ದೇಶ

ಸದನದಲ್ಲೇ ಕುಸಿದು ಬಿದ್ದ ಕಾಂಗ್ರೆಸ್ ಸಂಸದೆ, ಆಸ್ಪತ್ರೆಗೆ ದಾಖಲು..!

ನವದೆಹಲಿ:ಇಂದು ನಡೆದ ರಾಜ್ಯಸಭಾ ಕಲಾಪದ ವೇಳೆ ಕಾಂಗ್ರೆಸ್‍ನ ರಾಜ್ಯಸಭಾ ಸಂಸದೆ ಪೂಲೋ ದೇವಿ ನೇತಮ್ ಅವರು ಅಸ್ವಸ್ಧಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ,
ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ, ಇಂದಿನ ಕಲಾಪದಲ್ಲಿ ನೀಟ್ ಪರೀಕ್ಷೆಯ ಅಕ್ರಮದ ವಿಚಾರವಾಗಿ ವಿಪಕ್ಷಗಳು ತೀವ್ರವಾಗಿ ಪ್ರತಿಭಟನೆ ನಡೆಸಿದ್ದವು, ಇದೇ ವೇಳೆ ಅವರು ಅಸ್ವಸ್ಧಗೊಂಡು ಕುಸಿದು ಬಿದ್ದಿದ್ದಾರೆ, ಅವರ ಆರೋಗ್ಯ ಸ್ಧಿರವಾಗಿದೆ ಎಂದು ಮೂಲಗಳು ತಿಳಿಸಿವೆ,
ಸಂಸತ್‍ನಲ್ಲ ರಾಜ್ಯಸಭಾ ಕಲಾಪದ ವೇಳೆ ನೀಟ್ ಪರೀಕ್ಷೆಯ ಅಕ್ರಮ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು ಹಿಡಿದ್ದರಿಂದ ಗದ್ದಲ ಉಂಟಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ,

Trending

Exit mobile version