Connect with us

ದೇಶ

ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..

ಕಳೆದೊಂದು ವಾರದ ಹಿಂದೆ ಪಂಚೆಗೆ ಅವಮಾನ ಅನ್ನೋ ಹೋರಾಟ ರಾಜ್ಯಾದ್ಯಂತ ನಡೆದಿತ್ತು. ಮಾಲ್​ನಲ್ಲಿ ಪಂಚೆಯುಟ್ಟ ರೈತನಿಗೆ ಪ್ರವೇಶ ನೀಡಲಿಲ್ಲ ಅಂತಾ ಇಂಥದ್ದೊಂದು ಕಿಚ್ಚಿಗೆ ಕರುನಾಡು ಸಾಕ್ಷಿಯಾಗಿತ್ತು. ಈ ಬೆನ್ನಲ್ಲೇ ಸೀರೆಗೆ ಅವಮಾನ ಅನ್ನೋ ಹೋರಾಟ ಶುರುವಾಗಿದೆ. ಇಡೀ ದೇಶಾದ್ಯಂತ ಇಂಥದ್ದೊಂದು ಕಿಡಿ ಹೊತ್ತಿದೆ.

ಸೀರೆ.. ಭಾರತೀಯ ಸಂಸ್ಕೃತಿಯ ಪ್ರತೀಕ.. ನಮ್ಮ ದೇಶದ ಸಂಪ್ರದಾಯದಲ್ಲಿ ಸೀರೆಗೆ ಅದರದ್ದೇ ಆದ ಮಹತ್ವದ ಇದೆ. ಈ ದೇಶದ ಹೆಣ್ಮಕ್ಕಳಿಗೂ ಸೀರೆಯ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹಬ್ಬ-ಹರಿದಿನಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ ಸೀರೆಗೆ ಮೊದಲ ಆದ್ಯತೆ. ಸೀರೆ ಶಕ್ತಿಯ ಪ್ರತೀಕ ಅನ್ನೋ ನಂಬಿಕೆಯೂ ಇದೆ. ಹೀಗಾಗಿಯೇ ದೇವತೆಗಳನ್ನೂ ಸೀರೆಯಲ್ಲೇ ಕಾಣುವ ಸಂಪ್ರದಾಯ ನಮ್ಮದು. ಮಹಭಾರತದ ದ್ರೌಪದಿಯೂ ಸೀರೆ ಉಡುತಿದ್ದ ಬಗ್ಗೆ ಕಥಾನಕಗಳಿವೆ. ಹೀಗೆ ದೊಡ್ಡ ಪರಂಪರೆ, ಇತಿಹಾಸವನ್ನೇ ಹೊಂದಿರೋ ಸೀರೆಗೆ ಅವಮಾನ ಆಗ್ತಿದೆ ಅನ್ನೋ ಕೂಗು ಶುರುವಾಗಿದೆ. ಅದಕ್ಕೆ ಕಾರಣ.. ಅದೊಂದು ಮ್ಯಾಗ್​ಜೀನ್​ನ ಕವರ್​ ಪೇಜ್​.

ಇತ್ತೀಚೆಗೆ ಪ್ರಸಿದ್ಧ ವರ್ಡ್ ಮ್ಯಾಗ್​ಜೀನ್ ತನ್ನ ಕವರ್​ಪೇಜ್​ನಲ್ಲಿ ಸೀರೆಯನ್ನಟ್ಟಿರೋ ಒಂದಷ್ಟು ಪುರುಷರ ಫೋಟೋವನ್ನ ಹಾಕಿತ್ತು. ಎಲ್​ಜಿಬಿಟಿ ಸಮುದಾಯದ ಕರಣ್, ಪುಷ್ಪಕ್, ವರುಣ್, ಜಯಂತ್, ಕೋಕೋ ಸೇರಿದಂತೆ ಒಂದಷ್ಟು ಮೆನ್ ಮಾಡೆಲ್​ಗಳು ಸೀರೆಯೊಟ್ಟು ಪೋಸ್​ ಕೊಟ್ಟಿದ್ದರು. ಇದೇ ಫೋಟೋವನ್ನ ವರ್ಡ್ ಮ್ಯಾಗ್​ಜೀನ್ ತನ್ನ ಕವರ್​ಪೇಜ್​ನಲ್ಲಿ ಪ್ರಕಟಿಸಿದೆ. ಅಲ್ಲದೇ The sari belongs to everyone. ಅಂತಾ ಕ್ಯಾಪ್ಶನ್ ಕೊಟ್ಟಿತ್ತು. ಅಂದ್ರೆ ಸೀರೆ ಎಲ್ಲರಿಗೂ ಸೇರಿದ್ದು ಅನ್ನೋ ಕ್ಯಾಪ್ಶನ್ ಕೊಟ್ಟಿತ್ತು. ಇಲ್ಲಿಂದಲೇ ನೋಡಿ ವಿವಾದದ ಕಿಡಿ ಹೊತ್ತಿಕೊಂಡಿದ್ದು.

ಯಾವಾಗ ವರ್ಡ್ ಮ್ಯಾಗ್​ಜೀನ್ ಕವರ್​ಪೇಜ್​ನಲ್ಲಿನ ಸ್ಯಾರಿ ಸೀರಿಸ್​ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ ಸಂಪ್ರದಾಯಬದ್ಧ ಭಾರತೀಯರ ಕಣ್ಣನ್ನ ಕೆಂಪಾಗುವಂತೆ ಮಾಡಿದೆ. ಸೀರೆ ಎಲ್ಲರಿಗೂ ಸೇರಿದ್ದಲ್ಲ ಅದು ಮಹಿಳೆಯರಿಗೆ ಮಾತ್ರ ಸೇರಿದ್ದು ಅನ್ನೋ ಕೂಗು ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಇದು ಸೀರೆಗೆ ಮಾಡಿದ ಅವಮಾನ ಅನ್ನೋ ಚರ್ಚೆಯೂ ಜಾಲತಾಣದಲ್ಲಿ ನಡೀತಿದೆ. ಈ ನಡುವೆ ಭಾರತಕ್ಕೆ ವೋಕ್ ಕಲ್ಚರ್ ಬರೋದನ್ನ ತಡೆಯಬೇಕು ಅನ್ನೋ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.

ನಮ್ಮದು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡುವ ದೇಶ.. ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿರೋ ಈ ವೋಕ್ ಕಲ್ಚರ್​ನ್ನ ಒಪ್ಪದವರು ಇದನ್ನ ವೋಕ್ ವೈರಸ್​ ಅಂತಾ ಕರೀತಾರೆ. ಹೀಗಾಗಿ ಸೀರೆಯ ವೇಷಧಲ್ಲಿ ವೋಕ್ ವೈರಸ್ ಭಾರತಕ್ಕೆ ಬರ್ತಿದೆ. ಇದನ್ನ ತಡೆಯಬೇಕು ಅನ್ನೋ ಕೂಗು ಶುರುವಾಗಿದೆ. ಅಲ್ಲದೇ ಸೀರೆಯ ಮಹತ್ವವನ್ನ, ಅದರ ಘನತೆಯನ್ನ ಕಾಪಾಡಬೇಕು ಅನ್ನೋ ಚರ್ಚೆಗೂ ಇದು ಕಾರಣವಾಗಿದೆ.

ದೇಶ

karnataka ಅಧಿಕಾರದಿಂದ ಬಂಧನದವರೆಗೆ: ಜೈಲು ಸೇರಿದ್ದ ಕರ್ನಾಟಕದ ಪ್ರಮುಖ ಜನಪ್ರತಿನಿಧಿಗಳ ಸಂಪೂರ್ಣ ಪಟ್ಟಿ

ಬೆಂಗಳೂರು: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ Bairathi Basavaraj ಬಂಧನಕ್ಕೊಳಗಾಗಿದ್ದಾರೆ. ಸಿಐಡಿ ತಂಡ ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿದೆ. ವಿಧಾನಸಭೆಯಲ್ಲಿ ಕಾನೂನು ರೂಪಿಸಬೇಕಾದ ಜನಪ್ರತಿನಿಧಿಗಳೇ ಕಾನೂನು ಉಲ್ಲಂಘನೆ ಆರೋಪದಲ್ಲಿ ಜೈಲು ಸೇರಿದ ಹಲವು ಉದಾಹರಣೆಗಳು ಕರ್ನಾಟಕ ರಾಜಕೀಯದಲ್ಲಿ ಕಂಡುಬಂದಿವೆ.


ವಿನಯ್ ಕುಲಕರ್ಣಿಗೂ ಜೈಲು ಅನುಭವ

ಹುಬ್ಬಳ್ಳಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ Vinay Kulkarni ಬಂಧನಕ್ಕೊಳಗಾಗಿದ್ದರು. 2020ರಲ್ಲಿ Central Bureau of Investigation (CBI) ಅವರು ಅವರನ್ನು ಬಂಧಿಸಿತ್ತು. ಸುಪ್ರೀಂ ಕೋರ್ಟ್ 2021ರಲ್ಲಿ ಜಾಮೀನು ನೀಡಿದರೂ, ಸಾಕ್ಷಿಗಳಿಗೆ ಬೆದರಿಕೆ ಆರೋಪ ಹಿನ್ನೆಲೆ 2025ರಲ್ಲಿ ಜಾಮೀನು ರದ್ದುಗೊಂಡಿತ್ತು.


ವೀರೇಂದ್ರ ಪಪ್ಪಿ ವಿರುದ್ಧ ಬೆಟ್ಟಿಂಗ್ ಆರೋಪ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ Veerendra Pappi ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ತಿಂಗಳು ಕಳೆದಿದ್ದರು. ಪ್ರಕರಣವನ್ನು ಪ್ರಶ್ನಿಸಿ Enforcement Directorate (ED) ಹೈಕೋರ್ಟ್ ಮೆಟ್ಟಿಲೇರಿದೆ.


ಮುನಿರತ್ನ ವಿರುದ್ಧ ಗಂಭೀರ ಆರೋಪ

ಬಿಜೆಪಿ ಶಾಸಕ Munirathna ಬೆದರಿಕೆ ಹಾಗೂ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿತ್ತು.


ಗಣಿ ಹಗರಣದಲ್ಲಿ ಜನಾರ್ದನ ರೆಡ್ಡಿ

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ Gali Janardhana Reddy ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿದೆ.


ಸತೀಶ್ ಸೈಲ್‌ಗೆ ಶಿಕ್ಷೆ

ಬೇಲೆಕೇರಿ ಅದಿರು ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ Satish Sail ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಹೈಕೋರ್ಟ್ ತೀರ್ಪು ಅಮಾನತುಗೊಳಿಸಿದೆ.


ಜೀವಾವಧಿ ಶಿಕ್ಷೆ ಪಡೆದ ಪ್ರಜ್ವಲ್ ರೇವಣ್ಣ

ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ Prajwal Revanna ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೇ ಪ್ರಕರಣದಲ್ಲಿ H. D. Revanna ಹಾಗೂ Suraj Revanna ಹೆಸರುಗಳು ಕೂಡ ಕೇಳಿಬಂದಿವೆ.

Continue Reading

ದೇಶ

RBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್‌ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ

ಮುಂಬೈ(ಮಹಾರಾಷ್ಟ್ರ): ಬ್ಯಾಂಕ್‌ಗಳು ಗ್ರಾಹಕರಿಂದ ಸಾಲ ವಸೂಲು ಮಾಡುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು Reserve Bank of India (ಆರ್‌ಬಿಐ) ಪ್ರಕಟಿಸಿದೆ. ಸಾಲ ವಸೂಲಾತಿ ಏಜೆಂಟರಿಗೆ ಕಡ್ಡಾಯ ತರಬೇತಿ ಹಾಗೂ ಎಲ್ಲಾ ಫೋನ್ ಕರೆಗಳ ರೆಕಾರ್ಡಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

ಆರ್‌ಬಿಐ ಪ್ರಕಾರ, ಸಾಲ ವಸೂಲಾತಿ ಏಜೆಂಟ್‌ಗಳು ಸಾಲಗಾರರೊಂದಿಗೆ ಸಭ್ಯ ಮತ್ತು ನಾಗರಿಕ ರೀತಿಯಲ್ಲಿ ವರ್ತಿಸಬೇಕು. ಬ್ಯಾಂಕ್‌ಗಳು ಏಜೆಂಟ್‌ಗಳ ವರ್ತನೆ ಮೇಲೆ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕು ಎಂದು ತಿಳಿಸಿದೆ.


ಫೋನ್ ಕರೆಗಳ ರೆಕಾರ್ಡ್ ಕಡ್ಡಾಯ

  • ಸಾಲ ವಸೂಲಾತಿ ಏಜೆಂಟ್‌ಗಳು ಮಾಡುವ ಎಲ್ಲಾ ಕರೆಗಳನ್ನು ಬ್ಯಾಂಕ್ ರೆಕಾರ್ಡ್ ಮಾಡಬೇಕು
  • ಸಾಲಗಾರರೊಂದಿಗೆ ಗೌರವಪೂರ್ಣ ಮಾತುಕತೆ ನಡೆಸಬೇಕು
  • ಗ್ರಾಹಕರ ವೈಯಕ್ತಿಕ ಮಾಹಿತಿಯ ದುರುಪಯೋಗ ಮಾಡಬಾರದು

ಸಾಲ ವಸೂಲಾತಿ ವೇಳೆ ಪಾಲಿಸಬೇಕಾದ ನಿಯಮಗಳು

  • ನಿಂದನೀಯ ಭಾಷೆ ಅಥವಾ ಬೆದರಿಕೆ ಸಂದೇಶಗಳ ಬಳಕೆ ನಿಷೇಧ
  • ಸಾಲಗಾರರ ಮನೆಗೆ ಭೇಟಿ ನೀಡುವಾಗ ಸಭ್ಯತೆ ಕಾಪಾಡಿಕೊಳ್ಳಬೇಕು
  • ಕುಟುಂಬದಲ್ಲಿ ದುಃಖ, ವಿಪತ್ತು, ಮದುವೆ ಅಥವಾ ಹಬ್ಬದ ಸಂದರ್ಭಗಳಲ್ಲಿ ವಸೂಲು ತಪ್ಪಿಸಬೇಕು
  • ಗ್ರಾಹಕರ ಗೌಪ್ಯತೆ ಕಾಪಾಡುವುದು ಕಡ್ಡಾಯ

ತರಬೇತಿ ಕಡ್ಡಾಯಗೊಳಿಸಲು ಚಿಂತನೆ

ಸಾಲ ವಸೂಲಾತಿ ಏಜೆಂಟ್‌ಗಳು Indian Institute of Banking and Finance (IIBF) ನಡೆಸುವ ‘ಸಾಲ ವಸೂಲಾತಿ ತರಬೇತಿ’ಗೆ ಒಳಗಾಗಬೇಕು ಎಂಬುದನ್ನು ಕಡ್ಡಾಯಗೊಳಿಸುವ ಬಗ್ಗೆ ಆರ್‌ಬಿಐ ಚಿಂತನೆ ನಡೆಸಿದೆ.

ಈ ಕುರಿತು ಇತ್ತೀಚಿನ ಹಣಕಾಸು ನೀತಿ ಪರಿಶೀಲನೆ ವೇಳೆ ಗವರ್ನರ್ Sanjay Malhotra ಘೋಷಣೆ ಮಾಡಿದ್ದರು. ಬಳಿಕ ಕರಡು ಮಾರ್ಗಸೂಚಿ ಪ್ರಕಟವಾಗಿದೆ.


ಕಠಿಣ ಕ್ರಮಕ್ಕೆ ಕಾರಣವೇನು?

ಹಿಂದೆ ಬಿಹಾರದಲ್ಲಿ ಸಾಲ ವಸೂಲಾತಿ ಏಜೆಂಟ್‌ಗಳ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಏಜೆಂಟ್‌ಗಳ ಭೇಟಿಯ ಬಳಿಕ ಸಾಲಗಾರನ ಸಂಬಂಧಿಕ ಸಾವನ್ನಪ್ಪಿದ ಘಟನೆ ಸಹ ನಡೆದಿತ್ತು. ಇಂತಹ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಆರ್‌ಬಿಐ ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.


ರೆಪೊ ದರ ಸ್ಥಿರ

ಆರ್‌ಬಿಐ ಇತ್ತೀಚಿಗೆ ರೆಪೊ ದರವನ್ನು ಶೇ.5.25ರಲ್ಲಿ ಮುಂದುವರಿಸಲು ಸರ್ವಾನುಮತದಿಂದ ತೀರ್ಮಾನಿಸಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ Donald Trump ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50ರಿಂದ 18ಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಇದರಿಂದ ಭಾರತೀಯ ಆರ್ಥಿಕತೆಗೆ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.

Continue Reading

ದೇಶ

ಫುಟ್ಪಾತ್‌ನಲ್ಲಿ ಬೈಕ್‌ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ

ಕೇರಳ, ಫೆಬ್ರವರಿ 13: ದೊಡ್ಡ ರಸ್ತೆಗಳಿದ್ದರೂ ಫುಟ್ಪಾತ್ ಮೇಲೆ ಬೈಕ್ ಓಡಿಸುವ ಪ್ರವೃತ್ತಿ ಕಡಿಮೆಯಾಗುತ್ತಿಲ್ಲ. ವರ್ಷಕ್ಕೊಮ್ಮೆ ಫುಟ್ಪಾತ್ ನಿರ್ಮಾಣ ಮಾಡಿದರೂ ಕೆಲವೇ ತಿಂಗಳಲ್ಲಿ ವಾಹನಗಳ ಸಂಚಾರದಿಂದ ಅವು ಹಾಳಾಗುತ್ತಿವೆ.

ಈ ನಡುವೆ ಫುಟ್ಪಾತ್‌ನಲ್ಲಿ ಬಂದ ಬೈಕ್‌ನ್ನು ಮಹಿಳೆಯೊಬ್ಬರು ತಡೆದು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ Kozhikode ನಗರದಲ್ಲಿ ನಡೆದಿದೆ.


ಧೈರ್ಯವಾಗಿ ಎದುರಿಸಿದ ಮಹಿಳೆ

ವಿಡಿಯೋದಲ್ಲಿ ಮಹಿಳೆ ಫುಟ್ಪಾತ್‌ನಲ್ಲಿ ಅಡ್ಡವಾಗಿ ನಿಂತು, “ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ” ಎಂದು ಬೈಕ್ ಸವಾರನಿಗೆ ಗದರಿಸುತ್ತಿರುವುದು ಕಾಣಿಸುತ್ತದೆ.

ಫುಟ್ಪಾತ್ ಪಾದಚಾರಿಗಳಿಗಾಗಿ ಮೀಸಲಾಗಿದ್ದು, ವಾಹನ ಸಂಚಾರಕ್ಕೆ ಅಲ್ಲ ಎಂಬ ಸಂದೇಶವನ್ನು ಮಹಿಳೆ ಸ್ಪಷ್ಟವಾಗಿ ನೀಡಿದ್ದಾರೆ.


ಪಾದಚಾರಿಗಳ ಸುರಕ್ಷತೆ ಪ್ರಶ್ನೆ

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕೆಲವರು ಫುಟ್ಪಾತ್ ಬಳಸಿ ಬೈಕ್ ಚಲಾಯಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಪಾದಚಾರಿಗಳ ಸುರಕ್ಷತೆ ಅಪಾಯಕ್ಕೊಳಗಾಗುತ್ತಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯ ಧೈರ್ಯವನ್ನು ಹಲವರು ಶ್ಲಾಘಿಸುತ್ತಿದ್ದಾರೆ.

Continue Reading

Trending