ದೇಶ

ಆನ್ ಲೈನ್ ಜಾಬ್ ವಂಚನೆ- ಸಿಲಿಕಾನ್ ಸಿಟಿಯೇ ನಂಬರ್ ಒನ್!

ಬೆಂಗಳೂರು: ಕರ್ನಾಟಕದಲ್ಲಿ 2020 ರಿಂದ ನಡೆದಿರುವ ಆನ್ ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು 73% ರಷ್ಟು ಬೆಂಗಳೂರಿನಲ್ಲೇ ನಡೆದಿರುವುದಾಗಿ ವರದಿಯಾಗಿದೆ,
ಕಳೆದ 5 ವರ್ಷಗಳಲಿ ಕರ್ನಾಟಕದಲ್ಲಿ ಆನ್ ಲೈನ್ ಉದ್ಯೋಗ ವಂಚನೆಗಳು ನಿರಂತರವಾಗಿ ಹೆಚ್ಚಿವೆ, 2020 ರ ಜನವರಿ 1 ರಿಂದ 2024 ರ ಮೇ 25 ರವರೆಗೆ ಒಟ್ಟು 9,497 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 6,905 ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿದೆ ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳಿಂದ ಗೊತ್ತಾಗಿದೆ,
ಕಳೆದ ವರ್ಷ 4,098 ಪ್ರಕರಣಗಳು ವರದಿಯಾಗಿದ್ದು ಈ ವರ್ಷ ಮೇ ಯಲ್ಲೇ ಈ ಸಂಖ್ಯೆ ಮೀರಿದೆ, ಈ ವರ್ಷ ಒಟ್ಟು ಪ್ರಕರಣಗಳು 5,000 ದಾಟಬಹುದು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ, ಇಂತಹ ಅನ್ ಲೈನ್ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು 20-30% ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ಪದವಿಧರರು ಎಂಬುದು ತಿಳಿದುಬಂದಿದೆ,
ಸಾರ್ವಜನಿಕರ ಸ್ಧಳಗಳಲ್ಲಿ ಜಾಹೀರಾತುಗಳನ್ನು ಅಂಟಿಸುವ ಮೂಲಕ ಹಣವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ತಿಳಿಸಿದ್ದಾರೆ,
ಪ್ರತಿದಿನ 10 ರಿಂದ 20 ಆನ್ ಲೈನ್ ವಂಚನ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ 5-7 ಉದ್ಯೋಗ ವಂಚನೆಗಳಾಗಿವೆ ಎಂದು ವೈಟ್ ಫೀಲ್ಡ್‍ನ ಟೆಕ್ ಹಬ್ ನ ಉಸ್ತುವಾರಿ ವಹಿಸಿರುವ ಉಪ ಪೊಲೀಸ್ ಆಯುಕ್ತ ಶಿವಕುಮಾರ ಗುಣಾರೆ ಮಾಹಿತಿ ನೀಡಿದ್ದಾರೆ,

Trending

Exit mobile version