ದೇಶ
ಇಂದು ವಿಶ್ವ ಹಾವು ದಿನ: ಸರ್ಪಗಳ ಬಗ್ಗೆ ನೀವು ತಿಳಿಯಲೇಬೇಕಾದ ಹಲವು ಸಂಗತಿಗಳು ಇಲ್ಲಿವೆ! – World Snake Day 2024
ಪ್ರಪಂಚದಾದ್ಯಂತದ ಇಂದು (ಜುಲೈ 16) ವಿಶ್ವ ಹಾವು ದಿನ ಆಚರಿಸಲಾಗುತ್ತದೆ. ವಿವಿಧ ಪ್ರಭೇದದ ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಒತ್ತು ನೀಡುತ್ತದೆ. ಈವರೆಗೆ ಸುಮಾರು 3,789 ಪ್ರಕಾರದ ಹಾವುಗಳ ಪ್ರಭೇದಗಳನ್ನು ಗುರುತಿಸಲಾಗಿದೆ. ವಿಶ್ವ ಹಾವು ದಿನವು ಪರಿಸರದ ಸಮತೋಲನ ಕಾಪಾಡುವಲ್ಲಿ ಮತ್ತು ಹಾವುಗಳ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.
ಹಾವುಗಳ ಕುರಿತ ನಕಾರಾತ್ಮಕ ಗ್ರಹಿಕೆ ಮತ್ತು ಪುರಾಣಗಳ ಹೊರತಾಗಿಯೂ, ಇಲಿಗಳ ನಿಯಂತ್ರಿಸುವಲ್ಲಿ ಮತ್ತು ಅವುಗಳಿಂದ ಹರಡುವು ರೋಗಗಳನ್ನು ತಡೆಗಟ್ಟುವಲ್ಲಿ ಹಾವುಗಳು ಅತ್ಯಗತ್ಯ. ಭಾರತವು ಸುಮಾರು 300 ಹಾವು ಪ್ರಭೇದಗಳಿಗೆ ನೆಲೆಯಾಗಿದೆ. ವಿಶ್ವ ಹಾವು ದಿನವು ಹಾವು ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪೂರಕವಾಗಿದೆ.
ವಿಶ್ವ ಹಾವು ದಿನದ ಇತಿಹಾಸ: ವಿಶ್ವ ಹಾವು ದಿನವನ್ನು ಯಾವಾಗಿನಿಂದ ಆಚರಣೆ ಮಾಡಿಕೊಂಡುಬರಲಾಗುತ್ತದೆ ಎಂಬುದನ್ನು ದಾಖಲಿಸಲ್ಪಟ್ಟಿಲ್ಲ. ಆದರೆ, ಭಾರತದಲ್ಲಿ ಈ ಬಗ್ಗೆ ಹೊಂದಿರುವ ಮಹತ್ವವನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪುರಾಣಗಳಿಂದ ಗುರುತಿಸಬಹುದು. ಭಾರತೀಯ ಪುರಾಣಗಳಲ್ಲಿ ನಾಗಗಳು ಎಂದೂ ಕರೆಯಲ್ಪಡುವ ಹಾವುಗಳನ್ನು ಪವಿತ್ರ ಜೀವಿಗಳೆಂದು ಗುರುತಿಸಲಾಗಿದೆ.
ನಾಗರಹಾವು, ಕಾಳಿಂಗ ಸರ್ಪ ಮತ್ತು ರಸ್ಸೆಲ್ಸ್ ವೈಪರ್ ಸೇರಿದಂತೆ ಭಾರತದಲ್ಲಿ ಕಂಡುಬರುವ ವಿವಿಧ ಹಾವಿನ ಜಾತಿಗಳನ್ನು ಗಮನಿಸಿದರೆ, ಈ ಆಚರಣೆಯು ಆವಾಸಸ್ಥಾನದ ನಷ್ಟ ಮತ್ತು ಮಾನವ-ಪ್ರಾಣಿ ಸಂಘರ್ಷದಿಂದಾಗಿ ಈ ಹಾವುಗಳ ಜನಸಂಖ್ಯೆಯು ಕ್ಷೀಣಿಸುತ್ತಿರುವುದನ್ನು ಕಾಣಬಹುದು.
ಇತ್ತೀಚಿನ ವರ್ಷಗಳಲ್ಲಿ ಹಾವಿನ ರಕ್ಷಣೆ ಮತ್ತು ಪುನರ್ವಸತಿ ಮುಂತಾದ ಉಪಕ್ರಮಗಳಿಂದ ಅನೇಕ ಹಾವುಗಳ ಜೀವ ಉಳಿಸುವಲ್ಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ದಿನ ಸಹಕಾರಿಯಾಗಿದೆ. ಭಾರತದಲ್ಲಿ ಜಾಗೃತಿ ಅಭಿಯಾನಗಳು, ಹಾವು ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳಂತಹ ವಿವಿಧ ಶೈಕ್ಷಣಿಕ ಮತ್ತು ಸಂರಕ್ಷಣಾ ಚಟುವಟಿಕೆಗಳ ಮೂಲಕ ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.
ಈ ಕಾರ್ಯಕ್ರಮಗಳ ಮೂಲಕ ಪರಿಸರ ವ್ಯವಸ್ಥೆಯಲ್ಲಿ ಹಾವುಗಳು ವಹಿಸುವ ಪ್ರಮುಖ ಪಾತ್ರ, ಅವುಗಳ ಸರಿಯಾದ ನಿರ್ವಹಣೆ ಮತ್ತು ಅವುಗಳ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶ ಹೊಂದಿದೆ. ನೇಚರ್ ಕ್ಲಬ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ. ಈ ಸರೀಸೃಪಗಳ ಬಗ್ಗೆ ಉತ್ತಮ ಅರಿವು ಮೂಡಿಸಲು ವನ್ಯಜೀವಿ ತಜ್ಞರು ಮತ್ತು ಉರಗ ತಜ್ಞರು ನೇತೃತ್ವದಲ್ಲಿ ಸಮಾವೇಶಗಳನ್ನು ನಡಸಲಾಗುತ್ತದೆ.
ವಿಶ್ವ ಹಾವು ದಿನದ ಮಹತ್ವ: ಹಾವುಗಳು ಮಾರುವೇಷದಲ್ಲಿ ಪ್ರಾವೀಣ್ಯತೆ, ನುರಿತ ಬೇಟೆ ಮತ್ತು ತಿನ್ನುವುದರಲ್ಲಿ ಚಾಂಪಿಯನ್. ಈ ಮಾಂಸಾಹಾರಿ ಸರೀಸೃಪಗಳ ಬಗ್ಗೆ ನಿಮಗೆ ತಿಳಿಯದಿರುವ ಅದ್ಭುತ ಸಂಗತಿಗಳು ಇಲ್ಲಿವೆ.
- ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಸುಮಾರು 600 ಜಾತಿಯ ಹಾವುಗಳು ವಿಷಪೂರಿತವಾಗಿವೆ. ಇದರಲ್ಲಿ ಕೇವಲ 200 ಪ್ರಕಾರ ಹಾವುಗಳು ಮಾನವನನ್ನು ಕೊಲ್ಲಲು ಅಥವಾ ಗಾಯಗೊಳಿಸುವ ಸಾಮರ್ಥ್ಯ ಹೊಂದಿದೆ.
- ಹಾವುಗಳು ತಮ್ಮ ತಲೆಗಿಂತ ಶೇ 75ರಿಂದ 100ರಷ್ಟು ದೊಡ್ಡದಾದ ಪ್ರಾಣಿಗಳನ್ನು ನುಂಗಬಲ್ಲವು.
- ಇತ್ತೀಚಿನ ದತ್ತಾಂಶದ ಪ್ರಕಾರ, ಒಟ್ಟು 3,789 ಹಾವಿನ ಪ್ರಭೇದಗಳಿವೆ. ಇದು ಹಲ್ಲಿಗಳ ನಂತರ ಸರೀಸೃಪಗಳ ಎರಡನೇ ದೊಡ್ಡ ಗುಂಪಾಗಿದೆ. ಇವುಗಳಲ್ಲಿ 30 ವಿವಿಧ ಮುಖ್ಯ ಪ್ರಭೇದಗಳು ಮತ್ತು ಹಲವು ಉಪ ಪ್ರಭೇದಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಸರಿಸುಮಾರು 140 ಪ್ರಭೇದದ ಹಾವುಗಳು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ.
- ಭಾರತೀಯ ಸಂಸ್ಕೃತಿಯಲ್ಲಿ ನಾಗರಹಾವುಗಳನ್ನು ಸರ್ಪಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಇವುಗಳು ನಂಬಲಾಗದ ಶಕ್ತಿಗಳನ್ನು ಹೊಂದಿದೆ ಎಂದು ನಂಬಿಕೆಯಿದೆ. ಹಿಂದೂ ಪುರಾಣಗಳಲ್ಲಿ ನಾಗರಹಾವನ್ನು ಸಾಮಾನ್ಯವಾಗಿ ನಾಗ ಎಂದು ಕರೆಯಲಾಗುತ್ತದೆ. ಅನೇಕ ಕಥೆಗಳು ಈ ಶಕ್ತಿಯುತ ಜೀವಿಗಳ ಸುತ್ತ ಸುತ್ತುತ್ತವೆ. ಕೆಲವೊಮ್ಮೆ ಈ ನಾಗವನ್ನು ಅರ್ಧ ಮಾನವ ಮತ್ತು ಅರ್ಧ ಹಾವು ಎಂದು ಚಿತ್ರಿಸಲಾಗುತ್ತದೆ.
- ಹಿಂದೂ ಧರ್ಮದ ಪ್ರಮುಖ ದೇವರಲ್ಲಿ ಒಬ್ಬರಾದ ಭಗವಾನ್ ಶಿವನ ಕುತ್ತಿಗೆಯಲ್ಲಿ ನಾಗರಹಾವು ಇರುವ ಚಿತ್ರಿ ಕಂಡುಬರುತ್ತದೆ. ನಾಗರಹಾವುಗಳು ಸಾವು ಮತ್ತು ಪುನರ್ಜನ್ಮದ ಮೇಲಿನ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ.
- ಆಶ್ಚರ್ಯ ಎಂದರೆ, ಹಾವುಗಳಿಗೆ ಕಣ್ಣುರೆಪ್ಪೆಗಳಿಲ್ಲ. ಇದರರ್ಥ ಹಾವುಗಳು ಕಣ್ಣುಗಳನ್ನು ಮಿಟುಕಿಸುವುದಿಲ್ಲ ಮತ್ತು ತಮ್ಮ ಕಣ್ಣುಗಳನ್ನು ತೆರೆದು ಮಲಗುತ್ತವೆ. ಕಣ್ಣುರೆಪ್ಪೆಗಳ ಬದಲಿಗೆ ಅವುಗಳನ್ನು ರಕ್ಷಿಸಲು ಪ್ರತಿ ಕಣ್ಣಿಗೆ ತೆಳುವಾದ ಪೊರೆಯನ್ನು ಜೋಡಿಸಲಾಗಿದೆ. ಅದನ್ನು ಮೆಂಬರೇನ್ ‘ಬ್ರಿಲ್ಲೆ’ ಎಂದು ಕರೆಯಲಾಗುತ್ತದೆ. ಜರ್ಮನ್ ಭಾಷೆಯಲ್ಲಿ ‘ಬ್ರಿಲ್ಲೆ’ ಅಂದ್ರೆ ಕನ್ನಡಕ ಎಂದರ್ಥ.
- ಹಾವುಗಳು ಮೂಗಿನ ಹೊಳ್ಳೆಗಳನ್ನು ಹೊಂದಿರುತ್ತವೆ. ಆದರೆ, ಅವುಗಳನ್ನು ವಾಸನೆ ಗ್ರಹಿಸಲು ಬಳಸುವುದಿಲ್ಲ. ಬದಲಿಗೆ ಹಾವುಗಳು ತಮ್ಮ ನಾಲಿಗೆಯಿಂದ ವಾಸನೆಯನ್ನು ಗ್ರಹಿಸುತ್ತವೆ. ಜೊತೆಗೆ ಅವುಗಳ ಬಾಯಿಯಲ್ಲಿರುವ ಜಾಕೋಬ್ಸನ್ ಅಂಗವನ್ನು ಬಳಸುತ್ತವೆ. ಹಾವುಗಳ ವಾಸನೆ ಗ್ರಹಿಕೆ ಸಾಮರ್ಥ್ಯ ಉತ್ತಮವಾಗಿದೆ. ಇದನ್ನು ಸ್ಟಿರಿಯೊದಲ್ಲಿ ವಾಸನೆ ಎಂದು ವಿವರಿಸಲಾಗುತ್ತದೆ. ಹಾವುಗಳು ಕವಲೊಡೆದ ನಾಲಿಗೆಯನ್ನು ಹೊಂದಿವೆ. ಹಾವುಗಳ ಸಮೀಪ ವಿವಿಧ ರಾಸಾಯನಿಕ ವಾಸನೆ ಬಂದರೆ, ಅವು ಸುಲಭವಾಗಿ ಗ್ರಹಿಸುತ್ತವೆ.
- ಹುಲ್ಲಿನ ಮೇಲೆ ಹಾವುಗಳು ಫಾಸ್ಟ್ ಆಗಿ ಚಲಿಸುತ್ತವೆ. ಏಕೆಂದರೆ ಇದು ಹಾವುಗಳಲ್ಲಿ ಲೊಕೊಮೊಶನ್ ಲಕ್ಷಣವಾಗಿದೆ. ಇದನ್ನು ಲ್ಯಾಟರಲ್ ಅಂಡ್ಯುಲೇಶನ್ ಎಂದೂ ಕರೆಯುತ್ತಾರೆ. ಆದರೆ, ಹಾವುಗಳು ನಾಲ್ಕು ಇತರ ರೀತಿಯ ಚಲನೆಯನ್ನು ಹೊಂದಿವೆ. ಉದಾಹರಣೆಗೆ, ಅರ್ಬೊರಿಯಲ್ ಹಾವುಗಳು ಕನ್ಸರ್ಟಿನಾ ಎಂದು ಕರೆಯಲ್ಪಡುವ ಏಳು ಪಟ್ಟು ಹೆಚ್ಚು ಶಕ್ತಿಯನ್ನು ಅಂದ್ರೆ, ಲೊಕೊಮೊಶನ್ ಅನ್ನು ಗುಣಲಕ್ಷಣವನ್ನು ಹೊಂದಿವೆ. ಹಾವು ನಯವಾದ ಮೇಲ್ಮೈಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ವಿಶೇಷವಾದ ಲೊಕೊಮೊಶನ್ ಅನ್ನು ಸಹ ಬಳಸಲಾಗುತ್ತದೆ. ಇದನ್ನು ಸ್ಲೈಡ್ ಪುಶಿಂಗ್ ಎಂದು ಕರೆಯಲಾಗುತ್ತದೆ.
- ಹೆಚ್ಚಿನ ಹಾವುಗಳು ಮೊಟ್ಟೆಗಳನ್ನು ಇಡುತ್ತವೆ. ಆದರೆ, ಸಮುದ್ರ ಹಾವುಗಳು ಸೇರಿದಂತೆ ಕೆಲವು ಜಾತಿಗಳು ಮರಿಗಳಿಗೆ ಜನ್ಮ ನೀಡುತ್ತವೆ.
- ಮಿಲನದ ಅವಧಿಯನ್ನು ಹೊರತುಪಡಿಸಿ ಹಾವುಗಳು ಹೆಚ್ಚಾಗಿ ಒಂಟಿಯಾಗಿರುತ್ತವೆ.
- ಅಂಟಾರ್ಕ್ಟಿಕಾ ಮತ್ತು ಉತ್ತರ ಮತ್ತು ದಕ್ಷಿಣ ಪೋಲ್ಗಳ ಹೊರೆಗೆ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಭೂಮಿಯ ಎಲ್ಲೆಡೆ ಹಾವುಗಳು ಕಂಡುಬರುತ್ತವೆ.
- ಕೆಲವು ಸಮುದ್ರ ಹಾವುಗಳು ತಮ್ಮ ಚರ್ಮದ ಮೂಲಕ ಆಂಶಿಕವಾಗಿ ಉಸಿರಾಡಬಲ್ಲವು. ಇದು ಅವುಗಳಿಗೆ ನೀರಿನ ಅಡಿಯಲ್ಲಿ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ.
- ಹಾವುಗಳು ಎಲುಬುಗಳನ್ನು ಹೊಂದಿದ್ದು, ಇವು 1,200ರವರೆಗೆ ಮೂಳೆಗಳು ಹೊಂದಿರಬಹುದು.
- ಹಾವುಗಳು (ರ್ಯಾಟಲ್ಸ್ನೇಕ್ ರ್‍ಯಾಟಲ್ಸ್) ಕೆರಾಟಿನ್ ಅನ್ನು ಹೊಂದಿರುತ್ತವೆ. ಕೆರಾಟಿನ್ ಮಾನವನ ಕೂದಲು ಮತ್ತು ಉಗುರುಗಳಲ್ಲಿ ಕಂಡುಬರುತ್ತದೆ.
- ಕೆಲವು ಹಾವುಗಳು ಹೆಣ್ಣು ಶಕ್ತಿಯನ್ನು ಹೊಂದಿವೆ. ಅವುಗಳಲ್ಲಿ ಚಿಕ್ಕ ಬ್ರಾಹ್ಮಿನಿ ಬ್ಲೈಂಡ್ಸ್ನೇಕ್ ಅಥವಾ ಫ್ಲವರ್ಫೊಟ್ ಸ್ನೇಕ್ ಸೇರಿದ್ದು, ಇವು ಹೆಣ್ಣಿನ ಗುಣ ಹೊಂದಿರುವ ಏಕೈಕ ಹಾವಿನ ಜಾತಿಯಾಗಿದೆ. ಅವುಗಳು ತಮ್ಮದೇ ಆದ ಸಂತಾನೋತ್ಪತ್ತಿ ಮಾಡಬಲ್ಲವು.
ಕರ್ನಾಟಕದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ: ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷ ಕರ್ನಾಟಕದಲ್ಲಿ 5,418 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 36 ಸಾವುಗಳ ಸಂಭವಿಸಿವೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 2024ರ ಫೆಬ್ರವರಿಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 2030ರ ವೇಳೆಗೆ ಸಾವುಗಳು ಮತ್ತು ಅಂಗವೈಕಲ್ಯ ಸೇರಿದಂತೆ ಹಾವು ಕಡಿತದ ಪ್ರಕರಣಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಕಾಳಿಂಗ ಸರ್ಪ, ಮಲಬಾರ್ ಪಿಟ್ ವೈಪರ್ ಮತ್ತು ಹಂಪ್ ನೋಸ್ಡ್ ಪಿಟ್ ವೈಪರ್ನಂತಹ ಹಲವಾರು ವಿಷಕಾರಿ ಹಾವುಗಳಿಗೆ ರಾಜ್ಯವು ನೆಲೆಯಾಗಿದೆ.
ಹಾವು ಕಡಿತದ ಪ್ರಕರಣಗಳನ್ನು ಕಡಿಮೆ ಮಾಡಲು ವಿವಿಧ ಸಂಸ್ಥೆಗಳನ್ನು ಒಳಗೊಂಡ ಸಂಘಟಿತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 172 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಜೊತೆಗೆ ಕೆಲವು ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳೆಂದು ಗುರುತಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉನ್ನತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಅಗತ್ಯ ಔಷಧಿ ಲಭ್ಯವಿರುತ್ತದೆ.
ಕರ್ನಾಟಕದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್‌ವರೆಗೆ) ಒಟ್ಟು 5,418 ಹಾವು ಕಡಿತ ಪ್ರಕರಣಗಳು ಮತ್ತು 36 ಸಾವುಗಳು ವರದಿಯಾಗಿದೆ. 2023ರಲ್ಲಿ 6,596 ಹಾವು ಕಡಿತ ಪ್ರಕರಣಗಳು ಮತ್ತು 19 ಸಾವುಗಳು ಮಾತ್ರ ವರದಿಯಾಗಿದ್ದವು.
ಭಾರತದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)
| ವರ್ಷ | ಗಾಯಗೊಂಡಿರುವರ ಸಂಖ್ಯೆ | ಮೃತಪಟ್ಟವರ ಸಂಖ್ಯೆ |
| 2018 | 70 | 8962 |
| 2019 | 39 | 9224 |
| 2020 | 62 | 9822 |
| 2021 | 64 | 10382 |
| 2022 | 31 | 10096 |
Source:ADSI REPORT
ಕರ್ನಾಟಕದಲ್ಲಿ ADSI ಪ್ರಕಾರ ಹಾವು ಕಡಿತದ ಸಾವಿನ ಪ್ರಕರಣಗಳು (2018-2022)
| ವರ್ಷ | ಗಾಯಗೊಂಡಿರುವರ ಸಂಖ್ಯೆ | ಮೃತಪಟ್ಟವರ ಸಂಖ್ಯೆ |
| 2018 | 2 | 561 |
| 2019 | 0 | 614 |
| 2020 | 0 | 636 |
| 2021 | 0 | 698 |
| 2022 | 0 | 688 |
Source:ADSI REPORT
ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ: ಹೆಚ್ಚಿನ ಹಾವುಗಳು ಜನರಿಗೆ ಅಪಾಯಕಾರಿ ಅಲ್ಲ. ಪ್ರಪಂಚದಾದ್ಯಂತ ಕೇವಲ ಶೇ15 ಮತ್ತು ಅಮೆರಿಕದಲ್ಲಿ ಶೇ 20ರಷ್ಟು ಹಾವುಗಳು ತುಂಬಾ ವಿಷಕಾರಿಯಾಗಿವೆ. ಈ ಹಾವುಗಳ ಕಚ್ಚಿದರೆ, ವ್ಯಕ್ತಿ ಬೇಗ ಸಾವನ್ನಪ್ಪುತ್ತಾನೆ. ಉತ್ತರ ಅಮೆರಿಕಾದಲ್ಲಿ ಇವುಗನ್ನು ರ್ಯಾಟಲ್ಸ್ನೇಕ್, ಕೋರಲ್ ಹಾವು, ವಾಟರ್ ಮೊಕಾಸಿನ್ ಕಾಟನ್‌ಮೌತ್, ಕಾಪರ್‌ಹೆಡ್ ಎಂದೂ ಕರೆಯುತ್ತಾರೆ. ಇವುಗಳ ಕಡಿತವು ಗಂಭೀರ ಗಾಯಗಳಿಗೆ ಕಾರಣವಾಗಬಹುದು ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.
ವಿಷಪೂರಿತ ಹಾವು ನಿಮಗೆ ಕಚ್ಚಿದರೆ, ತಕ್ಷಣವೇ 911 ಅಥವಾ ನಿಮ್ಮ ಸ್ಥಳೀಯ ತುರ್ತು ಸಂಖ್ಯೆಗೆ ಕರೆ ಮಾಡಿ, ವಿಶೇಷವಾಗಿ ಕಚ್ಚಿದ ಪ್ರದೇಶವು ಬಣ್ಣವನ್ನು ಬದಲಾಗುತ್ತದೆ. ಊದಿಕೊಂಡಿರುತ್ತದೆ. ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅನೇಕ ತುರ್ತು ವಿಭಾಗಗಳಲ್ಲಿ ಆಂಟಿವೆನಮ್ ಔಷಧ ಇರುತ್ತದೆ. ಅಲ್ಲಿ ನಿಮಗೆ ಸಹಾಯ ಮಾಡಬಹುದು.
ಹಾವು ಕಚ್ಚಿದಾಗ ಸಾಧ್ಯವಾದರೆ ಈ ಕ್ರಮಗಳನ್ನು ಪಾಲಿಸಿ:
- ಹಾವಿನಿಂದ ದೂರ ಸರಿಯಿರಿ.
- ನಿಮ್ಮ ಹತ್ತಿರದಲ್ಲಿ ಹಾವು ಇದ್ದರೆ ಗದ್ದಲ ಮಾಡದೆ ಶಾಂತವಾಗಿರಿ.
- ಹಾವು ಕಚ್ಚಿದ ಭಾಗದಲ್ಲಿ ಊತ ಪ್ರಾರಂಭವಾಗುವ ಮೊದಲು ಯಾವುದೇ ಆಭರಣಗಳು, ಕೈಗಡಿಯಾರಗಳು ಅಥವಾ ಬಿಗಿಯಾದ ಬಟ್ಟೆಗಳನ್ನು ತೆಗೆದುಹಾಕಿ.
- ಹಾವು ಕಚ್ಚಿದ ಸಮಯದಲ್ಲಿ ಭಯ ಪಡಬಾರದು, ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ.
- ಸೋಪ್ ಮತ್ತು ನೀರಿನಿಂದ ಕಚ್ಚಿದ ಭಾಗವನ್ನು ಸ್ವಚ್ಛಗೊಳಿಸಿ. ಸ್ವಚ್ಛ, ಒಣ ಬ್ಯಾಂಡೇಜ್‌ನಿಂದ ಅದನ್ನು ಸುತ್ತಿ ಅಥವಾ ಸಡಿಲವಾಗಿ ಕಟ್ಟಿಕೊಳ್ಳಿ.
ಎಚ್ಚರಿಕೆ ಕ್ರಮಗಳು:
- ಟೂರ್ನಿಕೆಟ್ ಅಥವಾ ಐಸ್ ಬಳಸಬೇಡಿ.
- ಕಚ್ಚುದ ಭಾಗವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ತೆಗೆದುಹಾಕಲು ಪ್ರಯತ್ನಿಸಬೇಡಿ.
- ಕೆಫೀನ್ ಅಥವಾ ಆಲ್ಕೋಹಾಲ್ ಕುಡಿಯಬೇಡಿ.
- ಆಸ್ಪಿರಿನ್, ಐಬುಪ್ರೊಫೇನ್ (ಅಡ್ವಿಲ್, ಮೋಟ್ರಿನ್ ಐಬಿ, ಇತರೆ) ಅಥವಾ ನ್ಯಾಪ್ರೋಕ್ಸೆನ್ ಸೋಡಿಯಂ (ಅಲೆವ್) ನಂತಹ ನೋವು ನಿವಾರಕ ಔಷಧವನ್ನು ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ನಿಮ್ಮ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.
- ಹಾವನ್ನು ಹಿಡಿಯಲು ಅಥವಾ ಬಲೆಗೆ ಬೀಳಿಸಲು ಪ್ರಯತ್ನಿಸಬೇಡಿ. ಅದರ ಬಣ್ಣ ಮತ್ತು ಆಕಾರವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಹಾವಿನ ವಿವರಿಸಬಹುದು. ಸಾಧ್ಯವಾದರೆ ದೂರದಿಂದ ಹಾವಿನ ಚಿತ್ರವನ್ನು ತೆಗೆದುಕೊಳ್ಳಿ. ನಿಮಗೆ ಯಾವ ರೀತಿಯ ಹಾವು ಕಚ್ಚಿದ ಎಂಬುದನ್ನು ತಿಳಿದು ಚಿಕಿತ್ಸೆ ನೀಡಲು ಸಹಾಯ ಆಗುತ್ತದೆ.
ದೇಶ
ಸುಳ್ಳು ಹೇಳಿಕೆಗಳಿಂದ ವಾಸ್ತವ ಬದಲಾಗದು: ಯುಎನ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಿಡಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗವಾಗಿದ್ದು, ಸುಳ್ಳು ಮತ್ತು ಪಕ್ಷಪಾತದ ಹೇಳಿಕೆಗಳಿಂದ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ತೀಕ್ಷ್ಣ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ P. Harish, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಭಾರತದ ಆಂತರಿಕ ವಿಚಾರಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಆರೋಪಗಳಿಗೆ ಖಡಕ್ ಉತ್ತರ
ಪಾಕಿಸ್ತಾನದ ಖಾಯಂ ಪ್ರತಿನಿಧಿ Asim Iftikhar Ahmad ಅವರು ಜಮ್ಮು-ಕಾಶ್ಮೀರ ಕುರಿತು ಮಾಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಹರೀಶ್, ಪಾಕಿಸ್ತಾನ ನಿರಂತರವಾಗಿ ಆಧಾರರಹಿತ ಮತ್ತು ಐತಿಹಾಸಿಕ ಸತ್ಯಗಳಿಂದ ದೂರವಾದ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು.
“ಪಾಕಿಸ್ತಾನದ ಸುಳ್ಳು ಹೇಳಿಕೆಗಳು ಮತ್ತು ರಾಜಕೀಯ ಪ್ರಚಾರಗಳು ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ್ದಾಗಿದ್ದು, ಯಾವಾಗಲೂ ಭಾರತದ ಭಾಗವಾಗಿಯೇ ಉಳಿಯಲಿದೆ” ಎಂದು ಅವರು ಹೇಳಿದರು.
ಭದ್ರತಾ ಮಂಡಳಿಯ ಸದಸ್ಯತ್ವದ ದುರುಪಯೋಗ ಆರೋಪ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ಸದಸ್ಯರಾಗಿ ಪಾಕಿಸ್ತಾನದ ಅವಧಿ ಈ ವರ್ಷ ಅಂತ್ಯಗೊಳ್ಳಲಿದ್ದು, ತನ್ನ ರಾಜಕೀಯ ಉದ್ದೇಶಗಳಿಗಾಗಿ ಅಂತಾರಾಷ್ಟ್ರೀಯ ವೇದಿಕೆಯನ್ನು ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಭಾರತ ಆರೋಪಿಸಿದೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆಗೂ ವಿರೋಧ
ಇದೇ ವೇಳೆ, ಪಾಕಿಸ್ತಾನವು Gilgit-Baltistan ಪ್ರದೇಶದಲ್ಲಿ ಜೂನ್ 7ರಂದು ನಡೆಸಲು ಉದ್ದೇಶಿಸಿರುವ ಚುನಾವಣೆಯನ್ನೂ ಭಾರತ ತೀವ್ರವಾಗಿ ವಿರೋಧಿಸಿದೆ.
ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಸೇರಿರುವ ಪ್ರದೇಶವಾಗಿದ್ದು, ಪಾಕಿಸ್ತಾನ ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿದೆ. ಅಲ್ಲಿ ನಡೆಯುವ ಯಾವುದೇ ಚುನಾವಣೆ ಅಥವಾ ಆಡಳಿತಾತ್ಮಕ ಬದಲಾವಣೆಗಳಿಗೆ ಭಾರತ ಮಾನ್ಯತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಕ್ರಮಕ್ಕೆ ಭಾರತದ ಆಕ್ಷೇಪ
ಈ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ರಾಜಕೀಯ ದಮನ ಹಾಗೂ ಆರ್ಥಿಕ ಶೋಷಣೆಯನ್ನು ಭಾರತ ಖಂಡಿಸಿದ್ದು, ಆಕ್ರಮಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಭೌತಿಕ ಅಥವಾ ರಾಜಕೀಯ ಬದಲಾವಣೆಯ ಪ್ರಯತ್ನಗಳನ್ನು ತಿರಸ್ಕರಿಸುವುದಾಗಿ ತಿಳಿಸಿದೆ.
ಇನ್ನೊಂದೆಡೆ, ಭಾರತದ ಆರೋಪಗಳನ್ನು ಪಾಕಿಸ್ತಾನ ತಳ್ಳಿಹಾಕಿದ್ದು, ಗಿಲ್ಗಿಟ್-ಬಾಲ್ಟಿಸ್ತಾನ್ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪ್ರತಿಕ್ರಿಯಿಸಿದೆ.
ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ವಿಚಾರವಾಗಿ ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ವಾಗ್ವಾದವು ಮತ್ತೊಮ್ಮೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರತಿಧ್ವನಿಸಿದ್ದು, ಈ ವಿಷಯವು ಮುಂದಿನ ದಿನಗಳಲ್ಲೂ ಚರ್ಚೆಯ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ.
ಕ್ರೀಡೆ
ಕೆಎಲ್ ರಾಹುಲ್‌ಗೆ ‘ಆಸ್ಕರ್’ ಟೀಕೆ! ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ವಿವಾದ
ಮುಲ್ಲನ್‌ಪುರ, ಜೂ.6: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ K. L. Rahul ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೆಂಡು ಬ್ಯಾಟ್‌ಗೆ ತಗುಲಿದ್ದರೂ ಕ್ರೀಸ್‌ನಲ್ಲೇ ಉಳಿದ ರಾಹುಲ್ ವಿರುದ್ಧ ಕೆಲ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ಬೌಲರ್ Zia-ur-Rehman Sharifi ಎಸೆದ ಚೆಂಡನ್ನು ರಾಹುಲ್ ಆಡಲು ಯತ್ನಿಸಿದಾಗ ಅದು ಬ್ಯಾಟ್‌ಗೆ ಸವರಿ ವಿಕೆಟ್‌ಕೀಪರ್ ಕೈ ಸೇರಿತು. ಅಫ್ಘಾನ್ ಆಟಗಾರರು ಔಟ್‌ಗಾಗಿ ಬಲವಾಗಿ ಮನವಿ ಮಾಡಿದರೂ ಅಂಪೈರ್ ಔಟ್ ನೀಡಲಿಲ್ಲ.
ಅಫ್ಘಾನಿಸ್ತಾನ ತಂಡಕ್ಕೆ ಡಿಆರ್‌ಎಸ್ ಅವಕಾಶವಿದ್ದರೂ ನಾಯಕ Hashmatullah Shahidi ರಿವ್ಯೂ ಪಡೆಯಲಿಲ್ಲ. ಬಳಿಕ ಟಿವಿ ಮರುಪ್ರಸಾರದಲ್ಲಿ ಚೆಂಡು ಸ್ಪಷ್ಟವಾಗಿ ಬ್ಯಾಟ್‌ಗೆ ತಗುಲಿರುವುದು ಕಂಡುಬಂದಿದ್ದು, ರಿವ್ಯೂ ಪಡೆಯದಿರುವುದಕ್ಕೆ ಅಫ್ಘಾನ್ ತಂಡ ಬೇಸರ ವ್ಯಕ್ತಪಡಿಸಿತು.
ಈ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ Graeme Swann, “ಕೆಎಲ್ ರಾಹುಲ್, ಇಲ್ಲಿಗೆ ಬನ್ನಿ… ನಿಮ್ಮ ಆಸ್ಕರ್ ಇಲ್ಲಿದೆ” ಎಂದು ವ್ಯಂಗ್ಯವಾಡಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀವದಾನವನ್ನು ಸದುಪಯೋಗಪಡಿಸಿಕೊಂಡ ರಾಹುಲ್
ಆರಂಭಿಕ ವಿಕೆಟ್‌ಗೆ Yashasvi Jaiswal ಜೊತೆಗೆ 41 ರನ್‌ಗಳ ಜೊತೆಯಾಟವಾಡಿದ ರಾಹುಲ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 9,000 ಪ್ರಥಮ ದರ್ಜೆ ರನ್‌ಗಳ ಮೈಲಿಗಲ್ಲನ್ನೂ ದಾಟಿದರು. ಬಳಿಕ ಅರ್ಧಶತಕದ ಗಡಿಯನ್ನು ಸಹ ಯಶಸ್ವಿಯಾಗಿ ತಲುಪಿದರು.
ಇನ್ನೊಂದೆಡೆ ಜೈಸ್ವಾಲ್ 24 ರನ್ ಗಳಿಸಿ ನಿರಾಸೆ ಮೂಡಿಸಿದರು. ಭೋಜನ ವಿರಾಮದ ಬಳಿಕ ಭಾರತ ತಂಡ 100 ರನ್‌ಗಳ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ Shubman Gill ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದೇ ವೇಳೆ ಯುವ ಸ್ಪಿನ್ನರ್ Manav Suthar ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರಿಗೆ Kuldeep Yadav ಕ್ಯಾಪ್ ಪ್ರದಾನ ಮಾಡಿದರು.
ರಾಹುಲ್ ಅವರ ಬ್ಯಾಟಿಂಗ್ ಪ್ರದರ್ಶನ ಮೆಚ್ಚುಗೆ ಪಡೆದಿದ್ದರೂ, ಕ್ರೀಡಾಸ್ಫೂರ್ತಿಗೆ ಸಂಬಂಧಿಸಿದ ಚರ್ಚೆ ಪಂದ್ಯದ ಮೊದಲ ದಿನದ ಪ್ರಮುಖ ವಿಷಯವಾಗಿ ಪರಿಣಮಿಸಿದೆ.
ಅಪರಾಧ
ಭಂಗಾರ್ ಬಾಂಬ್ ಸ್ಫೋಟ ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಶಾಸಕ ಸಾಕೋಟ್ ಮೊಲ್ಲಾ ಬಂಧನ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಂಗಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಲೆಮರೆಸಿಕೊಂಡಿದ್ದ ಮಾಜಿ ಶಾಸಕ Sakot Molla ಅವರನ್ನು ಬಂಧಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಕಚ್ಚಾ ಬಾಂಬ್ ತಯಾರಿಸುವ ವೇಳೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಮೊಲ್ಲಾ ಪ್ರಮುಖ ಸಂಚುಕೋರರಾಗಿದ್ದರು ಎಂದು ಎನ್‌ಐಎ ಆರೋಪಿಸಿದೆ. ದೀರ್ಘಕಾಲದಿಂದ ಪರಾರಿಯಾಗಿದ್ದ ಅವರನ್ನು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಇರುವ ಅಡಗುತಾಣದಿಂದ ಬಂಧಿಸಲಾಗಿದೆ.
ಏನಿದು ಭಂಗಾರ್ ಬಾಂಬ್ ಸ್ಫೋಟ ಪ್ರಕರಣ?
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ನಡುವೆ ಭಂಗಾರ್ ಪ್ರದೇಶದಲ್ಲಿ ಕಚ್ಚಾ ಬಾಂಬ್ ತಯಾರಿಸುವ ವೇಳೆ ಭಾರೀ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ತನಿಖೆಯನ್ನು ರಾಜ್ಯ ಪೊಲೀಸರಿಂದ **National Investigation Agency**ಗೆ ಹಸ್ತಾಂತರಿಸಲಾಗಿತ್ತು.
ಪ್ರಮುಖ ಸಂಚುಕೋರನಾಗಿ ಮೊಲ್ಲಾ ಹೆಸರು
ಎನ್‌ಐಎ ತನಿಖೆಯ ಪ್ರಕಾರ, ಸಾಕೋಟ್ ಮೊಲ್ಲಾ ಇತರ ಆರೋಪಿಗಳಿಗೆ ಕಚ್ಚಾ ಬಾಂಬ್ ತಯಾರಿಸಲು ಸೂಚನೆ ನೀಡಿದ್ದರು. ಅಲ್ಲದೆ, ಸ್ಫೋಟದ ಬಳಿಕ ಸಾಕ್ಷ್ಯಗಳನ್ನು ನಾಶಪಡಿಸುವುದು ಹಾಗೂ ಘಟನಾ ಸ್ಥಳದ ಗುರುತುಗಳನ್ನು ಅಳಿಸುವ ಯತ್ನದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರೆಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ಇದುವರೆಗೆ ಬಂಧಿಸಲ್ಪಟ್ಟ ನಾಲ್ಕನೇ ಆರೋಪಿಯಾಗಿರುವ ಮೊಲ್ಲಾ, ಬಾಂಬ್ ತಯಾರಿಕೆ ಮತ್ತು ಸಾಕ್ಷ್ಯ ನಾಶದ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಸ್ಫೋಟದ ಬಳಿಕ ಸಾಕ್ಷ್ಯ ಮುಚ್ಚಿಹಾಕುವ ಯತ್ನ
ಎನ್‌ಐಎ ಬಹಿರಂಗಪಡಿಸಿರುವ ಮಾಹಿತಿಯಂತೆ, ಸ್ಫೋಟದ ನಂತರ ಮೃತ ವ್ಯಕ್ತಿ ಹಾಗೂ ಗಾಯಾಳುಗಳನ್ನು ಸ್ಥಳದಿಂದ ತೆರವುಗೊಳಿಸುವ ಪ್ರಯತ್ನವೂ ನಡೆದಿತ್ತು. ಇತ್ತೀಚೆಗೆ ಬಂಧಿಸಲ್ಪಟ್ಟ ಮತ್ತೊಬ್ಬ ಆರೋಪಿ ತನ್ನ ಸ್ಕಾರ್ಪಿಯೋ ವಾಹನದಲ್ಲಿ ಮೃತದೇಹ ಹಾಗೂ ಗಾಯಾಳುಗಳನ್ನು ಸಾಗಿಸಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇನ್ನಷ್ಟು ಬಂಧನ ಸಾಧ್ಯತೆ
ಎನ್‌ಐಎ ಅಧಿಕಾರಿಗಳ ಪ್ರಕಾರ, ಪ್ರಕರಣದ ಹಿಂದೆ ಇನ್ನೂ ದೊಡ್ಡ ಮಟ್ಟದ ಸಂಚು ಇರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಬಾಂಬ್ ತಯಾರಿಕೆಗೆ ಬಳಸಿದ ವಸ್ತುಗಳು, ಹಣಕಾಸಿನ ಮೂಲಗಳು, ಸೂಚನೆ ನೀಡಿದವರ ಪಾತ್ರ ಹಾಗೂ ಇತರ ಸಹಚರರ ಕುರಿತು ತನಿಖೆ ಮುಂದುವರಿದಿದೆ.
ಸಾಕೋಟ್ ಮೊಲ್ಲಾ ಬಂಧನದೊಂದಿಗೆ ಭಂಗಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಹಾಗೂ ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
-
ದೇಶ21 hours agoಸುಳ್ಳು ಹೇಳಿಕೆಗಳಿಂದ ವಾಸ್ತವ ಬದಲಾಗದು: ಯುಎನ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಿಡಿ
-
ಕ್ರೀಡೆ21 hours agoಕೆಎಲ್ ರಾಹುಲ್‌ಗೆ ‘ಆಸ್ಕರ್’ ಟೀಕೆ! ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ವಿವಾದ
-
ಅಪರಾಧ21 hours agoಭಂಗಾರ್ ಬಾಂಬ್ ಸ್ಫೋಟ ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಶಾಸಕ ಸಾಕೋಟ್ ಮೊಲ್ಲಾ ಬಂಧನ
-
ದೇಶ24 hours agoBangalore : ಡಿಜಿಟಲ್ ಹಣಕಾಸು ಕ್ಷೇತ್ರದಲ್ಲಿ ಭಾರತದ ಸಾಧನೆ; ಸಹಮತಿ SRO ಆಗಿ ಗುರುತಿಸಿದ RBI
-
ದೇಶ23 hours agoಎಸ್ಐಆರ್ಗೆ ಮುನ್ನ ಆತಂಕ: 2.06 ಲಕ್ಷ ಮತದಾರರ ವಿವರಗಳು ಇನ್ನೂ ದಾಖಲಾಗಿಲ್ಲ
-
ದೇಶ24 hours agoಭಾರತಕ್ಕೆ ಸಿಕ್ಕಿತು ಹೊಸ ಇಂಧನ ಸಂಪತ್ತು! ಅಂಡಮಾನ್ ಕಡಲಿನಲ್ಲಿ ಅನಿಲ ನಿಕ್ಷೇಪ ಪತ್ತೆ
-
ದೇಶ23 hours agoಭಾರತ ನಮ್ಮ ಪ್ರಮುಖ ಕಾರ್ಯತಂತ್ರದ ಪಾಲುದಾರ: ರಷ್ಯಾ ಅಧ್ಯಕ್ಷ ಪುಟಿನ್ ಪ್ರಶಂಸೆ
-
ದೇಶ24 hours agoದೇಶದಲ್ಲಿ ಪ್ಲಾಸ್ಟಿಕ್ ನೋಟುಗಳ ಯುಗ ಆರಂಭವಾಗುತ್ತಾ? ಆರ್ಬಿಐ ಮಹತ್ವದ ಚಿಂತನೆ
