Connect with us

ದೇಶ

ಯೋಗಿ ಆದಿತ್ಯನಾಥ್ ಮನವಿಗೆ ಸ್ಪಂದಿಸಿದ ಮುಸ್ಲಿಮರು, ಉತ್ತರ ಪ್ರದೇಶದಲ್ಲಿ ಶಾಂತಿಯುತ ಬಕ್ರೀದ್ ಆಚರಣೆ

Published

on

ಲಕ್ನೋ: ಈದ್-ಉಲ್-ಅಝಾ (Bakrid) ಸಂದರ್ಭದಲ್ಲಿ ಉತ್ತರ ಪ್ರದೇಶ ಮತ್ತೊಮ್ಮೆ ದೇಶದಾದ್ಯಂತ ಮಾದರಿಯಾಗಿದೆ. ಈ ಬಾರಿಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರೆಗೆ ರಾಜ್ಯದಲ್ಲಿ ಮುಸ್ಲಿಮರು ಸ್ಪಂದಿಸಿದ್ದು, ಎಲ್ಲಿಯೂ ಅವ್ಯವಸ್ಥೆ ಆಗದೆ ಸುಸೂತ್ರವಾಗಿ ಬಕ್ರೀದ್ ಹಬ್ಬ (Bakrid 2024) ನೆರವೇರಿದೆ.

ಈ ಬಾರಿ ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಎಲ್ಲೆಂದರಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ರಸ್ತೆಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲಿಲ್ಲ. ಮುಸ್ಲಿಂ ಧಾರ್ಮಿಕ ಮುಖಂಡರು ಕೂಡ ಸಿಎಂ ಮನವಿಗೆ ಬೆಂಬಲ ನೀಡಿದ್ದು, ಈದ್ಗಾ ಅಥವಾ ಇತರೆ ಸಾಂಪ್ರದಾಯಿಕ ಸ್ಥಳದಲ್ಲಿ ಮಾತ್ರ ಈದ್ ಪ್ರಾರ್ಥನೆ ನಡೆಸಲಾಯಿತು. ಮಸೀದಿಗಳು ಮತ್ತು ಈದ್ಗಾಗಳಲ್ಲಿ ಕಡಿಮೆ ಸ್ಥಳಾವಕಾಶವಿರುವ ಅನೇಕ ಪ್ರದೇಶಗಳಲ್ಲಿ ಜನರು ವಿವಿಧ ಪಾಳಿಗಳಲ್ಲಿ ನಮಾಜ್ ಮಾಡಿದರು. ಈ ಹಿಂದೆ, ಈದ್ ಉಲ್ ಫಿತರ್ ಪ್ರಾರ್ಥನೆಯ ಸಮಯದಲ್ಲಿ ರಾಜ್ಯದಲ್ಲಿ ಇದೇ ರೀತಿಯ ಅಭೂತಪೂರ್ವ ಪರಿಸ್ಥಿತಿ ಕಂಡುಬಂದಿತ್ತು. ಮುಖ್ಯಮಂತ್ರಿಯ ಮನವಿಯ ಮೇರೆಗೆ ಜನರು ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು.

ಬಕ್ರೀದ್ ಹಬ್ಬ ಸುಸೂತ್ರವಾಗಿ ನಡೆಯುವ ಬಗ್ಗೆ ಸಿಎಂ ಯೋಗಿ ವಾರದ ಹಿಂದೆಯೇ ರಾಜ್ಯದ ಎಲ್ಲ ಜಿಲ್ಲೆಗಳ ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಪೊಲೀಸ್ ಠಾಣೆ, ವೃತ್ತ, ಜಿಲ್ಲೆ, ವ್ಯಾಪ್ತಿ, ವಲಯ ಮತ್ತು ವಿಭಾಗ ಮಟ್ಟದಲ್ಲಿ ನಿಯೋಜನೆಗೊಂಡಿರುವ ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಕ್ಷೇತ್ರದ ಧಾರ್ಮಿಕ ಮುಖಂಡರು ಹಾಗೂ ಸಮಾಜದ ಇತರ ಗಣ್ಯರೊಂದಿಗೆ ಸಂವಹನ ನಡೆಸಬೇಕು, ಇದರಿಂದ ಸಾರ್ವಜನಿಕರಲ್ಲಿ ಸಕಾರಾತ್ಮಕ ಸಂದೇಶ ಹೋಗುತ್ತದೆ ಎಂದು ಅವರು ಹೇಳಿದ್ದರು.

ಶಾಂತಿ, ಸೌಹಾರ್ದತೆಯ ವಾತಾವರಣ ಕಾಪಾಡಲು ಶಾಂತಿ ಸಮಿತಿ ಸಭೆ ನಡೆಸುವಾಗ ಮಾಧ್ಯಮಗಳ ಸಹಕಾರವನ್ನೂ ತೆಗೆದುಕೊಳ್ಳಬೇಕು. ಇದಲ್ಲದೇ ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಲಿ ನೀಡುವ ಸ್ಥಳವನ್ನು ಮೊದಲೇ ಗುರುತಿಸಬೇಕು. ಎಲ್ಲಿಯೂ ಕೂಡ ನಿಷೇಧಿತ ಪ್ರಾಣಿಗಳನ್ನು ಬಲಿ ಕೊಡದಂತೆ ನೋಡಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಬಲಿ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆ ಆಗಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಈ ಹಿಂದೆಯೇ ಸೂಚನೆ ನೀಡಿದ್ದರು.

ಮುಖ್ಯಮಂತ್ರಿಯ ಪ್ರಯತ್ನಗಳು ಸಕಾರಾತ್ಮಕ ಪರಿಣಾಮ ಬೀರಿದ್ದು, ಸಿಎಂ ಆದಿತ್ಯನಾಥ್ ಸೂಚನೆಗಳು ಮತ್ತು ಪ್ರಯತ್ನಗಳು ರಾಜ್ಯದಲ್ಲಿ ಸಕಾರಾತ್ಮಕ ಪರಿಣಾಮವನ್ನು ತೋರಿಸಿವೆ ಮತ್ತು ಎಲ್ಲಿಯೂ ರಸ್ತೆಗಳಲ್ಲಿ ನಮಾಜ್ ನಡೆಯಲಿಲ್ಲ. ಅಂದಾಜಿನ ಪ್ರಕಾರ, ಈ ವರ್ಷ ರಾಜ್ಯದ 30 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ನಮಾಜ್ ನೀಡಲಾಗಿದ್ದು, ಈ ಪೈಕಿ ಸುಮಾರು ಮೂರು ಸಾವಿರ ಸ್ಥಳಗಳನ್ನು ಗುರುತಿಸಿ ಬಿಗಿ ಭದ್ರತೆಯನ್ನು ಮಾಡಲಾಗಿತ್ತು. ಈ ಹಿಂದೆ ರಾಜ್ಯದ ಪ್ರತಿ ನಗರದಲ್ಲಿ ಲಕ್ಷಾಂತರ ಜನರು ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ನಮಾಜ್ ಮಾಡುತ್ತಿದ್ದರು, ಇದರಿಂದಾಗಿ ಟ್ರಾಫಿಕ್ ಸಮಸ್ಯೆಗಳು ಉದ್ಭವಿಸುತ್ತಿತ್ತು.

ಆದರೆ ಈ ಬಾರಿ ಮುಸ್ಲಿಮರು ಸ್ವತಃ ತಮ್ಮಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯ ಮಸೀದಿ/ಈದ್ಗಾಗಳಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೇಶಾದ್ಯಂತ ಮಾದರಿ ಸಂದೇಶ ರವಾನೆ ಮಾಡಿದರು. ಅಷ್ಟೇ ಅಲ್ಲ, ಭಾನುವಾರದಂದು ಗಂಗಾ ದಸರಾ, ಸೋಮವಾರ ಈದ್-ಉಲ್-ಅಝಾ ಹಾಗೂ ಮಂಗಳವಾರ ಜ್ಯೇಷ್ಠ ಮಾಸದ ಮಹಾಶುಭ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆಯೂ ವಿಶೇಷವಾಗಿ ಅಲರ್ಟ್ ಮೋಡ್‌ನಲ್ಲಿತ್ತು. ಈ ಕಾರಣಕ್ಕಾಗಿಯೇ ಅನೇಕರು ಕೋಮು ಗಲಾಟೆ ಆಗುವ ಭಯವನ್ನು ವ್ಯಕ್ತಪಡಿಸಿದ್ದರು. ಆದರೆ ಇದೆಲ್ಲವೂ ಸುಳ್ಳು ಎಂದು ನಿನ್ನೆ ಸಾಬೀತಾಯಿತು.

ಸಾಮಾಜಿಕ ಸಾಮರಸ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಮೊದಲ ಆದ್ಯತೆಯ ಮೇಲೆ ಇರಿಸುವ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರಯತ್ನಗಳು ಫಲ ನೀಡಲಾರಂಭಿಸಿವೆ. ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ ಇದೆ ಅನ್ನೋದು ನಿನ್ನೆ ಸಾಬೀತಾಗಿದೆ. ಕಳೆದ ರಾಮನವಮಿಯಲ್ಲೂ ದೇಶದ ಹಲವು ರಾಜ್ಯಗಳಲ್ಲಿ ಹಲವು ಹಿಂಸಾಚಾರ, ಗಲಭೆಗಳು ನಡೆದಿದ್ದರೆ, ಉತ್ತರ ಪ್ರದೇಶದಲ್ಲಿ 800ಕ್ಕೂ ಹೆಚ್ಚು ಮೆರವಣಿಗೆಗಳು ನಡೆದಿದ್ದು ಒಂದೇ ಒಂದು ವಿವಾದದ ಘಟನೆಯೂ ನಡೆದಿಲ್ಲ ಅನ್ನೋದು ಗಮನಾರ್ಹ.

ದೇಶ

ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತೆಹ್ರಾನ್ ಬೀದಿಗಳಲ್ಲಿ ಲಕ್ಷಾಂತರ ಜನರ ಅಂತಿಮ ನಮನ

Published

on

ತೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ali Khamenei) ಅವರ ಅಂತಿಮಯಾತ್ರೆ ಸೋಮವಾರ ರಾಜಧಾನಿ ತೆಹ್ರಾನ್ನಲ್ಲಿ ಭಾರೀ ಭದ್ರತೆಯ ನಡುವೆ ಆರಂಭಗೊಂಡಿದೆ. ರಾಜ್ಯ ದೂರದರ್ಶನ ಪ್ರಸಾರ ಮಾಡಿದ ದೃಶ್ಯಗಳಲ್ಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನದ ಸುತ್ತ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ಖಮೇನಿ ಹಾಗೂ ಅವರ ಕುಟುಂಬ ಸದಸ್ಯರ ಪಾರ್ಥಿವ ಶರೀರಗಳನ್ನು ರಾಷ್ಟ್ರೀಯ ಧ್ವಜದಿಂದ ಹೊದಿಸಿ ವಿಶೇಷ ವಾಹನದಲ್ಲಿ ಸಾಗಿಸಲಾಗುತ್ತಿದೆ. ವಾಹನವನ್ನು ಶಿಯಾ ಧಾರ್ಮಿಕ ಪರಂಪರೆಯ ಶೈಲಿಯಲ್ಲಿ ಅಲಂಕರಿಸಲಾಗಿದ್ದು, ಭಕ್ತರು ಮಾರ್ಗದುದ್ದಕ್ಕೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಇರಾನ್ ರೆವಲ್ಯೂಷನರಿ ಗಾರ್ಡ್ನ ಹಿರಿಯ ಕಮಾಂಡರ್ ಜನರಲ್ ಹಸನ್ ಹಸನ್ಜಾದೆ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಈ ಅಂತಿಮಯಾತ್ರೆ ಸುಮಾರು 10 ರಿಂದ 12 ಗಂಟೆಗಳ ಕಾಲ ಮುಂದುವರಿಯಲಿದೆ. ಶವಯಾತ್ರೆ ಆಜಾದಿ ಚೌಕ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಮೆಹ್ರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಲಿದೆ.

ಸಾರ್ವಜನಿಕರು ಶಾಂತಿಯುತವಾಗಿ ಅಂತಿಮಯಾತ್ರೆಯಲ್ಲಿ ಭಾಗವಹಿಸುವಂತೆ ಇರಾನ್ ಸರ್ಕಾರ ಮನವಿ ಮಾಡಿದೆ. ರಾಜಧಾನಿಯಾದ್ಯಂತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಖಮೇನಿ ಅವರ ನಿಧನದ ಬಳಿಕ ಇರಾನ್‌ನಲ್ಲಿ ರಾಷ್ಟ್ರೀಯ ಶೋಕಾಚರಣೆ ಮುಂದುವರಿದಿದ್ದು, ಅವರ ಅಂತ್ಯಕ್ರಿಯೆ ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

ದೇಶ

‘ಮಸೀದಿ, ಚೌಲ್ಟ್ರಿಗಳಲ್ಲಿ ಸಾಮೂಹಿಕ SIR’ – ಚುನಾವಣಾ ಆಯೋಗದ ಮೆಟ್ಟಿಲೇರಿದ ಬಿಜೆಪಿ-ಜೆಡಿಎಸ್

Published

on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ನಡೆದಿವೆ ಎಂದು ಆರೋಪಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಡಾ. ಅಶ್ವತ್ಥ ನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ನಿಯೋಗದ ಭಾಗವಾಗಿದ್ದರು.

ನಿಯೋಗವು ಸಲ್ಲಿಸಿರುವ ದೂರಿನಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾಮೂಹಿಕ ಎಸ್‌ಐಆರ್ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕಾದ ಬಿಎಲ್‌ಒಗಳು, ಕೆಲವು ಕಡೆ ಮಸೀದಿಗಳು, ಚೌಲ್ಟ್ರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರನ್ನು ಒಟ್ಟುಗೂಡಿಸಿ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ, ಬಿಎಲ್‌ಒಗಳ ಮೇಲೆ ಸರ್ಕಾರದ ಒತ್ತಡ, ಅನರ್ಹ ಮತದಾರರನ್ನು ಸೇರಿಸಲು ಯತ್ನ, ನಕಲಿ ದಾಖಲೆಗಳ ಬಳಕೆ ಹಾಗೂ ಪ್ರತಿಪಕ್ಷಗಳ ಬೂತ್ ಲೆವೆಲ್ ಏಜೆಂಟ್‌ಗಳಿಗೆ (BLA) ಮಾಹಿತಿ ನೀಡದೇ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಆರೋಪಗಳನ್ನೂ ಬಿಜೆಪಿ-ಜೆಡಿಎಸ್ ಮಾಡಿದೆ.

ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್ ಹಾಗೂ ಪಾವಗಡ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಡೆದಿರುವ ಸಾಮೂಹಿಕ ಎಸ್‌ಐಆರ್ ಅನ್ನು ರದ್ದುಪಡಿಸಿ, ಹೊಸದಾಗಿ ನಿಯಮಾನುಸಾರ ಮರುಪರಿಷ್ಕರಣೆ ನಡೆಸಬೇಕು ಎಂದು ನಿಯೋಗ ಆಗ್ರಹಿಸಿದೆ. ಅಗತ್ಯವಿದ್ದರೆ ಹೊರರಾಜ್ಯದ ಅಧಿಕಾರಿಗಳ ಮೂಲಕ ಎಸ್‌ಐಆರ್ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗವನ್ನು ಮನವಿ ಮಾಡಿದೆ.

ಸೂಚನೆ: ಮೇಲಿನ ಆರೋಪಗಳು ಬಿಜೆಪಿ-ಜೆಡಿಎಸ್ ನಿಯೋಗವು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳಾಗಿದ್ದು, ಈ ಕುರಿತು ಚುನಾವಣಾ ಆಯೋಗದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಪ್ರಕಟವಾಗಬೇಕಿದೆ.

Continue Reading

ದೇಶ

ಚೀನಾ-ಪಾಕ್ ಜಲಾಂತರ್ಗಾಮಿಗಳಿಗೆ ಭಾರತದ ಹೈಟೆಕ್ ಬ್ರಹ್ಮಾಸ್ತ್ರ! ಸಮುದ್ರದಾಳದಲ್ಲಿ ‘ಸೀಕ್ರೆಟ್ ಸೆನ್ಸಾರ್ ನೆಟ್‌ವರ್ಕ್’

Published

on

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಜಲಾಂತರ್ಗಾಮಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸಮುದ್ರದ ತಳಭಾಗದಲ್ಲಿ ಅತ್ಯಾಧುನಿಕ Underwater Fibre Optic Sensing System ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿದ್ದು, ಭಾರತೀಯ ನೌಕಾಸೇನೆಗೆ ಹೊಸ ತಾಂತ್ರಿಕ ಬಲ ದೊರೆಯಲಿದೆ.

ಈ ಯೋಜನೆಯಡಿ ಸಮುದ್ರದಾಳದಲ್ಲಿ ಅತಿ ಸೂಕ್ಷ್ಮ ಸಂವೇದನಾ ಸೆನ್ಸಾರ್‌ಗಳನ್ನು ಅಳವಡಿಸಿ, ಅವುಗಳನ್ನು ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಕರಾವಳಿಯಲ್ಲಿರುವ ನೌಕಾಪಡೆಯ ನಿಯಂತ್ರಣ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಸಮುದ್ರದೊಳಗಿನ ಅಲೆಗಳ ಚಲನೆ, ಧ್ವನಿ ಮತ್ತು ಜಲಾಂತರ್ಗಾಮಿಗಳ ಚಟುವಟಿಕೆಗಳನ್ನು ಈ ಸೆನ್ಸಾರ್‌ಗಳು ನಿರಂತರವಾಗಿ ಪತ್ತೆಹಚ್ಚಲಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ವಿಶ್ಲೇಷಿಸಿ ವೈರಿ ಸಬ್‌ಮರೀನ್‌ಗಳ ಸ್ಥಾನವನ್ನು ಗುರುತಿಸಲು ನೆರವಾಗಲಿದೆ.

ಕೊಚ್ಚಿಯಲ್ಲಿರುವ DRDOನೇವಲ್ ಫಿಸಿಕಲ್ ಅಂಡ್ ಓಷಿಯಾನೋಗ್ರಾಫಿಕ್ ಲ್ಯಾಬೋರೇಟರಿ (NPOL) ಈ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದು, ಯೋಜನೆ ಅನುಷ್ಠಾನಕ್ಕೆ ಜಾಗತಿಕ ಮಟ್ಟದಲ್ಲಿ ಆಸಕ್ತಿ ಪತ್ರ (EOI) ಆಹ್ವಾನಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಚೀನಾದ ಸಂಶೋಧನಾ ಹಡಗುಗಳು ಹಾಗೂ ಪರಮಾಣು ಜಲಾಂತರ್ಗಾಮಿಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಹೆಚ್ಚಿನ ಮಹತ್ವ ದೊರೆತಿದೆ. ಇದೇ ವೇಳೆ ಪಾಕಿಸ್ತಾನವೂ ಚೀನಾ ನಿರ್ಮಿತ ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ತನ್ನ ನೌಕಾಪಡೆಗೆ ಸೇರಿಸಿಕೊಂಡಿದೆ ಎಂಬ ವರದಿಗಳಿವೆ.

ಭಾರತದ ಸ್ವದೇಶಿ ಜಲಾಂತರ್ಗಾಮಿ ಯೋಜನೆಗಳು ಪ್ರಗತಿಯಲ್ಲಿರುವ ಈ ಸಂದರ್ಭದಲ್ಲಿ, ಸಮುದ್ರದಾಳದಲ್ಲಿ 24 ಗಂಟೆಗಳ ಕಾಲ ನಿರಂತರ ಕಣ್ಗಾವಲು ನಡೆಸಬಲ್ಲ ಈ ಹೊಸ ವ್ಯವಸ್ಥೆ ಭಾರತೀಯ ನೌಕಾಸೇನೆಗೆ ಸಮುದ್ರ ಭದ್ರತೆಯಲ್ಲಿ ಮಹತ್ವದ ಬಲ ನೀಡುವ ನಿರೀಕ್ಷೆಯಿದೆ.

Continue Reading

Trending