ಆರೋಗ್ಯ

ಡೆಂಘಿ ಟೆಸ್ಟ್‍ಗೆ ಹೆಚ್ಚು ಹಣ ವಸೂಲಿ ಮಾಡಿದ್ರೆ ಈ ನಂಬರ್‍ಗೆ ಕರೆ ಮಾಡಿ!

ಬೆಂಗಳೂರು: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾದ ಬೆನ್ನಲ್ಲೇ ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ, ಅದರೆ ಬೆಂಗಳೂರಿನಲ್ಲಿ ಕೆಲ ಲ್ಯಾಬ್‍ಗಳು ನಿಗದಿಯಾಗಿದ್ದ 300 ರೂಪಾಯಿಗಿಂತ ಹೆಚ್ಚುವರಿ ದರ ವಸೂಲಿ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಡೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ,
ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಹಾಗೂ ಅನೇಕಲ್ ವ್ಯಾಪ್ತಿಯಲ್ಲಿನ 31 ಖಾಸಗಿ ಆಸ್ಪತ್ರೆಗೆ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ಮಾಡಿ ಪರಿಶೀಲಿಸಿದ್ದಾರೆ, ಈ ಪೈಕಿ 22 ಲ್ಯಾಬ್ ಗಳು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಹಿನ್ನಲೆ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ ಹಾಗೂ ಕೆಪಿಎಂಇ ಅಧಿನಿಯದಂತೆ ನೊಟೀಸ್ ನೀಡಿದ್ದಾರೆ,
ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಪರೀಕ್ಷಾ ಕೇಂದ್ರಗಳು ವಸೂಲಿ ಮಾಡಿದ್ರೆ ಈ ಕೆಳಕಂಡ ನಂಬರ್ ಗೆ ಕರೆ ಮಾಡಬಹುದು ಅಥವಾ ಈ ಕೆಳಗಿನ ಮೇಲ್ ಅಡ್ರೆಸ್‍ಗೆ ಮೇಲ್ ಕಳುಹಿಸಬಹುದು..


ದೂರವಾಣಿ ಸಂಖ್ಯೆ: 9449843037
ಇ-ಮೇಲ್ ವಿಳಾಸ: dhobangaloreurban@gmail.com

Trending

Exit mobile version