ರಾಜ್ಯ

ಡಿ ಗ್ಯಾಂಗ್ ಚಿತ್ರದ ಟೈಟಲ್ ನೋಂದಣಿಗೆ ಫಿಲ್ಮ ಚೇಂಬರ್ ನಿರಾಕರಣೆ

ಬೆಂಗಳೂರು; ಡಿ ಗ್ಯಾಂಗ್ ಹೆಸರನ್ನು ಸಿನಿಮಾ ಟೈಟಲ್ ಮಾಡಿಕೊಳ್ಳೋ ಪ್ರಯತ್ನಗಳು ಕೆಲ ನಿರ್ದೇಶಕ ಸತತ ಪ್ರಯತ್ನಿಸುತ್ತಿದ್ದು ಇದೀಗ ಫಿಲ್ಮ್ ಚೇಂಬರ್ ಅವಕಾಶ ಕಲ್ಪಿಸಲು ನಿರಾಕರಿಸಿದೆ ಎನ್ನಲಾಗಿದೆ,
ಪಿಎಂ ಫಿಲಮ್ಸ್ ನಿರ್ಮಾಣ ಸಂಸ್ಧೆಯ ಮಂಜು ಎನ್ ನಾಯಕ್ ಎಂಬುವರು ಡಿ ಗ್ಯಾಂಗ್ ಹೆಸರಿನ ನೋಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದರು,
ಅದರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಈ ಹೆಸರನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು, ಇದರ ಬೆನ್ನಲ್ಲೇ ನಿರ್ದೇಶಕ ರಾಖಿ ಸೊಮ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ನಾವು ಈ ಟೈಟಲ್ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ, ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್‍ನಲ್ಲಿ ಡಿ ಗ್ಯಾಂಗ್ ಎನ್ನುವ ಹಾಡು ಬಿಡುಗಡೆ ಆಗಿದೆ, ಈಗ ನಡೆಯುತ್ತಿರುವ ದರ್ಶನ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್‍ಗೂ ಯಾವುದೇ ಸಂಬಂಧವಿಲ್ಲ.
ಅದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದೆ ಎಂಬುದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ನಿರ್ದೇಶಕ ರಾಖಿ ಸೋಮ್ಲಿ ಆಕ್ರೋಶ ಹೊರ ಹಾಕಿದ್ದಾರೆ,
ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಮಾತನಾಡಿದ್ದು ನಟ ದರ್ಶನ್ ಅವರ ಪ್ರಕರಣ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ತಿಳಿಸಿದ್ದಾರೆ,

Trending

Exit mobile version