Connect with us

ದೇಶ

ಶಾರುಖ್​ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ  ಪ್ರತಿಭಟನಾಕಾರರು

Published

on

ಶಾರುಖ್ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ ಪ್ರತಿಭಟನಾಕಾರರು
ಶಾರುಖ್ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ ಪ್ರತಿಭಟನಾಕಾರರು

ಶಾರುಖ್​ ಖಾನ್​ ಪಠಾಣ್​ ಯಶಸ್ಸಿನ ಬಳಕಿ ಈಗ ಜವಾನ್​ ಖುಷಿಯಲ್ಲಿದ್ದಾರೆ. ಇವರ ಜವಾನ್​ ಚಿತ್ರಕ್ಕಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ಈಗ ಮುಂಬೈನಲ್ಲಿರುವ ಶಾರುಖ್​ ಮನೆಯ ಮುಂದೆ ಮುಂಬೈ ಪೊಲೀಸರ ದೊಡ್ಡ ದಂಡೇ ಹರಿದುಬಂದಿದೆ. ಶಾರುಖ್​ ಮನೆಯ ಮುಂದೆ ಬಂದು ಒಂದಿಷ್ಟು ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು  ಚದುರಿಸಲು ಪೊಲೀಸರ ಕಣ್ಗಾವಲು ಹಾಕಲಾಗಿದೆ. ಇದಾಗಲೇ ಕೆಲವು ಮಂದಿಯನ್ನು ಅರೆಸ್ಟ್​  ಕೂಡ ಮಾಡಲಾಗಿದೆ. ಶಾರುಖ್​ ಮನೆ ಮನ್ನತ್​ ಮುಂದೆ ಪ್ರತಿಭಟನೆ ಮಾಡಲು ಬಂದವರನ್ನು ಪೊಲೀಸರು ಅರೆಸ್ಟ್​ ಮಾಡಿರುವ ಸುದ್ದಿ ವೈರಲ್​ ಆಗುತ್ತಲೇ ಶಾರುಖ್​ ಖಾನ್​ಗೇ ಅಭಿಮಾನಿಗಳು ಸೇರಿ ಜನರು ಬಯ್ಯುತ್ತಿದ್ದಾರೆ, ಚಿತ್ರ  ಮಾಡಿ ಸಹಸ್ರಾರು ಕೋಟಿ ರೂಪಾಯಿ ದುಡಿದದ್ದು ಸಾಲದು ಎಂದು ಇವೆಲ್ಲಾ ಕೆಟ್ಟ ಕೆಲಸ ಬೇಕಿತ್ತಾ ಅಂತಿದ್ದಾರೆ. ಪ್ರತಿಭಟನೆ ಮಾಡುತ್ತಿರುವುದೂ ಸರಿಯಾಗಿಯೇ ಇದೆ ಎನ್ನುತ್ತಿದ್ದಾರೆ.

ಅಷ್ಟಕ್ಕೂ ಈ ಪ್ರತಿಭಟನೆ ಯಾಕೆ? ಪೊಲೀಸರು ಬಂದಿದ್ದೇಕೆ ಎನ್ನುವುದಾದರೆ ವರದಿಗಳ ಪ್ರಕಾರ, ಶಾರುಖ್​ ಖಾನ್​ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ ಪ್ರಚಾರ ಮಾಡುತ್ತಿರುವುದಕ್ಕೆ! ಕೆಲವೊಂದು ಆನ್​ಲೈನ್​ ಗೇಮ್ಸ್​ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ. ಬಹುತೇಕರಿಗೆ ತಿಳಿದಿರುವಂತೆ  ಆನ್​ಲೈನ್​ ಗೇಮ್​ ಆಡಿ ಇದ್ದದ್ದನ್ನೆಲ್ಲಾ ಕಳೆದುಕೊಂಡು ಹುಚ್ಚರಾದವರೂ ಇದ್ದಾರೆ, ಪ್ರಾಣ ಕಳೆದುಕೊಂಡವರೂ ಇದ್ದಾರೆ. ಇದರ ಚಟಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಕೋರ್ಟ್​ ಕೂಡ ಈ ಹಿಂದೆ  ಆನ್​ಲೈನ್​ ಗೇಮಿಂಗ್​ ಬ್ಯಾನ್​ಗೆ ಆದೇಶಿಸಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಕೋರ್ಟ್​ ಕೂಡ ಇದಕ್ಕೆ ಸಮ್ಮತಿ ಸೂಚಿಸಿದಾಗಿನಿಂದಲೂ ಮತ್ತೆ ಆನ್​ಲೈನ್​ ಗೇಮ್​ ಎಂಬ ರಾಕ್ಷಸನ ತೆಕ್ಕೆಗೆ ಯುವ ಪೀಳಿಗೆ ಸಾಗುತ್ತಿದೆ. 

ಯಾವುದೇ ಜಾಹೀರಾತು ಮಾಡುವುದಿದ್ದರೂ ಜಾಹೀರಾತು ಕಂಪೆನಿಗಳು ನಟರನ್ನು ಇಲ್ಲವೇ ಕ್ರಿಕೆಟ್​ ತಾರೆಯರನ್ನು  ತಮ್ಮ ಮೊದಲ ಆಯ್ಕೆ ಮಾಡಿಕೊಳ್ಳುವುದು ಸಹಜ. ಅದರಲ್ಲಿಯೂ ವಿಷಕಾರಿ ಪಾನೀಯವೇ ಇರಲಿ, ಯುವ ಸಮುದಾಯವನ್ನು ಹಾಳು ಮಾಡುವ ಯಾವುದೇ ವಸ್ತುವಿರಲಿ, ಆಟವಿರಲಿ… ಇವುಗಳಿಗೆ ನಟರು ಹಾಗೂ ಕ್ರಿಕೆಟಿಗರನ್ನು ಹಾಕಿಕೊಂಡರೆ ಸುಲಭದಲ್ಲಿ ಯುವಕರು ಮರುಳಾಗುತ್ತಾರೆ ಎನ್ನುವ ಅರಿವು ಜಾಹೀರಾತು ಕಂಪೆನಿಗಳಿಗೆ ಇದೆ. ಅವರು ನೀಡುವ ಕೋಟಿ ಕೋಟಿ ಆಸೆಗೆ ಬಿದ್ದು ನಟರು ಕೂಡ ಇವುಗಳಿಗೆ ರಾಯಭಾರಿಗಳಾಗಿ ಹೋಗುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೀಗ ಜನರೇ ಶಾರುಖ್​ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆನ್​ಲೈನ್​ ಗೇಮಿಂಗ್​  ಆ್ಯಪ್‌ಗಳು ಯುವಕರನ್ನು ದಾರಿ ತಪ್ಪಿಸುತ್ತವೆ ಮತ್ತು ಭ್ರಷ್ಟಗೊಳಿಸುತ್ತವೆ ಮತ್ತು ಸೆಲೆಬ್ರಿಟಿಗಳು ಅವುಗಳನ್ನು ಸಮರ್ಥಿಸಬಾರದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆಯ ಅಧಿಕೃತ ಹೇಳಿಕೆಯಲ್ಲಿ, ‘ಪ್ರಸಿದ್ಧ ನಟರು ಮತ್ತು ನಟಿಯರು ಈ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಹೊರಗೆ ಅನ್‌ಟಚ್ ಇಂಡಿಯಾ ಫೌಂಡೇಶನ್ ಪರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.  ಹೊಸ ತಲೆಮಾರು ಜಂಗ್ಲಿ ರಮ್ಮಿ ಆಡುವುದರಲ್ಲಿ ತೊಡಗಿಸಿಕೊಂಡಿದೆ. ಯಾರಾದರೂ ಜಂಗ್ಲೀ ರಮ್ಮಿ ಆಡುತ್ತಿದ್ದರೆ ಅಥವಾ ಹೊರಗೆ ಜೂಜಾಡುತ್ತಿದ್ದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ, ಆದರೆ ಆನ್‌ಲೈನ್ ಆಟಗಳನ್ನು ಉತ್ತೇಜಿಸುವ ದೊಡ್ಡ ಬಾಲಿವುಡ್ ತಾರೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ತಪ್ಪು ಎಂದು ಬಾಲಿವುಡ್ ತಾರೆಯರಿಗೂ ಗೊತ್ತಿದೆ, ಆದರೆ ಅವರು ಹಣ ಪಡೆಯುತ್ತಿದ್ದಾರೆ. ಆದ್ದರಿಂದ ಅವರು ಪ್ರಚಾರ ಮಾಡುತ್ತಿದ್ದಾರೆ. ನಾವು ಈ ಸ್ಟಾರ್‌ಗಳನ್ನು ಅವರ ಚಲನಚಿತ್ರಗಳನ್ನು ನೋಡಿ ನಮ್ಮ ಹಣವನ್ನು ಖರ್ಚು ಮಾಡುವ ಮೂಲಕ ಪ್ರಸಿದ್ಧರಾಗುತ್ತೇವೆ. ಈ ಜಾಹೀರಾತುಗಳನ್ನು ನಿಲ್ಲಿಸಲು ನಾವು ಒತ್ತಾಯಿಸುತ್ತೇವೆ. ಈ ಅಪ್ಲಿಕೇಶನ್‌ಗಳು ಕಾನೂನುಬಾಹಿರ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ನಾವು ಅಜಯ್ ದೇವಗನ್, ರಾಕುಲ್ ಪ್ರೀತ್ ಸಿಂಗ್, ಪ್ರಕಾಶ್ ರಾಜ್, ಅಣ್ಣು ಕಪೂರ್, ರಾಣಾ ದಗ್ಗುಬಾಟಿ ಮತ್ತು ಆನ್‌ಲೈನ್ ಆಟವನ್ನು ಉತ್ತೇಜಿಸುವ ಕ್ರಿಕೆಟಿಗರನ್ನು ವಿರೋಧಿಸುತ್ತೇವೆ. ಈ ತಾರೆಯರ ಮನೆಗಳ ಹೊರಗೆ ನಾವು ಪ್ರತಿಭಟನೆ ಮಾಡಲು ಬಯಸಿದ್ದೇವೆ, ಆದರೆ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆಯೇ ಪೊಲೀಸ್​ ಭದ್ರತೆ ಇಷ್ಟೆಲ್ಲಾ ನೀಡುತ್ತಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ಮೊದಲೇ ಪೊಲೀಸರ ಕೊರತೆ ಇದೆ. ಇರೋ ಪೊಲೀಸರನ್ನು ಇಂಥವರ ರಕ್ಷಣೆಗೆ ಇಟ್ಟರೆ ದೆಹಲಿಯ ಕಥೆಯೇನು ಕೇಳುತ್ತಿದ್ದಾರೆ

ದೇಶ

ಇರಾನ್-ಅಮೆರಿಕಾ ಮಾತುಕತೆ ವಿಫಲ: ಪಾಕಿಸ್ತಾನಕ್ಕೆ ಮುಖಭಂಗ!

Published

on

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ United States ಮತ್ತು Iran ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಯಬೇಕಿದ್ದ ಮಾತುಕತೆ ವಿಫಲವಾಗಿದೆ. ಈ ಬೆಳವಣಿಗೆ Pakistanಗೆ ರಾಜತಾಂತ್ರಿಕವಾಗಿ ದೊಡ್ಡ ಹಿನ್ನಡೆಯಾಗಿದೆ.

ಮಾತುಕತೆಗಳು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿದ್ದರೂ, ಇರಾನ್‌ ಅಮೆರಿಕಾದ ಅಧಿಕಾರಿಗಳನ್ನು ಭೇಟಿ ಮಾಡಲು ನಿರಾಕರಿಸಿದೆ. ಅಮೆರಿಕಾದ 15 ಅಂಶಗಳ ಶಾಂತಿ ಪ್ರಸ್ತಾವವನ್ನು ತಿರಸ್ಕರಿಸಿರುವ ಟೆಹ್ರಾನ್, ಅದರ ಬೇಡಿಕೆಗಳು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕಾದ ಮಾಜಿ ಅಧ್ಯಕ್ಷ Donald Trump ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದರೂ, ಇರಾನ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ತೋರಿಲ್ಲ. ಪಾಕಿಸ್ತಾನವು ಮಧ್ಯವರ್ತಿಯಾಗಿ ಪ್ರಯತ್ನಿಸಿದರೂ, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.

ಇದರ ನಡುವೆ, ಇರಾನ್ ಪಾಕಿಸ್ತಾನದ ರಾಜತಾಂತ್ರಿಕ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಇಸ್ಲಾಮಾಬಾದ್ ಹೊಂದಾಣಿಕೆ ಹೊಂದಿರುವುದನ್ನೂ ಪ್ರಶ್ನಿಸಿದೆ. ಈ ಕಾರಣಗಳಿಂದ ಮಾತುಕತೆ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ.

ಮಾತುಕತೆ ವಿಫಲವಾದರೂ, ಉದ್ವಿಗ್ನತೆ ಶಮನಗೊಳಿಸಲು ಇತರ ರಾಷ್ಟ್ರಗಳು ಮುಂದಾಗಿವೆ. ಟರ್ಕಿ ಹಾಗೂ ಈಜಿಪ್ಟ್ ದೋಹಾ ಮತ್ತು ಇಸ್ತಾಂಬುಲ್‌ಂತಹ ಸ್ಥಳಗಳಲ್ಲಿ ಹೊಸ ಮಾತುಕತೆ ನಡೆಸಲು ಪ್ರಯತ್ನಿಸುತ್ತಿವೆ. ವಿಶೇಷವಾಗಿ ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಕದನ ವಿರಾಮದ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಒಟ್ಟಿನಲ್ಲಿ, ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆ ವಿಫಲವಾಗಿದ್ದು, ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತಷ್ಟು ಗಂಭೀರವಾಗುವ ಸೂಚನೆ ನೀಡಿದೆ.

Continue Reading

ದೇಶ

ಕಾಂಗ್ರೆಸ್ ಒಳಜಗಳ ಬಯಲು: ರಾಹುಲ್ ನಿಲುವಿಗೆ ಹಿರಿಯರ ವಿರೋಧ

Published

on

ನವದೆಹಲಿ: ಇರಾನ್–ಇಸ್ರೇಲ್ ಸಂಘರ್ಷ ಹಾಗೂ ದೇಶದಲ್ಲಿನ ಅಡುಗೆ ಅನಿಲ ಪೂರೈಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ಪಕ್ಷದ ನಾಯಕ Rahul Gandhi ಅವರ ನಿಲುವಿಗೆ ಸ್ವಪಕ್ಷದ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕರುಗಳಾದ Kamal Nath, Anand Sharma, Shashi Tharoor ಹಾಗೂ Manish Tewari ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ.

ಇರಾನ್–ಇಸ್ರೇಲ್ ಸಂಘರ್ಷದಲ್ಲಿ ಮೋದಿ ಸರ್ಕಾರದ ರಾಜತಾಂತ್ರಿಕ ನಡೆ ದುರ್ಬಲವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರೆ, ಶಶಿ ತರೂರು ಸರ್ಕಾರದ ನಡೆ “ಜವಾಬ್ದಾರಿಯುತ ರಾಜತಾಂತ್ರಿಕತೆ” ಎಂದು ಬಣ್ಣಿಸಿದ್ದಾರೆ. ಆನಂದ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ಭಾರತ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ದೇಶದಲ್ಲಿ ಅಡುಗೆ ಅನಿಲ ಕೊರತೆ ಇದೆ ಎಂಬ ಕಾಂಗ್ರೆಸ್ ಆರೋಪಕ್ಕೂ ಪಕ್ಷದೊಳಗೇ ಭಿನ್ನ ಧ್ವನಿಗಳು ಕೇಳಿಬಂದಿವೆ. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ದೇಶದಲ್ಲಿ ಯಾವುದೇ ಗ್ಯಾಸ್ ಅಭಾವ ಇಲ್ಲ ಎಂದು ಹೇಳಿ, ಈ ವಿಚಾರವನ್ನು ವದಂತಿ ಎಂದು ತಳ್ಳಿಹಾಕಿದ್ದಾರೆ.

ಈ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಾಂಗ್ರೆಸ್ ನಾಯಕರು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದೆ. ಕೇಂದ್ರ ಸಚಿವ Jyotiraditya Scindia ಕೂಡ ಕಮಲ್ ನಾಥ್ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ, ಇರಾನ್ ಸಂಘರ್ಷ ಮತ್ತು ಅನಿಲ ವಿಚಾರದಲ್ಲಿ ಕಾಂಗ್ರೆಸ್ ಒಳಜಗಳ ಬಹಿರಂಗವಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ಆರೋಗ್ಯ

ಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?

Published

on

ಬೆಂಗಳೂರು: ಮೂತ್ರಪಿಂಡದ ಕಲ್ಲು (Kidney Stone) ಮೂತ್ರಕೋಶಕ್ಕೆ ತಲುಪಿದ ಬಳಿಕ ಸುಲಭವಾಗಿ ಹೊರಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕೆಲವೊಮ್ಮೆ ಈ ಕಲ್ಲುಗಳು ಮೂತ್ರಕೋಶದಲ್ಲೇ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ 4–5 ಮಿಮೀ ಗಾತ್ರದ ಕಲ್ಲುಗಳು ಸಹಜವಾಗಿ ಮೂತ್ರದ ಮೂಲಕ ಹೊರಹೋಗುತ್ತವೆ. ಆದರೆ 7 ಮಿಮೀಗಿಂತ ದೊಡ್ಡದಾದ ಅಥವಾ ಅಸಮ ಆಕಾರ ಹೊಂದಿರುವ ಕಲ್ಲುಗಳು ಮೂತ್ರನಾಳದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ಕೆಳ ಹೊಟ್ಟೆ ನೋವು, ಮೂತ್ರ ವಿಸರ್ಜನೆ ವೇಳೆ ಉರಿ, ಮೂತ್ರದಲ್ಲಿ ರಕ್ತ ಹಾಗೂ ದುರ್ವಾಸನೆ ಕಾಣಿಸಬಹುದು.

ಮೂತ್ರಕೋಶ ಸರಿಯಾಗಿ ಖಾಲಿಯಾಗದಿರುವುದು ಕೂಡ ಪ್ರಮುಖ ಕಾರಣ. ಮೂತ್ರದ ಹರಿವು ಕಡಿಮೆಯಾಗುವ ಸ್ಥಿತಿ ಅಥವಾ ವೃದ್ಧರಾದ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ವಿಸ್ತರಣೆ (BPH) ಸಮಸ್ಯೆಯಿಂದ ಕಲ್ಲುಗಳು ಸಿಲುಕಿಕೊಳ್ಳಬಹುದು. ಜೊತೆಗೆ ಮಧುಮೇಹ ಅಥವಾ ನರ ಸಮಸ್ಯೆಗಳೂ ಪರಿಣಾಮ ಬೀರುತ್ತವೆ.

ಕಲ್ಲುಗಳು ಹೆಚ್ಚು ಕಾಲ ಸಿಲುಕಿಕೊಂಡಿದ್ದರೆ ಸೋಂಕು (UTI), ಮೂತ್ರ ಧಾರಣ ತೊಂದರೆ ಹಾಗೂ ಮೂತ್ರಕೋಶದ ಉರಿಯೂತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಜ್ವರ, ತೀವ್ರ ನೋವು, ಮೂತ್ರವಿಸರ್ಜನೆ ಅಸಾಧ್ಯತೆ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.

ತಜ್ಞರ ಪ್ರಕಾರ, ಸಾಕಷ್ಟು ನೀರು ಕುಡಿಯುವುದು, ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. “ಡಬಲ್ ವಾಯ್ಡ್” ಎಂಬ ವಿಧಾನವು ಮೂತ್ರಕೋಶ ಸಂಪೂರ್ಣ ಖಾಲಿಯಾಗಲು ಸಹಕಾರಿಯಾಗುತ್ತದೆ.

ಒಟ್ಟಿನಲ್ಲಿ, ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿರ್ಲಕ್ಷಿಸದೇ ಆರಂಭಿಕ ಲಕ್ಷಣಗಳಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.

Note: This information is provided by Dr. Venkatswamy and the Hosasuddi.in health team. Before publishing, Hosasuddi.in follows medical guidelines and expert advice.

Continue Reading

Trending