Connect with us

ಅಪರಾಧ

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ಸಂಕಷ್ಟ ಫಿಕ್ಸ್..! ಜೀವಾವಧಿ ಸೇರಿ ಯಾವ್ಯಾವ ಶಿಕ್ಷೆ..?

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್​​ ಮುಳುವಾಗಿ ಪರಿಣಮಿಸುತ್ತಿದೆ. ಪೊಲೀಸರ ಕಸ್ಟಡಿಯಲ್ಲಿರುವ ದರ್ಶನ್​​ಗೆ ನರಕದರ್ಶನ ಆಗ್ತಿದೆ. ಈಗಾಗ್ಲೇ ಹತ್ಯೆ ಮಾಡಿದ ಆರೋಪ ಸುತ್ಕೊಂಡ ಪಾಪಕ್ಕೆ ಜೀವಾವಧಿ ನೀಡಬಹುದಾದ IPC 302 ಸೆಕ್ಷನ್ ದಾಖಲಾಗಿದೆ. ಪ್ರಾಥಮಿಕವಾಗಿ 302 ಅಂಡ್ 201 ಅಡಿ ಕೇಸ್ ದಾಖಲಾಗಿದೆ. ಮುಂದೆ 364, 120ಬಿ ಸೆಕ್ಷನ್​​ಗಳು ಸೇರಿಸೋ ಸಾಧ್ಯತೆಯೂ ಇದೆ..

ಯಾವ್ಯಾವ ಶಿಕ್ಷೆ?

  • ಶಿಕ್ಷೆ 01 : IPC 201 ಅಡಿ ಸಾಕ್ಷಿ ತಿರುಚುವುದು ಅಥವಾ ನಾಶ ಯತ್ನಕ್ಕೆ ಜೀವಾವಧಿ
  • ಶಿಕ್ಷೆ 02 : IPC 364 ಅಡಿ ಜೀವಾವಧಿ ಅಥವಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
  • ಶಿಕ್ಷೆ 03 : IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ 10 ವರ್ಷ ಕಠಿಣ ಸೆರೆಯ ಸಜೆ.
  • IPC 201 ಅಡಿ ಸಾಕ್ಷಿ ತಿರುಚುವುದು, ಸಾಕ್ಷ್ಯ ನಾಶಕ್ಕೆ ಯತ್ನಿಸಿರೋದು ಜೀವಾವಧಿ ಸಜೆ ಆಗಬಹುದು.. IPC 364 ಅಡಿ ಜೀವಾವಧಿ ಅಥವಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಗೂ ಅವಕಾಶ ಇದೆ.. IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ10 ವರ್ಷ ಕಠಿಣ ಸೆರೆವಾಸ ಆಗಲಿದೆ. ಇದು ಸದ್ಯ ದರ್ಶನ್​​ ಆ್ಯಂಡ್​ ಗ್ಯಾಂಗ್​ ವಿರುದ್ಧ ದಾಖಲಾದ ಮತ್ತು ದಾಖಲಾಗಲಿರುವ ಸೆಕ್ಷನ್​​ಗಳು.. ಹಾಗಾದ್ರೆ, ದರ್ಶನ್​ ವಿರುದ್ಧ ಅಷ್ಟು ಬಲವಾದ ಸಾಕ್ಷ್ಯಗಳು ಸಿಕ್ಕಿ ಬಿಟ್ವಾ?
  • ದರ್ಶನ್ ಬಗ್ಗೆ ಇರುವ ಸಾಕ್ಷಿ
  • ಸಾಕ್ಷಿ 1 : ಶೆಡ್​ಗೆ ದರ್ಶನ್ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು
  • ಸಾಕ್ಷಿ 2 : ದರ್ಶನ್​ನ CDR ರಿಪೋರ್ಟ್ ಸಹ ಸ್ಪಷ್ಟವಾಗಿ ಹೋಲಿಕೆ
  • ಸಾಕ್ಷಿ 3 : ದರ್ಶನ್​ಗೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ಫೋನ್​​​ ಕಾಲ್
  • ಸಾಕ್ಷಿ 4 : ಆರೋಪಿ ವಿನಯ್​ ಕಾಲ್ ಮಾಡಿ ಮಾಹಿತಿ ಕೊಟ್ಟ ಡಿಟೇಲ್ಸ್
  • ಸಾಕ್ಷಿ 5 : ಆದಾದ ಬಳಿಕ ಪವಿತ್ರಗೌಡಗೆ ಕರೆ ಮಾಡಿರೋದು ಸಹ ಪತ್ತೆ
  • ಸಾಕ್ಷಿ 6 : ಪವಿತ್ರಾ ಮನೆ ಬಳಿ ಹೋಗಿ ದರ್ಶನ್​ ಕರೆತಂದ ಸಾಕ್ಷಿ ಲಭ್ಯ
  • ಸಾಕ್ಷಿ 7 : ಈ ಬಗ್ಗೆ ಸಿಡಿಆರ್ ಮತ್ತು ಸಿಸಿಟಿವಿ ಸಾಕ್ಷಿಗಳು ಪತ್ತೆಯಾಗಿವೆ
  • ಸಾಕ್ಷಿ 8 : ಮಹಜರ್ ವೇಳೆ ಪಂಚರ ಮುಂದೆ ದರ್ಶನ್ ಒಪ್ಪಿದ ಹೇಳಿಕೆ
  • ಇವು ಟೆಕ್ನಿಕಲ್​ ಎವಿಡೆನ್ಸ್​.. ಇದಷ್ಟೇ ಅಲ್ಲ.. ಕೊಲೆಯಲ್ಲಿ ಭಾಗಿಯಾದ ಬಗ್ಗೆಯೂ ಸಾಕ್ಷಿಗಳು ಸಿಕ್ಕಿವೆ.. ಅವು ಕೂಡ ದರ್ಶನ್​​ ವಿರುದ್ಧವೇ ಸಾಕ್ಷಿ ನುಡಿತಿವೆ.
  • ದರ್ಶನ್ ಕೊಲೆಯಲ್ಲಿ ಭಾಗಿಗೆ ಸಾಕ್ಷಿ
    ಸ್ವತಃ ದರ್ಶನ್ ಬಗ್ಗೆ ಆತನ ಅಪ್ತ ವಿನಯ್ ಕೊಟ್ಟ ಹೇಳಿಕೆ ಮುಳುವಾಗಿದೆ. ದರ್ಶನ್ ಹೊಡೆದಾಗಲೇ ರೇಣುಕಾ ಸತ್ತಿದ್ದು ಅಂತ ವಿನಯ್​ ಹೇಳಿಕೆ ನೀಡಿದ್ದಾನೆ. ಅಲ್ಲದೆ, ದರ್ಶನ್ ಹಲ್ಲೆ ಮಾಡಿರೋ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆರೋಪಿ ದೀಪಕ್​​ ಹಲ್ಲೆ ಮಾಡಿದ ವಿಡಿಯೋ ರೆಕಾರ್ಡ್ ಮಾಡ್ಕೊಂಡಿದ್ದಾನೆ. ಸದ್ಯ ಇದೇ ದೀಪಕ್​​ನಿಂದ 164 ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.. ಮಹಜರ್ ವೇಳೆ ಆತನ ಎತ್ತಿ ಎಸೆದ ಬಗ್ಗೆ ಹತ್ಯೆ ಆರೋಪಿ ದರ್ಶನ್ ಒಪ್ಪಿದ್ದು, ಟೆಂಪೋ ಟ್ರಾವೆಲ್ಲರ್​ಗೆ ರೇಣುಕಾ ತಲೆ ಬಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.. ಅಲ್ಲದೇ ಶೆಡ್​ನಲ್ಲಿ ಮೃತನ ಬಯೋಲಾಜಿಕಲ್ ಎವಿಡೆನ್ಸ್ ಸಿಕ್ಕಿವೆ.. ಮೃತನ ರಕ್ತ, ಫಿಂಗರ್ ಪ್ರಿಂಟ್, ಕೂದಲು ಮತ್ತು ಚರ್ಮದ ತುಂಡು ಲಭ್ಯ ಆಗಿವೆ.ಈ ಮೂಲಕ ರೇಣುಕಾಸ್ವಾಮಿ ಶೆಡ್​ನಲ್ಲೇ ಸತ್ತಿದ್ದು ಕನ್ಫರ್ಮ್ ಆಗಿದೆ.. ಜತೆಗೆ ಹಲ್ಲೆ ಮಾಡಿದ ವೆಪನ್ಸ್​ಗಳು ಸೀಜ್​​ ಮಾಡ್ಲಾಗಿದೆ.
  • ಹಲ್ಲೆ ಮಾಡಿದ ವೆಫನ್ಸ್ ಸೀಜ್
  • ರಿಪೀಸ್, ಸ್ಟಿಕ್ ಮತ್ತು ಹಗ್ಗದಿಂದ ಹಲ್ಲೆ ಮಾಡಲಾಗಿತ್ತು.. ಸದ್ಯ ಆ ರಿಪೀಸ್, ಸ್ಟಿಕ್ ಮತ್ತು ಹಗ್ಗವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ರೇಣುಕಾ ಮೃತದೇಹದಲ್ಲಿ ದರ್ಶನ್ ಪಿಂಗರ್ ಪ್ರಿಂಟ್ ಸಹ ಪತ್ತೆ ಆಗಿದೆ.. ಅಲ್ಲದೇ ವೆಪನ್​ ಮೇಲೂ ದರ್ಶನ್ ಪಿಂಗರ್ ಪ್ರಿಂಟ್ ಇದೆ.. ಇನ್ನು, ಟೆಂಪೋ ಟ್ರಾವೆಲ್ಲರ್, ಕೃತ್ಯಕ್ಕೆ ಬಳಸಿದ ವಾಹನಗಳನ್ನ ಸೀಜ್ ಮಾಡ್ಲಾಗಿದೆ. ಈ ಪ್ರಕರಣದಲ್ಲಿ ತುಂಬಾ ಇಂಪಾರ್ಟೆಂಟ್​​ ಅಂದ್ರೆ ಮರಣೊತ್ತರ ಪರೀಕ್ಷೆ.. ಈ ಪರೀಕ್ಷೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡ್ಲಾಗಿದೆ ಅಂತ ವರದಿ​​ ನೀಡ್ಲಾಗಿದೆ. ಕುತ್ತಿಗೆ, ಮೂಗು ಕಟ್ ಆಗಿದೆ, ತಲೆ ಒಡೆದಿದೆ. ದೇಹಕ್ಕೆ ಬರೆ ಹಾಕಿರೋ ಬಗ್ಗೆಯೂ ಗೊತ್ತಾಗಿದೆ. ಪೋಸ್ಟ್​​​ಮಾರ್ಟ್​ಂ ರಿಪೋರ್ಟ್​​ನಲ್ಲಿ 15ಕ್ಕೂ ಹೆಚ್ಚು ಕಡೆ ಗಾಯಗಳು ಪತ್ತೆ ಆಗಿವೆ. ಸದ್ಯ ದರ್ಶನ್​​​ನ ಅಟ್ಟಹಾಸ, ಜೈಲು ದರ್ಶನವಾಗಿದೆ.

ಅಪರಾಧ

ಚಿಕ್ಕಬಳ್ಳಾಪುರದಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?

ಚಿಕ್ಕಬಳ್ಳಾಪುರ: ತಮ್ಮ ಅಧಿಕಾರ ವ್ಯಾಪ್ತಿಗೆ ಸೇರದ ಪ್ರಕರಣದಲ್ಲಿ ಪರಿಶೀಲನಾ ವರದಿ ನೀಡಿದ ಆರೋಪಕ್ಕೆ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರು ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

KA 40 TB 2054 ನಂಬರ್‌ನ ಟ್ರ್ಯಾಕ್ಟರ್ ಅಪಘಾತ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ಧಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪರಿಶೀಲನಾ ವರದಿ ನೀಡುವಂತೆ ಪತ್ರ ಬರೆದಿದ್ದರು.

ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವ್ಯಾಪ್ತಿಯ ಆರ್‌ಟಿಓ ಇನ್ಸ್‌ಪೆಕ್ಟರ್ ಶ್ವೇತಾ ಅವರು, ಆರ್‌ಟಿಓ ಏಜೆಂಟ್‌ನಿಂದ ₹5,000 ಲಂಚ ಪಡೆದು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಪಘಾತ ವಾಹನಕ್ಕೆ ಪರಿಶೀಲನಾ ವರದಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವರದಿಯನ್ನು ಸ್ವೀಕರಿಸಿದ ಗೌರಿಬಿದನೂರು ಪೊಲೀಸರು ವಾಹನವನ್ನು ಬಿಡುಗಡೆ ಮಾಡಿದ್ದರು. ಬಳಿಕ ಈ ಎಡವಟ್ಟು ಬಹಿರಂಗವಾಗುತ್ತಿದ್ದಂತೆ, ಈಗಾಗಲೇ ನೀಡಿದ ಪರಿಶೀಲನಾ ವರದಿಯನ್ನು ವಾಪಸ್ ಪಡೆಯಲು ಇನ್ಸ್‌ಪೆಕ್ಟರ್ ಶ್ವೇತಾ ಗೌರಿಬಿದನೂರು ಗ್ರಾಮಾಂತರ ಠಾಣೆ ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ.

ಇನ್ನೊಂದೆಡೆ, ಬಿಡುಗಡೆಗೊಂಡ ಟ್ರ್ಯಾಕ್ಟರ್ ಅನ್ನು ಪೊಲೀಸರು ಮತ್ತೆ ವಾಪಸ್ ಪಡೆದು ಠಾಣೆ ಆವರಣದಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ, ಹೊಸ ಪರಿಶೀಲನಾ ವರದಿ ನೀಡುವಂತೆ ಮತ್ತೆ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ಆರ್‌ಟಿಓ ಅಧಿಕಾರಿಗಳು, “ಈ ರೀತಿಯ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದ್ದಾರೆ.

Continue Reading

ಅಪರಾಧ

‘ನಾನ್ ರುದ್ರನ್’ ವಿವಾದ: ಧನುಷ್‌ಗೆ ₹20 ಕೋಟಿ ಪರಿಹಾರ ಬೇಡಿಕೆ, ತೆನಾಂಡಲ್ ಫಿಲ್ಮ್ಸ್ ಕಾನೂನು ನೋಟಿಸ್

ಚೆನ್ನೈ/ಬೆಂಗಳೂರು: ಬಹಳ ದಿನಗಳಿಂದ ವಿಳಂಬವಾಗಿದ್ದ ‘ನಾನ್ ರುದ್ರನ್’ ಸಿನಿಮಾ ಯೋಜನೆ ಸಂಬಂಧ Thenandal Films ಸಂಸ್ಥೆ ನಟ Dhanush ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಆರ್ಥಿಕ ಹಿನ್ನಡೆಯನ್ನು ಉಲ್ಲೇಖಿಸಿ ₹20 ಕೋಟಿ ಪರಿಹಾರವನ್ನು ಕೋರಲಾಗಿದೆ ಎಂದು ವರದಿಯಾಗಿದೆ.

2016ರಲ್ಲಿ ಒಪ್ಪಂದಗೊಂಡ ‘Naan Rudran’ ಯೋಜನೆ ವಿಳಂಬಕ್ಕೆ ಧನುಷ್ ಅವರೇ ಕಾರಣ ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ. ಚಿತ್ರಕಥೆ ಸಲ್ಲಿಸದ ಹಿನ್ನೆಲೆಯಲ್ಲಿ ಸಿನಿಮಾ ದೀರ್ಘಕಾಲದಿಂದ ಸ್ಥಗಿತಗೊಂಡಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.


ಕಾನೂನು ಸಂಕಷ್ಟದಲ್ಲಿ ಧನುಷ್

ನಿರ್ಮಾಣ ಸಂಸ್ಥೆಯ ಹೇಳಿಕೆ ಪ್ರಕಾರ, ಧನುಷ್ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡುವುದಕ್ಕೂ ಒಪ್ಪಿಕೊಂಡಿದ್ದರು. ಬಳಿಕ ಯೋಜನೆಯಲ್ಲಿ ಕೆಲವು ಬದಲಾವಣೆಗಳಿಗೆ ನಿರ್ಮಾಪಕರು ಸಮ್ಮತಿ ನೀಡಿದರೂ, ಸಂಪೂರ್ಣ ಚಿತ್ರಕಥೆ ಒದಗಿಸಲಾಗಿಲ್ಲ. ಇದರಿಂದ ಸಿನಿಮಾ ಅರ್ಧಕ್ಕೆ ನಿಂತಿದೆ ಎಂದು ಆರೋಪಿಸಲಾಗಿದೆ.

ಮುಂಗಡವಾಗಿ ಸುಮಾರು ₹20 ಕೋಟಿವರೆಗೆ ವೆಚ್ಚ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಧನುಷ್ ಜೊತೆ ನಟಿಸಬೇಕಿದ್ದ Nagarjuna Akkineni ಮತ್ತು S. J. Suryah ಸೇರಿದಂತೆ ಇತರ ಕಲಾವಿದರ ವೆಚ್ಚಗಳನ್ನು ಸಹ ಭರಿಸಿರುವುದಾಗಿ ಸಂಸ್ಥೆ ತಿಳಿಸಿದೆ.

“ಬಾಕಿ ಇರುವ ಯೋಜನೆಯನ್ನು ಪೂರ್ಣಗೊಳಿಸದೆ ಇತರ ಚಿತ್ರಗಳಿಗೆ ಕಾಲ್‌ಶೀಟ್ ನೀಡಿರುವುದರಿಂದ ಚಿತ್ರ ಸ್ಥಗಿತಗೊಂಡಿದೆ” ಎಂದು ವಕೀಲ ಎ. ಚಿದಂಬರಂ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಧನುಷ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.


ಧನುಷ್ ಅವರ ಇತ್ತೀಚಿನ ಸಿನಿಮಾಗಳು

ಧನುಷ್ 2025ರಲ್ಲಿ ‘Kuberaa’, ‘Idli Kadai’ ಮತ್ತು ‘Tere Ishk Mein’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರಣಯ ನಾಟಕವಾಗಿದ್ದ ‘Tere Ishk Mein’ ಚಿತ್ರದಲ್ಲಿ Kriti Sanon ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದು ವಿಶ್ವಾದ್ಯಂತ ₹161.96 ಕೋಟಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.

ಇದೇ ವೇಳೆ, ಧನುಷ್ ಮುಂದಿನ ದಿನಗಳಲ್ಲಿ ನಿರ್ದೇಶಕ ವಿಘ್ನೇಶ್ ರಾಜಾ ಅವರ ‘ಕಾರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾ. ಇಶಾರಿ ಕೆ. ಗಣೇಶ್ ನಿರ್ಮಿಸುತ್ತಿರುವ ಈ ಸಿನಿಮಾ ಈ ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜೊತೆಗೆ ‘D55’ ಎಂಬ ಮತ್ತೊಂದು ಯೋಜನೆಯೂ ಪೈಪ್‌ಲೈನ್‌ನಲ್ಲಿದ್ದು, ಅದನ್ನು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಲಿದ್ದಾರೆ.

Continue Reading

ಅಪರಾಧ

ಹಸಿ–ಒಣ ಕಸ ಬೇರ್ಪಡಿಸಲು ಸೂಚನೆ: ದಾವಣಗೆರೆಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ

ದಾವಣಗೆರೆ: ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ನೀಡಲು ತಿಳಿಸಿದ್ದ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮೆಹಬೂಬ್ ನಗರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆಗೊಳಗಾದವರು ಕರಿಬಸಪ್ಪ ಎಂಬ ಪೌರ ಕಾರ್ಮಿಕ ಹಾಗೂ ವಾಹನ ಚಾಲಕ ಎಂದು ತಿಳಿದುಬಂದಿದೆ. ಪ್ರತಿದಿನ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡುವ ವೇಳೆ ಸ್ಥಳೀಯ ನಿವಾಸಿಯೊಬ್ಬರೊಂದಿಗೆ ವಾಗ್ವಾದ ಉಂಟಾಗಿ, ಅದು ಹಲ್ಲೆಗೆ ತಿರುಗಿದೆ.

ಘಟನೆ ಹೇಗೆ ನಡೆದಿದೆ?

ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಣೆಗೆ ಮೆಹಬೂಬ್ ನಗರಕ್ಕೆ ತೆರಳಿದ್ದರು. ಈ ವೇಳೆ ಒಬ್ಬ ನಿವಾಸಿ ಹಸಿ ಕಸ ಮತ್ತು ಒಣ ಕಸವನ್ನು ಒಂದೇ ಬಕೆಟ್‌ನಲ್ಲಿ ನೀಡಿದ್ದಾನೆ. ಜೊತೆಗೆ ಮಗುವಿನ ಡೈಪರ್ ಕೂಡ ಸೇರಿಸಿದ್ದಾನೆ.

“ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ” ಎಂದು ಪೌರ ಕಾರ್ಮಿಕರು ತಿಳಿಸಿದಾಗ ಮಾತಿನ ಚಕಮಕಿ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಸ್ಥಳೀಯರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಘಟನೆ ಖಂಡಿಸಿ ಪೌರ ಕಾರ್ಮಿಕರು ಮತ್ತು ಕಸ ಸಂಗ್ರಹಿಸುವ ವಾಹನ ಚಾಲಕರು Azad Nagar Police Station ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

“ನಮ್ಮ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದೆ. ಕೆಲಸ ಮಾಡಲು ಭಯವಾಗುತ್ತಿದೆ. ನಮಗೆ ಭದ್ರತೆ ಒದಗಿಸಬೇಕು” ಎಂದು ಕಾರ್ಮಿಕರು ಆಗ್ರಹಿಸಿದರು.

ಮೆಹಬೂಬ್ ನಗರ, ಅಜಾದ್ ನಗರ, ಶಿವನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಕೆಲಸ ಮಾಡಲು ಆತಂಕವಿದೆ ಎಂದು ತಿಳಿಸಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Continue Reading

Trending