ಅಪರಾಧ
ಕಾನೂನು, ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ: ಕೊನೆಗೂ ಮೌನ ಮುರಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ

ಬೆಂಗಳೂರು; ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂದಿತನಾಗಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಮೌನ ಮುರಿದಿದ್ದಾರೆ, ಇದು ವರೆಗೆ ಪ್ರಕರಣದ ಬಗ್ಗೆ ಏನೂ ಮಾತನಾಡದ ಅವರು ಈ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ,
ಇಂದು ತಮ್ಮ ಇನ್ಸ್ವಾಗ್ರಾಂನಲ್ಲಿ ಪ್ರಕರಣದ ಕುರಿತು ಉಲ್ಲೇಖಿಸಿರುವ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ, ಜೊತೆಗೆ ಈ ಘಟನೆಯಿಂದಾಗಿ ನನಗೆ ಹಾಗೂ ನನ್ನ ಹದಿಹರೆಯದ ಮಗನಿಗೆ, ದರ್ಶನ್ ಅವರ ಸ್ನೇಹಿತರಿಗೆ, ಅಭಿಮಾನಿಗಳಿಗೆ ತುಂಬ ದುಃಖವಾಗಿದೆ ಎಂದಿದ್ದಾರೆ,
ತಾಯಿ ಚಾಮುಂಡೇಶ್ವರಿ ಹಾಗೂ ನಮ್ಮ ಕಾನೂನು ವ್ಯವಸ್ಧೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ, ನ್ಯಾಯವು ಮೇಲುಗೈ ಸಾಧಿಸಲಿದೆ, ನ್ಯಾಯಾಲಯದಿಂದ ಪ್ರಕರಣವಾಗಲಿರುವ ತೀರ್ಪು ದರ್ಶನ್ ಹಾಗೂ ಅಭಿಮಾನಿಗಳಿಗೆ ನೆಮ್ಮದಿಯ ಭಾವ ಮೂಡಿಸಲಿದೆ ಎಂದು ನಾನು ಭಾವಿಸುತ್ತೇನೆ, ಸತ್ಯೆ ಮೇವ ಜಯತೆ ಎಂದು ಬರೆದಿದ್ದಾರೆ,
ಇದೇ ವೇಳೆ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು ವಿವಿಧ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿಗಳು ಪ್ರಸಾರವಾಗುತ್ತಿವೆ, ದಯವಿಟ್ಟು ತನಿಖಾಧಿಕಾರಿಗಳು ನೀಡುವ ಮಾಹಿತಿ ಮಾತ್ರವನ್ನೇ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ.