ಕ್ರೀಡೆ
ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್ ದ್ರಾವಿಡ್.. ಆ ಕನಸು ನನಸು ಮಾಡ್ತಾರಾ ಕಿಂಗ್!
ಕಿಂಗ್ಕೊಹ್ಲಿಯ ಬಹುಕಾಲದ ಕನಸು ಈ ವರ್ಷ ನನಸಾಗಿದೆ. ಕರಿಯರ್ ಆರಂಭ ಕನಸನ್ನ ಬೆನ್ನತ್ತಿ, ಅದಕ್ಕಾಗಿ ದಣಿವರಿಯದೇ ದುಡಿದ್ರೂ ಚುಟುಕು ಚಾಂಪಿಯನ್ ಪಟ್ಟ ಕೊಹ್ಲಿಗೆ ದಕ್ಕಿರಲಿಲ್ಲ. ಕೊನೆಗೂ ಟಿ20 ವಿಶ್ವಕಪ್ ಗೆದ್ದಾಗಿದೆ. ಇದ್ರ ಬೆನ್ನಲ್ಲೇ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್, ಕಿಂಗ್ ಕೊಹ್ಲಿ ಹೊಸ ಟಾಸ್ಕ್ ಕೊಟ್ಟಿದ್ದಾರೆ. ದ್ರಾವಿಡ್ ನೀಡಿರೋ ಟಾಸ್ಕ್, ಕೊಹ್ಲಿಯ ಕಿಚ್ಚನ್ನ ಹೆಚ್ಚಿಸಿದೆ. ಆ ಟಾಸ್ಕ್ ಏನು.? ಇಲ್ಲಿದೆ ಓದಿ.
ಸತತ ಸೋಲು, ವೈಫಲ್ಯ, ಬ್ಯಾಡ್ ಲಕ್. ಒಂದಾ..? ಎರಡಾ..? ಕಳೆದ 11 ವರ್ಷಗಳಿಂದ ಟೀಮ್ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಅನುಭವಿಸಿದ್ದು ನಿರಾಸೆಯನ್ನ. ಪರಿಣಾಮ ಸಿಕ್ಕಿದ್ದು ಚೋಕರ್ಸ್ ಪಟ್ಟ. ಇದೀಗ ತಂಡಕ್ಕಂಟಿದ್ದ ಎಲ್ಲಾ ಕಳಂಕಗಳಿಗೂ ಫುಲ್ ಸ್ಟಾಫ್ ಬಿದ್ದಿದೆ. ಬಾರ್ಬಡೋಸ್ ಭಾರತದ ಝಂಡಾ ಹಾರಿಸಿರೋ ರೋಹಿತ್ ಶರ್ಮಾ ಪಡೆ, ಟೀಮ್ ಇಂಡಿಯಾವನ್ನ ಚುಟುಕು ಚಾಂಪಿಯನ್ ಪಟ್ಟಕ್ಕೇರಿಸಿದೆ.
ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದ ದಿಗ್ಗಜರು ಟಿ20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಟಿ20 ಇಂಟರ್ನ್ಯಾಷನಲ್ಸ್ಗೆ ವಿದಾಯ ಹೇಳಿದ್ರು. ರಾಹುಲ್ ದ್ರಾವಿಡ್ ಗೆಲುವಿನೊಂದಿಗೆ ಟೀಮ್ ಇಂಡಿಯಾದ ಕೋಚ್ ಹುದ್ದೆಯನ್ನ ತೊರೆದಿದ್ದಾರೆ. ಕೋಚ್ ಹುದ್ದೆಯನ್ನ ತೊರೆದ ರಾಹುಲ್ ದ್ರಾವಿಡ್ ಸುಮ್ಮನೇ ಜಾಗ ಖಾಲಿ ಮಾಡಿಲ್ಲ. ಕಿಂಗ್ ಕೊಹ್ಲಿಗೆ ಹೊಸ ಟಾಸ್ಕ್ ನೀಡಿ ನಿರ್ಗಮಿಸಿದ್ದಾರೆ.
ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಇಂಟರ್ನ್ಯಾಷನಲ್ಸ್ಗೆ ಗುಡ್ ಬೈ ಹೇಳಿದ ಕೊಹ್ಲಿ ಬಳಿಕ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ರು. ಭಾವುಕರಾಗಿದ್ದ ಟ್ರೋಫಿ ಹಿಡಿದುಕೊಂಡು ಮೈದಾನದ ತುಂಬೆಲ್ಲಾ ಸುತ್ತಾಡಿ ಸಂಭ್ರಮಿಸಿದ್ರು. ಈ ಸಂಭ್ರಮಾಚರಣೆ ಮೈದಾನದ ಉದ್ದಗಲದಿಂದ ಹಿಡಿದು ಡ್ರೆಸ್ಸಿಂಗ್ರೂಮ್ನವರೆಗೂ ನಡೀತು. ಡ್ರೆಸ್ಸಿಂಗ್ ರೂಮ್ ಸಂಭ್ರಮಿಸ್ತಾ ಇದ್ದ ವೇಳೆಯೇ ನೋಡಿ, ಟೀಮ್ ಇಂಡಿಯಾದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿಗೆ ಒಂದು ಸ್ಪೆಷಲ್ ಟಾಸ್ಕ್ ನೀಡಿದ್ದು.
2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ವಿರಾಟ್ ಕೊಹ್ಲಿ, 2011ರಲ್ಲೇ ಏಕದಿನ ವಿಶ್ವಕಪ್ ಗೆದ್ರು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ರು. ಆದ್ರೆ, ಟಿ20 ವಿಶ್ವಕಪ್ ಗೆಲ್ಲಲಾಗದ ಕೊರಗು ವಿರಾಟ್ ಕೊಹ್ಲಿಯನ್ನ ಬಿಡದೇ ಕಾಡಿತ್ತು. ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದ ಸಾಮ್ರಾಟನಾಗಿ ಮೆರೆದ್ರೂ, ರನ್ಗಳಿಕೆಯಲ್ಲಿ ದಾಖಲೆ ಬರೆದ್ರೂ, ಕಪ್ ಕನಸಾಗೇ ಉಳಿದಿತ್ತು. ಕೊನೆಗೂ ಆ ನಿರಾಸೆ, ಹತಾಶೆಗೆ ಈ ಬಾರಿ ಬ್ರೇಕ್ ಬಿದ್ದಿದೆ. ಚುಟುಕು ವಿಶ್ವಕಪ್ ಗೆದ್ದ ವಿರಾಟ್, ವೈಟ್ಬಾಲ್ ಫಾರ್ಮೆಟ್ನ ಪ್ರತಿಷ್ಟಿತ ಮೂರು ICC ಟ್ರೋಫಿಗಳನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನ ದ್ರಾವಿಡ್ ಹೇಳಿದ್ದು ALL THREE WHITES TICKED OFF ಅಂತಾ..!
ವೈಟ್ಬಾಲ್ ಫಾರ್ಮೆಟ್ನಲ್ಲಿ ಮೂರೂ ಐಸಿಸಿ ಟ್ರೋಫಿಗಳನ್ನ ಗೆದ್ದ ಸಾಧನೆಯನ್ನ ವಿರಾಟ್ ಕೊಹ್ಲಿ ಇದೀಗ ಮಾಡಿದ್ದಾಗಿದೆ. ಈಗ ಬ್ಯಾಲೆನ್ಸ್ ಇರೋದು ಒಂದೇ ಅದೇ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮೆಸ್.! ONE RED TO GO. TICK IT ಅಂತಾ ದ್ರಾವಿಡ್ ಹೇಳಿರೋದು ಇದ್ರ ಬಗ್ಗೇನೆ. ಎರಡು ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟೀಮ್ ಇಂಡಿಯಾ ಪ್ರವೇಶಿಸಿದೆ. ಆದ್ರೆ, ಫೈನಲ್ನಲ್ಲಿ ಕಪ್ ಗೆಲ್ಲುವಲ್ಲಿ ಎಡವಿದೆ. ನಾಯಕನಾಗಿ ಒಮ್ಮೆ, ಬ್ಯಾಟ್ಸ್ಮನ್ ಆಗಿ ಮತ್ತೊಮ್ಮೆ ಕೊಹ್ಲಿ ಕೂಡ ಫೇಲ್ ಆಗಿದ್ದಾರೆ.
ವಿಶ್ವ ಕ್ರಿಕೆಟ್ ಲೋಕದಲ್ಲಿ ಆಟಗಾರನಾಗಿ, ನಾಯಕನಾಗಿ ವಿರಾಟ್ ಕೊಹ್ಲಿ ಅಸಾಧ್ಯ ಅಂದಿದ್ದನೆಲ್ಲಾ ಸಾಧಿಸಿ ತೋರಿಸಿದ್ದಾರೆ. ದೇಶ-ವಿದೇಶಗಳಲ್ಲಿ ರನ್ ಕೊಳ್ಳೆ ಶತಕಗಳ ಮೇಲೆ ಶತಕ ಸಿಡಿಸಿದ್ದಾರೆ. ಅದ್ರಲ್ಲೂ, ಟೆಸ್ಟ್ ಫಾರ್ಮೆಟ್ ವಿರಾಟ್ ಕೊಹ್ಲಿಯ ಫೇವರಿಟ್ ಫಾರ್ಮೆಟ್.! ಈ ಫಾರ್ಮೆಟ್ನಲ್ಲಿ ಕಪ್ ಗೆಲ್ಲಲೇಬೇಕು ಅನ್ನೋ ಹಂಬಲ ಕೊಹ್ಲಿಗೂ ಇದೆ. ಇದೀಗ ದ್ರಾವಿಡ್ ಟಾಸ್ಕ್ ಬೇರೆ ನೀಡಿದ್ದಾರೆ. ಇದು ಕೊಹ್ಲಿಯಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಮೆಸ್ ಗೆಲ್ಲೋ ಕನಸಿಗೆ ಕಿಚ್ಚು ಹಚ್ಚಿರೋದ್ರಲ್ಲಿ ಅನುಮಾನವೇ ಇಲ್ಲ.
ಕ್ರೀಡೆ
ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.
ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.
ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಆರ್ಸಿಬಿ ಬ್ಯಾಟಿಂಗ್ ವಿವರ:
- ವಿರಾಟ್ ಕೊಹ್ಲಿ – 28 (18)
- ಫಿಲ್ ಸಾಲ್ಟ್ – 46 (30)
- ದೇವದತ್ತ ಪಡಿಕಲ್ – 50 (29)
- ರಜತ್ ಪಾಟೀದಾರ್ – 48* (19)
- ಟಿಮ್ ಡೇವಿಡ್ – 70* (25)
ಕ್ರೀಡೆ
ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!
ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್ಗಳನ್ನು ವಿತರಿಸಿತ್ತು.
ಆದರೆ, ಈ ಪಾಸ್ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.
ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಸಾಮಾನ್ಯ ಜನರು ಟಿಕೆಟ್ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ಕ್ರೀಡೆ
ಗ್ಯಾಸ್ಗಾಗಿ ಜನ ಸಾಲು, ಟಿಕೆಟ್ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!
ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.
ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.
ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
-
ದೇಶ2 hours agoಸಂಕಷ್ಟದ ಹೊತ್ತಿನಲ್ಲಿ ನೆರವಾದ ದಂಪತಿ: ಶಿವನಪಾಳ್ಯದಲ್ಲಿ ಮಾನವೀಯತೆ
-
ದೇಶ5 hours agoಇರಾನ್ ಶಾಕ್: ಹೊಸ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿ!
-
ದೇಶ7 hours ago4 ಗಂಟೆಗೂ ಬೋರ್ ಇಲ್ಲ: ಕೊಹ್ಲಿ ರಿವ್ಯೂ ವೈರಲ್
-
ದೇಶ7 hours agoಪಾಕಿಸ್ತಾನ ಬೆದರಿಕೆ: ಮೋದಿ ಮೌನಕ್ಕೆ ಮಮತಾ ಕಿಡಿ!
-
ದೇಶ6 hours agoBengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!
-
ದೇಶ6 hours agoಯುದ್ಧ ಭೀತಿ ನಡುವೆ ಇರಾನ್ ಯುವಕರ ಹೊಸ ಹೋರಾಟ
-
ಚುನಾವಣೆ7 hours agoಕೇರಳ ರಾಜಕೀಯದಲ್ಲಿ ಬಣಗಳ ಬಿರುಗಾಳಿ: ಯಾರು ಸಿಎಂ?
-
ದೇಶ6 hours agoBengaluru: ಸಚಿವ ಮುನಿಯಪ್ಪ ಮನೆ ಮುತ್ತಿಗೆ: ಆಟೋ ಚಾಲಕರ ಪ್ರತಿಭಟನೆ
