ದೇಶ
ಇಂದು ಭೂವಿಯನ್ನು ಹಾದುಹೋಗಲಿದೆ ಅಪಾಯಕಾರಿ ಕ್ಷುದ್ರ ಗ್ರಹ!

ವಾಷಿಂಗ್ಟನ್: ಪ್ರತಿ ಗಂಟೆಗೆ 73,055 ಕಿಲೋಮೀಟರ್ ವೇಗದಲ್ಲಿ ಭೂವಿಯ ಮೂಲಕ ಹಾದುಹೋಗುವ ಕ್ಷುದ್ರಗ್ರಹ (ಎನ್ ಎಫ್ 2024) ಕುರಿತು ನಾಸಾ ಎಚ್ಚರಿಕೆಯನ್ನು ನೀಡಿದೆ, ಈ ಕ್ಷುದ್ರಗ್ರಹವು 67 ಮೀಟರ್ ಉದ್ದವಿದೆ,
ಜುಲೈ 17 (ಇಂದು) ಸಂಜೆ 4:58 ಕ್ಕೆ ಭೂವಿಗೆ ಸಮೀಪಿಸಲಿದೆ ಎಂದು ಅಂದಾಜಿಸಲಾಗಿದೆ, ಈ ಕ್ಷುದ್ರಗ್ರಹ ಅಪೊಲೊ ಗುಂಪಿನ ಭಾಗವಾಗಿದೆ, ಇದು ಸೂರ್ಯನನ್ನು ಸುತ್ತುವ ಭೂವಿಯ ಸಮೀಪದ ಕ್ಷುದ್ರಗ್ರಹಗಳ ಸಂಗ್ರಹವಾಗಿದೆ.
ಮುಂದಿನ 8-9 ದಿನಗಳಲ್ಲಿ ಭೂವಿಯನ್ನು ಹಾದು ಹೋಗಲಿರುವ ಕ್ಷುದ್ರಗ್ರಹಗಳ ಪಟ್ಟಿಯನ್ನು ಬಾಹ್ಯಾಕಾಶ ಸಂಸ್ಧೆ ಬಿಡುಗಡೆ ಮಾಡಿದೆ, ಎನ್ಎಫ್ 2024 ಜೊತೆಗೆ ಮುಂದಿನ ದಿನಗಳಲ್ಲಿ ನಾಲ್ಕು ಇತರ ಕ್ಷುದ್ರಗ್ರಹಗಳು ಭೂಮಿಗೆ ಸಮೀಪಿಸುತ್ತವೆ ಎಂದು ನಾಸಾ ವರದಿ ಮಾಡಿದೆ,