ದೇಶ

ಮೈಸೂರು ರೇಷ್ಮೆ ಸೀರೆಗೆ ಭಾರೀ ಡಿಮ್ಯಾಂಡು-ಆದರೆ ಪೂರೈಕೆಯೇ ಇಲ್ಲ!

ಬೆಂಗಳೂರು: ಶ್ರಾವಣದ ಸಂಭ್ರಮಕ್ಕೆ ಸಿದ್ಧತೆ ಆರಂಭಗೊಳ್ಳುವ ಆಷಾಢ ಮಾಸದಲ್ಲೇ ರಾಜ್ಯದ ಪಾರಂಪರಿಕ ಹೆಗ್ಗುರುತು ಮತ್ತು ಹೆಮ್ಮೆಯಾಗಿರುವ ಮೈಸೂರು ಸಿಲ್ಕ್ ಸೀರೆಗಳಿಗೆ ಭಾರಿ ಬೇಡಿಕೆಯಿದ್ದು ಬೇಡಿಕೆ ಪೂರೈಸುವಷ್ಟು ಸೀರೆಗಳು ತಯಾರಾಗುತ್ತಿಲ್ಲ, ತಯಾರಾಗುತ್ತಿರುವುದಕ್ಕಿಂತ ಬೇಡಿಕೆ ಹಲವಾರು ಪಟ್ಟು ಹೆಚ್ಚು ಇದೆ ಎಂದು ಕೆಎಸ್‍ಐಸಿ ಮೂಲಗಳು ತಿಳಿಸಿವೆ,
ಆಷಾಢ ಮತ್ತು ಶ್ರಾವಣದಲ್ಲಿ ಸೀರೆಗಳಿಗೆ ಹೆಚ್ಚುವುದು ಸಾಮಾನ್ಯ ನಾವು ದಿನಕ್ಕೆ 300 ರಿಂದ 350 ಸೀರೆಗಳನ್ನು ತಯಾರಿಸುತ್ತೇವೆ, ಆದರೆ ಬೇಡಿಕೆ ಅದಕ್ಕಿಂತ ಹಲವು ಪಟ್ಟು ಹೆಚ್ಚಿದೆ, ಮೈಸೂರು ಸೀರೆ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಸೀರೆ ಲಭ್ಯವಾಗುವುದು ಕಷ್ಟವಿದೆ, ಗ್ರಾಹಕರು ಔಟ್‍ಲೆಟ್‍ಗಳಲ್ಲಿ ಹೋಗಿ ಈ ಸೀರೆ ಲಭ್ಯ ಇದೆಯೇ, ಯಾವಾಗ ಸಿಗುವುದು ಎಂದು ವಿಚಾರಿಸಿ ಹೋಗುತ್ತಿರುವ ಸನ್ನಿವೇಶ ಇದೆ,
ನೂರು ವರ್ಷಗಳ ಪರಂಪೆರಯುಳ್ಳ ಕೆಎಸ್‍ಐಸಿಗೆ 2005 ರಲ್ಲಿ ಜಿಐ ಟ್ಯಾಗ್ ಕೂಡ ಲಭಿಸಿದೆ, ಸೀರೆಯ ಬೆಲೆ 18,500 ರೂಪಾಯಿಗಳಿಂದ ಆರಂಭಗೊಳ್ಳುತ್ತಿದ್ದರೂ ಬೇಡಿಕೆ ಹೆಚ್ಚುತ್ತಲೇ ಇದೆ, ಅದನ್ನು ಪರೈಸುವುದು ಸವಾಲಾಗಿದೆ ಎನ್ನುತ್ತಿದೆ ಮೂಲಗಳು..

Trending

Exit mobile version