ರದೇಶಗಳಲ್ಲಿ ಯುಸಿಸಿ ಜಾರಿಯಾಗುವುದಿಲ್ಲ ಎಂಬುದನ್ನು ಶಾ ಸ್ಪಷ್ಟಪಡಿಸಿ, ಕಾಂಗ್ರೆಸ್ ಹರಡುತ್ತಿರುವ ಗಾಳಿಸುದ್ದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಬುಡಕಟ್ಟು ಪ್ರದೇಶಗಳನ್ನು ಯುಸಿಸಿಯಿಂದ ಹೊರಗಿಡಲಾಗುತ್ತದೆ” ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “70 ವರ್ಷ ಆಡಳಿತ ನಡೆಸಿದರೂ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯಾಗಿಸಲು ಸಾಧ್ಯವಾಗಲಿಲ್ಲ. ಆದರೆ ಮೋದಿ ನಾಯಕತ್ವದಲ್ಲಿ ಅದು ಸಾಧ್ಯವಾಯಿತು” ಎಂದು ಟೀಕಿಸಿದರು.

Assam ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡು ಅವಧಿಗೆ ಮುಖ್ಯಮಂತ್ರಿ ಆಗಿರುವ ಹಿಮಂತ ಬಿಸ್ವಾ ಶರ್ಮಾ ಮತ್ತೆ ಅಧಿಕಾರಕ್ಕೇರಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಮರುಪಡೆಯಲು ಹೋರಾಟ ನಡೆಸುತ್ತಿದೆ.

ಒಟ್ಟಿನಲ್ಲಿ, ಯುಸಿಸಿ ವಿಚಾರ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿದ್ದು, ಅಸ್ಸಾಂ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Continue Reading

ಚುನಾವಣೆ

‘ಸಿಂಗಂ’ ಅಣ್ಣಾಮಲೈ ನಡೆಗೆ ಅಭಿಮಾನಿಗಳ ಸಲಾಂ

Published

on

By

ಕಣ್ಣೂರು: ತಮಿಳುನಾಡಿನಲ್ಲಿ ಬಿಜೆಪಿ ಪ್ರಚಾರಕ್ಕೆ ಸಂಪೂರ್ಣ ಶಕ್ತಿ ಹಾಕುವುದಾಗಿ K. Annamalai ಘೋಷಿಸಿದ್ದು, ಅವರ ಪಕ್ಷನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಹೈಕಮಾಂಡ್ ನೀಡಿದ ಜವಾಬ್ದಾರಿಯಂತೆ ರಾಜ್ಯದ ಮೂಲೆಮೂಲೆಗೂ ತೆರಳಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ನನ್ನ ಕರ್ತವ್ಯ. 7ರಿಂದ 23ರವರೆಗೆ ತಮಿಳುನಾಡಿನಾದ್ಯಂತ ಪ್ರಚಾರ ನಡೆಸುತ್ತೇನೆ” ಎಂದು ಸ್ಪಷ್ಟಪಡಿಸಿದರು. ಪುದುಚೇರಿ ಮತ್ತು ಕೇರಳದಲ್ಲಿಯೂ ಪ್ರಚಾರದ ಹೊಣೆಗಾರಿಕೆ ನೀಡಲಾಗಿದೆ ಎಂದೂ ಹೇಳಿದರು.

ಟಿಕೆಟ್ ಸಿಗದಿದ್ದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಪಕ್ಷದ ಪರವಾಗಿ ನಿಂತಿರುವ ಅಣ್ಣಾಮಲೈ ನಡೆ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. Bharatiya Janata Party ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರದಿದ್ದರೂ, ಪ್ರಚಾರಕ್ಕೆ ಸಜ್ಜಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ.

ಅಣ್ಣಾಮಲೈ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಅವರನ್ನು “ಸಿಂಗಂ” ಎಂದು ಕೊಂಡಾಡುತ್ತಿದ್ದು, ಪಕ್ಷನಿಷ್ಠೆ ಮತ್ತು ಶಿಸ್ತಿನ ಉದಾಹರಣೆಯಾಗಿ ಗುರುತಿಸಿದ್ದಾರೆ. ಇತ್ತೀಚಿನ ರಾಜಕೀಯದಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷಾಂತರ ಮಾಡುವ ಪ್ರವೃತ್ತಿ ಹೆಚ್ಚಿರುವ ನಡುವೆಯೇ, ಅವರ ನಿಲುವು ವಿಭಿನ್ನವಾಗಿ ಕಾಣುತ್ತಿದೆ.

ಒಟ್ಟಿನಲ್ಲಿ, ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರೂ ಪಕ್ಷವನ್ನು ಬಲಪಡಿಸುವತ್ತ ಅಣ್ಣಾಮಲೈ ಗಮನ ಹರಿಸಿರುವುದು ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Continue Reading

Trending