ಬೆಂಗಳೂರು
ಮಹಾಜನರೇ ಎಚ್ಚರ..! : ಹೊಸ ರೀತಿಯ ವಂಚೆನ ಶುರುವಾಗಿದೆ ಹುಷಾರು!!..

ಬೆಂಗಳೂರು: ಮನೆಗೆ ಕನ್ನ ಹಾಕೋದು.. ಫೇಸ್ಬುಕ್ನಲ್ಲ ರಿಕ್ವಸ್ಟ್ ಕಳಿಸಿ ಹಣಕ್ಕೆ ಬೇಡಿಕೆ ಇಡೋದು.. ಇದೆಲ್ಲಾ ಹಳೆಯ ಫ್ಯಾಷನ್ ಆಗೋಯ್ತು. ಇದೀಗ ಹೊಸದೊಂದು ರೀತಿಯ ವಂಚನಾ ಜಾಲ ಹುಟ್ಟಿಕೊಂಡಿದ್ದು ಹಲವಾರು ಇದರಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ, ರಾಜ್ಯದಲ್ಲಿ ಹಲವಡೆ ಇದೀಗ ಸ್ಕ್ಯ್ರಾಚ್ ಕಾರ್ಡ್ ಸ್ಕ್ಯಾಮ್ ಶುರುವಾಗಿದ್ದು ಜನರು ಮೋಸಹೋಗುತ್ತಿದ್ದಾರೆ,
ವಂಚಕರು ಪೋಸ್ಟ್ ಮುಖಾಂತರ ಹಣ ಪೀಕುವ ದಂಧೆ ಪ್ರಾರಂಭಿಸಿದ್ದಾರೆ, ಮೀಶೋ, ಫ್ಲಿಪ್ಕಾರ್ಟ್ ಹಾಗೂ ಇತರೆ ಶಾಪಿಂಗ್ ಪ್ಲಾಟ್ ಫಾರ್ಮ್ ಹೆಸರು ಬಳಸಿ ದುಡ್ಡು ಪೀಕುತ್ತಿದ್ದಾರೆ, ಪೋಸ್ಟ್ ಮುಖಾಂತರ ಸ್ಕ್ಯ್ರಾಚ್ ಕಾರ್ಡ್ ಇರುವ ಕಾರ್ಡ್ ಒಂದು ನಿಮಗೆ ತಲುಪುತ್ತೆ, ಅದನ್ನು ಸ್ಕ್ರ್ಯಾಚ್ ಮಾಡಿದ್ರೆ ನೀವು ಇಂತಿಷ್ಟು ಹಣ ಗೆದ್ದಿದ್ದೀರಿ, ಕಾರ್ಡ್ನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಬರೆದಿರಲಾಗುತ್ತೆ, ಲಕ್ಷಾಂತರ ರೂಪಾಯಿ ಬಹುಮಾನ ಬಂದಿದೆ ಎಂದು ನೀವೇನಾದರೂ ಕೋಡ್ ಸ್ಕ್ಯಾನ್ ಮಾಡಿದ್ರೆ ಮುಗೀತು, ನಿಮ್ಮ ಖಾತೆಗೆ ಕನ್ನ ಬೀಳೋದು ಗ್ಯಾರೆಂಟಿ.
ಹುಷಾರಾಗಿರಿ, ಸಿಕ್ಕ ಸಿಕ್ಕ ಕಾರ್ಡ್ಗಳನ್ನು ಸ್ಕ್ರ್ಯಾಚ್ ಮಾಡಿ ಹಣದಾಸೆಗೆ ಬಿದ್ದು ನಿಮ್ಮ ಬಳಿ ಇರುವ ಹಣವನ್ನೂ ಕಳೆದುಕೊಳ್ಳಬೇಡಿ, ಇಂಥ ಪೋಸ್ಟ್ಗಳು ನಿಮ್ಮ ಮನೆಗೂ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ..