ದೇಶ
ಜನರಿಗೆ ಗುಡ್ನ್ಯೂಸ್- ಜಸ್ಟ್ 450 ರೂ.ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್!

ಭೋಪಾಲ್: ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರವು ಮಹತ್ವದ ಘೋಷಣೆಯೊಂದನ್ನು ಮಾಡಿದೆ,
ಯಾರಿಗೆ ಲಾಭ? ಮಧ್ಯಪ್ರದೇಶ ಸರ್ಕಾರದ ಈ ನಿರ್ಧಾರವು ಲಾಡ್ಲಿ ಬಹನಾ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ, ರಾಜ್ಯದ ಸಹೋದರಿಯರಿಗೆ ಅಗ್ಗದ ದರದಲ್ಲಿ ಗ್ಯಾಸ್ ಸಿಲಿಂಡರ್ ಒದಗಿಸುವ ನಿಟ್ಟಿನಲ್ಲಿ ಸಚಿವ ಸಂಪುಟದ ಮಹತ್ವದ ನಿರ್ಧಾರ ಇದಾಗಿದೆ, ಈ ನಿರ್ಧಾರದಿಂದ ಸರ್ಕಾರಕ್ಕೆ 160 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಇದನ್ನು ರಾಜ್ಯದ ಮೋಹನ್ ಸರ್ಕಾರ ಭರಿಸಲಿದೆ,
ಇದರೊಂದಿಗೆ ಸಹೋದರಿಯರು ಪ್ರತಿ ತಿಂಗಳ ಪಡೆಯುವ 1,250 ರೂಗಳಿಗೆ ರಕ್ಷಾಬಂಧನದAದು ಹೆಚ್ಚುವರಿಯಾಗಿ 250 ರೂಗಳನ್ನು ನೀಡುವ ನಿರ್ಧಾರಕ್ಕೂ ಮೋಹನ್ ಸರ್ಕಾರದ ಸಂಪುಟ ಸಭೆಯಲಿ ಅನುಮೋದನೆ ನೀಡಲಾಗಿದೆ, ಈ ಸಹಾಯವು ಆತ್ಮೀಯ ಸಹೋದರಿಯರ ಆರ್ಥಿಕ ಸ್ಧಿತಿಯನ್ನು ಸುಧಾರಿಸುತ್ತದೆ ಮತ್ತೆ ಕುಟುಂಬವನ್ನು ನಡೆಸಲು ಹೆಚ್ಚಿನ ಸಹಾಯ ಮಾಡುತ್ತದೆ ಎಂದು ರಾಜ್ಯ ಸರ್ಕಾರ ನಂಬಿದೆ,
ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಮಧ್ಯಪ್ರದೇಶ ಸರ್ಕಾರದ ಸಚಿವ ಕೈಲಾಶ್ ವಿಜಯವರ್ಗಿಯಾ ಲಾಡ್ಲಿ ಬಹನಾ ಯೋಜನೆಯ ಮಹಿಳಾ ಫಲಾನುಭವಿಗಳು ಇನ್ನು ಮುಂದೆ 450 ರೂ ಗೆ ಎಲ್ಪಿಜಿ ಸಿಲಿಂಡರ್ ಪಡೆಯುತ್ತಾರೆ ಎಂದು ಹೇಳಿದರು, ಪ್ರಸ್ತುತ ಗ್ಯಾಸ್ ಸಿಲಿಂಡರ್ ಬೆಲೆ 848 ರೂ ಅದರಲ್ಲಿ 450 ರೂ ಗಳನ್ನು ಲಾಡ್ಲಿ ಬ್ರಾಹ್ಮಣರಿಗೆ ನೀಡಬೇಕಾಗಿದೆ, ಉಳಿದ 398 ರೂ ಗಳನ್ನು ಸರ್ಕಾರ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ,