ದೇಶ

ಕಮಲ್ ಹಾಸನ್ ಇಂಡಿಯನ್ ೨ ಸಿನಿಮಾ, ಮೊದಲ ದಿನವೇ ನಿರಾಸೆ

ನವದೆಹಲಿ: ಕಮಲ್ ಹಾಸನ್ ನಟನೆಯ ಇಂಡಿಯನ್ ೨ ಸಿನಿಮಾ ಶುಕ್ರವಾರ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಶೇಷವಾಗಿ ತಮಿಳುನಾಡು ರಾಜ್ಯದಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿದ್ದರೂ ವಿಮರ್ಶಕರು ಮತ್ತು ಪ್ರೇಕ್ಷಕರು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದು ಚಿತ್ರತಂಡಕ್ಕೆ ನಿರಾಸೆ ಮೂಡಿಸಿದೆ,
ಇಂಡಿಸ್ಟಿç ಟ್ರಾö್ಯಕ್ಟರ್ ಸ್ಯಾಕ್ನಿಲ್ಕ್ ಪ್ರಕಾರ ಇಂಡಿಯನ್ ೨ ಬಿಡುಗಡೆಯಾದ ಮೊದಲ ದಿನ ಭಾರತದಾದ್ಯಂತ ೨೬ ಕೋಟಿ ಗೂ ಗಳಿಸಿದೆ, ಅದರಲ್ಲಿ ೧೭ ಕೋಟಿ ರೂ ತಮಿಳು ಆವೃತ್ತಿಯಿಂದ ಬಂದಿದೆ, ೧.೧ ಕೋಟಿ ರೂ ಹಿಂದಿ ಆವೃತ್ತಿಯಿಂದ ಮತ್ತು ೭.೯ ಕೋಟಿ ರೂ ತೆಲುಗು ಆವೃತ್ತಿಯಿಂದ ಬಂದಿದೆ, ಅದರೆ ನಿರೀಕ್ಷೆಯ ಗಳಿಕೆ ಸಾಧ್ಯವಾಗಿಲ್ಲ.

ಇಂಡಿಯನ್ ೨ ನಿರ್ದೇಶಕ ಶಂಕರ್ ಅವರ ೧೯೯೬ ರ ಜನಪ್ರಿಯ ಚಲನಚಿತ್ರ ಇಂಡಿಯನ್ ೨ ಮುಂದುವರಿದ ಭಾಗವಾಗಿದೆ, ಇದರಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ,

ಆದರೆ ೩ ಗಂಟೆಯ ಇಂಡಿಯನ್ ೨ ಸಿನಿಮಾದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್‌ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ವೀಕ್ಷಕರು ನಿರಾಸೆ ವ್ಯಕ್ತಪಡಿಸಿದ್ದಾರೆ,

Trending

Exit mobile version