ಬೆಂಗಳೂರು
ಶಕ್ತಿಯಿಂದ ನಿಗಮದ ನಗದು ಹರಿವಿನ ಮೇಲೆ ಪರಿಣಾಮ: 3,773ಕೋಟಿ ಪಾವತಿಸಿದ ಸರ್ಕಾರ

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯ 2023-24ನೇ ಸಾಲಿನ ಬಾಕಿ 1,180.61 ಕೋಟಿಯೂ ಸೇರಿ ಒಟ್ಟು 3,773,79 ಕೋಟಿಯನ್ನು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಮರುಪಾವತಿ ಮಾಡಬೇಕಿದೆ,
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಇದೇ 18 ರಂದು ನಾಲ್ಕು ಪುಟಗಳ ಟಿಪ್ಪಣಿ ಸಾರಿಗೆ ನಿಗಮಗಳ ಸದ್ಯದ ಆರ್ಥಿಕ ಪರಿಸ್ಧಿತಯ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.
ಶಕ್ತಿ ಯೋಜನೆಯ ಅನುಷ್ಠಾನದ ನಂತರ ನಿಗಮಗಳ ಆದಾಯದಲ್ಲಿ ಹೆಚ್ಚಾಳ ಉಂಟಾಗಿದ್ದರೂ, ನಗದು ಹರಿವಿನ ಮೇಲೆ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ, ಸಾರಿಗೆ ಸೇವೆಯನ್ನು ಸಮರ್ಪಕವಾಗಿ ನಿಭಾಯಿಸಲು ಆರ್ಥಿಕ ನೆರವು ನೀಡುವಂತೆ ಸಂಬAಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ,