ಬಿಬಿಎಂಪಿ
ಬೆಂಗಳೂರಿನ ಮಂದಿಗೆ ಇನ್ನೊಂದು ತೆರಿಗೆ! ಕಸ ವಿಲೇವಾರಿಗೂ ಕೊಡಬೇಕಿದೆ ಟ್ಯಾಕ್ಸ್
ಬೆಂಗಳೂರು: ದಿನ ಸಾಗಿದಂತೆ ದುನಿಯಾ ದುಬಾರಿಯಾಗ್ತಿದೆ. ತಿನ್ನೋ ಅನ್ನದಿಂದ ಹಿಡಿದು ಧರಿಸೋ ಚಪ್ಪಲಿವರೆಗೂ ಎಲ್ಲವೂ ದಿನೇ ದಿನೇ ತುಟ್ಟಿಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ತರಕಾರಿ ದರವೂ ಗಗನಕ್ಕೆ ಮುಟ್ಟಿದೆ. ಇದೀಗ ಹಾಲಿನ ಬೆಲೆಯೂ ಹೆಚ್ಚಳವಾಗಿದೆ. ಇದರ ಜೊತೆಗೆ ಬೆಂಗಳೂರಿಗರ ಜೇಬಿಗೆ ಬಿಬಿಎಂಪಿ ಕಸದ ಹೆಸರಲ್ಲಿ ಕತ್ತರಿ (BBMP Garbege Tax) ಹಾಕಲು ಹೊರಟಿದೆ.
ಕೆಎಂಎಫ್ ಪ್ರತಿ ಪ್ಯಾಕೇಟಿನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ನೀಡಿ 2 ರೂಪಾಯಿ ಏರಿಕೆ ಮಾಡಿದೆ. ಇದು ಬೆಂಗಳೂರಿನ ಶ್ರೀಸಾಮಾನ್ಯರ ಕೈ ಸುಡುವಂತೆ ಮಾಡಿದೆ. ಇಂದು ಬೆಳ್ಳಂಬೆಳಗ್ಗೆ ಹಾಲು ಖರೀದಿಗೆ ನಂದಿನಿ ಬೂತ್ ಗೆ ಆಗಮಿಸಿದ ಜನರು ಬೆಲೆ ಏರಿದ್ದು ಕಂಡು ಅವಾಕ್ ಆದರೂ. ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿ ಹಾಲಿನ ಬೆಲೆ ಏರಿಕೆಯಾಗಿದ್ದು, ಒಟ್ಟು 5 ರೂಪಾಯಿ ಏರಿಕೆಯಾಗಿದೆ. ಸರ್ಕಾರದ ಈ ನಡೆಗೆ ಬೆಂಗಳೂರು ಜನರು ಅಸಮಾಧಾನಗೊಂಡಿದ್ದಾರೆ.
ಕಸಕ್ಕೆ ಸೆಸ್ ಹಾಕಿದ ಪಾಲಿಕೆಗೆ ಜನರಿಂದ ಛೀಮಾರಿ
ಒಂದೆಡೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಜನರು ಪ್ರತಿದಿನ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಲು, ತರಕಾರಿ, ಸೊಪ್ಪು ಸೇರಿದಂತೆ ಎಲ್ಲವೂ ದುಬಾರಿಯಾಗ್ತಿರುವ ಹೊತ್ತಲ್ಲೇ ಬಿಬಿಎಂಪಿ ಬೆಂಗಳೂರು ಜನರ ಮೇಲೆ ಮತ್ತೊಂದು ಹೊರೆ ಹೊರೆಸಲು ಮುಂದಾಗಿದೆ. ಶೀಘ್ರವೇ ಬಿಬಿಎಂಪಿ ಬೆಂಗಳೂರು ಜನರಿಂದ ಗಾರ್ಬೇಜ್ ಸೆಸ್ ಕಲೆಕ್ಟ್ ಮಾಡಲು ಮುಂದಾಗ್ತಿದೆ. ಈ ಮೂಲಕ ಸಿಲಿಕಾನ್ ಸಿಟಿ ಮಂದಿ ಪ್ರತಿ ತಿಂಗಳು ಬಿಬಿಎಂಪಿಗೆ 100 ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಿದೆ.
ಹೀಗಾಗಿ ಇದನ್ನು ವಿರೋಧಿಸಿ ಬಿಬಿಎಂಪಿ ಕಚೇರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಗಾರ್ಬೇಜ್ ಸೆಸ್ ಅನ್ನು ರದ್ದು ಮಾಡುವಂತೆ ಈ ವೇಳೆ ಆಗ್ರಹಿಸಿದ್ದಾರೆ.
ಗಾರ್ಬೇಜ್ ಸೆಸ್‌ನಿಂದ ಪಾಲಿಕೆಗೆ ಕೋಟಿ ಕೋಟಿ ಆದಾಯ !!
ಬಿಬಿಎಂಪಿ ಹೊಸದಾಗಿ ಜಾರಿ ಮಾಡಲು ಹೊರಟಿರುವ ಗಾರ್ಬೇಜ್ ಸೆಸ್ ಯೋಜನೆಯಿಂದ ಪಾಲಿಕೆ ಖಜಾನೆಗೆ ಕೋಟ್ಯಾಂತರ ರೂಪಾಯಿ ಹರಿದು ಬರಲಿದೆ. ಬೆಂಗಳೂರಲ್ಲಿ ಅಂದಾಜು 35 ಲಕ್ಷಕ್ಕೂ ಅಧಿಕ ಪ್ರಾಪರ್ಟಿಗಳಿವೆ. ಇದರಲ್ಲಿ ವಸತಿ ಹಾಗೂ ವಾಣಿಜ್ಯ ಯೋಗ್ಯವಾದ ಕಟ್ಟಡಗಳಿವೆ. ಇದರಿಂದ ತಿಂಗಳಿಗೆ 100 ರೂಪಾಯಿಯಂತೆ ಮನೆಗಳಿಂದ ಹಾಗೂ ವಿಲೇವಾರಿಗೆ ತಕ್ಕಂತೆ ವಾಣಿಜ್ಯ ಕಟ್ಟಡಗಳಿಂದ ಕಸದ ಸೆಸ್ ಪಾಲಿಕೆ ವಸೂಲಿ ಮಾಡಿದರೆ, ತಿಂಗಳಿಗೆ ಬರೋಬ್ಬರಿ 100 ಕೋಟಿಯಷ್ಟು ಹೆಚ್ಚುವರಿ ಆದಾಯ ಬಿಬಿಎಂಪಿ ಕೈ ಸೇರಿಲಿದೆ. ಆದರೆ ಇದು ಜನ ಸಾಮಾನ್ಯರ ಮೇಲೆ ಭಾರೀ ಹೊರೆಯಾಗಲಿದೆ.
ಸಿಲಿಕಾನ್ ಸಿಟಿ ಜನರ ಮೇಲೆ ಗಾರ್ಬೇಜ್ ಹೊರೆ
ಒಟ್ಟಾರೆ ದುಬಾರಿ ದುನಿಯಾದ ಬದುಕುಳಿದವನೇ ರಾಜ ಎಂಬಂತಾಗಿದೆ ಶ್ರೀಸಾಮಾನ್ಯರ ಪರಿಸ್ಥಿತಿ. ಅತ್ತ ರಾಕೆಟ್ ನಂತೆ ಏರುತ್ತಿರುವ ಹಾಲು ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ. ಇತ್ತ ಕಸದ ಹೆಸರಲ್ಲೂ ಬಿಬಿಎಂಪಿ ಜನರ ಜೇಬಿಗೆ ಕೈ ಹಾಕಿ 100 ರೂಪಾಯಿ ಪ್ರತಿ ತಿಂಗಳು ವಸೂಲಿ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ದೇಶ
ರಾಮಲಿಂಗಾರೆಡ್ಡಿ ಬಳಿಕ ಮುನಿಯಪ್ಪ ಬಂಡಾಯ! ಕಾಂಗ್ರೆಸ್ ಹೈಕಮಾಂಡ್ ತುರ್ತು ಸಭೆ
ದೇವನಹಳ್ಳಿ, ಜೂನ್ 5: ನೂತನ ಮುಖ್ಯಮಂತ್ರಿ D. K. Shivakumar ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆಯ ಬೆನ್ನಲ್ಲೇ ಅಸಮಾಧಾನದ ಹೊಗೆ ದಟ್ಟವಾಗುತ್ತಿದೆ. ಹಿರಿಯ ನಾಯಕ Ramalinga Reddy ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ಆಹಾರ ಸಚಿವ K. H. Muniyappa ಕೂಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ವರಿಷ್ಠರು, ಸರ್ಕಾರದ ಆರಂಭದಲ್ಲೇ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ದೇವನಹಳ್ಳಿ ಬಳಿಯ Kempegowda International Airport ಸಮೀಪದ ವಿಐಪಿ ಲಾಂಜ್ ಹಾಗೂ ತಾಜ್ ಹೋಟೆಲ್‌ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕ Rahul Gandhi, ಎಐಸಿಸಿ ಉಸ್ತುವಾರಿ Randeep Singh Surjewala, ಮಾಜಿ ಮುಖ್ಯಮಂತ್ರಿ Siddaramaiah ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದು, ಅಸಮಾಧಾನಗೊಂಡಿರುವ ನಾಯಕರನ್ನು ಮನವೊಲಿಸುವ ಪ್ರಯತ್ನ ನಡೆದಿದೆ.
ಖಾತೆ ಹಂಚಿಕೆಯಲ್ಲಿ ತಮ್ಮ ಹಿರಿತನಕ್ಕೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಬೇಸರಗೊಂಡಿರುವ ಕೆ.ಎಚ್. ಮುನಿಯಪ್ಪ, ತಮಗೆ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ನೀಡುವಂತೆ ವರಿಷ್ಠರ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹಠ ಹಿಡಿದಿರುವುದು ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಿದೆ.
ಇದಕ್ಕೂ ಮುನ್ನ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದರಿಂದ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದರಿಂದ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಒಳಗೆ ಭಿನ್ನಮತದ ಧ್ವನಿ ಜೋರಾಗಿದೆ.
ಈ ಬೆಳವಣಿಗೆಗಳು ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲೇ ರಾಜಕೀಯ ಸವಾಲುಗಳನ್ನು ತಂದೊಡ್ಡಿದ್ದು, ಹೈಕಮಾಂಡ್ ನಡೆಸುತ್ತಿರುವ ಈ ಹೈವೋಲ್ಟೇಜ್ ಸಭೆಯ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.
ಚುನಾವಣೆ
ಪೆರಂಬೂರ್ ಕಣಕ್ಕೆ ನಟ ವಿಜಯ್ ಎಂಟ್ರಿ: ತಮಿಳುನಾಡು ರಾಜಕೀಯದಲ್ಲಿ ಸಂಚಲನ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ರಾಜಕೀಯ ಪ್ರವೇಶ ರಾಜ್ಯ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆ ತಂದಿದೆ. ವಿಶೇಷವಾಗಿ, ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರವನ್ನು ತಮ್ಮ ಚೊಚ್ಚಲ ಚುನಾವಣಾ ಕಣವಾಗಿ ಆರಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
Perambur ಕ್ಷೇತ್ರವು ಸಾಂಪ್ರದಾಯಿಕವಾಗಿ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದರೂ, ಈ ಬಾರಿ ವಿಜಯ್ ಪ್ರವೇಶದಿಂದಾಗಿ ಹೈ-ಪ್ರೊಫೈಲ್ ಕಣವಾಗಿ ಪರಿಣಮಿಸಿದೆ. Dravida Munnetra Kazhagam (DMK) ಮತ್ತು All India Anna Dravida Munnetra Kazhagam (AIADMK) ಪಕ್ಷಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ.
ಈ ಕ್ಷೇತ್ರದಲ್ಲಿ ಡಿಎಂಕೆ ಒಂಬತ್ತು ಬಾರಿ ಗೆಲುವು ಸಾಧಿಸಿದ್ದು, ಸತ್ಯವಾಣಿ ಮುತ್ತು ಮತ್ತು ಪರಿಥಿ ಇಲಂವಝುತಿ ಅವರಂತಹ ನಾಯಕರಿಂದ ರಾಜಕೀಯ ಇತಿಹಾಸ ರೂಪುಗೊಂಡಿದೆ. 2016ರಲ್ಲಿ ಎಐಎಡಿಎಂಕೆ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೂ, 2019ರ ಉಪಚುನಾವಣೆ ಮತ್ತು 2021ರ ಚುನಾವಣೆಯಲ್ಲಿ ಡಿಎಂಕೆ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು.
ಸುಮಾರು 2.22 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪೆರಂಬೂರ್ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಯುವಕರು ಮತ್ತು ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಿರುವ ಈ ಪ್ರದೇಶದಲ್ಲಿ ಉದ್ಯೋಗ, ಹಣದುಬ್ಬರ ನಿಯಂತ್ರಣ, ವಸತಿ ಮತ್ತು ಮೂಲಸೌಕರ್ಯ ಪ್ರಮುಖ ಚುನಾವಣಾ ವಿಷಯಗಳಾಗಿವೆ.
ವಿಜಯ್ ಅವರ ಯುವಜನಪ್ರಿಯತೆ ಈ ಬಾರಿ ದ್ರಾವಿಡ ಪಕ್ಷಗಳ ದೀರ್ಘಕಾಲದ ಹಿಡಿತವನ್ನು ಸವಾಲು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪೆರಂಬೂರ್ ಕಣ ಇದೀಗ ಸಾಮಾನ್ಯ ಚುನಾವಣೆ ಮಾತ್ರವಲ್ಲ, ಹೊಸ ರಾಜಕೀಯ ಶಕ್ತಿಯ ಪರೀಕ್ಷೆಯಾಗಿ ಪರಿಣಮಿಸಿದೆ.
ದೇಶ
ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ: ಮಧುಮೇಹ, ರಕ್ತದೊತ್ತಡ ಪ್ರಕರಣ ಹೆಚ್ಚಳ
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿರುವುದು ಆರೋಗ್ಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಸ್ವಚ್ಛತಾ ಯೋಧರೆಂದು ಗುರುತಿಸಲಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಂಡಿದ್ದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿದೆ.
ದಕ್ಷಿಣ ಕಾರ್ಪೋರೇಷನ್ ವ್ಯಾಪ್ತಿಯ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ನಮ್ಮ ಕ್ಲಿನಿಕ್‌ಗಳಲ್ಲಿ ಬುಧವಾರ ಸಮೂಹ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1,934 ಮಂದಿಗೆ ಆರೋಗ್ಯ ತಪಾಸಣೆ
ಒಟ್ಟು 1,934 ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 605 ಪುರುಷರು ಮತ್ತು 1,348 ಮಹಿಳೆಯರು ಸೇರಿದ್ದಾರೆ. ತಪಾಸಣಾ ಕಾರ್ಯಕ್ಕಾಗಿ 56 ವೈದ್ಯಾಧಿಕಾರಿಗಳು ಮತ್ತು 168 ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ತಪಾಸಣೆಯಲ್ಲಿ ಪತ್ತೆಯಾದ ಕಾಯಿಲೆಗಳು
ಆರೋಗ್ಯ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ:
- ಮಧುಮೇಹ: 256 ಪ್ರಕರಣ
- ಅಧಿಕ ರಕ್ತದೊತ್ತಡ: 254 ಪ್ರಕರಣ
- ರಕ್ತಹೀನತೆ: 67 ಪ್ರಕರಣ
- ದಂತ ಸಮಸ್ಯೆ: 57 ಪ್ರಕರಣ
- ಜ್ವರ: 43 ಪ್ರಕರಣ
- ಕಣ್ಣಿನ ಸಮಸ್ಯೆ: 39 ಪ್ರಕರಣ
- ಶ್ರವಣ ಸಮಸ್ಯೆ: 16 ಪ್ರಕರಣ
- ಹೃದಯ ಸಮಸ್ಯೆ: 4 ಪ್ರಕರಣ
- ಜನರಲ್ ಓಪಿಡಿ: 1,198
- ಪೌರಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ಗಮನ
- ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆ, ಅವರ ಆರೋಗ್ಯ ರಕ್ಷಣೆಗಾಗಿ ಪಾಲಿಕೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ. ಮಧುಮೇಹ ಮತ್ತು ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ.
