ಬೆಂಗಳೂರು

ಶೀಘ್ರವೇ ಶೇ.15 ರಿಂದ 20 ರಷ್ಟು ಬಸ್ ಟಿಕೆಟ್ ಹೆಚ್ಚಳ?

ಬೆಂಗಳೂರು: ರಾಜ್ಯದ ವಿವಿಧ ಸಾರಿಗೆ ನಿಗಮಗಳಿಂದ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆ ನಡುವೆ ಟಿಕೆಟ್ ದರ ಏರಿಕೆಯ ಸೂಚನೆಯನ್ನು ನೀಡಿರುವ ಸಚಿವರು, ಟಿಕೆಟ್ ದರ ಏರಿಕೆ ಬಗ್ಗೆ ಸಂಬಂಧ ಪ್ರಸ್ತಾವನೆ ಬಂದಿರುವುದು ಸತ್ಯ, ಅದರೆ ಸ್ರಸ್ತಾವನೆಯನ್ನು ತಾವು ಇನ್ನು ಓದಿಲ್ಲ, ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ,
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ ಟಿಕೆಟ್ ದರ ಹೆಚ್ಚಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ,
ಸದ್ಯದ ಮಾಹಿತಿ ಪ್ರಕಾರ ಡೀಸೆಲ್, ಬಸ್ ಬಿಡಿ ಭಾಗಗಳ ಬೆಲೆ ಹೆಚ್ಚಾಗಿದ್ದು ಹೀಗಾಗಿ ಟಿಕೆಟ್ ದರ ಶೇ.15 ರಿಂದ 20 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ,

Trending

Exit mobile version