ಬೆಂಗಳೂರು
ಗ್ರಾಂ.ಪಂ ಸದಸ್ಯನಿಗೆ ಚಪ್ಪಲಿ ಸೇವೆ ಮಾಡಿದ ಉಪಾಧ್ಯಕ್ಷ

ತುಮಕೂರು: ತುಮಕೂರು ಗ್ರಾಮ ಪಂಚಾಯತ್ ಸದಸ್ಯರಿಗೆ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ತಿಪಟೂರು ತಾಲೂಕಿನ ನೊಣವಿಕೆರೆಯಲ್ಲಿ ನಡೆದಿದೆ,
ತುರುವೇಕೆರೆ ತಾಲ್ಲೂಕಿನ ತಂಡಗ ಗ್ರಾಮ ಪಂಚಾಯಿತಿಯ ಸದಸ್ಯ ಮೋಹನ್ ಎಂಬುವವರು ಗ್ರಾಮ ಪಂಚಾಯಿತಿ ಅಧ್ಯಕ್ಷನ ಅವಿಶ್ವಾಸ ಮಂಡನೆಗೆ ಸಹಿ ಹಾಕಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ,
ಹಲ್ಲೆ ನಡೆಸಿದವರನ್ನು ತಂಡಗ ಗ್ರಾಮ ಪಂಚಾಯಿತಿ ಉಪಧ್ಯಾಕ್ಷ ಚನ್ನಬಸವೇಗೌಡ ಎನ್ನಲಾಗಿದ್ದು ಮದುವೆ ಸಮಾರಂಭಕ್ಕೆ ಹೋಗಿದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ,
ಈ ಘಟನೆಯ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಕರೆಸಿ ಪೊಲೀಸರು ವಿಚಾರನೆ ನಡೆಸುತ್ತಿದ್ದಾರೆ,