Connect with us

ಅಪರಾಧ

ಪವಿತ್ರಾ ಗೌಡ ಲಿಪ್ಸ್‌ಸ್ಟಿಕ್, ಮೇಕಪ್‌ನಿಂದ ಮಹಿಳಾ PSIಗೆ ಫಜೀತಿ; ಕಸ್ಟಡಿಯಲ್ಲೂ ಕರ್ತವ್ಯ ಲೋಪ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳು ಪರಪ್ಪನ ಜೈಲು ಪಾಲಾಗಿದ್ದಾರೆ. ಇದೀಗ ಮನೆ ಮಹಜರು ಮಾಡಲು ಆರ್​.ಆರ್​ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಗ ಆರೋಪಿ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ವಿಜಯನಗರದ ಮಹಿಳಾ ಪಿಎಸ್​ಐ ನೇತ್ರಾಗೆ ನೋಟಿಸ್ ನೀಡಲಾಗಿದೆ.

1 ಆರೋಪಿಯಾಗಿರುವ ಪವಿತ್ರಾ ಗೌಡಳನ್ನ ಜೂನ್ 15ರಂದು ಸ್ಥಳ ಮಹಜರು ಮಾಡಲೆಂದು ಆರ್​.ಆರ್​ ನಗರದಲ್ಲಿರುವ ಆಕೆಯ ಮನೆಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಮನೆ ಪವಿತ್ರಾ ಗೌಡ ಲಿಪ್ಸ್​​ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ? ಇಲ್ಲಿ ಕರ್ತವ್ಯ ಲೋಪವಾಗಿರುವುದು ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್​ಐಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನಾಯ್ಕ್ ಅವರು ನೋಟಿಸ್ ನೀಡಿದ್ದಾರೆ. ಈ ನೋಟಿಸ್​ಗೆ ಸೂಕ್ತವಾದ ವಿವರಣೆ ಕೊಡಿ ಎಂದು ತಿಳಿಸಲಾಗಿದೆ. ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಮಹಜರು ಮಾತ್ರ ಮಾಡಿಸಿಕೊಂಡು ಬರಬೇಕು. ಅದು ಬಿಟ್ಟು ಮೇಕಪ್​ ಮಾಡಿಕೊಳ್ಳಲು ಸಮಯ ಕೊಟ್ಟಿದ್ದು ಯಾಕೆ, ಲಿಪ್ಸ್​​ಸ್ಟಿಕ್ ಹಚ್ಚಿಕೊಳ್ಳಲು ಯಾಕೆ ಬಿಟ್ಟರು ಎಂಬ ಪ್ರಶ್ನೆ ಉದ್ಭವಿಸಿದೆ.

ಅಪರಾಧ

Breaking News ಚಾಲಕ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಸಂಸದ ಡಾ. ಸುಧಾಕರ್ ಹೆಸರು ಉಲ್ಲೇಖ!

ಚಿಕ್ಕಬಳ್ಳಾಪುರ, ಆಗಸ್ಟ್ 7 – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೈನಂದಿನ ಶಾಂತಿಯನ್ನು ಬೆಚ್ಚಿಬೀಳಿಸುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿಯ ಆವರಣದಲ್ಲಿ 33 ವರ್ಷದ ಗುತ್ತಿಗೆ ಚಾಲಕ ಬಾಬು ಎಂ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೋಕಾಂತರವಾಗಿದೆ.

ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಹೆಸರು:
8 ವರ್ಷಗಳಿಂದ ಲೆಕ್ಕಪರಿಶೋಧನೆ ವಿಭಾಗದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಬಾಬು, ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ಬೆಂಬಲಿಗರಾದ ನಾಗೇಶ್ ಮತ್ತು ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೆನಿಸಿದ ಹಣಕಾಸು ವಂಚನೆ:
ಬಾಬು ಅವರು ಡೆತ್ ನೋಟ್‌ನಲ್ಲಿ, ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಬಾಬು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು:
ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ FIR ದಾಖಲಾತಿ ನಡೆಯುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.

Continue Reading

ಅಪರಾಧ

ಧರ್ಮಸ್ಥಳ ಶವ ಹೂತು ಪ್ರಕರಣ: ಮೂರು ಅಸ್ಥಿಪಂಜರ ಪತ್ತೆ, ಎಸ್‌ಐಟಿ ತನಿಖೆಗೆ ಹೊಸ ತಿರುವು!

ದಕ್ಷಿಣ ಕನ್ನಡ, ಆಗಸ್ಟ್ 5 – ಧರ್ಮಸ್ಥಳದ ಸುತ್ತಮುತ್ತಲ ಶವ ಹೂತು ಪ್ರಕರಣಕ್ಕೆ ದಿನೇ ದಿನೆ ನ್ಯೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಚಕ್ಕರಿಗೊಳ್ಳುತ್ತಿದೆ. ಈ ಕುರಿತು ದೂರುದಾರ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಸ್‌ಐಟಿ ತಂಡದ ಶೋಧ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಉತ್ಖನನದ ವೇಳೆ:

  • ಸ್ಟಾಟ್ ನಂಬರ್ 12ರ ಬಳಿ ಕಾರ್ಮಿಕರಿಂದ ಅಗೆಸಿದಾಗ, ಮೂರು ಅಸ್ಥಿಪಂಜರಗಳು ಹಾಗೂ ಮಹಿಳೆಯ ಸೀರೆ ಪತ್ತೆಯಾಗಿವೆ.
  • ಸುಮಾರು 140 ಮೂಳೆಗಳ ತುಂಡುಗಳು ಪತ್ತೆಯಾದ ಕುರಿತು ವರದಿ ಇದೆ.
  • ಅಸ್ಥಿಪಂಜರಗಳನ್ನು ತಕ್ಷಣವೇ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದಿನ ಉತ್ಖನನ:

  • ನೇತ್ರಾವತಿ ನದಿಯ ದಡದ ಬಳಿ 11ನೇ ಪಾಯಿಂಟ್‌ನಲ್ಲಿ ಅಗೆತ ಕೆಲಸ ನಡೆಯುತ್ತಿದೆ.
  • 6 ಅಡಿಯವರೆಗೆ ಶೋಧ ನಡೆದ ಬಳಿಕ ಸಾಕ್ಷ್ಯ ಸಿಕ್ಕದರೆ ಮುಂದಿನ ಪಾಯಿಂಟ್‌ಗೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಘಟನೆ:

  • ಜುಲೈ 31ರಂದು 6ನೇ ಗುರುತುಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳಾದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆಧಾರದ ಮೇಲೆ UDR ಪ್ರಕರಣ ದಾಖಲಾಗಿದೆ.
Continue Reading

ಅಪರಾಧ

ಕೆಂಗೇರಿಯಲ್ಲಿ ಮಹಿಳೆಯ ಮೇಲೆ ಅಸಭ್ಯ ವರ್ತನೆ ಮತ್ತು ಹಲ್ಲೆ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕೆಂಗೇರಿ ಉಪನಗರದಲ್ಲಿ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಮುಂದೆ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾಳೆ. ಇದೇ ಸಮಯದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪಿಯು ಪೊಲೀಸರು ಬಂದಾಗ ಪರಾರಿಯಾಗಲು ಯತ್ನಿಸಿದರೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸೂತ್ರಗಳ ಪ್ರಕಾರ, ಕೆಂಗೇರಿಯಲ್ಲಿರುವ ಮಾಲ್‌ನಲ್ಲಿ ವಾಚ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಾಹಸನ್ ಎಂಬಾತ, ಅಲ್ಲಿಗೆ ಬರುವ ಹೆಣ್ಣುಮಕ್ಕಳಿಗೆ ತೊಂದರೆ ಕೊಡುತ್ತಿದ್ದ. ಸಂತ್ರಸ್ತೆಯು ಈ ಬಗ್ಗೆ ಮ್ಯಾನೇಜರ್‌ಗೆ ದೂರು ನೀಡಲು ಹೋಗುತ್ತಿದ್ದಾಗ, ತನ್ನ ಪ್ಯಾಂಟ್‌ನ ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ. ನಂತರ ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿದ ಸಾರ್ವಜನಿಕರು ಮತ್ತು ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಈ ಕುರಿತು ಕೆಂಗೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಗಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

ಇದೇ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದ ಆಯುಬ್ ಎಂಬ ಕಾಮುಕನನ್ನು ಕೂಡ ಪೊಲೀಸರು ಬಂಧಿಸಿದ್ದರು. ಈತನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಡಿದ್ದು, ಸಾರ್ವಜನಿಕ ಆಕ್ರೋಶ ಹೆಚ್ಚಿತ್ತು.

Continue Reading

Trending