Connect with us

ದೇಶ

ರಾಜಮನೆತನಕ್ಕೂ ಚಾಮುಂಡಿ ದೇವಾಲಯಕ್ಕೂ ಇರೋ ಸಂಬಂಧವೇನು? ದಾಖಲೆಗಳು ಏನು ಹೇಳ್ತಿವೆ?

Published

on

ಬೆಟ್ಟದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ದೇವಿ ಮೈಸೂರು ರಾಜಮನೆತನದ ಪ್ರಧಾನ ದೇವತೆ. ಇಂದು ಸಹ ಅವರ ಮನೆತನದ ಹೆಸರಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುತ್ತದೆ. ಅನೇಕ ಹಳೆ ಸಂಪ್ರದಾಯ ಮತ್ತು ಪದ್ದತಿ ಆಚರಣೆಗಳನ್ನು ಮಾಡಲಾಗುತ್ತ್ತದೆ.

ದೇವಾಲಯದಲ್ಲಿ ಗೋಡೆಗಳು, ಅಡುಗೆ ಮನೆ, ಅಥಿತಿ ಗೃಹಗಳು ಸೇರಿ ಅನೇಕ ಅಭಿವೃದ್ದಿ ಕೆಲಸಗಳನ್ನು ಒಡೆಯರ್ ಮಾಡಿದ್ದಾರೆ. ಜೊತೆಗೆ ದೇವಾಲಯಕ್ಕೆ ಅನೇಕ ಚಿನ್ನಾಭರಣಗಳನ್ನು ನೀಡಿದ್ದಾರೆ. ದೇವಾಲಯದ ಪೂಜೆ ಖರ್ಚಿಗಾಗಿ ಭೂಮಿಯನ್ನ ಬಿಟ್ಟಿದ್ದಾರೆ. ಅದಕ್ಕಾಗಿ ನೂರಾರು ವರ್ಷಗಳಿಂದ ಸಂಕಲ್ಪ ಪೂಜೆ ನಡೆಯತ್ತಾ ಬಂದಿದೆ. ರಾಜಮನೆತದ ಹೆಸರಿನಲ್ಲಿಯೇ ಸಂಕಲ್ಪ ಮಾಡಿ ಪೂಜೆ ಆರಂಭ ಮಾಡಲಾಗುತ್ತದೆ. ಆದರಂತೆ ಚಾಮುಂಡಿ ಬೆಟ್ಟದಲ್ಲಿ ಅನೇಕ ಕಾರ್ಯಕ್ರಮ ಆಗುತ್ತವೆ. ದೇವಾಲಯವು ಇಂದು ಸಹ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ.

ದಾಖಲೆಗಳು ಏನು ಹೇಳುತ್ತವೆ?

1831 ರಲ್ಲಿ ಬ್ರಿಟಿಷ್ ಸರ್ಕಾರ ಮೈಸೂರು ಆಡಳಿತ ವಹಿಸಿಕೊಂಡಿತ್ತು. ಆಗ ಮುಜರಾಯಿ ಕಮಿಷನ್​ಗೆ ಆಡಳಿತದ ವರ್ಗಾವಣೆ ಮಾಡಿತ್ತು. ಆನಂತರ ಅರಮನೆ ಮುಜರಾಯಿ ಸಂಸ್ಥೆಗಳು ಅಂತಾ ಬದಲಾವಣೆ ಮಾಡಲಾಯಿತು. ಆದರೆ ಅದು ಮಹಾರಾಜರ ಬಳಿಯೇ ಅಂದಿನಿಂದಲೂ ಉಳಿದುಕೊಂಡಿದೆ.

ಹೆಚ್ ಪಿ ಶಶಿಧರಮೂರ್ತಿಯವರ ಬುಕ್​ನಲ್ಲಿ ಈ ಬಗ್ಗೆ ಉಲ್ಲೇಖ ಇದೆ. ಕರ್ನಾಟಕ ಸ್ಟೇಟ್ ಆರ್ಚಿವ್ ಡಿಪಾರ್ಟ್​ಮೆಂಟ್ ಮುಜರಾಯಿ ಬುಕ್​ನಲ್ಲಿ ಈ ಕುರಿತಾಗಿ ಮಾಹಿತಿ ಇದೆ. ಚಾಮುಂಡಿ ಬೆಟ್ಟದ ಕಾರ್ಯಗಳು 1970 – 71ರಿಂದ ರಾಜಮನೆತನದ ಒಡೆತನದಲ್ಲಿ ನಡೆಯುತ್ತಿದ್ದವು. 1986 ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾವನ್ನಪ್ಪುತ್ತಾರೆ. ಆಗ ಸರ್ಕಾರದ ಸುಪರ್ದಿಗೆ ನೀಡಲಾಗಿತ್ತು.

ಅಕ್ಟೋಬರ್​​ 20, 1908 ರಲ್ಲಿ ಮಹಾರಾಜರಿಂದ ಆದೇಶವನ್ನು ಮಾಡಿದ್ದರು. ಚಾಮುಂಡಿ ದೇವಾಲಯದ ಸೇರಿ 12 ದೇವಾಲಯಗಳ ಬಗ್ಗೆ ಆದೇಶ ಹೊರಡಿಸಿದ್ದರು. ದೇವಾಲಯಗಳನ್ನ ಅರಮನೆ ಇಲಾಖೆಗೆ ವರ್ಗಾಯಿಸಿ ಆದೇಶ ನೀಡಿದ್ದರು. ಅಷ್ಟು ದೇವಾಲಯಗಳನ್ನು ಓರ್ವ ಅಧಿಕಾರಿ ನೋಡಿಕೊಳ್ಳಲು ನೇಮಕಗೊಳಿಸಲು ಆದೇಶ ನೀಡಿದ್ದರು.

ಜನವರಿ 20, 1909ರಲ್ಲಿ ಡಿಸಿ ಮೈಸೂರನ್ನು ಮ್ಯಾನೇಜ್ ಮಾಡಲು ಆದೇಶ ಹೊರಡಿಸುತ್ತಾರೆ. ಅದರಂತೆಯೇ ಏಪ್ರಿಲ್​ 14, 1920ರ ವೇಳೆ ಅರಮನೆಗೆ ಇಲಾಖೆ ಆಡಳಿತ ಮಂಡಳಿ ಆದೇಶ ನೀಡುತ್ತದೆ. ಅದರಲ್ಲಿ 29 ದೇವಾಲಯಗಳು ಮಹಾರಾಜರ ಆಡಳಿತದಲ್ಲಿದ್ದವು. ಜನವರಿ 23, 1950 ರಲ್ಲಿ ಭಾರತ ಸರ್ಕಾರ ಮತ್ತು ಮಹಾರಾಜರ ನಡುವೆ ಒಪ್ಪಂದ ನಡೆಯಿತು.

ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರುವಾಗ ಮೊದಲ ಒಪ್ಪಂದ ನಡೆಯಿತು. ಚಾಮುಂಡಿ ದೇವಾಲಯ ಸೇರಿ ಮಹಾರಾಜರ ಖಾಸಗಿ ಆಸ್ತಿಗಳ ಬಗ್ಗೆ ಮತ್ತು 29 ದೇವಾಲಯಗಳ ಮೇಲೆ ರಾಜಮನೆತದ ಪೂರ್ತಿ ಮಾಲಕತ್ವವಿದೆ ಎಂದು ಹೇಳಿತು.

ಆಗಸ್ಟ್​ 15, 47ರ ತನಕ ಇದ್ದ ಆಸ್ತಿಗಳ ಮೇಲೆ ಹಕ್ಕು ಹೊಂದಿರುವ ಒಪ್ಪಂದ ಮಾಡಲಾಯಿತು. ಇದಕ್ಕೆ ಮಹಾರಾಜ ಮತ್ತು ಸಿಎಸ್ ಆಫ್ ಭಾರತ ಸರ್ಕಾರದ ಸಹಿ ಇದೆ. ಫೆಬ್ರವರಿ 6, 1951ರ ಮೈಸೂರು ಸರ್ಕಾರದ ಆದೇಶದಲ್ಲಿಯೂ ಉಲ್ಲೇಖವಿದೆ. ಅರಮನೆ ಮುಜರಾಯಿ ಆಸ್ತಿಗಳು ಮಹಾರಾಜರಿಗೆ ಸೇರಿವೆ ಎಂದು ಆದೇಶವಿದೆ.

ದೇಶ

“ನರಕದಲ್ಲಿ ಬದುಕಬೇಕಾಗುತ್ತದೆ”: ಇರಾನ್‌ಗೆ ಟ್ರಂಪ್ ಎಚ್ಚರಿಕೆ

Published

on

By

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ Truth Social ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್ ಮೂಲಸೌಕರ್ಯಗಳ ಮೇಲೆ ಭಾರೀ ದಾಳಿ ನಡೆಯಬಹುದು. ಇತಿಹಾಸದಲ್ಲಿ ಕಾಣದ ರೀತಿಯ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ” ಎಂದು ಕಠಿಣ ಭಾಷೆಯಲ್ಲಿ ಹೇಳಿದ್ದಾರೆ.

ಇದರ ಬೆನ್ನಲ್ಲೇ, ಇರಾನ್ ಒಳಗೆ ಪತನಗೊಂಡಿದ್ದ ಎಫ್-15 ಯುದ್ಧವಿಮಾನ ಕಮಾಂಡರ್‌ರನ್ನು ಅಮೆರಿಕಾ ವಿಶೇಷ ಪಡೆಗಳು ಯಶಸ್ವಿಯಾಗಿ ರಕ್ಷಿಸಿರುವುದನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಶತ್ರು ಪ್ರದೇಶದಲ್ಲಿದ್ದ ಗಾಯಗೊಂಡ ಸೈನಿಕರನ್ನು ಸುರಕ್ಷಿತವಾಗಿ ಕರೆತಂದಿರುವುದು ಸಾಹಸಮಯ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದೀಗ ಹಾರ್ಮುಜ್ ಜಲಸಂಧಿ ವಿವಾದ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಯುರೋಪ್ ಮತ್ತು ಏಷ್ಯಾಕ್ಕೆ ತೈಲ ಸಾಗಾಣಿಕೆ ಮಾಡುವ ಪ್ರಮುಖ ಮಾರ್ಗವೇ ಇದು. ಇರಾನ್ ಈ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಜಾಗತಿಕ ತೈಲ ಬೆಲೆ ಏರಿಕೆಯ ಆತಂಕ ಎದುರಾಗಿದೆ.

ಇದರ ನಡುವೆ ಇರಾನ್ ಕೂಡ ತಿರುಗೇಟು ನೀಡಿದ್ದು, “ನಮ್ಮ ಮೇಲೆ ದಾಳಿ ಮಾಡಿದರೆ ಅಮೆರಿಕದ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸುತ್ತೇವೆ” ಎಂದು ಎಚ್ಚರಿಸಿದೆ.

ಒಟ್ಟಿನಲ್ಲಿ, ಅಮೆರಿಕಾ-ಇರಾನ್ ನಡುವಿನ ವಾಕ್ಸಮರ ಮತ್ತು ಯುದ್ಧದ ವಾತಾವರಣ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಜಾಗತಿಕ ಶಾಂತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Continue Reading

ಕ್ರೀಡೆ

ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!

Published

on

By

ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.

ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.

ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.

ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.

ಆರ್ಸಿಬಿ ಬ್ಯಾಟಿಂಗ್ ವಿವರ:

  • ವಿರಾಟ್ ಕೊಹ್ಲಿ – 28 (18)
  • ಫಿಲ್ ಸಾಲ್ಟ್ – 46 (30)
  • ದೇವದತ್ತ ಪಡಿಕಲ್ – 50 (29)
  • ರಜತ್ ಪಾಟೀದಾರ್ – 48* (19)
  • ಟಿಮ್ ಡೇವಿಡ್ – 70* (25)
Continue Reading

ದೇಶ

ಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ

Published

on

By

ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಕ್ಕೂ ಜಗಳ-ಕೇಸು ಸಾಮಾನ್ಯವಾಗಿರುವ ಸಂದರ್ಭದಲ್ಲೇ, ಬಿಹಾರದ ಒಂದು ಹಳ್ಳಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಕಲಿಯಾಚಕ್ ಗ್ರಾಮ ಕಳೆದ 118 ವರ್ಷಗಳಿಂದ ಯಾವುದೇ ಅಪರಾಧ ದಾಖಲಾಗದೇ ಶಾಂತಿಯುತ ಜೀವನ ನಡೆಸುತ್ತಿರುವುದು ವಿಶೇಷ.

ನಳಂದ ಜಿಲ್ಲೆಯ ಈ ಗ್ರಾಮದಲ್ಲಿ ಸ್ಥಾಪನೆಯಾದ ದಿನದಿಂದಲೂ ಗಂಭೀರ ಅಪರಾಧಗಳೇ ನಡೆದಿಲ್ಲ. ಅಷ್ಟೇ ಅಲ್ಲ, ಇಷ್ಟು ವರ್ಷಗಳಲ್ಲಿ ಪೊಲೀಸ್ ಸೈರನ್ ಕೂಡ ಕೇಳಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಗ್ರಾಮದಲ್ಲಿ ಯಾವುದೇ ಸಣ್ಣಪುಟ್ಟ ವಿವಾದಗಳು ಉಂಟಾದರೂ, ಹಿರಿಯರು ಕೂತು ಸಮಸ್ಯೆಯನ್ನು ಪರಿಹರಿಸುತ್ತಾರೆ.

ಈ ಗ್ರಾಮ ಹಿಲ್ಸಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಪೊಲೀಸ್ ದಾಖಲೆಗಳಲ್ಲಿ ಈ ಗ್ರಾಮದಿಂದ ಒಂದೇ ಒಂದು ದೂರು ಕೂಡ ಇಲ್ಲದಿರುವುದು ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.

ಗ್ರಾಮದಲ್ಲಿ ಸುಮಾರು 60 ಕುಟುಂಬಗಳು, 500 ಜನರು ವಾಸಿಸುತ್ತಿದ್ದು, ವಿವಿಧ ಜಾತಿ-ವರ್ಗಗಳ ಜನರು ಸಹೋದರತ್ವದಿಂದ ಬದುಕುತ್ತಿದ್ದಾರೆ. “ಗ್ರಾಮದ ಸಮಸ್ಯೆಗಳನ್ನು ಗ್ರಾಮದಲ್ಲೇ ಬಗೆಹರಿಸಬೇಕು” ಎಂಬುದು ಇವರ ಮೂಲ ತತ್ವವಾಗಿದೆ.

ಈ ಶಾಂತಿಯುತ ವಾತಾವರಣಕ್ಕೆ ಪ್ರಮುಖ ಕಾರಣ ಮಾಜಿ ಪಂಚಾಯಿತಿ ಅಧ್ಯಕ್ಷ ಸಾಧು ಶರಣ್ ಸಿಂಗ್ ಅವರ ಮಾರ್ಗದರ್ಶನ. ಅವರ ಪ್ರಯತ್ನದಿಂದ ಈ ಗ್ರಾಮ ಮಾದರಿಯಾಗಿ ರೂಪುಗೊಂಡಿದೆ.

ಇಲ್ಲಿನ ಯುವಕರು ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಗಮನಿಸಿ: ಮೇಲಿನ ವಿವರಗಳು ಬಿಹಾರದ ಕಲಿಯಾಚಕ್ ಗ್ರಾಮದ ಕುರಿತು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿವೆ. ಇದು ಅಪರಾಧ ಮುಕ್ತ ಗ್ರಾಮವಾಗಿ ದೇಶದಲ್ಲಿ ವಿಶೇಷ ಮನ್ನಣೆಯನ್ನು ಗಳಿಸಿದೆ.

ಒಟ್ಟಿನಲ್ಲಿ, ಕಲಿಯಾಚಕ್ ಗ್ರಾಮವು ಒಗ್ಗಟ್ಟು, ಸಹೋದರತ್ವ ಮತ್ತು ಶಾಂತಿಯುತ ಬದುಕಿನ ನಿಜವಾದ ಮಾದರಿಯಾಗಿ ಇಡೀ ದೇಶಕ್ಕೆ ಪ್ರೇರಣೆಯಾಗಿದೆ.

Continue Reading

Trending