ಬಿಬಿಎಂಪಿ
ಸಿಲಿಕಾನ್ ಸಿಟಿ 5 ಭಾಗ; ವಿಧಾನಸಭೆಯಲ್ಲಿ ಇಂದು ವಿಧೇಯಕ ಮಂಡನೆ.. BBMP ರದ್ದಾಗುತ್ತಾ?
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು, ಗ್ರೇಟರ್ ಬೆಂಗಳೂರಾಗಿ ಬದಲಾಗಲು ಸಜ್ಜಾಗಿದೆ.. ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟ ಬೆಂದಕಾಳೂರಿಗೆ ಹೊಸ ರೂಪು ರೇಷೆ ನೀಡಲು ಸರ್ಕಾರ ಸಜ್ಜಾಗಿದೆ. ಇಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಥಾರಿಟಿ ವಿಧೇಯಕ ಮಂಡಿಸೋ ಮೂಲಕ ಹೊಸ ಮನ್ವಂತರಕ್ಕೆ ಸರ್ಕಾರ ಭಾಷ್ಯ ಬರೆಯಲಿದೆ.
ಬೆಂದಕಾಳೂರು.. ನಾಡಪ್ರಭು ಕೆಂಪೇಗೌಡರು ಕಟ್ಟಿದ ಭವ್ಯ ನಗರ.. ಅದೆಷ್ಟೋ ಜನರಿಗೆ ಜೀವನ ಕಟ್ಟಿಕೊಟ್ಟ ದೇಗುಲ.. ತುತ್ತು ಅನ್ನ ಹೊತ್ತು ನಿದ್ರೆ ನೀಡಿ ತನ್ನ ಮಡಿಲಿನಲ್ಲಿ ಕೋಟ್ಯಾಂತರ ಜನರನ್ನ ಸಾಕಿ ಸಲಹುತ್ತಿರೋ ಪುಣ್ಯಭೂಮಿ.. ಇಂತದೊಂದು ಮಹಾನಗರ ಸದ್ಯ 5 ಜಿಲ್ಲೆಗಳಾಗಿ ವಿಭಜನೆಯಾಗೋ ಸಮಯ ಒದಗಿ ಬಂದಿದೆ. ಬೆಂಗಳೂರು ವಿಭಜಿಸುವ ವಿಧೇಯಕಕ್ಕೆ ಸಂಪುಟ ಅನುಮೋದನೆ
ಉದ್ಯಾನನಗರಿ ಬೆಂಗಳೂರನ್ನ 5 ಜಿಲ್ಲೆಗಳಾಗಿ ವಿಭಜಿಸುವ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರನ್ನ 5 ವಿಭಾಗಗಳಾಗಿ ವಿಭಜಿಸುವ ವಿಧೇಯಕ ಇದಾಗಿದೆ. ಈ ಮೂಲಕ ಬೆಂಗಳೂರನ್ನು 5 ಜಿಲ್ಲೆಗಳಾಗಿ ವಿಭಜಿಸಿ, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ನೀಡಲಾಗಿದೆ. ಇಂದು ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಲಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ!
- GBAಗೆ ಯೋಜನೆ & ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ
- ಸುಮಾರು1400 Sq ಕಿ.ಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ
- 1-10 ಕಾರ್ಪೊರೇಷನ್ಗಳು 950 Sq ಕಿ.ಲೋ ಮೀಟರ್ ವ್ಯಾಪ್ತಿಗೆ
- ಸದ್ಯ ಇರುವ 708 Sq ಕಿ.ಲೋ ಮೀಟರ್ ಬಿಬಿಎಂಪಿ ರದ್ದಾಗುತ್ತಾ?
- ಕರಡು ಮಸೂದೆಯಲ್ಲಿ ಸುಮಾರು 400 ವಾರ್ಡ್‌ಗಳ ರಚನೆಗೆ ಪ್ರಸ್ತಾಪ
- ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ಮಾತ್ರ ಬಿಡಿಎಗೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷ!
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ.
5-10 ಕಾರ್ಪೋರೇಷನ್ ಇರಲಿದ್ದು, ಒಂದೊಂದು ಕಾರ್ಪೋರೇಷನ್ಗೆ ಒಬ್ಬ ಆಯುಕ್ತ ಇರಲಿದ್ದಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆ ಮಾಡಲಾಗುತ್ತದೆ.
ಯಾವೆಲ್ಲ ಪ್ರದೇಶ ಗ್ರೇಟರ್ಗೆ ಸೇರುತ್ತೆ?
ಇನ್ನೂ 5 ಜಿಲ್ಲೆಗಳಾಗಿ ವಿಭಜನೆಯಾಗುವ ಗ್ರೇಟರ್ ಬೆಂಗಳೂರು ಅಥಾರಿಟಿಗೆ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೇಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದೆ.
ಸಿಲಿಕಾನ್ ಸಿಟಿ ಬೆಂಗಳೂರು 5 ಜಿಲ್ಲೆಗಳಾಗಿ ಬೇರ್ಪಟ್ಟು ಗ್ರೇಟರ್ ಬೆಂಗಳೂರು ಅಥಾರಿಟಿಗೆ ಒಳಪಡುವ ಮೂಲಕ ಮತ್ತಷ್ಟು ಗ್ರೇಟ್ ಆಗಲು ಸಜ್ಜಾಗಿದೆ.. ಇಂದು ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾದ ಬಳಿಕ ಗ್ರೇಟರ್ ಬೆಂಗಳೂರು ಅಥಾರಿಟಿಯ ರೂಪುರೇಷೆ ಸಿದ್ಧವಾಗಲಿದೆ
ಚುನಾವಣೆ
ಪೆರಂಬೂರ್ ಕಣಕ್ಕೆ ನಟ ವಿಜಯ್ ಎಂಟ್ರಿ: ತಮಿಳುನಾಡು ರಾಜಕೀಯದಲ್ಲಿ ಸಂಚಲನ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ರಾಜಕೀಯ ಪ್ರವೇಶ ರಾಜ್ಯ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆ ತಂದಿದೆ. ವಿಶೇಷವಾಗಿ, ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರವನ್ನು ತಮ್ಮ ಚೊಚ್ಚಲ ಚುನಾವಣಾ ಕಣವಾಗಿ ಆರಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
Perambur ಕ್ಷೇತ್ರವು ಸಾಂಪ್ರದಾಯಿಕವಾಗಿ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದರೂ, ಈ ಬಾರಿ ವಿಜಯ್ ಪ್ರವೇಶದಿಂದಾಗಿ ಹೈ-ಪ್ರೊಫೈಲ್ ಕಣವಾಗಿ ಪರಿಣಮಿಸಿದೆ. Dravida Munnetra Kazhagam (DMK) ಮತ್ತು All India Anna Dravida Munnetra Kazhagam (AIADMK) ಪಕ್ಷಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ.
ಈ ಕ್ಷೇತ್ರದಲ್ಲಿ ಡಿಎಂಕೆ ಒಂಬತ್ತು ಬಾರಿ ಗೆಲುವು ಸಾಧಿಸಿದ್ದು, ಸತ್ಯವಾಣಿ ಮುತ್ತು ಮತ್ತು ಪರಿಥಿ ಇಲಂವಝುತಿ ಅವರಂತಹ ನಾಯಕರಿಂದ ರಾಜಕೀಯ ಇತಿಹಾಸ ರೂಪುಗೊಂಡಿದೆ. 2016ರಲ್ಲಿ ಎಐಎಡಿಎಂಕೆ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೂ, 2019ರ ಉಪಚುನಾವಣೆ ಮತ್ತು 2021ರ ಚುನಾವಣೆಯಲ್ಲಿ ಡಿಎಂಕೆ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು.
ಸುಮಾರು 2.22 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪೆರಂಬೂರ್ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಯುವಕರು ಮತ್ತು ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಿರುವ ಈ ಪ್ರದೇಶದಲ್ಲಿ ಉದ್ಯೋಗ, ಹಣದುಬ್ಬರ ನಿಯಂತ್ರಣ, ವಸತಿ ಮತ್ತು ಮೂಲಸೌಕರ್ಯ ಪ್ರಮುಖ ಚುನಾವಣಾ ವಿಷಯಗಳಾಗಿವೆ.
ವಿಜಯ್ ಅವರ ಯುವಜನಪ್ರಿಯತೆ ಈ ಬಾರಿ ದ್ರಾವಿಡ ಪಕ್ಷಗಳ ದೀರ್ಘಕಾಲದ ಹಿಡಿತವನ್ನು ಸವಾಲು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪೆರಂಬೂರ್ ಕಣ ಇದೀಗ ಸಾಮಾನ್ಯ ಚುನಾವಣೆ ಮಾತ್ರವಲ್ಲ, ಹೊಸ ರಾಜಕೀಯ ಶಕ್ತಿಯ ಪರೀಕ್ಷೆಯಾಗಿ ಪರಿಣಮಿಸಿದೆ.
ದೇಶ
ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ: ಮಧುಮೇಹ, ರಕ್ತದೊತ್ತಡ ಪ್ರಕರಣ ಹೆಚ್ಚಳ
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿರುವುದು ಆರೋಗ್ಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಸ್ವಚ್ಛತಾ ಯೋಧರೆಂದು ಗುರುತಿಸಲಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಂಡಿದ್ದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿದೆ.
ದಕ್ಷಿಣ ಕಾರ್ಪೋರೇಷನ್ ವ್ಯಾಪ್ತಿಯ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ನಮ್ಮ ಕ್ಲಿನಿಕ್‌ಗಳಲ್ಲಿ ಬುಧವಾರ ಸಮೂಹ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1,934 ಮಂದಿಗೆ ಆರೋಗ್ಯ ತಪಾಸಣೆ
ಒಟ್ಟು 1,934 ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 605 ಪುರುಷರು ಮತ್ತು 1,348 ಮಹಿಳೆಯರು ಸೇರಿದ್ದಾರೆ. ತಪಾಸಣಾ ಕಾರ್ಯಕ್ಕಾಗಿ 56 ವೈದ್ಯಾಧಿಕಾರಿಗಳು ಮತ್ತು 168 ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ತಪಾಸಣೆಯಲ್ಲಿ ಪತ್ತೆಯಾದ ಕಾಯಿಲೆಗಳು
ಆರೋಗ್ಯ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ:
- ಮಧುಮೇಹ: 256 ಪ್ರಕರಣ
- ಅಧಿಕ ರಕ್ತದೊತ್ತಡ: 254 ಪ್ರಕರಣ
- ರಕ್ತಹೀನತೆ: 67 ಪ್ರಕರಣ
- ದಂತ ಸಮಸ್ಯೆ: 57 ಪ್ರಕರಣ
- ಜ್ವರ: 43 ಪ್ರಕರಣ
- ಕಣ್ಣಿನ ಸಮಸ್ಯೆ: 39 ಪ್ರಕರಣ
- ಶ್ರವಣ ಸಮಸ್ಯೆ: 16 ಪ್ರಕರಣ
- ಹೃದಯ ಸಮಸ್ಯೆ: 4 ಪ್ರಕರಣ
- ಜನರಲ್ ಓಪಿಡಿ: 1,198
- ಪೌರಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ಗಮನ
- ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆ, ಅವರ ಆರೋಗ್ಯ ರಕ್ಷಣೆಗಾಗಿ ಪಾಲಿಕೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ. ಮಧುಮೇಹ ಮತ್ತು ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ.
ಬಿಬಿಎಂಪಿ
ಬಿಬಿಎಂಪಿ ಘನತ್ಯಾಜ್ಯ ಆಟೋ ಟಿಪ್ಪರ್‌ಗಳಿಗೆ ನೂತನ ಸಮಯ: ಈಗಿನಿಂದ ಬೆಳಿಗ್ಗೆ 5:30ಕ್ಕೆ ಸ್ಕ್ಯಾನಿಂಗ್ ಆರಂಭ
ಬೆಂಗಳೂರು: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಧಾರ ಕೈಗೊಂಡಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ಸ್ಕ್ಯಾನಿಂಗ್) ಸಮಯವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಈ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.
ಈ ಮೊದಲು ಬೆಳಿಗ್ಗೆ 6:00 ರಿಂದ 7:30 ರವರೆಗೆ ನಡೆಯುತ್ತಿದ್ದ ಮಸ್ಟರಿಂಗ್ ಸಮಯವನ್ನು ಈಗ ಬೆಳಿಗ್ಗೆ 5:30 ರಿಂದ 6:30 ರವರೆಗೆ ಮುಂಚಿತಗೊಳಿಸಲಾಗಿದೆ.

🧹 ಬದಲಾವಣೆ ಉದ್ದೇಶ ಏನು?
- ನಿವಾಸಿಗಳು ತಮ್ಮ ತ್ಯಾಜ್ಯವನ್ನು ಕೆಲಸಕ್ಕೆ ಹೊರಡುವ ಮೊದಲು ನೀಡಲು ಅನುಕೂಲ.
- ಜನರ ದೈನಂದಿನ ಕಾರ್ಯವೈಖರಿಯೊಂದಿಗೆ ತ್ಯಾಜ್ಯ ಸಂಗ್ರಹಣೆ ಜೋಡಣೆ.
- ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಕಪ್ಪು ಚುಕ್ಕಿ (Black Spot) ರೂಪುಗೊಳ್ಳುವಿಕೆ ತಡೆಯುವುದು.
🤝 ಸಾರ್ವಜನಿಕರ ಸಹಕಾರಕ್ಕೆ ಕರೆ:
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಈ ಹೊಸ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಗರದ ನಾಗರಿಕರಿಂದ ಸಹಕಾರ ಕೋರಿದ್ದಾರೆ.
-
ದೇಶ4 hours ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ4 hours agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ದೇಶ4 hours ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ದೇಶ3 hours agoIndian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
-
ದೇಶ2 hours agoಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ
-
ದೇಶ3 hours agoಎನ್ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
-
ದೇಶ3 hours agoಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್ನಲ್ಲಿ ತಮಿಳುನಾಡಿನ ಕುವರಿ
-
ಚುನಾವಣೆ2 hours ago“ಟ್ರಂಪ್ ಅನುಮತಿ ಇಲ್ಲದೆ ತೈಲ ಖರೀದಿ ಸಾಧ್ಯವಿಲ್ಲ”: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
