ದೇಶ

ಕಾಲಿಗೆ ಸರಪಳಿ, ಕಾಡಿನ ಮಧ್ಯೆ ಅಮೆರಿಕ ಮಹಿಳೆ- ಏನಿದು ಪ್ರಕರಣ?

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಅರಣ್ಯದಲ್ಲಿ ಅಮೆರಿಕದ ಮಹಿಳೆಯೊಬ್ಬರನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿರುವುದು ಬೆಳಕಿಗೆ ಬಂದಿದೆ,
ಮಹಿಳೆಯ ಕಿರುಚಾಟ ಕೇಳಿದ ಕುರಿಗಾಹಿಗಳು ಅಕೆಯನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಸ್ಧಳೀಯರ ನೆರವಿನಿಂದ ಪೊಲೀಸರು ಮಹಿಳೆಯನ್ನು ಓರೋಸ್‍ನ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ ಸಾಗಿಸಿದರು,
ಮಹಿಳೆ ವಿದೇಶಿ ಪ್ರಜೆನಾ? ಲಲಿತಾ ಕೈ ಕುಮಾರ್ ಎಸ್ ಎಂದು ಗುರುತಿಸಲ್ಪಟ್ಟ ಮಹಿಳೆಯ ಆಧಾರ್ ಕಾರ್ಡ್ ನಲ್ಲಿರುವ ತಮಿಳುನಾಡು ವಿಳಾಸ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಪಾಸ್‍ಪೋರ್ಟ್‍ನ ನಕಲು ಪ್ರತಿ ದೊರಕಿದೆ, ಆಕೆಯ ವೀಸಾ ಅವಧಿ ಮುಗಿದಿದ್ದು, ರಾಷ್ಟ್ರೀಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಒಟ್ಟಿನಲ್ಲಿ ಧಾರಾಕಾರ ಮಳೆಯಿಂದಾಗಿ ಚಳಿಯಿಂದ ಮಹಿಳೆ ನಡುಗುತ್ತಿದ್ದರು, ಅಲ್ಲದೇ ಹಸಿವಿನಿಂದ ಕೂಡ ನಲುಗಿದ್ದರು, ಪ್ರಸ್ತುತ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮಹಿಳೆಯ ಈ ಸ್ಧಿತಿಗೆ ಪತಿಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ, ಈ ಸಂಬಂಧ ತನಿಖೆ ಮುಂದುವರಿದಿದ್ದು, ಆತನ ಪತ್ತೆಗೆ ತಂಡಗಳನ್ನು ರವಾನಿಸಲಾಗಿದೆ,

Trending

Exit mobile version