ಬಿಬಿಎಂಪಿ
BBMP ರಸ್ತೆ ಗುಂಡಿ ಮುಚ್ಚವಲ್ಲಿ ಪಾಲಿಕೆ ವಿಫಲ- ಬಿಬಿಎಂಪಿ ಆ್ಯಪ್ ನಿಂದಲೇ ಸಾಬೀತು

ಬೆಂಗಳೂರು: ನಗರದಲ್ಲಿ ಕೇವಲ ಮೊವತ್ತರಿಂದ ನಲವತ್ತು ರಸ್ತೆ ಗುಂಡಿ ಅಷ್ಟೇ ಬಾಕಿ ಇದೆ ಎಂದು ಹೇಳಿದ್ದ ಬಿಬಿಎಂಪಿಗೆ ಈಗ ಬಿಸಿ ತಟ್ಟಿದೆ, ಬಿಬಿಎಂಪಿಯ ಹಸಿ ಸುಳ್ಳನ್ನು ರಸ್ತೆ ಗುಂಡಿ ಗಮನ ಹೊಸ ಆ್ಯಪ್ ಬಟಾಬಯಲು ಮಾಡುತ್ತಿವೆ,
ಹದಿನೈದು ದಿನದಿಂದಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ರಸ್ತೆ ಗುಂಡಿ ಗಮನ ಎಂಬ ಹೊಸ ಆ್ಯಪ್ ಲೋಕಾರ್ಪಣೆ ಮಾಡಿದ್ದರು, ಇದೀಗ ಈ ಆ್ಯಪ್ ನಿಂದ ವಾರ್ಡ್ ಮಟ್ಟದಲ್ಲಿನ ರಸ್ತೆ ಗುಂಡಿಗಳು ಎಷ್ಟಿವೆ ಎಂದು ಬಯಲಾಗಿದೆ,
ಈ ಆ್ಯಪ್ ನಿಂದ ಬಿಬಿಎಂಪಿಗೆ ದಿನಕ್ಕೆ ನೂರಕ್ಕೂ ಹೆಚ್ಚು ದೂರುಗಳು ಬರುತ್ತಿವೆ, 800 ಕ್ಕೂ ಹೆಚ್ಚು ದೂರುಗಳು ರಸ್ತೆ ಗುಂಡಿ ಗಮನ ಆ್ಯಪ್ ಗೆ ಬಂದಿವೆ, ದಿನೇ ದಿನೇ ಬರುತ್ತಿರುವ ದೂರನ್ನು ನೋಡಿ ಎಚ್ಚೆತ್ತಿಕೊಂಡ ಬಿಬಿಎಂಪಿ ವಾರ್ಡ್ ವಾರು ಗುಂಡಿ ಮುಚ್ಚುತ್ತೇವೆ ಎಂದು ಹೇಳಿದೆ,
ಸಾರ್ವಜನಿಕರೇ ನಿಮ್ಮ ವಾರ್ಡ್ ಗುಂಡಿ ಫೋಟೋ ತೆಗೆದು ಅಪ್ಲೋಡ್ ಮಾಡಿದ್ರೆ ಕೂಡಲೆ ಗುಂಡಿ ಮುಚ್ಚುವ ಕೆಲಸ ಆಗುತ್ತೆ ಎಂದು ಡಿಸಿಎಂ ಆ್ಯಪ್ ಬಿಡುಗಡೆಗೊಳಿಸಿದ್ದರು, ಈಗ ರಸ್ತೆ ಗುಂಡಿ ಗಮನ ಆ್ಯಪ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ,