ದೇಶ
ಚಂದಕಿಂತ ಚಂದ ನೀನೇ ಸುಂದರ ಇಂದು ಗಗನದಲ್ಲಿ ಸ್ಟ್ರಾಬೆರಿ ಚಂದಿರ!

ನವ ದೆಹಲಿ: ಜೂನ್ 21 ಯೋಗ ದಿನಾಚರಣೆಯ ಸಂಭ್ರಮದಲ್ಲಿರುವ ನಮಗೆ ಕತ್ತಲಾಗುತ್ತಿದ್ದಂತೆ ಇನ್ನೊಂದು ಕೌತುಕ ನಮನ್ನು ಎದುರುಗೊಳ್ಳಲಿದೆ, ಅದೆಂದರೆ ಇಂದು ಚಂದಮಾಮ ಸ್ಟ್ರಾಬೆರಿ ಬಣ್ಣದಲ್ಲಿ ದರ್ಶಣ ನೀಡಿಲಿದ್ದಾನೆ, ಇಂದಿನ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸಲಿದ್ದು ರೋಸ್ ಮೂನ್ ಅಥವಾ ಸ್ಟ್ರಾಬೆರಿ ಬಣ್ಣದಿಂದ ಕಂಗೊಳಿಸಲಿದ್ದಾನೆ
ಸ್ಪೇಸ್ ಬಗ್ಗೆ ಕೌತುಕ ಇರುವವರಿಗೆ ಇಂದು ಚಂದಿರ ಇನ್ನೂ ಸುಂದರವಾಗಿ ಕಾಣಿಸಲಿದ್ದಾನೆ, ವಿಶೇಷವೇನೆಂದರೆ ಚಂದಿರ ಈ ತಿಂಗಳು ಪೂರಾ ಭೂಮಿಗೆ ಹತ್ತಿರವಿರುತ್ತಾನೆ, ಹಾಗಾಗಿ ಇಂದು ಸ್ಟ್ರಾಬೆರಿ ಬಣ್ಣದಲ್ಲಿ ಇನ್ನೂ ಹತ್ತಿರವಾಗಲಿದ್ದಾನೆ.
ನಾಸಾದ ಪ್ರಕಾರ ಇಂದು ಸಂಜೆ ಭಾರತೀಯ ಕಾಲಮಾನದ ಪ್ರಕಾರ 7.08 ನಿಮಿಷಕ್ಕೆ ಚಂದ್ರ ಸ್ಟ್ರಾಬೆರಿ ಬಣ್ಣದಾಗಿರುತ್ತದೆ, ಇದು ಭಾರತ ದೇಶದಲ್ಲೂ ಕಾಣಸಲಿದೆ ಎಂದಿದೆ,
ಚಂದಿರ ಸ್ಟ್ರಾಬೆರಿ ಬಣ್ಣದಲ್ಲಿ ಮೂರು ದಿನಗಳವರೆಗೆ ಇರುತ್ತಾನೆ, ಅದರೆ ಇಂದು ಅತಿ ಹೆಚ್ಚು ಹತ್ತಿರವಿದ್ದು ದರ್ಶಣ ನೀಡುತ್ತಾನೆ, ಅಲ್ಲದೆ ಇಂದು ಹೆಚ್ಚು ಪ್ರಕಾಶಮಾನವಗಿರುತ್ತಾಎನೆ ಎಂದು ನಾಸಾ ತಿಳಿಸಿದೆ,
1930 ರಲ್ಲಿ ಮೈನೆ ಪಾರ್ಮರ್ಸ್ ಅಲ್ಮಾನಕ್ ಎಂಬುವವರು ಜೂನ್ ತಿಂಗಳಲ್ಲಿ ಕಂಡು ಬರುವ ಚಂದ್ರನನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆದುರ, ಅಮೆರಿಕ ದೇಶದಲ್ಲಿ ಈಗ ಮುಂಗಾರು ಋತು ಆರಂಭವಾಗುತ್ತಿದೆ, ವಿಶೇಷವೇನೆಂದರೆ ಈ ಸ್ಟ್ರಾಬೆರಿ ಚಂದ್ರ ಕಂಡ ನಂತರವೇ ಸ್ಟ್ರಾಬೆರಿ ಹಣ್ಣುಗಳನ್ನು ಬೆಳೆಯಲು ಆರಂಭಿಸುತ್ತಾರೆ