ಬೆಂಗಳೂರು

ಬರಲಿದೆ ಕ್ಯಾಶಲೆಸ್ ಪಾರ್ಕಿಂಗ್ ವ್ಯವಸ್ಧೆ ಏನೇನು ವಿಶೇಷತೆ?

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ರಾಜ್ಯ ಸರ್ಕಾರವು ಮುಂಗಡ ಪಾವತಿ ಪಾರ್ಕಿಂಗ್ ಎಂಬ ವಿನೂತನ ವ್ಯವಸ್ಧೆಯನ್ನು ಪರಿಚಯಿಸಲು ಮುಂದಾಗಿದ,
ಈ ಕುರಿತು ರಾಜ್ಯ ಸರ್ಕಾರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ಕಟ್ಟಡದಲ್ಲಿ ಅಡ್ವಾನ್ಸ್ ಪಾರ್ಕಿಂಗ್ ಸಿಸ್ಟಂ ಕಾರ್ಯಾರಂಭವಾಗಲಿದೆ ಎಂದು ಹೇಳಿದೆ,
ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪಾರ್ಕಿಂಗ್ ಕಟ್ಟಡದಿಲ್ಲಿ ಅಡ್ವಾನ್ಸ್ ಪಾರ್ಕಿಂಗ್ ಟೆಕ್ನಾಲಜಿ ಅಳವಡಿಕೆಯಾಗಿದ್ದು ಜೂ 20 ಕ್ಕೆ ಉದ್ಘಾಟನೆಯಾಗಲಿದೆ, ಈ ಮೂಲಕ ಗಾಂಧಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಗಲಿದೆ,
ಏನೆಲ್ಲಾ ಸೌಲಭ್ಯ ಇರಲಿವೆ?
ಈ ಪಾರ್ಕಿಂಗ್ ಕಟ್ಟಡದಲ್ಲಿ ಮಹಿಳೆಯರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಧೆ ಉಚಿತ ವೈಫೈ, ಇವಿ ಚಾರ್ಜಿಂಗ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯದ ಜೊತೆಗೆ ಪಾರ್ಕಿಂಗ್ ಮಾಡಿ ತೆರಳುವವರಿಗೆ ಪಿಕಪ್-ಡ್ರಾಪ್ ಇರಲಿದೆ, 600 ಕಾರ್, 750 ಬೈಕ್ ನಿಲುಗಡೆಗೆ ಸ್ಧಳಾವಕಾಶವಿದೆ,
ಮಹಿಳೆಯರ ಸುರಕ್ಷತೆ ಹಾಗೂ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕಾಗಿ ಪ್ರತಿ ಮಹಡಿಯಲ್ಲೂ ಎಸ್‍ಒಎಸ್ ಬಟನ್ ಇರಲಿದ್ದು ಅದನ್ನು ಒತ್ತಿದರೆ ಅಲ್ಲಿನ ಸಿಬ್ಬಂದಿ ತಕ್ಷಣಕ್ಕೆ ನೆರವಿಗೆ ಬರುತ್ತಾರೆ ಎಂದು ತಿಳಿಸಿದೆ,

Trending

Exit mobile version