ದೇಶ
ಕುರಾನ್ ಗ್ರಂಥಕ್ಕೆ ಅವಹೇಳನ ಆರೋಪ ಬಂಧಿತ ಆರೋಪಿಯ ಜೀವಂತ ದಹನ!

ಇಸ್ಲಾಮಾಬಾದ್: ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದನೆಂದು ವ್ಯಕ್ತಯೊಬ್ಬನನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ಪಾಕಿಸ್ತಾನದ ಸ್ವಾತ್ ಎಂಬ ಜಿಲ್ಲೆಯಲ್ಲಿ ನಡೆದಿದೆ, ಪಂಜಾಬ್ ಮೂಲದ ವ್ಯಕ್ತಿ ಗುರುವಾರ ರಾತ್ರಿ ಕುರಾನ್ ಗ್ರಂಥದ ಕೆಲ ಪುಟಗಳಿಗೆ ಬೆಂಕಿ ಹಚ್ಚಿದ್ದಾನೆ, ಈ ಸಂದರ್ಭದಲ್ಲಿ ಹಿಂಸಾಚಾರ ಬುಗಿಲೆದ್ದಿದೆ, ಕುರಾನ್‍ಗೆ ಬೆಂಕಿ ಹಚ್ಚಿದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಸ್ವಾತ್ ಜಿಲ್ಲೆಯ ಪೊಲೀಸ್ ತಿಳಿಸಿದ್ದಾರೆ.
ವ್ಯಕ್ತಿ ಬಂಧನ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಆಗಮಿಸಿದ ಉದ್ರಿಕ್ತ ಗುಂಪು ಠಾಣೆಗೂ ಬೆಂಕಿ ಇಟ್ಟಿದೆ, ಅಲ್ಲದೇ ಬಂಧಿತನನ್ನು ಹೊರ ಎಳೆದುಕೊಂಡು ಬಂದು ಜೀವಂತ ಬೆಂಕಿ ಇಟ್ಟಿದೆ, ಪ್ರಕರಣದಲ್ಲಿ ಎಂಟು ಮಂದಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,
ಘಟನಾ ಸ್ಧಳದಲ್ಲಿ ಉಸಿರುಗಟ್ಟದ ವಾತಾವರಣವಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ,