ಆರೋಗ್ಯ
ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೀ ಜ್ವರ.. ಬೆಂಗಳೂರು, ಮೈಸೂರಿನಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಗೊತ್ತಾ?

ಬೆಂಗಳೂರು: ಮಳೆಗಾಲ ಆರಂಭವಾಗ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಉಪಟಳ ಜೋರಾಗಿದೆ. ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 5187 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಜನರು ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧೆಡೆ ಡೆಂಘೀ ಜ್ವರ ಹಾವಳಿ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ 1230, ಹಾವೇರಿ 389, ಮೈಸೂರು 358, ಚಿಕ್ಕಮಗಳೂರು 346 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 153 ಡೆಂಘೀ ಪ್ರಕರಣಗಳು ವರದಿಯಾಗಿವೆ.
ಡೆಂಘೀ ಪ್ರಕರಣ ಹೆಚ್ಚುತ್ತಿದ್ದು ಜನರಲ್ಲಿ ನೆಗಡಿ ಜ್ವರದಿಂದ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಡೆಂಘೀ ಜ್ವರ ಹಾವಳಿ ಇಟ್ಟಿದೆ. ಜೂನ್ ತಿಂಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.
ರಾಜ್ಯದಲ್ಲಿ 37,144 ಜನರ ರಕ್ತ ಮಾದರಿ ಪಡೆಯಲಾಗಿದ್ದು, 3975 ಮಂದಿಗೆ ಪಾಸಿಟಿವ್ ಬಂದಿದೆ. ಇದುವರೆಗೆ 5187 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ
ಎಲ್ಲೆಲ್ಲಿ ಎಷ್ಟು ಪ್ರಕರಣ ಪತ್ತೆ
ಬೆಂಗಳೂರಿನಲ್ಲಿ- 1230 ಪ್ರಕರಣ
ಹಾವೇರಿಯಲ್ಲಿ- 389 ಪ್ರಕರಣ
ಮೈಸೂರಿನಲ್ಲಿ- 358 ಪ್ರಕರಣ
ಚಿಕ್ಕಮಗಳೂರು- 346 ಪ್ರಕರಣ
ಕಲಬುರಗಿ-153 ಪ್ರಕರಣ