Connect with us

ದೇಶ

50,000ದಿಂದ 60,000 ಕೋಟಿ ಸಂಗ್ರಹಿಸುವ ಒತ್ತಡದಲ್ಲಿ ಕಾಂಗ್ರೆಸ್ ಸರ್ಕಾರ, ಜವಾಬ್ದಾರಿ ಕೊಟ್ಟ ಸಂಸ್ಥೆಗೆ ಕೊಟ್ಟ ದುಡ್ಡೆಷ್ಟು ಗೊತ್ತಾ?

Published

on

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ  ತೀವ್ರ  ಅನುದಾನದ ಕೊರತೆ ಎದುರಾಗುವ ಅಪಾಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವಿದೆ. ಈ ಅಪಾಯದಿಂದ ಪಾರಾಗಲು ಸರ್ಕಾರ ಖಾಸಗಿ ಸಂಸ್ಥೆಯೊಂದಕ್ಕೆ ಅನುದಾನ ಸಂಗ್ರಹಣೆಯ ಪ್ಲಾನ್ ನೀಡುವ ಜವಾಬ್ದಾರಿ ನೀಡಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ವರ್ಷಕ್ಕೆ 50,000 ಕೋಟಿಯಿಂದ 60,000 ಕೋಟಿಗಳನ್ನು ಸಂಗ್ರಹಿಸುವ ಒತ್ತಡದಲ್ಲಿದೆ. ಈ ಒತ್ತಡ ನಿವಾರಣೆಗೆ ಎಂದೇ ಕಾಂಗ್ರೆಸ್ ನೇತೃತ್ವದ (Karnataka Government) ಕರ್ನಾಟಕ ಸರ್ಕಾರ ಆದಾಯವನ್ನು ಹೆಚ್ಚಿಸಲು ಸಲಹೆ ನೀಡಲು “ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG)” ಎಂಬ ಖಾಸಗಿ ಸಂಸ್ಥೆಯನ್ನು ನೇಮಿಸಿಕೊಂಡಿದೆ.

ಸರ್ಕಾರ ಖಾಸಗಿ ಸಲಹೆಗಾರರನ್ನು ಏಕೆ ನೇಮಿಸಿತು?
ಮಾರ್ಚ್ 2024 ರಲ್ಲಿ, ಕರ್ನಾಟಕ ಹಣಕಾಸು ಇಲಾಖೆಯು ರಾಜ್ಯದ ಆದಾಯದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಪ್ರಮುಖ ಸಲಹಾ ಸಂಸ್ಥೆಗಳಿಂದ Expression of Interest (EoI) ಆಹ್ವಾನಿಸಿತು. ನೀರಾವರಿ, ಇಂಧನ, ಸಾರ್ವಜನಿಕ ಕೆಲಸಗಳು ಮತ್ತು ಗ್ರಾಮೀಣಾಭಿವೃದ್ಧಿ, ಹಾಗೆಯೇ ಇಲಾಖೆಗಳಲ್ಲಿ ಗಣಿಗಾರಿಕೆ ಮತ್ತು ಅರಣ್ಯಗಳಂತಹ ಹೊಸ ಆದಾಯ ಮೂಲಗಳನ್ನು ಹುಡುಕುವುದು ಖಾಸಗಿ ಸಲಹೆಗಾರ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಅನಗತ್ಯ ದುಂದುವೆಚ್ಚಗಳನ್ನು ತಡೆಯುವುದು, ತೆರಿಗೆ ಮತ್ತು ತೆರಿಗೆಯೇತರ ಆದಾಯಗಳನ್ನು ಹೆಚ್ಚಿಸುವುದು ಸೇರಿ ಆದಾಯ ಹೆಚ್ಚಿಸುವ ಹಲವು ಜವಾಬ್ದಾರಿಗಳನ್ನು ಈ ಸಂಸ್ಥೆಗೆ ವಹಿಸಲಾಗಿತ್ತು.

ರಾಜ್ಯ ಸರ್ಕಾರದಿಂದ ಈ ಸಂಸ್ಥೆಗೆ ಎಷ್ಟು ಪೇಮೆಂಟ್?
ರಾಜ್ಯ ಸರ್ಕಾರದ ಈ ಪ್ರಸ್ತಾವನೆಯಲ್ಲಿ ಮೂರು ಖಾಸಗಿ ಸಂಸ್ಥೆಗಳಾದ BCG, KPMG, ಮತ್ತು E&Y-ಇ ಭಾಗವಹಿಸಿದ್ದವು. ಆದರೆ BCG ಮಾತ್ರ ಅಂತಿಮ ಟೆಂಡರ್‌ನಲ್ಲಿ ಭಾಗವಹಿಸಿತು ಪ್ರಸ್ತಾವನೆಯನ್ನು ತನ್ನದಾಗಿಸಿಕೊಂಡಿತು. BCG ಆರು ತಿಂಗಳ ಕಾಲ ರಾಜ್ಯ ಹಣಕಾಸು ಇಲಾಖೆಯೊಂದಿಗೆ ಕೆಲಸ ಮಾಡಲಿದ್ದು, ಸುಮಾರು 9.5 ಕೋಟಿ ರೂಪಾಯಿ ಶುಲ್ಕವನ್ನು ಪಡೆಯಲಿದೆ. ಸದ್ಯದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ಬಜೆಟ್‌ನಲ್ಲಿ ಘೋಷಣೆಯಾಗುವ ಯೋಜನೆಗಳ ಅನುದಾನವನ್ನು ಹೊಂದಿಸಲು ಈ ಖಾಸಗಿ ಸಂಸ್ಥೆಯು ಹಣಕಾಸು ಇಲಾಖೆಯ ಜೊತೆ ಕೆಲಸ ಮಾಡಲಿದೆ.

ಸರ್ಕಾರದ ನಿರ್ಧಾರದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ
ಖಾಸಗಿ ಸಲಹೆಗಾರರನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ, “ಹೆಚ್ಚಿನ ಸಲಹೆಗಾರರು ಆಳವಾದ ಜ್ಞಾನವನ್ನು ಹೊಂದಿರುವುದಿಲ್ಲ. ಭಾರಿ ಶುಲ್ಕವನ್ನು ವಿಧಿಸುವಾಗ ಪೊಳ್ಳು ವರದಿಗಳನ್ನು ನೀಡುತ್ತಾರೆ” ಎಂದು ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.

ಫ್ರೀ ಕರೆಂಟ್ ಅರ್ಥಹೀನ
“ಖಾಸಗಿ ಸಂಸ್ಥೆಯ ಬದಲಿಗೆ ಐಐಟಿ ಮತ್ತು ಐಐಎಂ ಪದವೀಧರರಾಗಿರುವ ಅನುಭವಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಅವರ ಸಲಹೆ. ಅಲ್ಲದೇ, ಉಚಿತ ಮತ್ತು ಖಾತ್ರಿ ಯೋಜನೆಗಳು ರಾಜ್ಯದ ಆರ್ಥಿಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ” ಎಂಬುದು ಅವರ ಅಂಬೋಣ. “ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಅರ್ಥಹೀನ. ಸರ್ಕಾರ ಮೊದಲು ಸಂಪನ್ಮೂಲ ಕ್ರೋಢೀಕರಣಗಳನ್ನು ಉತ್ತಮಗೊಳಿಸಬೇಕು” ಎಂದು ಅವರು ಹೇಳಿದರು.

ಹಣಕಾಸು ಇಲಾಖೆ ಬಳಿ ಆಗೋದಿಲ್ವಂತೆ ಏಕೆ?
“ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸುತ್ತಮುತ್ತಲಿನ ಪಟ್ಟಣಗಳನ್ನು ಸೇರಿ ರಾಜ್ಯಾದ್ಯಂತ 10 ಮುನ್ಸಿಪಲ್ ಕಾರ್ಪೊರೇಷನ್‌ಗಳ ಅಭಿವೃದ್ಧಿಗೆ ​​ ಪ್ರತಿ ಆರ್ಥಿಕ ವರ್ಷಕ್ಕೆ ಹೆಚ್ಚುವರಿ 5,000 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆ ಇದೆ” ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಸಗಿ ವೃತ್ತಿಪರ ಸಲಹೆಗಾರರು ನೀಡುವ ಹೊಸ ಆಲೋಚನೆಗಳಿಂದ ಈ ಯೋಜನೆಗೆ ಹಣ ಹೊಂದಿಸಲು ಸಾಧ್ಯ ಎಂಬ ಯೋಜನೆಯನ್ನು ಇಲಾಖೆ ಹೊಂದಿದೆ.

ರ್ನಾಟಕ ಸರ್ಕಾರಕ್ಕಾಗಿ BCG ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ!
ಫೆಬ್ರವರಿ 2025 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆ, ‘ಇನ್ವೆಸ್ಟ್ ಕರ್ನಾಟಕ ಶೃಂಗಸಭೆ,’ ಗೂ BCG ಸಂಸ್ಥೆಯ ಜ್ಞಾನ ಭಾಗೀದಾರ (Knowledge Partner) ಆಗಿ ಕೆಲಸ ಮಾಡಲಿದೆ. ಅಲ್ಲದೇ, ಇದೇ ಸಂಸ್ಥೆ ಫೆಬ್ರವರಿ 2024 ರಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಬೆಂಗಳೂರಿನ ಸಮೀಪವೇ KHIR (ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ) ನಗರದ ಪ್ರಸ್ತಾವನೆಯಲ್ಲಿ ಸಲ್ಲಿಸಿತ್ತು. ಅಂದಹಾಗೆ BCG ಸಂಸ್ಥೆಯ ಜೊತೆ ಮೊದಲು ಒಪ್ಪಂದ ಮಾಡಿಕೊಂಡಿದ್ದು ಬಿಜೆಪಿ ಸರ್ಕಾರವೇ, ಹೂಡಿಕೆಗಳನ್ನು ಆಕರ್ಷಿಸಲು 2020 ರಲ್ಲಿ BCG ಯ ಸಹಕಾರ ಪಡೆದುಕೊಂಡಿತ್ತು. 2021 ರಲ್ಲಿ BCG ಸಂಸ್ಥೆಯ ಜೊತೆಗಿನ ಈ ಒಪ್ಪಂದ ಇನ್ನೂ ಒಂದು ವರ್ಷಕ್ಕೆ ವಿಸ್ತರಣೆಯಾಗಿತ್ತು. 2022 ರಲ್ಲಿ ಜಾಗತಿಕ ಹೂಡಿಕೆದಾರರ ಸಭೆಗೆ BCG ಜ್ಞಾನ ಪಾಲುದಾರರಾಗಿಯೂ ಕಾರ್ಯನಿರ್ವಹಿಸಿತ್ತು.

ದೇಶ

ಮಮತಾ ಬ್ಯಾನರ್ಜಿ ಮತ್ತೆ ಸಿಎಂ ಆಗ್ತಾರಾ? ಸಮೀಕ್ಷೆ ಹೇಳೋದು ಏನು?

Published

on

By

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನೇ ದಿನೇ ಜೋರಾಗುತ್ತಿದ್ದು, ಪೂರ್ವ ಸಮೀಕ್ಷೆಗಳು ರಾಜಕೀಯ ಹೋರಾಟ ತೀವ್ರವಾಗಿರುವುದನ್ನು ಸೂಚಿಸುತ್ತಿವೆ. ಏಪ್ರಿಲ್ 23 ಮತ್ತು 29 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಹೊರಬಿದ್ದ ಅಭಿಪ್ರಾಯ ಸಮೀಕ್ಷೆಗಳು ಕುತೂಹಲ ಹೆಚ್ಚಿಸಿವೆ.

ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಆಡಳಿತಾರೂಢ All India Trinamool Congress (ಟಿಎಂಸಿ) 140 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ್ತೊಂದೆಡೆ Bharatiya Janata Party (ಬಿಜೆಪಿ) 130 ರಿಂದ 150 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇತರ ಪಕ್ಷಗಳು 8 ರಿಂದ 16 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.

ಮತಶೇಕಡಾವಾರಿಯಾಗಿ ನೋಡಿದರೆ, ಟಿಎಂಸಿ ಶೇ.43 ಮತ್ತು ಬಿಜೆಪಿ ಶೇ.41 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಉತ್ತರ ಬಂಗಾಳದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗಿದ್ದು, ದಕ್ಷಿಣ ಬಂಗಾಳದಲ್ಲಿ ಟಿಎಂಸಿ ಬಲಿಷ್ಠವಾಗಿದೆ.

ಇನ್ನೊಂದೆಡೆ, ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯ ಪ್ರಕಾರ, Mamata Banerjee ನೇತೃತ್ವದ ಟಿಎಂಸಿ ಸ್ಪಷ್ಟ ಬಹುಮತದೊಂದಿಗೆ 155–165 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 110–115 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ.

294 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದ್ದು, ಈ ಸಂಖ್ಯೆಯನ್ನು ಟಿಎಂಸಿ ಸುಲಭವಾಗಿ ದಾಟುವ ಸಾಧ್ಯತೆ ಇದೆ. ಆದರೆ ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಠಿಣ ಪೈಪೋಟಿ ಕಾಣಿಸಬಹುದು.

ಒಟ್ಟಾರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಟಕ್ಕರ್ ನಿರೀಕ್ಷೆಯಿದ್ದು, ಅಂತಿಮ ಫಲಿತಾಂಶ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆ ಇದೆ.

Continue Reading

ದೇಶ

ಪಾಕ್‌ನಲ್ಲಿ ಎಮರ್ಜೆನ್ಸಿ ಸ್ಥಿತಿ: ರಾತ್ರಿ 8ಕ್ಕೆ ಮಾರುಕಟ್ಟೆ ಬಂದ್!

Published

on

By

ಕರಾಚಿ: ಮಧ್ಯಪ್ರಾಚ್ಯದ ಉದ್ವಿಗ್ನತೆಯ ಪರಿಣಾಮವಾಗಿ ಪಾಕಿಸ್ತಾನ ಗಂಭೀರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈಗಾಗಲೇ ಹಿಟ್ಟು, ನೀರು ಮತ್ತು ವಿದ್ಯುತ್ ಕೊರತೆಯಿಂದ ಬಳಲುತ್ತಿರುವ Pakistan ಇದೀಗ ತೈಲ ಕೊರತೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಇಂಧನ ಬಿಕ್ಕಟ್ಟನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಏಪ್ರಿಲ್ 7ರಿಂದ ರಾತ್ರಿ 8 ಗಂಟೆಯೊಳಗೆ ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚುವಂತೆ ಆದೇಶಿಸಿದೆ. ಗ್ಯಾಸ್ ಮತ್ತು ತೈಲ ಬಳಕೆಯನ್ನು ಕಡಿತಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದರ ಮಧ್ಯೆ ಪೆಟ್ರೋಲ್ ಬೆಲೆಗಳು ಭಾರೀ ಏರಿಕೆ ಕಂಡಿದ್ದು, ಲೀಟರ್‌ಗೆ ₹458ರವರೆಗೆ ಏರಿಕೆಯಾಗಿತ್ತು. ಜನರ ಆಕ್ರೋಶದ ನಂತರ ಅದು ₹378ಕ್ಕೆ ಇಳಿದರೂ, ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿಲ್ಲ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ.

ಈ ಬಿಕ್ಕಟ್ಟಿಗೆ Iran–United States ನಡುವಿನ ಉದ್ವಿಗ್ನತೆ ಹಾಗೂ Strait of Hormuz ನಲ್ಲಿ ಉಂಟಾದ ಅಡಚಣೆ ಪ್ರಮುಖ ಕಾರಣ ಎಂದು ಪಾಕ್ ಸರ್ಕಾರ ಹೇಳಿಕೊಂಡಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪರಿಸ್ಥಿತಿ ಹದಗೆಟ್ಟಿದೆ.

ಆಹಾರ ಪದಾರ್ಥಗಳಾದ ಹಿಟ್ಟು, ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಗಳೂ ಗಗನಕ್ಕೇರಿದ್ದು, ಜನಜೀವನ ಕಷ್ಟಕರವಾಗಿದೆ. ಜೊತೆಗೆ, ಸಾಲದ ಹೊರೆ ಹೆಚ್ಚುತ್ತಿದ್ದು, International Monetary Fund ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ಒತ್ತಡವೂ ಹೆಚ್ಚಾಗಿದೆ.

ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ಕಾಲದಂತೆ ನಿರ್ಬಂಧಗಳನ್ನು ಜಾರಿಗೆ ತರಲು ಪಾಕ್ ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ, ಪಾಕಿಸ್ತಾನದ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ದೇಶವನ್ನು ಗಂಭೀರ ಸಂಕಷ್ಟದ ದಿಕ್ಕಿನಲ್ಲಿ ತಳ್ಳುತ್ತಿದೆ.

Continue Reading

ದೇಶ

“ಮೋದಿ ಸರ್ಕಾರ ವೈಫಲ್ಯ” – ಕಾಂಗ್ರೆಸ್ ಜಂಟಿ ಆರೋಪ

Published

on

By

ಬೆಂಗಳೂರು/ನವದೆಹಲಿ: ಎಲ್‌ಪಿಜಿ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ Siddaramaiah, ಉಪಮುಖ್ಯಮಂತ್ರಿ D. K. Shivakumar ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ Randeep Singh Surjewala ಜಂಟಿಯಾಗಿ ಪ್ರಧಾನಿ Narendra Modi ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ.

ಜಂಟಿ ಹೇಳಿಕೆಯಲ್ಲಿ, ಎಲ್‌ಪಿಜಿ ಕೊರತೆ, ಆಟೋ ಗ್ಯಾಸ್ ಅಭಾವ ಹಾಗೂ ತೈಲ ಬೆಲೆ ಏರಿಕೆಯಿಂದಾಗಿ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನೋಪಾಯ ಕುಸಿದಿದೆ ಎಂದು ಆರೋಪಿಸಲಾಗಿದೆ. “ಇದು ಕೇವಲ ನೀತಿ ವೈಫಲ್ಯವಲ್ಲ, ಕೇಂದ್ರ ಸರ್ಕಾರದ ಆಡಳಿತಾತ್ಮಕ ಅಸಮರ್ಥತೆ ಮತ್ತು ಉದಾಸೀನತೆಗೆ ಸಾಕ್ಷಿ” ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2026ರಲ್ಲಿ ಲೀಟರ್‌ಗೆ ₹58–61 ಇದ್ದ ಆಟೋ ಗ್ಯಾಸ್ ಬೆಲೆ ಈಗ ₹105–120ಕ್ಕೆ ಏರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕೆಲ ಖಾಸಗಿ ಬಂಕ್‌ಗಳಲ್ಲಿ ₹135ರವರೆಗೂ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಗರದಲ್ಲಿ ಸುಮಾರು 80% ಗ್ಯಾಸ್ ಕೇಂದ್ರಗಳು ಕಾರ್ಯನಿರ್ವಹಣೆ ನಿಲ್ಲಿಸಿರುವುದರಿಂದ ಪೂರೈಕೆ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹200 ಏರಿಕೆಯಾಗಿದ್ದು ₹2,000 ಮೀರಿದೆ. ಇದರಿಂದ ಸಣ್ಣ ಹೋಟೆಲ್‌ಗಳು, ವ್ಯಾಪಾರಿಗಳು ಮತ್ತು ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಳಸಂತೆಯ ಹಾವಳಿ ಹೆಚ್ಚುತ್ತಿರುವುದನ್ನೂ ಕಾಂಗ್ರೆಸ್ ಉಲ್ಲೇಖಿಸಿದೆ.

“ಪ್ರತಿ ಖಾಲಿ ಸಿಲಿಂಡರ್ ಒಂದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ ಕಾಂಗ್ರೆಸ್, ಉಪಚುನಾವಣೆಗೂ ಮುನ್ನ ಬಿಜೆಪಿ ಉತ್ತರ ನೀಡಬೇಕು ಎಂದು ಪ್ರಶ್ನಿಸಿದೆ.

Continue Reading

Trending