ದೇಶ

ಜಿ7 ಶೃಂಗಸಭೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಮೋದಿ- ಮೆಲೋನಿ

ರೋಮ್: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜಿ7 ಶೃಂಗಸಭೆಯ ಸಂದರ್ಭ ಸೆಲ್ಫಿಗೆ ಪೋಸ್ ನೀಡಿದ್ದಾರೆ,
ಮೋದಿ ಹಾಗೂ ಮೆಲೋನಿ ಜೋಡಿಯನ್ನು ನೆಟ್ಟಿಗರು ಮೆಲೋಡಿ ಎಂದು ಕರೆದು ಯಾವಾಗಲೂ ನಾಯಕರ ಕಾಲೆಳೆಯುತ್ತಾರೆ, ಇಬ್ಬರ ಭೇಟಿಯ ಸಂದರ್ಭ ಯಾವಾಗಲೂ ಇಂಟರ್ನೆಟ್‍ನಲ್ಲಿ ಧೂಳೆಬ್ಬಿಸುತ್ತಾರೆ, ಇದೀಗ ಮೋದಿ ಹಾಗೂ ಮೆಲೋನಿ ಸಲ್ಫಿ ಕ್ಲಿಕ್ಕಿಸಿಕೊಂಡಿರುವುದು ಟ್ರೋಲಿಗರು ಹಾಗೂ ಮೀಮ್ಸ್ ಮಾಡವವರಿಗೆ ಹಬ್ಬವೇ ಎನಿಸಿಕೊಂಡಿದೆ,
ಶೃಂಗಸಭೆ ಆರಂಭವಾದ ದಿನವೋ ಮೆಲೋನಿ ವಿಶ್ವ ನಾಯಕರನ್ನು ಸ್ವಾಗತಿಸಲು ನಮಸ್ಕಾರ ಮಾಡಿರುವ ವೀಡಿಯೋ ಕೂಡಾ ಭಾರೀ ವೈರಲ್ ಆಗಿತ್ತು, ಮೇಲೋನಿ ಮೇಲೆ ಮೋದಿ ಪ್ರಭಾವ ಬೀರಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು,
ಈ ಹಿಂದೆ ಮೆಲೋನಿ ಮೋದಿ ಅವರನ್ನು ಭೇಟಿಯಾದಾಗ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ತಮ್ಮ ಆತ್ಮೀಯ ಸ್ನೇಹಿತ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು,

Trending

Exit mobile version