ದೇಶ

ಅಧಿವೇಶನದ ಮೊದಲ ಭಾಷಣದಲ್ಲೇ ವಿಪಕ್ಷಗಳ ವಿರುದ್ಧ ರಣಕಹಳೆಯೊದಿದ ಪ್ರಧಾನಿ!

ನವದೆಹಲಿ: 18 ನೇ ಲೋಕಸಭೆಯ ಸಂಸದರನ್ನುದ್ದೇಶಿ ಸೋಮವಾರ ಮಾತನಡಿದರು, ಮೂರನೇ ಬಾರಿಯ ಅಧಿಕಾರಿವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚಾಗಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಳಿಯನ್ನೂ ಸಹ ನಡೆಸಿದರು,
18 ಎಂಬುದು ವಿಶೇಷ ಸಂಖ್ಯೆಯಾಗಿದೆ, 18 ಪುರಾಣಗಳಿವೆ, 18 ವರ್ಷದ ಬಳಿಕ ಮತದಾನದ ಹಕ್ಕು ಲಭಿಸುತ್ತದೆ, ಸ್ವಾತಂತ್ರ್ಯದ ಆಮೃತಮಹೋತ್ಸವದ ಕಾಲದಲ್ಲಿ ಪ್ರಾರಂಭವಾಗುತ್ತಿರುವ ಈ 18 ಲೋಕಸಭಾ ಅವಧಿಯು ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಪ್ರಧಾನಿ ಮೋದಿ ಹೇಳಿದರು,
ಜೊತೆಗೆ ನಾಳೆ ಜೂ 25 ಸಂವಿಧಾನದ ಪರವಾದ ಜನರು ಎಂದೂ ಮರೆಯಲಾರದ ದಿನ, ಐವತ್ತು ವರ್ಷಗಳ ಹಿಂದೆ ಇದೇ ದಿನ ಭಾರತದ ಪ್ರಜಾಪ್ರಭುತ್ವದ ಮೇಲೆ ಕರಿಛಾಯೆ ಮೂಡಿತ್ತು, ಆಗಿನ ಸರ್ಕಾರ ತುರ್ತು ಪರಿಸ್ಧಿತಿ ಹೇರಿತ್ತು, ಇಡೀ ದೇಶವನ್ನು ಜೈಲು ಮಾಡಲಾಗಿತ್ತು, ಸಂವಿಧಾನವನ್ನು ಗಾಳಿಗೆ ತೂರಲಾಗಿತ್ತು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಹೆಸರು ಉಲ್ಲೇಖಿಸದೆಯೇ ತರಾಟೆಗೆ ತೆಗೆದುಕೊಂಡರು,
ಜನರು ನಮಗೆ ಮೂರನೇ ಬಾರಿ ಅಧಿಕಾರ ನೀಡಿದ್ದಾರೆ, ನಮ್ಮ ಶಕ್ತಿ ಮೂರು ಪಟ್ಟು ವರ್ಧಿಸಿದೆ, ಇದಕ್ಕಾಗಿ ನಾನು ಜನರಿಗ ಕೃತಜ್ಞನಾಗಿದ್ದೇನೆ, ಜನರಿಗೆ ಈ ಮೂಲಕ ನಾನು ಭರವಸೆ ನೀಡುತ್ತಿದ್ದೇನೆ ನಾವು ಮೊದಲಿಗಿಂತಲೂ ಮೂರು ಪಟ್ಟು ಹೆಚ್ಚಾಗಿ ಕೆಲಸ ಮಾಡುತ್ತೇವೆ ಎಂದು ನುಡಿದ ಮೋದಿ ದೇಶದ ಜನತೆ ಪ್ರತಿಪಕ್ಷಗಳಿಂದ ಉತ್ತಮ ವರ್ತನೆಯನ್ನು ನಿರೀಕ್ಷಿಸುತ್ತಿದೆ, ಇಲ್ಲಿಯವರೆಗೂ ವಿಫಲವಾಗಿದ್ದ ವಿಪಕ್ಷಗಳು ಇನ್ನು ಮುಂದಾದರು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬಹುದೆಂಬ ನಿರೀಕ್ಷೆಯಿದೆ ಎಂದು ಇಂಡಿಯಾ ಒಕ್ಕೂಟಕ್ಕೆ ಪರೋಕ್ಷವಾಗಿ ಚಾಟಿ ಬೀಸಿದರು,
ದೇಶಕ್ಕೆ ಉತ್ತಮ ಪ್ರತಿಪಕ್ಷದ ಅವಶ್ಯಕತೆಯಿದೆ, ಈ ಬಾರಿ ಲೋಕಸಭೆಯಲ್ಲಿ ವಿಜೇತ ಸಂಸದರು ಜರ ನಿರೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆಂದು ಭಾವಿಸುತ್ತೇನೆ, ಜನರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದರು,

Trending

Exit mobile version