Connect with us

ಆರೋಗ್ಯ

ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ… ಸಾವನ್ನು ತಡೆ ಗಟ್ಟಿ..!!

Published

on

ದಿನಕ್ಕೆ ಕನಿಷ್ಠ 4 ಸಾವಿರ ಹೆಜ್ಜೆ ಹಾಕಿ... ಸಾವನ್ನು ತಡೆ ಗಟ್ಟಿ

ದಿನವೊಂದಕ್ಕೆ ಕನಿಷ್ಠ ಸಾವಿರ ಹೆಜ್ಜೆ ಹಾಕುವುದರಿಂದ ಶೇ 15 ರಷ್ಟು ಸಾವುಗಳನ್ನು ತಡೆಗಟ್ಟಬಹುದಂತೆ. ಹೀಗಂತಾ ಈ ಬಗ್ಗೆ ಅಧ್ಯಯನಗಳು ಬಹಿರಂಗ ಪಡಿಸಿವೆ.

 ನಿತ್ಯ ಅಗತ್ಯ ವಾಕಿಂಗ್​ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ.

ದಿನಕ್ಕೆ ಕನಿಷ್ಠ 3967 ಹೆಜ್ಜೆಗಳನ್ನು ಹಾಕುವುದರಿಂದ ನಿಮ್ಮ ಸಾವಿನ ಅಪಾಯವನ್ನು ಆದಷ್ಟು ಕಡಿಮೆ ಮಾಡಬಹುದು ಅನ್ನುತ್ತಿದೆ ಈ ಅಧ್ಯಯನ.

ನಿತ್ಯ ನೀವು ಕನಿಷ್ಠ 2337 ಹೆಜ್ಜೆಗಳನ್ನು ಹಾಕಿದರೆ ಹೃದಯ ಸಂಬಂಧಿ ಕಾಯಿಲೆಯನ್ನು ಆದಷ್ಟು ಕಡಿಮೆ ಮಾಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ಸಂಬಂಧ ಸಂಶೋಧಕರು ಸುಮಾರು 2,26,889 ಜನರ ಮೇಲೆ ಈ ಅಧ್ಯಯನ ನಡೆಸಿ, ವಾಕಿಂಗ್​ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಿನವೂ ಬಿರುಸಿನ ವಾಕಿಂಗ್​ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹಿರಂಗ ಕೂಡಾ ಆಗಿದೆ. ವಿವಿಧ 17 ಬಗೆಯ ಪ್ರಯೋಗಗಳನ್ನ ಇವರೆಲ್ಲ ಮೇಲೆ ಮಾಡಿ, ಈ ಅಂಶಗಳನ್ನು ಗುರುತಿಸಲಾಗಿದೆ.

ನೀವು ನಾಲ್ಕು ಸಾವಿರ ಹೆಜ್ಜೆಗಳನ್ನೇ ಹಾಕಬೇಕೆಂದೇನೂ ಇಲ್ಲ. ಜಸ್ಟ್​ ಸಾವಿರ ಹೆಜ್ಜೆಗಳನ್ನು ದಿನವೂ ಹಾಕಿದರೆ ಸಾಕು ಶೇ 15 ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು ಅನ್ನುತ್ತಾರೆ ತಜ್ಞರು. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 500 ರಿಂದ 1,000 ಹೆಜ್ಜೆಗಳನ್ನು ನಡೆಯುವುದರಿಂದ ಹೃದಯ ಕಾಯಿಲೆಗಳಿಂದ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬ ಅಂಶವನ್ನು ಗಮನಿಸಲಾಗಿದೆ.

500 ಹೆಜ್ಜೆ ನಡುಗೆ ಶೇ 7 ರಷ್ಟು ಮರಣ ಪ್ರಮಾಣ ಕಡಿಮೆದಿನವೊಂದಕ್ಕೆ 1000 ಹೆಜ್ಜೆ ನಡೆಯುವುದರಿಂದ ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಖಚಿತ ಪಡಿಸಿದೆ. ಮತ್ತೊಂದೆಡೆ, ನಿತ್ಯ ಕನಿಷ್ಠ 500 ಹೆಜ್ಜೆ ನಡೆಯುವುದರಿಂದ ಹೃದ್ರೋಗದಿಂದ ಉಂಟಾಗುವ ಮರಣವನ್ನು ಶೇಕಡಾ 7 ರಷ್ಟು ಕಡಿಮೆ ಮಾಡಬಹುದು ಅನ್ನುತ್ತೆ ಈ ವರದಿ.

ಯಾವುದೇ ಕಾರಣದಿಂದ ಸಾವುಗಳನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 4000 ಹೆಜ್ಜೆಗಳಷ್ಟು ನಡೆಯುವುದರಿಂದ ಎಲ್ಲ ರೋಗಗಳಿಂದ ದೂರು ಇರಬಹುದು ಅಂತಾರೆ ಪೋಲೆಂಡ್‌ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕ ಮಾಸಿಜ್ ಬನಾಚ್​. ವಾಕಿಂಗ್​​​​ ಮಾಡುವುದು ಪುರುಷರು ಮತ್ತು ಮಹಿಳೆಯಲ್ಲಿ ಸಮಾನ ಪ್ರಭಾವ ಬೀರುತ್ತದೆ ಎನ್ನುತಾರೆ ಅವರು.

ಕಾಲುಭಾಗದಷ್ಟು ಜನ ದೈಹಿಕ ಚಟುವಟಿಕೆಯನ್ನೇ ಮಾಡಲ್ಲದುರ್ದೈವದ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನರು ದೈಹಿಕ ಚಟುವಟಿಕೆಯನ್ನೇ ಮಾಡುವುದಿಲ್ಲ ಎನ್ನುತ್ತವೆ ಸಾಕಷ್ಟು ಅಧ್ಯಯನದ ವರದಿಗಳು. ಅಧ್ಯಯನದ ಪ್ರಕಾರ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ್ತು ಕಡಿಮೆ ಆದಾಯದ ದೇಶಗಳಿಗಿಂತ ಹೆಚ್ಚಿನ ಆದಾಯದ ದೇಶಗಳಲ್ಲಿ ಹೆಚ್ಚಿನ ಜನರು ದೈಹಿಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ – ಅಂಶಗಳ ಪ್ರಕಾರ, ದೈಹಿಕ ಚಟುವಟಿಕೆ ಕೊರತೆ ವಿಶ್ವದಲ್ಲಿ ಸಾವಿಗೆ ನಾಲ್ಕನೇ ಅತಿ ದೊಡ್ಡ ಕಾರಣವಾಗಿದೆ. ದೈಹಿಕ ಚಟುವಟಿಕೆಯ ಕೊರತೆಯು ಪ್ರತಿ ವರ್ಷ 3.2 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆಯಂತೆ.

ಸುಮಾರು 7 ವರ್ಷಗಳ ಕಾಲ ವಿಶ್ಲೇಷಣೆ ನಡೆಸಿರುವ ಸಂಶೋಧಕರು ಈ ಎಲ್ಲ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ 64 ವರ್ಷ ವಯೋಮಿತಿಯ ಶೇ.49 ರಷ್ಟು ಮಹಿಳೆಯರು ಭಾಗವಹಿಸಿದ್ದರು. ಇನ್ನು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾವಿನ ಅಪಾಯವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗಿಂತ ಕಡಿಮೆ ಎಂದು ಅಧ್ಯಯನವು ಕಂಡು ಹಿಡಿದಿದೆ.

ದಿನಕ್ಕೆ 6,000 ರಿಂದ 10,000 ಹೆಜ್ಜೆಗಳನ್ನು ನಡೆದ ಹಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 42 ಪ್ರತಿಶತದಷ್ಟು ಕಡಿಮೆಗೊಳಿಸಿದರೆ, ದಿನಕ್ಕೆ 7,000 ರಿಂದ 13,000 ಹೆಜ್ಜೆಗಳನ್ನು ನಡೆದ ಕಿರಿಯ ವಯಸ್ಕರು ತಮ್ಮ ಸಾವಿನ ಅಪಾಯವನ್ನು 49 ಪ್ರತಿಶತದಷ್ಟು ಕಡಿಮೆ ಮಾಡಿದ್ದಾರೆ.

ಆರೋಗ್ಯ

ಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?

Published

on

ಬೆಂಗಳೂರು: ಮೂತ್ರಪಿಂಡದ ಕಲ್ಲು (Kidney Stone) ಮೂತ್ರಕೋಶಕ್ಕೆ ತಲುಪಿದ ಬಳಿಕ ಸುಲಭವಾಗಿ ಹೊರಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವೊಮ್ಮೆ ಈ ಕಲ್ಲುಗಳು ಮೂತ್ರಕೋಶದಲ್ಲೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ 4–5 ಮಿಮೀ ಗಾತ್ರದ ಕಲ್ಲುಗಳು ಸಹಜವಾಗಿ ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ 7 ಮಿಮೀಗಿಂತ ದೊಡ್ಡದಾದ ಅಥವಾ ಅಸಮ ಆಕಾರ ಹೊಂದಿರುವ ಕಲ್ಲುಗಳು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಕೆಳ ಹೊಟ್ಟೆ ನೋವು, ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ದುರ್ವಾಸನೆ ಕಾಣಿಸಬಹುದು.

ಮೂತ್ರಕೋಶ ಸರಿಯಾಗಿ ಖಾಲಿಯಾಗದಿರುವುದು ಕೂಡ ಪ್ರಮುಖ ಕಾರಣ. ಮೂತ್ರದ ಹರಿವು ಕಡಿಮೆಯಾಗುವ ಸ್ಥಿತಿ ಅಥವಾ ವೃದ್ಧರಾದ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ವಿಸ್ತರಣೆ (BPH) ಸಮಸ್ಯೆಯಿಂದ ಕಲ್ಲುಗಳು ಸಿಲುಕಿಕೊಳ್ಳಬಹುದು. ಜೊತೆಗೆ ಮಧುಮೇಹ ಅಥವಾ ನರ ಸಮಸ್ಯೆಗಳೂ ಪರಿಣಾಮ ಬೀರುತ್ತವೆ.

ಕಲ್ಲುಗಳು ಹೆಚ್ಚು ಕಾಲ ಸಿಲುಕಿಕೊಂಡಿದ್ದರೆ ಸೋಂಕು (UTI), ಮೂತ್ರ ಧಾರಣ ತೊಂದರೆ ಹಾಗೂ ಮೂತ್ರಕೋಶದ ಉರಿಯೂತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಜ್ವರ, ತೀವ್ರ ನೋವು, ಮೂತ್ರವಿಸರ್ಜನೆ ಅಸಾಧ್ಯತೆ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.

ತಜ್ಞರ ಪ್ರಕಾರ, ಸಾಕಷ್ಟು ನೀರು ಕುಡಿಯುವುದು, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. “ಡಬಲ್ ವಾಯ್ಡ್” ಎಂಬ ವಿಧಾನವು ಮೂತ್ರಕೋಶ ಸಂಪೂರ್ಣ ಖಾಲಿಯಾಗಲು ಸಹಕಾರಿಯಾಗುತ್ತದೆ.

ಒಟ್ಟಿನಲ್ಲಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿರ್ಲಕ್ಷಿಸದೇ ಆರಂಭಿಕ ಲಕ್ಷಣಗಳಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.

Note: This information is provided by Dr. Venkatswamy and the Hosasuddi.in health team. Before publishing, Hosasuddi.in follows medical guidelines and expert advice.

Continue Reading

ಆರೋಗ್ಯ

ಮಧುಮೇಹ-ಬೊಜ್ಜಿಗೆ GLP-1 ಔಷಧ: ಪ್ರಯೋಜನದ ಜೊತೆ ಅಪಾಯವೂ!

Published

on

ನವದೆಹಲಿ: ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ GLP-1 ಔಷಧಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಎಚ್ಚರಿಕೆ ನೀಡಿದೆ. ಈ ಔಷಧಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆರೋಗ್ಯ ಇಲಾಖೆ ಹೇಳುವಂತೆ, GLP-1 ಔಷಧಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿ. ಆದರೆ ವಾಕರಿಕೆ, ವಾಂತಿ ಮುಂತಾದ ಸಾಮಾನ್ಯ ಅಡ್ಡಪರಿಣಾಮಗಳಿಂದ ಹಿಡಿದು ಮೂತ್ರಪಿಂಡ ಹಾನಿ, ಮೇದೋಜ್ಜೀರಕ ಗ್ರಂಥಿಯ ಉರಿಯೂತ, ಕರುಳಿನ ಅಡಚಣೆಗಳಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.

Type 2 Diabetes ಮತ್ತು Obesity ಹೊಂದಿರುವವರು ಈ ಔಷಧಗಳನ್ನು ಕಡ್ಡಾಯವಾಗಿ ನೋಂದಾಯಿತ ವೈದ್ಯರ ಮೇಲ್ವಿಚಾರಣೆಯಲ್ಲೇ ಬಳಸಬೇಕು ಎಂದು ಸೂಚಿಸಲಾಗಿದೆ. ಅನಧಿಕೃತ ಮಾರಾಟ ಮತ್ತು ಮೇಲ್ವಿಚಾರಣೆಯಿಲ್ಲದ ಬಳಕೆಯನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿಸಲಾಗಿದೆ.

ಸಚಿವಾಲಯದ ಪ್ರಕಾರ, ಹೆಚ್ಚಿನ ತೂಕ, ವ್ಯಾಯಾಮದ ಕೊರತೆ ಮತ್ತು ಹೆಚ್ಚು ಸಕ್ಕರೆ ಸೇವನೆ ಟೈಪ್ 2 ಮಧುಮೇಹದ ಪ್ರಮುಖ ಕಾರಣಗಳಾಗಿವೆ. ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಈ ರೋಗವನ್ನು ತಡೆಗಟ್ಟಬಹುದು.

Continue Reading

ಆರೋಗ್ಯ

ಜಂಕ್ ಫುಡ್ ಬೇಡ! ಹಣ್ಣುಗಳಿಂದ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಿ

Published

on

ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ತೂಕ ಇಳಿಸುವುದು ಎಷ್ಟು ಕಷ್ಟವೋ, ಅತಿಯಾಗಿ ಸಪೂರ ಮೈಕಟ್ಟು ಹೊಂದಿರುವವರಿಗೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಸವಾಲಾಗಿದೆ. ತೂಕ ಹೆಚ್ಚಿಸುವುದು ಎಂದರೆ ಕೇವಲ ಕೊಬ್ಬು ಹೆಚ್ಚಿಸುವುದಲ್ಲ; ಬದಲಾಗಿ ದೇಹದಲ್ಲಿ ಸದೃಢ ಸ್ನಾಯುಗಳ (ಮಸಲ್ಸ್) ವೃದ್ಧಿ ಮುಖ್ಯ.

ಜಂಕ್ ಫುಡ್‌ಗಳಿಗೆ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ ವಿಧಾನವಾಗಿದೆ. ಕೆಲವು ಹಣ್ಣುಗಳು ದೇಹಕ್ಕೆ ಅಗತ್ಯ ಕ್ಯಾಲರಿ, ಪೋಷಕಾಂಶಗಳನ್ನು ನೀಡುವುದರ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತವೆ.

ಬಾಳೆಹಣ್ಣು (Banana): ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ತೂಕ ಹೆಚ್ಚಿಸಲು ಪರಿಣಾಮಕಾರಿ. ದಿನಕ್ಕೆ 2–3 ಬಾಳೆಹಣ್ಣು ತಿನ್ನುವುದು ಅಥವಾ ಹಾಲಿನೊಂದಿಗೆ ಬನಾನಾ ಶೇಕ್ ಸೇವಿಸುವುದು ವೇಗವಾಗಿ ಫಲ ನೀಡುತ್ತದೆ.

ಅವಕಾಡೋ (Avocado): ಆರೋಗ್ಯಕರ ಕೊಬ್ಬಿನ ಮೂಲವಾಗಿರುವ ಈ ಹಣ್ಣು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ತೂಕವನ್ನು ಸಮತೋಲನದಿಂದ ಹೆಚ್ಚಿಸುತ್ತದೆ.

ಮಾವಿನ ಹಣ್ಣು (Mango): ನೈಸರ್ಗಿಕ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲರಿಗಳಿಂದ ಕೂಡಿದ ಮಾವಿನ ಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಒಣಹಣ್ಣುಗಳು (Dry Fruits): ಅಂಜೂರ, ಖರ್ಜೂರ, ಒಣ ದ್ರಾಕ್ಷಿ ಮುಂತಾದವು ತೂಕ ಹೆಚ್ಚಿಸಲು ಅತ್ಯುತ್ತಮ. ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸಿದರೆ ಹೆಚ್ಚು ಲಾಭಕರ.

ಇದಲ್ಲದೆ ಸಪೋಟ, ಹಲಸಿನ ಹಣ್ಣುಗಳೂ ಸಹ ಸಹಾಯಕ. ಆದರೆ ಕೇವಲ ಆಹಾರ ಸೇವನೆ ಸಾಕಾಗುವುದಿಲ್ಲ; ಲಘು ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಆಹಾರ ಸ್ನಾಯುವಾಗಿ ಪರಿವರ್ತನೆಗೊಳ್ಳಲು ಸಹಾಯವಾಗುತ್ತದೆ.

ನಿಯಮಿತ ಆಹಾರ ಮತ್ತು ತಾಳ್ಮೆಯೊಂದಿಗೆ ಈ ಕ್ರಮ ಪಾಲಿಸಿದರೆ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವುದು ಸಾಧ್ಯ. ಈ ಮಾಹಿತಿಯನ್ನು ಆರೋಗ್ಯ ತಜ್ಞರು ಹಂಚಿಕೊಂಡಿದ್ದು, ಅದರ ಆಧಾರದ ಮೇಲೆ ಹೊಸ ಸುದ್ದಿ (Hosasuddi) ತಂಡವು ಈ ಲೇಖನವನ್ನು ಪ್ರಕಟಿಸಿದೆ.

Continue Reading

Trending