Connect with us

ಬೆಂಗಳೂರು

ಸಿದ್ದರಾಮಯ್ಯ ಅಂತಾ ಪಠಿಸಿ… ನಿಮಗೆ ಮೋಕ್ಷ ಸಿಗುತ್ತೆ-ವಿಪಕ್ಷಕ್ಕೆ ಸಿಎಂ ಟಾಂಗ್

Published

on

ಬೆಂಗಳೂರು; ಸರ್ಕಾರದ ಮೇಲೆ ವಿಪಕ್ಷಗಳು ಮಾಡಿರುವ ಹಗರಣಗಳ ಆರೋಪ ಕುರಿತು ಸಿಎಂ ಅವರು ಕಾಲಪದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಕ್ಕೂ ಹೆಚ್ಚು ಹಗರಣಗಳ ಪಟ್ಟಿಯನ್ನು ಓದುವ ಮೂಲಕ ಪ್ರತಿಪಕ್ಷಗಳಿಗೆ ಉತ್ತರ ನೀಡಿದರು,
ಸಿಎಂ ಭಾಷನ ಮುಂದುವರಿಸಿದ್ದರೆ, ಅತ್ತ ವಿಪಕ್ಷ ನಾಯಕರು ಸಿದ್ರಾಮಣ್ಣ ಉತ್ತರಗಳು ಸುಳ್ಳು..ಸುಳ್ಳು ಎಂದು ಅಡ್ಡಿಪಡಿಸಿದರು, ಪದೇ ಪದೇ ಸಿದ್ದರಾಮಯ್ಯ ಅಂತಾ ಪಠಿಸಿ ನಿಮಗೆ ಮೋಕ್ಷ ಸಿಗುತ್ತದೆ ಎಂದು ಸಿಎಂ ವಿಪಕ್ಷನಾಯಕರಿಗೆ ಮಾತಿನಲ್ಲೇ ಡಿಚ್ಚಿ ಕೊಟ್ಟ ಪ್ರಸಂಗ ನಡೆದಿದೆ, ನನ್ನ ಹೆಸರು ಹೇಳದಿದ್ದರೆ ಅವರಿಗೆ ಊಟ ಜೀಣಘ ಆಗಲ್ಲ ಎಂದು ಗುಟುರು ಹಾಕಿದರು,
ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ಎಪಿಎಂಸಿ ಹಗರಣದಲ್ಲಿ 47 ಕೋಟಿ 16 ಲಕ್ಷ ಲೂಟಿ, ಭೋವಿ ನಿಗಮದಲ್ಲಿ 87 ಕೋಟಿ ಹಗರಣ ಅರಸ್ ಟ್ರಕ್ ಟರ್ಮಿನಲ್, ಗಂಗಾ ಕಲ್ಯಾಣ ಯೋಜನೆಯಲ್ಲಿ ಭ್ರಷ್ಟಾಚಾರ, ಆದಿ ಜಾಂಬವ ನಿಗಮ, ಅಂಬೇಡ್ಕರ್ ನಿಗಮ 430 ಕ್ಕೂ ಹೆಚ್ಚು ಕೋಟಿ ಹಗರಣ ನಡೆದಿದೆ ಎಂದರು,
ಮುಂದಿವರಿದು ಪ್ರವಾಸೋದ್ಯ ಇಲಾಖೆಯಲ್ಲಿ 2 ಕೋಟಿಗೂ ಹೆಚ್ಚು ಹಗರಣ, ಕಿಯೋನಿಕ್ಸ್ ನಲ್ಲಿ 500 ಕೋಟಿ, ಕೋವಿಡ್ ಸಮಯದಲ್ಲಿ ಹಗರಣ, ಪಿಎಸ್‍ಐ ಹಗರಣ, ಕೆಕೆಆರ್ ಡಿಬಿ, ಕಂದಾಯ ಇಲಾಖೆ ಹಗರಣ, ಬಿಟ್ ಕಾಯಿನ್ ಯಡಿಯೂರಪ್ಪ ಅವರ ಅಪ್ತರ ಮನೆಯಲ್ಲಿ 750 ಕ್ಕೂ ಹೆಚ್ಚು ಕೋಟಿ ರೂಪಾಯಿ ಸಿಕ್ಕಿತ್ತು ಆಗ ಸಿಬಿಐ, ಇಡಿ ಯಾರು ಬರಲಿಲ್ಲ, ತನಿಖೆಯಾಗಿಲ್ಲ, ಯಾರಾದರೂ ರಾಜೀನಾಮೆ ಕೊಟ್ಟರಾ ಎಂದು ಸಿಎಂ ಪ್ರತಿಪಕ್ಷಗಳಿಗೆ ಪ್ರಶ್ನಿಸಿದರು, ನಿಮಗೆ ತಾಕತ್ತಿದ್ದರೆರ ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆಯನ್ನು ಸಿಬಿಐಗೆ ಕೊಡಿ ಎಂದು ಆರ್ ಅಶೋಕ್ ಮತ್ತೊಮ್ಮೆ ಸವಾಲ್ ಹಾಕಿದರು.

ದೇಶ

“ಬ್ರೆಡ್ ಇಲ್ಲ ಅಂದ್ರೆ ಕೇಕ್ ತಿನ್ನಿ!” – ಜೋಶಿಗೆ ತಿರುಗೇಟು

Published

on

By

ಬಾಗಲಕೋಟೆ: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ವಿಚಾರ ರಾಜಕೀಯ ಕಾಳಗಕ್ಕೆ ತಿರುಗಿದೆ. ಕೇಂದ್ರ ಸಚಿವ Pralhad Joshi ಅವರು “ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ” ಎಂಬ ಸಲಹೆ ನೀಡಿದ್ದಕ್ಕೆ ಕೆಪಿಸಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ವಕ್ತಾರ A. N. Nataraj Gowda ಅವರು ಈ ಹೇಳಿಕೆಯನ್ನು ಫ್ರೆಂಚ್ ಕ್ರಾಂತಿಯ “ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ” ಎಂಬ ಮನೋಭಾವಕ್ಕೆ ಹೋಲಿಸಿ ಕಿಡಿಕಾರಿದ್ದಾರೆ. “ದಿನಗೂಲಿ ನಂಬಿ ಬದುಕುವ ಆಟೋ ಚಾಲಕರಿಗೆ ಪೆಟ್ರೋಲ್ ಬಳಸುವಂತೆ ಹೇಳುವುದು ಆರ್ಥಿಕ ವಾಸ್ತವತೆ ತಿಳಿಯದ ಮಾತು” ಎಂದು ಆರೋಪಿಸಿದರು.

ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕೆಪಿಸಿಸಿ ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ. ಪೆಟ್ರೋಲ್ ದರ ಗ್ಯಾಸ್‌ಗಿಂತ ಬಹಳ ಹೆಚ್ಚಿದ್ದು, ಅದರಿಂದ ಬಡ ಚಾಲಕರ ಜೀವನ ಸಾಗುವುದೇ ಹೇಗೆ ಎಂದು ಪ್ರಶ್ನಿಸಿದೆ. ಜೊತೆಗೆ, ಹೆಚ್ಚಿನ ಆಟೋಗಳು Dedicated LPG/CNG ಎಂಜಿನ್ ಹೊಂದಿರುವುದರಿಂದ ಪೆಟ್ರೋಲ್ ಬಳಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದೆ.

ಇನ್ನು, ಇಂಧನ ಪೂರೈಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದೇ ಆಗಿದ್ದು, ಖಾಸಗಿ ಕಂಪನಿಗಳಿಂದ ಉಂಟಾಗಿರುವ ಕೃತಕ ಅಭಾವದ ಮೇಲೆ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದೆ. “ಅಂತಾರಾಷ್ಟ್ರೀಯ ಬಿಕ್ಕಟ್ಟು” ನೆಪವೊಡ್ಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

ಈ ನಡುವೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ ಕೆಪಿಸಿಸಿ, ಸಚಿವರು ತಕ್ಷಣವೇ ಆಟೋ ಚಾಲಕರಲ್ಲಿ ಕ್ಷಮೆ ಕೇಳಬೇಕು ಮತ್ತು ಎಲ್‌ಪಿಜಿ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಒಟ್ಟಿನಲ್ಲಿ, ಎಲ್‌ಪಿಜಿ ಕೊರತೆ ಸಮಸ್ಯೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಬಡ ಆಟೋ ಚಾಲಕರ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ.

Continue Reading

ದೇಶ

ಬೆಂಗಳೂರು ಹೃದಯ ಸ್ಪರ್ಶಿ ಕಥೆ: ಯುವತಿಗೆ ನೆರವಾದ ಅಪರಿಚಿತರು

Published

on

By

ಬೆಂಗಳೂರು: ಸಿಲಿಕಾನ್ ಸಿಟಿಯ ಕತ್ತಲ ರಾತ್ರಿಯಲ್ಲಿ ಯುವತಿಯೊಬ್ಬಳಿಗೆ ರಕ್ಷೆಯಾಗಿ ನಿಂತ ಸಾರಿಗೆ ಸಿಬ್ಬಂದಿ ಹಾಗೂ ಬೈಕ್ ಟ್ಯಾಕ್ಸಿ ಚಾಲಕನ ಮಾನವೀಯತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಗದ್ದಲದ ನಡುವೆ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಐಶ್ವರ್ಯ ಎಂಬ ಯುವತಿ Bangalore Metropolitan Transport Corporation ಬಸ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆ ಸಮಯದಲ್ಲಿ ಸುತ್ತಮುತ್ತ ಸಂಪೂರ್ಣ ಕತ್ತಲು ಆವರಿಸಿಕೊಂಡಿದ್ದು, ರಸ್ತೆಗಳಲ್ಲಿ ಜನರ ಓಡಾಟವೂ ಇರಲಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಸಿಲುಕಿದ ಯುವತಿ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೂ ಯಾವುದೇ ವಾಹನ ಲಭ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ಸ್ಥಿತಿಯನ್ನು ಗಮನಿಸಿದ ಬಿಎಂಟಿಸಿ ಸಿಬ್ಬಂದಿ, ಆಕೆಯನ್ನು ಬಸ್ ಸ್ಟಾಪ್‌ನಲ್ಲಿ ಬಿಟ್ಟು ತೆರಳದೆ ಸುರಕ್ಷಿತ ವಾಹನ ಸಿಗುವವರೆಗೂ ಅಲ್ಲಿಯೇ ಉಳಿದುಕೊಂಡರು. ಅವರ ಈ ಕಾಳಜಿ ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.

ಅದೇ ಸಮಯದಲ್ಲಿ ಆ ಮಾರ್ಗವಾಗಿ ಬಂದ Rapido ಚಾಲಕನೊಬ್ಬ ಯುವತಿಯ ನೆರವಿಗೆ ಧಾವಿಸಿದರು. ಬಿಎಂಟಿಸಿ ಸಿಬ್ಬಂದಿ ಚಾಲಕನ ವಿವರಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಯುವತಿಯನ್ನು ಅವರೊಂದಿಗೆ ಕಳುಹಿಸಿದರು. ವಿಶೇಷವೆಂದರೆ, ಆ ಚಾಲಕ ಯಾವುದೇ ಹಣ ಪಡೆಯದೆ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೆರವಾದ ಬಿಎಂಟಿಸಿ ಸಿಬ್ಬಂದಿ ಮತ್ತು ರ‍್ಯಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಈಗ ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

Trending