ದೇಶ
ದರ ಏರಿಕೆ: ಕಾಂಗ್ರೆಸ್ ನಾಯಕರ ಹಳೆಯ ಪ್ರತಿಭಟನೆಗಳ ಬಗ್ಗೆ ವ್ಯಂಗ್ಯ!

ಬೆಂಗಳೂರು; ಕಳೆದ ವಿಧಾನಸಭೆ ಚುನಾವಣೆ ವೇಳೆ ಪಂಚ ಗ್ಯಾರಂಟಿಗಳ ಆಶ್ವಾಸನೆ ಕೊಟ್ಟು ಅಧಿಕಾರ ಪಡೆದಿದ್ದ ಕಾಂಗ್ರೆಸ್ ಸರ್ಕಾರ ಈಗ ಬೆಲೆ ಏರಿಕೆ ಮಾಡಿದ್ದು ತೀವ್ರ ಖಂಡನೆಗೆ ಗುರಿಯಾಗಿದೆ,
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಾಲತಾಣಗಳಲ್ಲಿ ಕಾಂಗ್ರೆಸ್ನ ಹಳೇ ಪೋಸ್ಟ್ಗಳನ್ನು ಬಳಸಿ ಜನ ವ್ಯಂಗ್ಯವಾಡುತ್ತಿದ್ದಾರೆ, ಗ್ಯಾಸ್ ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮಾಡಿದ್ದ ಪ್ರತಿಭಟನೆಗಳ ಫೋಟೋ ವಿಡಿಯೋಗಳನ್ನು ರಾಹುಲ್ ಗಾಂಧಿ ಸೈಕಲ್ ತುಳಿದು ಪ್ರತಿಭಟಿಸಿದ ವಿಡಿಯೋಗಳನ್ನು ಬಳಸಿ ವ್ಯಂಗ್ಯವಾಡುತ್ತಿದ್ದಾರೆ,
ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಪೋಸ್ಟ್ನಲ್ಲಿ ಈ ಬಗ್ಗೆ ಒಂದು ಪಟ್ಟಿ ಮಾಡಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಜನತ ಅರ್ಥಿಕ ಜೀವನಾದ ಜೊತೆ ಆಟವಾಡುತ್ತಿದೆ ಎಂದಿದ್ದಾರೆ, ಪೆಟ್ರೋಲ್ ಬೆಲೆ 3 ರೂ ಹೆಚ್ಚಳ, ಎಂಜಿನಿಯರಿಂಗ್ ಶುಲ್ಕ 15 % ಹೆಚ್ಚಳ, ಕರೆಂಟ್ ಬಿಲ್ 2.4 ರೂ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ 30-50 ರೂ ಹೆಚ್ಚಳ, ವಾಹನ ನೋಂದಣಿ ಶುಲ್ಕ ಶೇ.3 ರಷ್ಟು ಹೆಚ್ಚಳ, ಹಾಲಿನ ದರ 3 ರೂ ಹೆಚ್ಚಳ ಮಾಡಿದೆ ಎಂದು ಪಟ್ಟಿ ಕೊಟ್ಟಿದ್ದಾರೆ,
ಇನ್ನೊಬ್ಬರು ಪೆಟ್ರೋಲ್ ದರ ಹೆಚ್ಚಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಬೈಕ್ ಅನ್ನು ಶವದ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೊತ್ತಿರುವ ಫೋಟೋ ಹಂಚಿಕೊಂಡು ಈಗೇನಂತೀರಿ ಎಂದು ಪ್ರಶ್ನಿಸಿದ್ದಾರೆ,