ಸಿನಿಮಾ

ಸಸ್ಯಾಹಾರಿಗಳ ವಿರುದ್ಧ ಸಿಡಿದೆದ್ದ ಸ್ವರಾ ಭಾಸ್ಕರ್!

ಬಕ್ರೀದ್ ಹಬ್ಬವಾದ ಇಂದು ನಡೆಯುವ ಪ್ರಾಣಿ ಬಲಿಯನ್ನು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಪರೋಕ್ಷವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟಿ ಸಸ್ಯಾಹಾರಿಗಳ ಈ ಸ್ಮಗ್ ಸ್ವಯಂ ನೀತಿ ಬಗ್ಗೆ ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ, ನಿಮ್ಮ ಆಹಾರ ಕ್ರಮವು ಸಂಪೂರ್ಣವಾಗಿ ವಿಭಿನ್ನವಾಗಿ ಎಂದಿರುವ ನಟಿ, ಹಸುಗಳಿಗೆ ಬಲವಂತವಾಗಿ ಗರ್ಭ ಧರಿಸುವಂತೆ ಮಾಡುವ ನೀವು, ಕರುಗಳನ್ನು ತಾಯಿಯಿಂದ ಪ್ರತ್ಯೇಕಿಸಿ ಅದರ ಹಾಲನ್ನು ಕದಿಯುತ್ತೀರಿ, ನೀವು ತರಕಾರಿಗಳನ್ನೂ ತಿನ್ನುತ್ತೀರಿ, ನಿಮ್ಮ ಈ ಆಹಾರ ಕ್ರಮದಿಂದ ಇಡೀ ಸಸ್ಯ ಸಮೂಹವೇ ನಾಶವಾಗಲಿದ, ಈ ದಿನ ಬಕರ್ ಈದ್ ಆಗಿರುವುದರಿಂದ ದಯವಿಟ್ಟು ಸದ್ಗುಣ ಸಂಕೇತದೊಂದಿಗೆ ವಿಶ್ರಾಂತಿ ಪಡೆಯಿರಿ ಎಂದು ಹೇಳುವ ಮುಖೇನ ಸಸ್ಯಾಹಾರಿಗಳಿಗೆ ಟಾಂಗ್ ಕೊಟ್ಟಿದ್ದಾರೆ,
ಇನ್ನು ನಳಿನಿ ಉನಾಗರ್ ಎಂಬುವವರ ತಮ್ಮ ತಟ್ಟೆಯಲ್ಲಿ ಅನ್ನ ಹಾಗೂ ಪನ್ನೀರ್ ಮಿಶ್ರಿತ ಆಹಾರವಿರುವ ಫೋಟೋವನ್ನು ನೇತುಹಾಕಿ, ನನ್ನ ತಟ್ಟೆಯ ಕಣ್ಣೀರು, ಅಪರಾಧ ಮತ್ತು ಹಿಂಸಾ ಕೃತ್ಯಗಳಿಂದ ಮುಕ್ತವಾಗಿದೆ, ಹಾಗಾಗಿ ನಾನು ಸಸ್ಯಾಹಾರಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ, ಇದಕ್ಕೆ ರೀಟ್ವೀಟ್ ಮಾಡಿರುವ ನಟಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ..

Trending

Exit mobile version