ದೇಶ
ಕೃಷಿಕರ ಆದಾಯ ಹೆಚ್ಚಿಸಲಿವೆ ಈ 109 ಮಾದರಿಯ ತಳಿಗಳು- ರೈತರೊಂದಿಗೆ ಪ್ರಧಾನಿ ಸಂವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕ ಇಳುವರಿ ನೀಡುವ 109 ತಳಿಗಳನ್ನು ದೇಶದ ರೈತರಿಗಾಗಿ ಇಂದು ಬಿಡುಗಡೆ ಮಾಡಿದರು,
ಈ ತಳಿಗಳು ಕೃಷಿ ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲಿವೆ, ಈ ಉದ್ದೇಶಕ್ಕಾಗಿ ಕೃಷಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ 109 ತಳಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನ ಪೂಸಾ ಕ್ಯಾಂಪಸ್ನಲ್ಲಿ ಕೃಷಿಗೆ ಪ್ರಧಾನಿ ಸಮರ್ಪಿಸಿದರು,
ರೈತರಿಗೆ ಲಾಭದಾಯಕ ನೀಡುವ ತಳಿಗಳು ಮಾತ್ರವಲ್ಲ, ಅಪೌಷ್ಠಿಕತೆ ನಿವಾರಿಸುವ ವಿವಿಧ ಬಗೆಯ ಈ ತಳಿಗಳ ಪೈಕಿ 34 ಕ್ಷೇತ್ರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳ ತಳಿಗಳೂ ಸೇರಿವೆ, ಹವಾಮಾನ-ಸ್ಧಿತಿಸ್ಧಾಪಕ ಮತ್ತು ಜೈವಿಕ ಬಲವರ್ಧಿತ ಬೀಜ ಪ್ರಬೇದಗಳನ್ನು ಪ್ರಧಾನಿ ಅನಾವರಣಗೊಳಿಸಿದರು,
ಇದೇ ವೇಳೆ ಮೋದಿ ಅವರು ರೈತರ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು,