ದೇಶ
ಹೈದರಾಬಾದ್ – ಬೆಂಗಳೂರು ಸ್ಪೀಡ್ ಹೈವೇ; ಯೋಜನೆಗೆ ಕೇಂದ್ರದಿಂದ ಭರದ ಸಿದ್ಧತೆ – New High Speed Highway

ಹೈದರಾಬಾದ್: ತೆಲಂಗಾಣ- ಆಂಧ್ರಪ್ರದೇಶ – ಕರ್ನಾಟಕ ಮೂರು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ಗ್ರೀನ್ ಕಾರಿಡಾರ್ನ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಭವಿಷ್ಯದ ಟ್ರಾಫಿಕ್ ದಟ್ಟಣೆ ನಿರ್ವಹಣೆಗೆ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಸಿಗಲಿದೆ. ಸದ್ಯಕ್ಕೆ ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಚತುಷ್ಪಥ ಹೆದ್ದಾರಿ ಇದೆ. ಇದರ ಜೊತೆಗೆ ಇದೀಗ ಹೊಸ ಹೆದ್ದಾರಿ ನಿರ್ಮಾಣ ಮಾಡಲು ರಾಷ್ಟ್ರೀಯ ಹದ್ದಾರಿ ಮತ್ತು ಕೇಂದ್ರ ಸಾರಿಗೆ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಯನ್ನು ‘ರಾಷ್ಟ್ರೀಯ ಹೆದ್ದಾರಿಗಳ ಮಹಾ ಯೋಜನೆ 2047’ ಉದ್ದೇಶದೊಂದಿಗೆ ನಿರ್ಮಾಣ ಮಾಡಲಾಗುತ್ತದೆ.
ಎರಡು ವರ್ಷಗಳ ಹಿಂದೆ, ಕೇಂದ್ರ ಸರ್ಕಾರ ನಾಗ್ಪುರ-ಹೈದರಾಬಾದ್ -ಬೆಂಗಳೂರು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಜನರ ಸಂಚಾರ ಮಾರ್ಗ ಸುಲಭಗೊಳಿಸಲು ನಿರ್ಧರಿಸಿತು. ಇದರ ಹಿಂದಿನ ತಂತ್ರ ಈ ರಸ್ತೆ ಸೌಲಭ್ಯ ಪ್ರವೇಶದ ಮೂಲಕ ಅವರ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಾಗಿತ್ತು. ಇದೀಗ ನಾಗ್ಪುರದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಟೆಂಡರ್ಗೆ ಕಡೆಯ ದಿನ: ಹೊಸ ರಾಷ್ಟ್ರೀಯ ಹೆದ್ದಾರಿ ಬೆಂಗಳೂರಿನಿಂದ ಹೈದರಾಬಾದ್ ಅನ್ನು ಕೂಡ ಸಂಪರ್ಕಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಡಿಪಿಆರ್ನಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಜೊತೆಗೆ ಡಿಪಿಆರ್ ಸಿದ್ಧಪಡಿಸಿದ ಯೋಜನೆ ಅನುಸಾರ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಕೂಡ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ. ಈ ಟೆಂಡರ್ ಸಲ್ಲಿಕೆಗೆ ಕಡೆಯ ದಿನ ಈ ವರ್ಷದ ಸೆಪ್ಟೆಂಬರ್ 12 ಆಗಿದೆ.
ಆರು ಸಾಲುಗಳ ರಸ್ತೆ: ಈ ಮಾರ್ಗದಲ್ಲಿನ ಟ್ರಾಫಿಕ್ ಅನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಆರು ಲೇನ್ಗಳ ಹೊಸ ರಸ್ತೆ ನಿರ್ಮಾಣದ ಪ್ರಸ್ತಾಪವನ್ನು ಹೊಂದಿದೆ. ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಹಿರಿಯ ಅಧಿಕಾರಿ, ಆರಂಭದಲ್ಲಿ ಇದನ್ನು 12 ಲೇನ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಇದನ್ನು ಆರಕ್ಕೆ ಸೀಮಿತ ಮಾಡಲಾಯಿತು. ಆದರೆ ಆರು ಸಾಲುಗಳನ್ನು ಒಂದೇ ಬಾರಿ ನಿರ್ಮಿಸುವುದಾ, ಇಲ್ಲ ಮೊದಲಿಗೆ ನಾಲ್ಕು ಸಾಲು ನಿರ್ಮಿಸಿ ಅದಕ್ಕೆ ಮತ್ತೆರಡು ಸಾಲನ್ನು ವಿಸ್ತರಿಸುವುದಾ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಡಿಪಿಆರ್ ಅನುಮತಿ ಪಡೆದ ಬಳಿಕ ಕೇಂದ್ರವೂ ಈ ಬಗ್ಗೆ ಅಂತಿ ನಿರ್ಧಾರ ಮಾಡಲಿದೆ.
120 ಕಿ.ಮೀ ವೇಗದ ಸಂಚಾರ: ಹೈದರಾಬಾದ್ ಬೆಂಗಳೂರು ಮಾರ್ಗವೂ ಹೈ ಸ್ಪೀಡ್ ವೇಗದ ರಸ್ತೆಯಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಹೈ ವೇಯಲ್ಲಿ 120 ಕಿ.ಮೀ ವೇಗದ ವಾಹನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡುವ ಪ್ರಸ್ತಾವ ಹೊಂದಲಾಗಿದೆ. ನೀಡಿರುವ ಅಂದಾಜಿನ ಪ್ರಕಾರ, ಕೇಂದ್ರವೂ 508.461 ಕಿ.ಮೀ ಕಾರಿಡಾರ್ ಅನ್ನು ನಿರ್ಮಿಸಲಾಗಿದೆ. ಹೈದರಾಬಾದ್ ಬೆಂಗಳೂರಿನಿಂದ 556 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 44 ಇದಾಗಿದೆ. ನಾಲ್ಕು ಸಾಲು ಮಾರ್ಗ ಲಭ್ಯವಿದೆ. ಈ ರಾಷ್ಟ್ರೀಯ ಹೆದ್ದಾರಿ ತೆಲಂಗಾಣದಲ್ಲಿ 190 ಕಿ.ಮೀ, ಆಂಧ್ರಪ್ರದೇಶದಲ್ಲಿ 260 ಕಿ.ಮೀ ಮತ್ತು ಕರ್ನಾಟಕದಲ್ಲಿ 106 ಕಿ.ಮೀವರೆಗೆ ವಿಸ್ತರಿಸಿದೆ. ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಚತುಷ್ಪಥ ರಸ್ತೆಯನ್ನು ಆರು ಪಥಗಳಿಗೆ ವಿಸ್ತರಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು.
ಇದಕ್ಕಾಗಿ 2022ರಲ್ಲೇ ಡಿಪಿಆರ್ ಪ್ರಸ್ತಾವನೆ ಸಿದ್ಧಪಡಿಸಿದೆ. ಆದರೆ, ಅನೇಕ ಕಾರಣಗಳಿಂದ ಈ ಪ್ರಸ್ತಾವನೆಗೆ ತಡೆ ನೀಡಲಾಗಿದೆ. ಕೇಂದ್ರ ಸರ್ಕಾರ ಹೈ ಸ್ಪೀಡ್ ಕಾರಿಡಾರ್ ನಿರ್ಮಿಸಲು ನಿರ್ಧರಿಸಿದರೆ, ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಅಧ್ಯಯನ ಮಾಡಲಿದೆ. ಈಗಿರುವ ಹೆದ್ದಾರಿಯನ್ನೇ ಹೈಸ್ಪೀಡ್ ಹೆದ್ದಾರಿಯಾಗಿ ವಿಸ್ತರಿಸುವುದು ಸಾಧ್ಯವಿಲ್ಲ ಎಂಬ ಪ್ರಾಧಿಕಾರ ನಿರ್ಣಯಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಹೈಸ್ಪೀಡ್ನ ಗ್ರೀನ್ ಫೀಲ್ಡ್ ಕಾರಿಡಾರ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ದೇಶ
ಅಂಟಾಕ್ರ್ಟಿಕಾ ಧ್ರುವ ಪ್ರದೇಶದಲ್ಲಿ ನಿಗೂಢ ರೇಡಿಯೋ ತರಂಗಗಳು ಪತ್ತೆ..!

ಮನುಷ್ಯರು ಒಂದು ಕ್ಷಣವೂ ಇರಲಾಗದ ನಿರ್ಜನ ಪ್ರದೇಶವಾದ ಅಂಟಾಕ್ರ್ಟಿಕಾದ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ಮೇಲ್ಮೈಯಿಂದ ಹೊರಹೊಮ್ಮುತ್ತಿರುವ ನಿಗೂಢ ರೇಡಿಯೋ ತರಂಗಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ,
ಮಂಜುಗಡ್ಡೆಯ ಆಳದಿಂದ ರೇಡಿಯೋ ಸಂಕೇತಗಳು ಹೊರಸೂಸುತ್ತಿವೆ, ಈ ತರಂಗಗಳು ಸಾವಿರಾರು ಕಿಲೋಮೀಟರ್ ಬಂಡೆಗಳ ಮೂಲಕ ಹಾದು ಹೋಗೇಕಾಗಿತ್ತು ಅದರೆ ಇವು ಬಂಡೆಗಳಲ್ಲಿ ಹೀರಲ್ಪಡುತ್ತಿವೆ, ಇದು ಭೌತಶಾಸ್ತ್ರದ ನಿಯಮದ ವಿರುದ್ಧವಾಗಿದೆ, ಭೂವಿಯನ್ನು ತಲುಪುವ ಸಂಕೇತಗಳನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಈ ನಿಗೂಢ ರೇಡಿಯೋ ತರಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ,
ಸದ್ಯ ಈ ನಿಗೂಢ ರೇಡಿಯೋ ತರಂಗಗಳು ವಿಜ್ಞಾನದ ಎಲ್ಲಾ ಪ್ರಯೋಗಗಳಿಗೂ ವಿರುದ್ಧ ವಾಗಿರುವುದು ಸಂಶೋಧಕರಲ್ಲಿ ಕುತೂಹಲ ಹೆಚ್ಚಿಸಿದೆ, ಈ ಹಿನ್ನೆಲೆಯಲ್ಲಿ ಕೆಲ ಮಾದರಿಗಳನ್ನು ಸಂಗ್ರಹಿಸಿರುವ ಸಂಶೋಧಕರು ಈ ನಿಗೂಢತೆಯನ್ನು ಭೇದಿಸಲು ತಮ್ಮ ಪ್ರಯತ್ನಗಳನ್ನು ಆರಂಭಿಸಿದ್ದಾರೆ,
ಅಪರಾಧ
ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ

ರಾಮನಗರ: ರಾಮನಗರದಲ್ಲಿ (Ramanagara news) ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ (treatment) ಶಿವರಾಜ್ ಎಂಬವರ ಆರು ತಿಂಗಳ ಕಂದಮ್ಮ (child death) ಸಾವನ್ನಪ್ಪಿದೆ. 6 ತಿಂಗಳ ಮಗುವಿನ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದೆ. ಶಿವರಾಜ್ ಎಂಬವರ ಆರು ತಿಂಗಳ ಪ್ರಾಯದ ಮಗು ಶರಣ್ಯ ಮೃತಪಟ್ಟವಳು. ನಕಲಿ ವೈದ್ಯ (Fake Doctor) ಮಹಮ್ಮದ್ ಸೈಫುಲ್ಲ ಎಂಬಾತ ಎಂದು ಗುರುತಿಸಲಾಗಿದೆ.
ಮಹಮ್ಮದ್ ಸೈಫುಲ್ಲ ಎಂಬವನು ವೈದ್ಯಕೀಯ ಕೋರ್ಸ್ ಮಾಡದೇ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸಣ್ಣ ಕೋಣೆಯೊಂದರಲ್ಲಿ ಚಿಕಿತ್ಸೆ ನೀಡುತ್ತಿದ್ದ. ಈತನಿಂದಾಗಿ ಮಗು ಮರಳಿ ಬಾರದ ಲೋಕಕ್ಕೆ ತೆರಳಿದೆ. ಇದು ಜಿಲ್ಲೆಯ ಜನರನ್ನು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಾದ್ಯಂತ ಒಟ್ಟು 193 ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಮಾತ್ರ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ಆರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ. ಇಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಕೆಲವರು ಹಣದಾಸೆಗೆ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ನಕಲಿ ಕ್ಲಿನಿಕ್ಗಳ ಬಗ್ಗೆ ಜನರು ಎಚ್ಚರಿದಿಂದ ಇರಬೇಕು. ಗಮನಕ್ಕೆ ಬಂದ ಕೂಡಲೇ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಮನವಿ ಮಾಡಿದ್ದಾರೆ
ದೇಶ
ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಕಾಂಗ್ರೆಸ್ ಶಾಸಕ ವಿನಯ್!

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ, ಅದ್ದರಿಂದ ಕೋರ್ಟ್ ಆದೇಶದಂತೆ ಇಂದು ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ ವಿಚಾರಣೆ ಮುಗಿದ ಬಳಿಕ ಶಾಸಕ ವಿನಯ್ ಕುಲಕರ್ಣಿಯವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು, ಇತ್ತೀಚಿಗೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಯ ಜಾಮೀನನ್ನು ರದ್ದುಪಡಿಸಿತು, ಒಂದು ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು,
ಇವರ ಬೆಂಬಲಿಗರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿದ್ರು, ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದಿದ್ದಾರೆ, ಈ ವೇಳೆ ತಮ್ಮ ನಾಯಕ ಜೈಲು ಸೇರುತ್ತಿರೋದನ್ನು ಕಂಡು ಕೋರ್ಟ್ ಮುಂಭಾಗ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ,
ಏನಿದು ಪ್ರಕರಣ?
9 ವರ್ಷಗಳ ಹಿಂದೆ ಅಂದರೆ 2016 ರ ಜೂನ್ 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು, ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪವಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2020 ನವೆಂಬರ್ 5 ರಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು,
-
ಬಿಬಿಎಂಪಿ1 month ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು7 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ