ಬೆಂಗಳೂರು
ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್ ಕೇಸ್ ಬಗ್ಗೆ ಮಾತುಕತೆ

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರನ್ನು ವಕೀಲ ದೇವರಾಜೇಗೌಡ ಭೇಟಿಯಾಗಿ ಪೆನ್‌ಡ್ರೈವ್ ಪ್ರಕರಣ (Pen Drive ) ಸಂಬಂಧ ಮಾತುಕತೆ ನಡೆಸಿದ್ದಾರೆ.
ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ದೇವರಾಜೇಗೌಡ ಮೊದಲ ಬಾರಿಗೆ ಹೆಚ್‌ಡಿಕೆ (H.D.Kumaraswamy) ಭೇಟಿಯಾಗಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿ ಮಾಡಿದ್ದಾರೆ.
ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ದೇವರಾಜೇಗೌಡ, ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇನೆ. ಹಂಚಿಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಯಾವತ್ತೂ ದೇವೇಗೌಡರ ವಿರುದ್ಧ ಮಾತನಾಡಿಲ್ಲ. ರೇವಣ್ಣ ವಿರುದ್ಧ ಅಲ್ಲ, ಬದಲಿಗೆ ಅವರ ಕೆಟ್ಟ ಗುಣಗಳ ವಿರುದ್ಧ ಹೋರಾಟ ಮಾಡಿದ್ದೆ. ಈಗ ರೇವಣ್ಣ ಅವರಿಗೂ ಪಶ್ಚತಾಪ ಆಗಿದೆ. ಸಾರ್ವಜನಿಕವಾಗಿ ಮರ್ಯಾದೆ ಹೋಗಿದೆ ಎಂದಿದ್ದಾರೆ.