ಬಿಬಿಎಂಪಿ
ರಸ್ತೆ ಗುಂಡಿ ಸಮಸ್ಯೆಗೆ ಮುಕ್ತಿ.. ಬಿಬಿಎಂಪಿಯಿಂದ ಆ್ಯಪ್ ರಿಲೀಸ್

ಬೆಂಗಳೂರು: ನಗರದ ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಈಗಾಗಲೇ ಪರಿಚಯಿಸಲಾಗಿದೆ, ಇದರ ಮುಂದುವರಿದ ಭಾಗವಾಗಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಹಾಗೂ ನಿಗದಿತ ಅವಧಿಯಲ್ಲಿ ದುರಸ್ಧಿಪಡಿಸಲು ಸುಲಲಿತ ತಂತ್ರಜ್ಞಾನ ಹೊಂದಿರುವ ರಸ್ತೆ ಗುಂಡಿ ಗಮನ-ಮೊಬೈಲ್ ಅಪ್ಲಿಕೇಷನ್ ಅನ್ನು ಅನಾವರಣಗೊಳಿಸಲಾಗಿದೆ,
ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬಿಬಿಎಂಪಿ ಯ ಅಧಿಕಾರಿಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ ಸಾರ್ವಜನಿಕರಿಗೂ ರಸ್ತೆ ಗುಂಡಿಗಳ ಫೋಟೋ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ,
ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಇದನ್ನು ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ ಬಳಸಬಹುದಾಗಿದ್ದು ನಿಮಗೆ ಅನುಕೂಲವಾಗುವ ಭಾಷೆ ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೊದಿಸಿ, ಒಟಿಪಿ ಮೇಲೆ ಕ್ಲಿಕ್ ಮಾಡಿದರೆ ಎಸ್‍ಎಂಎಸ್ ಮೂಲಕ ಓಟಿಪಿ ಪಾಸ್ವರ್ಡ್ ಬರಲಿದೆ,
ಆ ಸಂಖ್ಯೆ ಹಾಕಿದ ಕೂಡಲೇ ರಸ್ತ ದುರಸ್ತಿ ಎಂದು ತೋರಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದಾಗ ನೀವು ನಿಂತ ಜಾಗದ ವಿಳಾಸದ ಸಮೇತ ಲೊಕೇಶನ್ ತೋರಿಸಲಿದೆ, ಆಗ ಸ್ಧಳದಲ್ಲಿರುವ ರಸ್ತೆ ದುರಸ್ತಿಯ ಕುರಿತು ಫೋಟೋ ಲಗತ್ತಿಸಿ, ಸ್ಧಳದಲ್ಲಿರುವ ಸಮಸ್ಯೆಯ ಕುರಿತು ವಿವರಣೆ ಬರೆಯಬಹುದು, ಎಲ್ಲವನ್ನು ಪರಿಶೀಲಿಸಿದ ನಂತರ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ದೂರು ದಾಖಲಾಗಿ ನಿಮಗೆ ದೂರಿನ ಸಂಖ್ಯೆ ಕೂಡಾ ಸಿಗಲಿದೆ,
ದೂರು ದಾಖಲಾದ ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯದಲ್ಲಿ ದೂರನ್ನು ಬಗೆಹರಿಸಲಿದ್ದಾರೆ, ದೂರುಗಳ ಸ್ಧಿತಿ ಕೂಡ ನೋಡುವ ವ್ಯವಸ್ಧೆ ಇದೆ, ಈ ಆ್ಯಪ್ ಅನ್ನು ಆಂಡ್ರಾಯ್ಡ್ ಮೊಬೈಲ್‍ಗಳಲ್ಲಿ ಉಪಯೋಗಿಸಲು ಅವಕಾಶವಿದೆ,
ನಾಗರೀಕರು https://play.google.com/store/apps/details?id=com.indigo.bbmp.fixpothole
ಈ ಲಿಂಕ್ ಭೇಟಿ ನೀಡಿ ತಂತ್ರಾಂಶ ಡೌನ್ಲೋಡ್ ಮಾಡಿಕೊಳ್ಳಬಹುದು..