ದೇಶ
ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..
ಕಳೆದೊಂದು ವಾರದ ಹಿಂದೆ ಪಂಚೆಗೆ ಅವಮಾನ ಅನ್ನೋ ಹೋರಾಟ ರಾಜ್ಯಾದ್ಯಂತ ನಡೆದಿತ್ತು. ಮಾಲ್ನಲ್ಲಿ ಪಂಚೆಯುಟ್ಟ ರೈತನಿಗೆ ಪ್ರವೇಶ ನೀಡಲಿಲ್ಲ ಅಂತಾ ಇಂಥದ್ದೊಂದು ಕಿಚ್ಚಿಗೆ ಕರುನಾಡು ಸಾಕ್ಷಿಯಾಗಿತ್ತು. ಈ ಬೆನ್ನಲ್ಲೇ ಸೀರೆಗೆ ಅವಮಾನ ಅನ್ನೋ ಹೋರಾಟ ಶುರುವಾಗಿದೆ. ಇಡೀ ದೇಶಾದ್ಯಂತ ಇಂಥದ್ದೊಂದು ಕಿಡಿ ಹೊತ್ತಿದೆ.
ಸೀರೆ.. ಭಾರತೀಯ ಸಂಸ್ಕೃತಿಯ ಪ್ರತೀಕ.. ನಮ್ಮ ದೇಶದ ಸಂಪ್ರದಾಯದಲ್ಲಿ ಸೀರೆಗೆ ಅದರದ್ದೇ ಆದ ಮಹತ್ವದ ಇದೆ. ಈ ದೇಶದ ಹೆಣ್ಮಕ್ಕಳಿಗೂ ಸೀರೆಯ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹಬ್ಬ-ಹರಿದಿನಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ ಸೀರೆಗೆ ಮೊದಲ ಆದ್ಯತೆ. ಸೀರೆ ಶಕ್ತಿಯ ಪ್ರತೀಕ ಅನ್ನೋ ನಂಬಿಕೆಯೂ ಇದೆ. ಹೀಗಾಗಿಯೇ ದೇವತೆಗಳನ್ನೂ ಸೀರೆಯಲ್ಲೇ ಕಾಣುವ ಸಂಪ್ರದಾಯ ನಮ್ಮದು. ಮಹಭಾರತದ ದ್ರೌಪದಿಯೂ ಸೀರೆ ಉಡುತಿದ್ದ ಬಗ್ಗೆ ಕಥಾನಕಗಳಿವೆ. ಹೀಗೆ ದೊಡ್ಡ ಪರಂಪರೆ, ಇತಿಹಾಸವನ್ನೇ ಹೊಂದಿರೋ ಸೀರೆಗೆ ಅವಮಾನ ಆಗ್ತಿದೆ ಅನ್ನೋ ಕೂಗು ಶುರುವಾಗಿದೆ. ಅದಕ್ಕೆ ಕಾರಣ.. ಅದೊಂದು ಮ್ಯಾಗ್ಜೀನ್ನ ಕವರ್ ಪೇಜ್.
ಇತ್ತೀಚೆಗೆ ಪ್ರಸಿದ್ಧ ವರ್ಡ್ ಮ್ಯಾಗ್ಜೀನ್ ತನ್ನ ಕವರ್ಪೇಜ್ನಲ್ಲಿ ಸೀರೆಯನ್ನಟ್ಟಿರೋ ಒಂದಷ್ಟು ಪುರುಷರ ಫೋಟೋವನ್ನ ಹಾಕಿತ್ತು. ಎಲ್ಜಿಬಿಟಿ ಸಮುದಾಯದ ಕರಣ್, ಪುಷ್ಪಕ್, ವರುಣ್, ಜಯಂತ್, ಕೋಕೋ ಸೇರಿದಂತೆ ಒಂದಷ್ಟು ಮೆನ್ ಮಾಡೆಲ್ಗಳು ಸೀರೆಯೊಟ್ಟು ಪೋಸ್ ಕೊಟ್ಟಿದ್ದರು. ಇದೇ ಫೋಟೋವನ್ನ ವರ್ಡ್ ಮ್ಯಾಗ್ಜೀನ್ ತನ್ನ ಕವರ್ಪೇಜ್ನಲ್ಲಿ ಪ್ರಕಟಿಸಿದೆ. ಅಲ್ಲದೇ The sari belongs to everyone. ಅಂತಾ ಕ್ಯಾಪ್ಶನ್ ಕೊಟ್ಟಿತ್ತು. ಅಂದ್ರೆ ಸೀರೆ ಎಲ್ಲರಿಗೂ ಸೇರಿದ್ದು ಅನ್ನೋ ಕ್ಯಾಪ್ಶನ್ ಕೊಟ್ಟಿತ್ತು. ಇಲ್ಲಿಂದಲೇ ನೋಡಿ ವಿವಾದದ ಕಿಡಿ ಹೊತ್ತಿಕೊಂಡಿದ್ದು.
ಯಾವಾಗ ವರ್ಡ್ ಮ್ಯಾಗ್ಜೀನ್ ಕವರ್ಪೇಜ್ನಲ್ಲಿನ ಸ್ಯಾರಿ ಸೀರಿಸ್ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ ಸಂಪ್ರದಾಯಬದ್ಧ ಭಾರತೀಯರ ಕಣ್ಣನ್ನ ಕೆಂಪಾಗುವಂತೆ ಮಾಡಿದೆ. ಸೀರೆ ಎಲ್ಲರಿಗೂ ಸೇರಿದ್ದಲ್ಲ ಅದು ಮಹಿಳೆಯರಿಗೆ ಮಾತ್ರ ಸೇರಿದ್ದು ಅನ್ನೋ ಕೂಗು ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಇದು ಸೀರೆಗೆ ಮಾಡಿದ ಅವಮಾನ ಅನ್ನೋ ಚರ್ಚೆಯೂ ಜಾಲತಾಣದಲ್ಲಿ ನಡೀತಿದೆ. ಈ ನಡುವೆ ಭಾರತಕ್ಕೆ ವೋಕ್ ಕಲ್ಚರ್ ಬರೋದನ್ನ ತಡೆಯಬೇಕು ಅನ್ನೋ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.
ನಮ್ಮದು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡುವ ದೇಶ.. ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿರೋ ಈ ವೋಕ್ ಕಲ್ಚರ್ನ್ನ ಒಪ್ಪದವರು ಇದನ್ನ ವೋಕ್ ವೈರಸ್ ಅಂತಾ ಕರೀತಾರೆ. ಹೀಗಾಗಿ ಸೀರೆಯ ವೇಷಧಲ್ಲಿ ವೋಕ್ ವೈರಸ್ ಭಾರತಕ್ಕೆ ಬರ್ತಿದೆ. ಇದನ್ನ ತಡೆಯಬೇಕು ಅನ್ನೋ ಕೂಗು ಶುರುವಾಗಿದೆ. ಅಲ್ಲದೇ ಸೀರೆಯ ಮಹತ್ವವನ್ನ, ಅದರ ಘನತೆಯನ್ನ ಕಾಪಾಡಬೇಕು ಅನ್ನೋ ಚರ್ಚೆಗೂ ಇದು ಕಾರಣವಾಗಿದೆ.
ದೇಶ
12 ವರ್ಷಗಳ ಆಡಳಿತದಲ್ಲಿ ಭಾರತಕ್ಕೆ ಜಾಗತಿಕ ಗುರುತು: ಮೋದಿ ಪರಿಣಾಮ
ನವದೆಹಲಿ: ಪ್ರಧಾನಿ Narendra Modi ಅವರ 12 ವರ್ಷಗಳ ಆಡಳಿತಾವಧಿಯನ್ನು ಆಧುನಿಕ ಭಾರತದ ಅಭಿವೃದ್ಧಿ ಮತ್ತು ಪರಿವರ್ತನೆಯ ಪ್ರಮುಖ ಘಟ್ಟವೆಂದು ಬಿಜೆಪಿ ವಲಯ ಹಾಗೂ ಬೆಂಬಲಿಗರು ವರ್ಣಿಸಿದ್ದಾರೆ. ಈ ಅವಧಿಯಲ್ಲಿ ಭಾರತವು ಆರ್ಥಿಕತೆ, ಮೂಲಸೌಕರ್ಯ, ರಕ್ಷಣಾ, ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ ಎಂದು ಹೇಳಲಾಗಿದೆ.
ಆರ್ಥಿಕ ಕ್ಷೇತ್ರದಲ್ಲಿ ದೇಶದ ನೈಜ ಜಿಡಿಪಿ ಹಾಗೂ ನಾಮಮಾತ್ರ ಜಿಡಿಪಿ ಗಣನೀಯವಾಗಿ ಏರಿಕೆಯಾಗಿದೆ. ಸೇವಾ ವಲಯ ಮತ್ತು MSME ಕ್ಷೇತ್ರಗಳು ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿವೆ. GST ಜಾರಿಗೆ ನಂತರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿದ್ದು, ಆದಾಯದಲ್ಲಿಯೂ ಏರಿಕೆ ಕಂಡುಬಂದಿದೆ.
ಮೂಲಸೌಕರ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಮೆಟ್ರೋ ಜಾಲ ವೃದ್ಧಿ, ರೈಲು ವಿದ್ಯುದ್ದೀಕರಣ ಮತ್ತು ಗ್ರಾಮೀಣ ವಿದ್ಯುತ್ ಯೋಜನೆಗಳು ದೇಶದ ಚಿತ್ರಣವನ್ನು ಬದಲಿಸಿದ ಪ್ರಮುಖ ಅಂಶಗಳಾಗಿವೆ. ಜೊತೆಗೆ “ಡಿಜಿಟಲ್ ಇಂಡಿಯಾ” ಯೋಜನೆಯಡಿ UPI, ಆಧಾರ್, DigiLocker ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಜನಜೀವನವನ್ನು ಸುಲಭಗೊಳಿಸಿವೆ.
ರಕ್ಷಣಾ ಕ್ಷೇತ್ರದಲ್ಲೂ ಭಾರತವು ಸ್ವಾವಲಂಬನೆ ಕಡೆಗೆ ದೊಡ್ಡ ಹೆಜ್ಜೆ ಇಟ್ಟಿದ್ದು, ದೇಶೀಯ ಉತ್ಪಾದನೆ ಹಾಗೂ ರಫ್ತು ಎರಡೂ ಹೆಚ್ಚಾಗಿದೆ. ಸೌರಶಕ್ತಿ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿನ ಲಸಿಕಾ ಅಭಿಯಾನ ಹಾಗೂ ವಿದೇಶಿ ಸಹಾಯ ಕಾರ್ಯಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿವೆ ಎಂದು ಬಿಜೆಪಿ ಬೆಂಬಲಿತ ಮೂಲಗಳು ಹೇಳಿವೆ.
ಇದೇ ವೇಳೆ, Bharatiya Janata Party ದೇಶದಾದ್ಯಂತ ಈ ಸಾಧನೆಗಳನ್ನು ಜನರಿಗೆ ತಲುಪಿಸಲು ವಿಶೇಷ ಅಭಿಯಾನ ನಡೆಸುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ನೀತಿಗಳ ಕುರಿತು ಟೀಕೆ ಮಾಡುತ್ತಿವೆ.
ಒಟ್ಟಾರೆ, ಮೋದಿ ಆಡಳಿತವು ಭಾರತವನ್ನು ಆಧುನಿಕ, ಡಿಜಿಟಲ್ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಾಷ್ಟ್ರವಾಗಿ ರೂಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ದೇಶ
ಖ್ಯಾತ ನಿರ್ದೇಶಕ ಭಾರತಿರಾಜ ಇನ್ನಿಲ್ಲ: ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟ
ಚೆನ್ನೈ: ತಮಿಳು ಚಿತ್ರರಂಗದ ದಿಗ್ಗಜ, ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಹಾಗೂ ನಟ Bharathiraja ಇಂದು (ಜೂನ್ 10) ವಿಧಿವಶರಾಗಿದ್ದಾರೆ. ಅವರು ತಮ್ಮ 84ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದು, ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.
ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನು ತೆರೆಗೆ ತಂದ ನಿರ್ದೇಶಕರಾಗಿ ಭಾರತಿರಾಜ ಅವರು ವಿಶಿಷ್ಟ ಸ್ಥಾನ ಪಡೆದಿದ್ದರು. ಅವರ ನಿರ್ದೇಶನದ ಅನೇಕ ಚಿತ್ರಗಳು ತಮಿಳು ಸಿನೆಮಾಗೆ ಹೊಸ ದಿಕ್ಕು ನೀಡಿದವು. ಕಥನಶೈಲಿ ಮತ್ತು ಸಾಮಾಜಿಕ ವಿಷಯಗಳ ಪ್ರಾತಿನಿಧ್ಯಕ್ಕಾಗಿ ಅವರು ಚಿತ್ರರಂಗದಲ್ಲಿ ಪ್ರಖ್ಯಾತರಾಗಿದ್ದರು.
ತಮಿಳು ಚಿತ್ರರಂಗದ ಜೊತೆಗೆ ಭಾರತೀಯ ಚಿತ್ರರಂಗದ ಮೇಲೂ ಅವರ ಪ್ರಭಾವ ಅಪಾರವಾಗಿತ್ತು. ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರ ಕೆಲಸಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿದ್ದವು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. Tamil film industry ವಲಯದಲ್ಲಿ ಈ ಸುದ್ದಿ ಆಘಾತ ಮೂಡಿಸಿದೆ.
ಭಾರತಿರಾಜ ಅವರ ಅಂತಿಮ ವಿಧಿವಿಧಾನಗಳು ಚೆನ್ನೈನಲ್ಲಿ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಅವರ ಅಗಲಿಕೆ ತಮಿಳು ಚಿತ್ರರಂಗಕ್ಕೆ ಅಪಾರ ನಷ್ಟವೆಂದು ಚಿತ್ರರಂಗದವರು ಹೇಳಿದ್ದಾರೆ.
ಕ್ರೀಡೆ
ಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್‌ಬಾಲ್ ಜ್ವರದಲ್ಲಿ
ಜಗತ್ತಿನಾದ್ಯಂತ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ FIFA World Cup 2026 ಕೊನೆಗೂ ಆರಂಭವಾಗುತ್ತಿದೆ. ಜೂನ್ 11ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮಹಾಕ್ರೀಡಾಕೂಟವು ಇಡೀ ವಿಶ್ವವನ್ನು ಫುಟ್‌ಬಾಲ್ ಜ್ವರದಲ್ಲಿ ಮುಳುಗಿಸಲಿದೆ.
ಈ ಬಾರಿ ಉತ್ತರ ಅಮೆರಿಕದ ಅಮೆರಿಕಾ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಫಿಫಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳು ಒಟ್ಟಾಗಿ ವಿಶ್ವಕಪ್ ಆಯೋಜಿಸುತ್ತಿದ್ದು, ಇದು 23ನೇ ಆವೃತ್ತಿಯ ಟೂರ್ನಿಯಾಗಲಿದೆ.
ಈ ವಿಶ್ವಕಪ್‌ನಲ್ಲಿ ಪ್ರಮುಖ ಬದಲಾವಣೆಗಳೂ ನಡೆದಿವೆ. ಮೊದಲ ಬಾರಿ 32 ತಂಡಗಳ ಬದಲು ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಗಳ ಸಂಖ್ಯೆ 64ರಿಂದ 104ಕ್ಕೆ ಏರಿಕೆಯಾಗಿದೆ. ಒಟ್ಟು 39 ದಿನಗಳ ಕಾಲ ನಡೆಯುವ ಈ ಟೂರ್ನಿ ಜುಲೈ 19ರಂದು ನ್ಯೂಯಾರ್ಕ್–ನ್ಯೂಜೆರ್ಸಿಯಲ್ಲಿ ನಡೆಯುವ ಫೈನಲ್ ಪಂದ್ಯದಿಂದ ಅಂತ್ಯಗೊಳ್ಳಲಿದೆ.
ಹೊಸ ಮಾದರಿಯಲ್ಲಿ 48 ತಂಡಗಳನ್ನು 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಹಾಗೂ ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳು ಸೇರಿ ಒಟ್ಟು 32 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. ನಂತರ ರೌಂಡ್ ಆಫ್ 32 ರಿಂದ ನೇರ ಎಲಿಮಿನೇಷನ್ ಹಂತ ಆರಂಭವಾಗಲಿದೆ.
ತಂತ್ರಜ್ಞಾನ ಬಳಕೆಯನ್ನೂ ಹೆಚ್ಚಿಸಲಾಗಿದ್ದು ವಿಡಿಯೋ ಅಸಿಸ್ಟೆಂಟ್ ರೆಫರಿ (VAR)ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಜೊತೆಗೆ ಮೈದಾನದಲ್ಲಿ ಸಂವಹನ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮಗಳನ್ನೂ ಜಾರಿಗೆ ತರಲಾಗಿದೆ.
ಭಾರತೀಯ ಅಭಿಮಾನಿಗಳಿಗೆ ಪಂದ್ಯಗಳು ತಡರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಪ್ರಸಾರವಾಗಲಿವೆ. ಮೆಕ್ಸಿಕೋ ನಗರದ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಈ ವಿಶ್ವಕಪ್ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೋ ಅವರ ಕೊನೆಯ ವಿಶ್ವಕಪ್ ಆಗಬಹುದು ಎಂಬ ಊಹೆಗಳು ಕೂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿವೆ. ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಬಲಿಷ್ಠ ತಂಡಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
-
ಅಪರಾಧ17 minutes agoಕಾರು ಓಡಿಸುವ ವಿಚಾರಕ್ಕೆ ಮಾರಾಮಾರಿ: ಕೃಷ್ಣ ಮಠದಲ್ಲಿ ಗಲಾಟೆ
-
ದೇಶ53 minutes ago4,399 ದಿನಗಳ ನಿರಂತರ ಆಡಳಿತ: ಮೋದಿ ಹೊಸ ದಾಖಲೆ ಸ್ಥಾಪನೆ
-
ದೇಶ4 hours agoಕನಕಪುರದಲ್ಲಿ ಡಿಕೆಶಿ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ
-
ಅಪರಾಧ4 hours agoಬಿಟ್ಕಾಯಿನ್ ಹಗರಣ: ನಲಪಾಡ್ಗೆ ಎಸ್ಐಟಿ ಚಾರ್ಜ್ಶೀಟ್ ಶಾಕ್
-
ಅಪರಾಧ4 hours agoಆವಲಹಳ್ಳಿ ದಾಳಿ: ಅಕ್ರಮ ಜಿಲೆಟಿನ್ ದಾಸ್ತಾನು ಪತ್ತೆ, 225 ಕಡ್ಡಿ ವಶ
-
ಕ್ರೀಡೆ41 minutes agoಫಿಫಾ ವಿಶ್ವಕಪ್ 2026 ಆರಂಭ: ಜಗತ್ತೆಲ್ಲಾ ಫುಟ್‌ಬಾಲ್ ಜ್ವರದಲ್ಲಿ
-
ದೇಶ4 hours agoಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಹೊಸ ಮೈಲಿಗಲ್ಲು? ಅಂತಾರಾಷ್ಟ್ರೀಯ ವರದಿ ಬಹಿರಂಗ
