ದೇಶ
ಪ್ರಶಾಂತ್ ನೀಲ್ ಸಿನಿಮಾಗೆ ರಶ್ಮಿಕಾ ನಾಯಕಿ! ಜೂನಿಯರ್ NTRಗೆ ಜೊತೆಯಾಗಲಿದ್ದಾರೆ ನ್ಯಾಷನಲ್ ಕ್ರಶ್

ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತೊಂದು ಕೇಳಿಬಂದಿದೆ. ಪ್ರಶಾಂತ್ ನೀಲ್ ತನ್ನ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ಅನ್ನು ಹಾಕಿಕೊಳ್ಳುವ ಮೂಲಕ ಗಮನಸೆಳೆಯಲು ಮುಂದಾಗಿದ್ದಾರಂತೆ.
ಅಂದಹಾಗೆಯೇ ಪ್ರಶಾಂತ್ ನೀಲ್ ಸದ್ಯಕ್ಕೆ ಜೂನಿಯರ್ NTR ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗಾಗಲೇ ಡ್ರ್ಯಾಗನ್ ಶೂಟಿಂಗ್ ಶುರು ಆಗ್ಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಸ್ವಲ್ಪ ತಡವಾಗಿತ್ತು. ಈಗ ಹರಿದಾಡ್ತಿರೋ ಲೇಟೆಸ್ಟ್ ಏನಂದ್ರೆ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಆಗ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಈಗಾಗಲೇ ಪ್ರಶಾಂತ್ ನೀಲ್ ಸಿನಿಮಾ ಕುರಿತಾಗಿ ನಟಿ ರಶ್ಮಿಕಾ ಮಂದಣ್ಣ ಜೊತೆ ಮಾತುಕತೆ ನಡೆಸಿದ್ದಾರೆ. ರಶ್ಮಿಕಾ ಜೊತೆ ಬಾಬಿ ಡಿಯೋಲ್ ಕೂಡ ನಟಿಸೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಜ್ಯೂನಿಯರ್ ಎನ್ಟಿಆರ್ ಸದ್ಯ ದೇವರಾ-1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೊರತಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ ರಶ್ಮಿಕಾ ಮಂದಣ್ಣ, ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರೈನ್ ಬೋ, ದಿ ಗರ್ಲ್ ಫ್ರೆಂಡ್, ಚಾವಾ, ಸಿಖಂದರ್, ಕುಬೇರಾ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಲಿದ್ದಾರೆ.