ರಾಜಕೀಯ
40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಹೈದರಾಬಾದ್: ಒಂದೊಂದು ರಾಜ್ಯಗಳು ಒಂದೊಂದು ರಾಜಕೀಯ ಇತಿಹಾಸವನ್ನು ಹೊಂದಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜಕೀಯ ಇತಿಹಾಸಗಳು ಒಂದೊಂದು ರಾಜ್ಯದಲ್ಲಿಯೂ ವಿಭಿನ್ನ ಹಾಗೂ ಅಧ್ಯಯನಕಾರಕ ಅಂಶಗಳನ್ನೇ ಹೊಂದಿವೆ. ಕರ್ನಾಟಕದ್ದು ಒಂದು ಚರಿತ್ರೆಯಾದ್ರೆ, ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನಲ್ಲಿ ಇನ್ನೊಂದು ಚರಿತ್ರೆಯಿದೆ. ಆದ್ರೆ ಈ ಆಂಧ್ರಪ್ರದೇಶ ರಾಜಕೀಯ ಚರಿತ್ರೆಯೇ ವಿಭಿನ್ನ. ಇಲ್ಲಿ ವಾಗ್ಯುದ್ಧಗಳಿಗಿಂತ, ಟೀಕೆ ಟಿಪ್ಪಣಿಗಳಿಗಿಂತ ಜಾಸ್ತಿ ಚಾಲ್ತಿಯಲ್ಲಿದ್ದಿದ್ದು ಈಗ ಇರೋದು ಕೂಡ ರಕ್ತ ಚರಿತ್ರೆಯೇ. ಇಲ್ಲಿ ಸಣ್ಣ, ಸಣ್ಣ ವಿಷಯಗಳಿಗೆ ಕತ್ತಿ ಝಳಪಿಸುತ್ತೆ. ಕಲ್ಲು ತೂರಿ ಬರುತ್ವೆ, ಇನ್ಯಾರೋ ಇನ್ಯಾರನ್ನೋ ನೇಣಿಗೆ ಬಿಗಿದು ಉಸಿರು ನಿಲ್ಲಿಸುತ್ತಾರೆ. ಈ ಚರಿತ್ರೆ ಈಗ 21ನೇ ಶತಮಾನದಲ್ಲಿಯೂ ಮುಂದುವರಿದಿದೆ. ಈ ರಾಜಕೀಯ ರಕ್ತ ಚರಿತ್ರೆಯ ಕುರಿತು ಅನೇಕ ಸಿನಿಮಾಗಳು ಬಂದಿವೆ. ಕಥೆ ಕಾದಂಬರಿಗಳನ್ನು ಬರೆಯಲಾಗಿದೆ. ಆದರೂ ಕೂಡ ಇಲ್ಲಿನ ರಕ್ತಚರಿತ್ರೆಯ ರಾಜಕೀಯ ಮಾತ್ರ ಬದಲಾಗಿಲ್ಲ. 12ನೇ ಶತಮಾನದಿಂದ ಆರಂಭವಾದ ಈ ರಕ್ತ ರಾಜಕೀಯ ಈಗಲೂ ಕೂಡ ತನ್ನ ಕರಾಳ ಯುದ್ಧವೊಂದನ್ನು ಜಾರಿಯಲ್ಲಿಯೇ ಇಟ್ಟಿದೆ.
2024ರಲ್ಲಿ ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಯನ್ನೂ ಕೂಡ ಎದುರಿಸಿತ್ತು ಆಂಧ್ರಪ್ರದೇಶ. ಐದು ವರ್ಷದ ಜಗನ್ ಸರ್ಕಾರವನ್ನು ತಿರಸ್ಕರಿಸಿದ ಜನರು ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ ಜನಸೇನಾ ಪಕ್ಷದ ಮೈತ್ರಿ ಸರ್ಕಾರಕ್ಕೆ ಬಹುಮತ ನೀಡಿದರು. ಅಂದಿನಿಂದ ಇಂದಿನವರೆಗೂ ಆಂಧ್ರಪ್ರದೇಶದ ದಿನಪತ್ರಿಕೆಗಳಲ್ಲಿ ಹರಿದಾಡಿದ್ದು ಕೇವಲ ರಕ್ತ ರಾಜಕೀಯದ ಸುದ್ದಿ. ಚುನಾವಣಾ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ಗುಂಟೂರಿನಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ದಾಳಿ ನಡೆಯಿತು, ಕಲ್ಲು ತೂರಾಟಗಳು ನಡೆದವು. ಎರಡು ಪಕ್ಷಗಳ ನಡುವಿನ ವೈರತ್ವ ಬೇರೆಯದ್ದೇ ಸೀಮೆ ತಲುಪಿತು ಕೊನೆಗೆ ಟಿಡಿಪಿಯ ನಾಯಕನೊಬ್ಬ ವೈಎಸ್ಆರ್ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ ಮೇಲೆ ಆಂಧ್ರಪ್ರದೇಶ ಮತ್ತೊಂದು ಬಾರಿ ರಕ್ತ ರಾಜಕೀಯಕ್ಕೆ ಸಾಕ್ಷಿಯಾಯ್ತು.
ಪಲ್ನಾಡು ಜಿಲ್ಲೆಯಲ್ಲಿ ಜುಲೈ 17ನೇ ತಾರೀಖಿನ ರಾತ್ರಿ ಸುಮಾರು 8.30ಕ್ಕೆ ಬರ್ಬರ ಹತ್ಯೆಯೊಂದು ಈಗ ಆಂಧ್ರಪ್ರದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಎಸ್.ಕೆ ಜೈಲಾನಿ ಅನ್ನೋ ವ್ಯಕ್ತಿ ರಶೀದ್ ಎಂಬು 25 ವರ್ಷದ ಯುವಕನನ್ನು ನಟ್ಟನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಹತ್ಯೆಯಾದ ಯುವಕ ರಶೀದ್ನನ್ನು ವೈಎಸ್ಆರ್ಪಿ ಕಾಂಗ್ರೆಸ್ನ ಯುವ ಘಟಕದ ಸದಸ್ಯ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದು ಕೊಂದಿದ್ದಲ್ಲದೇ ಆತನ ಕೈಗಳನ್ನು ಕತ್ತರಿಸಿ ಹಾಕಲಾಗಿತ್ತು. ಜನನಿಬೀಡ ಪ್ರದೇಶದಲ್ಲಿಯೇ, ನಟ್ಟ ನಡು ರಸ್ತೆಯಲ್ಲಿಯೇ ನಡೆದು ಹೋದ ಈ ಭೀಕರ ಹತ್ಯೆ ಕಂಡ ಜನರು ಬೆಚ್ಚಿ ಬಿದ್ದು ಹೋಗಿದ್ದರು. ಈ ಒಂದು ಕೊಲೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ನಾಯಕರ ನಡುವೆ ಜೋರಾದ ವಾಗ್ಯುದ್ಧಗಳಿಗೆ ಸಾಕ್ಷಿಯಾಗಿದೆ.
ಎಕ್ಸ್ ಖಾತೆಯಲ್ಲಿ ಉಭಯ ಪಾರ್ಟಿಗಳ ನಾಯಕರು ಒಬ್ಬರ ಮೇಲೋಬ್ಬರು ಮುಗಿಬೀಳುತ್ತಿದ್ದಾರೆ. ಟಿಡಿಪಿ ಸರ್ಕಾರ ರಚನೆಯಾಗಿ ಕೇವಲ ಒಂದೇ ಒಂದು ತಿಂಗಳಲ್ಲಿ ಒಟ್ಟು 31 ಜನರ ಹತ್ಯೆಯಾಗಿದೆ. 300 ಜನರ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ. 35 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಇವೆಲ್ಲವೂ ಕೂಡ ಟಿಡಿಪಿ ಪಕ್ಷದ ನಾಯಕರ ಶೋಷಣೆಯಿಂದಲೇ ನಡೆದಿವೆ. ಇಷ್ಟು ಮಾತ್ರವಲ್ಲ 560 ಖಾಸಗಿಯವರ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ. 490 ಸರ್ಕಾರಿ ಆಸ್ತಿಗಳ ಮೇಲೆ ದಾಳಿ ನಡೆದಿದೆ. 2700 ಜನರು ತಮ್ಮ ಹಳ್ಳಿಗಳನ್ನು ತೊರೆದು ಬೇರೆಡೆಗೆ ಹೋಗಿದ್ದಾರೆ. ಇವೆಲ್ಲವೂ ಟಿಡಿಪಿ ಪಕ್ಷದ ಶೋಷಣೆ, ದುರ್ವತನೆಯಿಂದಲೇ ನಡೆಯುತ್ತಿವೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕರು ನಾಯ್ಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶ
ಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರಿಯ ನಾಯಕನಾಗಿ ಹೊರಹೊಮ್ಮುತ್ತಿರುವ ವಸತಿ ಸಚಿವ Zameer Ahmed Khan ಅವರಿಗೆ ಎಐಸಿಸಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಅವರ ಪ್ರಭಾವವನ್ನು ಗಮನಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ K. C. Venugopal ಈ ನಿರ್ಧಾರ ಕೈಗೊಂಡಿದ್ದಾರೆ.
ಪ್ರಸ್ತುತ ಕೇರಳ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜಮೀರ್ ಅಹ್ಮದ್, ರಾಜ್ಯದ ಉಪಚುನಾವಣೆಗಳ ಪ್ರಚಾರಕ್ಕೆ ಬರಲು ಸಾಧ್ಯವಾಗದೇ ಬ್ಯುಸಿಯಾಗಿದ್ದಾರೆ. ಕೇರಳದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಅಲ್ಲಿಯೇ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಭಾಗವಹಿಸಲು ಜಮೀರ್ ಅವರಿಗೆ ಆಹ್ವಾನ ನೀಡಲಾಗಿದ್ದರೂ, ಕೇರಳದ ಪ್ರಚಾರ ಕಾರ್ಯದಿಂದ ಬಿಡುವಿಲ್ಲ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ Siddaramaiah ಸೂಚನೆ ಇದ್ದರೂ, ಎಐಸಿಸಿ ನಾಯಕತ್ವದಿಂದಲೇ ತಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೂ ನಡುವೆ, ಎಐಸಿಸಿ ಅಲ್ಪಸಂಖ್ಯಾತ ಘಟಕದ ಸಲಹಾ ಪರಿಷತ್ತಿನ ಸದಸ್ಯರಾಗಿ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಕೇರಳದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ನಾಯಕತ್ವದ ಮಟ್ಟದಲ್ಲೂ ಬದಲಾವಣೆ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.
ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಜಮೀರ್ ಅವರ ಜನಪ್ರಿಯತೆ ದಿನೇದಿನೇ ಏರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದಲ್ಲೂ ಉಪಚುನಾವಣೆಗಳ ನಡುವೆ ಅವರ ಗೈರುಹಾಜರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ದೇಶ
ಸೋಮಣ್ಣ ವಿರುದ್ಧ ಸಿಎಂ ಸಿಡಿತ: “ಕೆಲಸವಿಲ್ಲದ ಮಂತ್ರಿ!”
ಬಾಗಲಕೋಟೆ: ಬಿಜೆಪಿ ನಾಯಕ V. Somanna ವಿರುದ್ಧ ಮುಖ್ಯಮಂತ್ರಿ Siddaramaiah ತೀವ್ರ ವಾಗ್ದಾಳಿ ನಡೆಸಿದ್ದು, “ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದ ಮಂತ್ರಿ, ಅವರಿಗೆ ಯಾವುದೇ ಕಡತ ಹೋಗುವುದಿಲ್ಲ” ಎಂದು ಟೀಕಿಸಿದರು.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಸಿಎಂ, “ನಾವು ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮಣ್ಣ ಅವರಿಗೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯವಿಲ್ಲ” ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳ ಸ್ಥಾನ ಕುರಿತು ಬಿಜೆಪಿ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದರು.
ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, “ಬಿಜೆಪಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಾತಿನಲ್ಲಿ ಸತ್ಯವಿಲ್ಲ, ನಡೆದಲ್ಲಿ ನಂಬಿಕೆ ಇಲ್ಲ” ಎಂದು ಟೀಕಿಸಿದರು. ಜೊತೆಗೆ, ಪಕ್ಷದಿಂದ ಉಚ್ಛಾಟನೆಯಾದ Basanagouda Patil Yatnal ಅವರನ್ನು ಮತ್ತೆ ಪ್ರಚಾರಕ್ಕೆ ಕರೆತಂದು ಬಳಸಿಕೊಳ್ಳುತ್ತಿರುವುದು ಬಿಜೆಪಿ ದ್ವಂದ್ವ ನೀತಿಗೆ ಉದಾಹರಣೆ ಎಂದು ಹೇಳಿದರು.
ಇಂಧನ ಹಾಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇವಲ ವಿತರಣೆಯನ್ನು ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Narendra Modi ಅವರ ಮನೆಗೆ ಮುತ್ತಿಗೆ ಹಾಕಬೇಕು ಎಂಬ ಹೇಳಿಕೆಯನ್ನೂ ನೀಡಿದರು.
ಇನ್ನೂ, ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, Rahul Gandhi, Sonia Gandhi, Mallikarjun Kharge ಮತ್ತು Priyanka Gandhi ಅವರೇ ಪಕ್ಷದ ಹೈಕಮಾಂಡ್ ಎಂದು ಹೇಳಿದರು.
ಒಟ್ಟಿನಲ್ಲಿ, ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
ದೇಶ
ಟೂಲ್ಕಿಟ್ ದಾಳಿ ಆರೋಪ: ಖರ್ಗೆ ಎಕ್ಸ್ ವಿರುದ್ಧ ಗಂಭೀರ ಪ್ರಶ್ನೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದ ನಾಯಕರ ಖಾತೆಗಳ ವಿರುದ್ಧ ಟೂಲ್ಕಿಟ್ ಮೂಲಕ ಸಂಘಟಿತವಾಗಿ ರಿಪೋರ್ಟ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಸಚಿವ Priyank Kharge ಮಾಡಿದ್ದಾರೆ. ಈ ಕುರಿತು ಅವರು X (ಹಳೆಯ ಟ್ವಿಟ್ಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ನನ್ನನ್ನೂ ಒಳಗೊಂಡಂತೆ ಅನೇಕ ವಿರೋಧ ಪಕ್ಷದ ನಾಯಕರ ಖಾತೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಟೂಲ್ಕಿಟ್ ಮೂಲಕ ಪೋಸ್ಟ್ಗಳ ಮೇಲೆ ಸಾಮೂಹಿಕವಾಗಿ ರಿಪೋರ್ಟ್ ಮಾಡುವುದರಿಂದ ಅವುಗಳ ರೀಚ್ ಕಡಿಮೆಯಾಗುತ್ತಿದೆ. ಫೀಡ್ಗಳಲ್ಲಿ ಗೋಚರತೆ ಕುಸಿಯುತ್ತಿದೆ” ಎಂದು ಖರ್ಗೆ ಆರೋಪಿಸಿದ್ದಾರೆ. ಜೊತೆಗೆ, ಎಕ್ಸ್ ಪ್ಲಾಟ್ಫಾರ್ಮ್ ಸ್ವಯಂ ಅಥವಾ ಹೊರಗಿನ ಒತ್ತಡದಿಂದ ಈ ರೀತಿಯ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
ಈ ಆರೋಪಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ Shashi Tharoor ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. “ಸುಮಾರು ಆರು ವರ್ಷಗಳ ಹಿಂದೆ ನನ್ನ ಫಾಲೋವರ್ಸ್ ಸಂಖ್ಯೆ 8.4 ಮಿಲಿಯನ್ ತಲುಪಿತ್ತು. ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರುತ್ತಿದ್ದರೂ, ಒಟ್ಟು ಸಂಖ್ಯೆ ಕುಸಿಯುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಟ್ವೀಟ್ಗಳು ತಮ್ಮ ಫಾಲೋವರ್ಸ್ಗಳಿಗೆ ತಲುಪುತ್ತಿಲ್ಲ, ಹೊಸ ಖಾತೆ ತೆರೆದರೂ ರಿಕಮೆಂಡ್ ಆಗುವುದಿಲ್ಲ ಎಂಬ ಗಂಭೀರ ತಾಂತ್ರಿಕ ಸಮಸ್ಯೆಗಳನ್ನೂ ತರೂರ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕಂಪನಿಗೆ ಮಾಹಿತಿ ನೀಡಿದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳು ಸಾಮಾಜಿಕ ಜಾಲತಾಣಗಳ ನಿಷ್ಪಕ್ಷಪಾತತೆ ಕುರಿತು ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ನೆಟ್ಟಿಗರೂ ಈ ವಿಷಯದ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ವಿಪಕ್ಷಗಳು ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.
-
ದೇಶ17 hours agoಹಳೆಯ ವಾಹನಗಳಿಗೆ HSRP ಕಡ್ಡಾಯವೇ? ಸಾರಿಗೆ ಇಲಾಖೆಯ ಸ್ಪಷ್ಟನೆ ಏನು ಗೊತ್ತಾ?
-
ದೇಶ23 hours agoಪ್ರಚಾರ ವೇಳೆ ಕಾರು ತಡೆದು ಹಲ್ಲೆ: ತರೂರ್ ಬೆಂಗಾವಲು ಮೇಲೆ ದಾಂಧಲೆ
-
ಆರೋಗ್ಯ21 hours agoಮೂತ್ರಪಿಂಡದ ಕಲ್ಲು: ಮೂತ್ರಕೋಶದಲ್ಲಿ ಸಿಲುಕಿದರೆ ಏನಾಗುತ್ತದೆ?
-
ದೇಶ19 hours agoಕಾಂಗ್ರೆಸ್ ಒಳಜಗಳ ಬಯಲು: ರಾಹುಲ್ ನಿಲುವಿಗೆ ಹಿರಿಯರ ವಿರೋಧ
-
ದೇಶ22 hours agoಜಮೀರ್ ಅಹ್ಮದ್ಗೆ ಎಐಸಿಸಿಯಲ್ಲಿ ಮಹತ್ವದ ಹುದ್ದೆ!
-
ಚುನಾವಣೆ17 hours agoTN 2026 ಟೀಸರ್ಗೆ ರಾಜಕೀಯ ಕಿಚ್ಚು! ವಿಜಯ್ ಟಾರ್ಗೆಟ್ ಆರೋಪ – ತಮಿಳುನಾಡಿನಲ್ಲಿ ಬಿಗುವಿನ ವಾತಾವರಣ
-
ದೇಶ18 hours agoಇರಾನ್-ಅಮೆರಿಕಾ ಮಾತುಕತೆ ವಿಫಲ: ಪಾಕಿಸ್ತಾನಕ್ಕೆ ಮುಖಭಂಗ!
-
ಅಪರಾಧ18 hours agoಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!
