Connect with us

ದೇಶ

ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

Published

on

2019ರ ಬಳಿಕ ಪ್ರಧಾನಿ ಮೋದಿ ಅವರು ರಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಭಾರತ ಹಾಗೂ ರಷ್ಯಾ ನಡುವೆ 22ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, 2 ದಿನಗಳ ಕಾಲ ಪ್ರಧಾನಿ ಮೋದಿ ಮಾಸ್ಕೋದಲ್ಲಿ ತಂಗಲಿದ್ದಾರೆ. ಇದರ ಬಳಿಕ ಜುಲೈ 10ರಂದು ಆಸ್ಟ್ರೀಯಾಕ್ಕೆ ಪ್ರಯಾಣ ಬೆಳಸಲಿದ್ದು, 41 ವರ್ಷದ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರೀಯಾ ಭೇಟಿ ನೀಡಲಿದ್ದಾರೆ.

ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.. ಇವತ್ತು ಪ್ರಧಾನಿ ಮೋದಿ ರಷ್ಯಾಕ್ಕೆ ತೆರಳಲಿದ್ದು, 2019ರ ನಂತರ ರಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.. ರಷ್ಯಾ ಅಧ್ಯಕ್ಷ ವ್ಲಾಡಿಮೀರ್​ ಪುಟಿನ್​​ ಅಹ್ವಾನದ ಮೇರೆಗೆ ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಲಿದ್ದು, ಇಂದು ಮಧ್ಯಾಹ್ನ ರಷ್ಯಾವನ್ನು ತಲುಪಲಿದ್ದಾರೆ.

5 ವರ್ಷಗಳ ಬಳಿಕ ರಷ್ಯಾ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಹಲವು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಮನೋಭಾವದೊಂದಿಗೆ ಸಾಗಲು ಹೊಸ ಒಡಂಬಡಿಕೆಗೆ ಮೋದಿ ಹಾಗೂ ಪುಟಿನ್‌ ಸಹಿ ಹಾಕಲಿದ್ದಾರೆ.

ಪ್ರಧಾನಿ ಮೋದಿ ರಷ್ಯಾ ಭೇಟಿ

  • ಪ್ರಧಾನಿ ಮೋದಿ ಇವತ್ತು ಮಧ್ಯಾಹ್ನ ಮಾಸ್ಕೋಗೆ ತಲುಪಲಿದ್ದಾರೆ
  • ಎರಡು ದಿನಗಳ ಮಾಸ್ಕೋದಲ್ಲಿ ಉಳಿಯುವ ಪ್ರಧಾನಿ ಮೋದಿ
  • ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿ
  • ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಮೊದಲ ಭೇಟಿ
  • ​​​ಉಭಯ ನಾಯಕರು ಮಹತ್ವದ ವಿಷಯಗಳ ಬಗ್ಗೆ ಚರ್ಚೆ
  • ಮಾಸ್ಕೊ, ವಿಯೆನ್ನಾದಲ್ಲಿ ಭಾರತೀಯ ಸಮುದಾಯವನ್ನು ಭೇಟಿ
  • ರಷ್ಯಾ-ಉಕ್ರೇನ್​ ನಡುವಿನ ಯುದ್ಧ ಕಡಿಮೆ ಮಾಡಲು ಪ್ರಧಾನಿ ಮೋದಿ ಮಹತ್ವದ ಪಾತ್ರವಹಿಸಿದ್ರು. ಹೀಗಾಗಿ ಮೋದಿ ರಷ್ಯಾ ಭೇಟಿ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕುತೂಹಲದಿಂದ ಎದುರು ನೋಡ್ತಿವೆ. ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಪಶ್ಚಿಮದ ದೇಶಗಳು ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಲಾಗಿದೆ.
  • 5 ವರ್ಷಗಳ ಬಳಿಕ ಭಾರತದ ಪ್ರಧಾನಿ ರಷ್ಯಾಗೆ ಆಗಮಿಸುತ್ತಿದ್ದ ಮೋದಿ ಸ್ವಾಗತಕ್ಕೆ ರಷ್ಯಾದಲ್ಲಿರುವ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಲು ಸಿದ್ಧರಾಗಿದ್ದಾರೆ. ಪ್ರಧಾನಿ ಮೋದಿ ಅವರು 2 ದಿನಗಳ ರಷ್ಯಾ ಪ್ರವಾಸದ ಬಳಿಕ ಜುಲೈ 10 ರಂದು ಆಸ್ಟ್ರೀಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಮೋದಿ ಪ್ರವಾಸದಿಂದ ಬಗ್ಗೆ ಹಲವು ನಿರೀಕ್ಷೆಗಳು ಗರಿಗೆದರಿವೆ.

ದೇಶ

PUC Result ಶಾಕ್: ಇಂದು ಇಲ್ಲ, ಏಪ್ರಿಲ್ 9ಕ್ಕೆ ಪ್ರಕಟ!

Published

on

By

ಬೆಂಗಳೂರು, ಏಪ್ರಿಲ್ 07: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ. ಇಂದು (ಏಪ್ರಿಲ್ 07) ಫಲಿತಾಂಶ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. Karnataka School Examination and Assessment Board (KSEAB) ಈಗ ಹೊಸ ದಿನಾಂಕವಾಗಿ ಏಪ್ರಿಲ್ 9ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯದಾದ್ಯಂತ 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಇಂದು ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದ್ದರೂ, ಅಧಿಕೃತ ಘೋಷಣೆ ಇಲ್ಲದ ಕಾರಣ ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟಾಯಿತು.

ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 9ರಂದು ಫಲಿತಾಂಶ ಆನ್‌ಲೈನ್‌ನಲ್ಲಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ತಮ್ಮ Registration Number ಹಾಗೂ Date of Birth ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.

ಇನ್ನೊಂದೆಡೆ, ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಕಾರಣದಿಂದ ಕೆಲವು ಪ್ರದೇಶಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಅಡಚಣೆ ಎದುರಾಗಿದೆ.

ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿರುವುದರಿಂದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮುಂದೂಡಲ್ಪಟ್ಟಿದ್ದು, ವಿದ್ಯಾರ್ಥಿಗಳು ಇನ್ನೂ ಎರಡು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

ದೇಶ

“ಬ್ರೆಡ್ ಇಲ್ಲ ಅಂದ್ರೆ ಕೇಕ್ ತಿನ್ನಿ!” – ಜೋಶಿಗೆ ತಿರುಗೇಟು

Published

on

By

ಬಾಗಲಕೋಟೆ: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ವಿಚಾರ ರಾಜಕೀಯ ಕಾಳಗಕ್ಕೆ ತಿರುಗಿದೆ. ಕೇಂದ್ರ ಸಚಿವ Pralhad Joshi ಅವರು “ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ” ಎಂಬ ಸಲಹೆ ನೀಡಿದ್ದಕ್ಕೆ ಕೆಪಿಸಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ವಕ್ತಾರ A. N. Nataraj Gowda ಅವರು ಈ ಹೇಳಿಕೆಯನ್ನು ಫ್ರೆಂಚ್ ಕ್ರಾಂತಿಯ “ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ” ಎಂಬ ಮನೋಭಾವಕ್ಕೆ ಹೋಲಿಸಿ ಕಿಡಿಕಾರಿದ್ದಾರೆ. “ದಿನಗೂಲಿ ನಂಬಿ ಬದುಕುವ ಆಟೋ ಚಾಲಕರಿಗೆ ಪೆಟ್ರೋಲ್ ಬಳಸುವಂತೆ ಹೇಳುವುದು ಆರ್ಥಿಕ ವಾಸ್ತವತೆ ತಿಳಿಯದ ಮಾತು” ಎಂದು ಆರೋಪಿಸಿದರು.

ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕೆಪಿಸಿಸಿ ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ. ಪೆಟ್ರೋಲ್ ದರ ಗ್ಯಾಸ್‌ಗಿಂತ ಬಹಳ ಹೆಚ್ಚಿದ್ದು, ಅದರಿಂದ ಬಡ ಚಾಲಕರ ಜೀವನ ಸಾಗುವುದೇ ಹೇಗೆ ಎಂದು ಪ್ರಶ್ನಿಸಿದೆ. ಜೊತೆಗೆ, ಹೆಚ್ಚಿನ ಆಟೋಗಳು Dedicated LPG/CNG ಎಂಜಿನ್ ಹೊಂದಿರುವುದರಿಂದ ಪೆಟ್ರೋಲ್ ಬಳಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದೆ.

ಇನ್ನು, ಇಂಧನ ಪೂರೈಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದೇ ಆಗಿದ್ದು, ಖಾಸಗಿ ಕಂಪನಿಗಳಿಂದ ಉಂಟಾಗಿರುವ ಕೃತಕ ಅಭಾವದ ಮೇಲೆ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದೆ. “ಅಂತಾರಾಷ್ಟ್ರೀಯ ಬಿಕ್ಕಟ್ಟು” ನೆಪವೊಡ್ಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

ಈ ನಡುವೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ ಕೆಪಿಸಿಸಿ, ಸಚಿವರು ತಕ್ಷಣವೇ ಆಟೋ ಚಾಲಕರಲ್ಲಿ ಕ್ಷಮೆ ಕೇಳಬೇಕು ಮತ್ತು ಎಲ್‌ಪಿಜಿ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಒಟ್ಟಿನಲ್ಲಿ, ಎಲ್‌ಪಿಜಿ ಕೊರತೆ ಸಮಸ್ಯೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಬಡ ಆಟೋ ಚಾಲಕರ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ.

Continue Reading

ದೇಶ

“ಮೌನ ಏಕೆ?” – ಮೋದಿ ಸರ್ಕಾರದ ವಿರುದ್ಧ ಟಿಎಂಸಿ ಆಕ್ರೋಶ

Published

on

By

Bengal election news

ನವದೆಹಲಿ: ಕೋಲ್ಕತ್ತಾಗೆ ಪಾಕಿಸ್ತಾನ ನೀಡಿರುವ ಬೆದರಿಕೆ ವಿಚಾರ ರಾಜಕೀಯವಾಗಿ ಮತ್ತಷ್ಟು ಕಾವು ಪಡೆದಿದೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ Abhishek Banerjee ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ರಕ್ಷಣಾ ಸಚಿವ Khawaja Asif ಕೊಲ್ಕತ್ತಾವನ್ನು ಗುರಿಯಾಗಿಸುವುದಾಗಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು. “ನೆರೆ ರಾಷ್ಟ್ರದಿಂದ ಇಂತಹ ಬೆದರಿಕೆ ಬಂದರೂ ಪ್ರಧಾನಿ Narendra Modi, ಗೃಹ ಸಚಿವ Amit Shah ಮತ್ತು ರಕ್ಷಣಾ ಸಚಿವ Rajnath Singh ಮೌನವಾಗಿರುವುದು ಅಚ್ಚರಿಯ ಸಂಗತಿ” ಎಂದು ಟೀಕಿಸಿದರು.

ಅಭಿಷೇಕ್ ಬ್ಯಾನರ್ಜಿ ತಮ್ಮ ಭಾಷಣದಲ್ಲಿ, “ನಮ್ಮ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಎಚ್ಚರಿಕೆಯ ಮಾತುಗಳನ್ನೂ ಆಡಿದರು. ಪಾಕಿಸ್ತಾನದ ಬೆದರಿಕೆಗೆ ಗಟ್ಟಿಯಾದ ಪ್ರತಿಕ್ರಿಯೆ ನೀಡದ ಕೇಂದ್ರ ಸರ್ಕಾರದ ನಡೆ ಪ್ರಶ್ನಾರ್ಹ ಎಂದು ಹೇಳಿದರು.

ಇನ್ನೂ ಮುಂದೆ, ಕೇಂದ್ರ ನಾಯಕರು ಪಶ್ಚಿಮ ಬಂಗಾಳಕ್ಕೆ ಬಂದು ಟಿಎಂಸಿ ವಿರುದ್ಧ ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದು, ನಮ್ಮನ್ನು ಬಾಂಗ್ಲಾದೇಶಿಗಳು ಅಥವಾ ಪಾಕಿಸ್ತಾನಿಗಳು ಎಂದು ಕರೆಯುತ್ತಿದ್ದಾರೆ. ಆದರೆ ನೇರ ಬೆದರಿಕೆ ಎದುರಾದಾಗ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಈ ಹೇಳಿಕೆಗಳು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಕಾವು ಹೆಚ್ಚಿಸಿದ್ದು, ಬಿಜೆಪಿ-ಟಿಎಂಸಿ ನಡುವೆ ವಾಗ್ವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Continue Reading

Trending