ದೇಶ

Viral News ವಿಮಾನ ನಿಲ್ದಾಣದ ರನ್‍ವೇ ಮೇಲೆ ಹಾವು ಮುಂಗುಸಿಗಳ ಕಾದಾಟ

ಬಿಹಾರ: ಪಾಟ್ನಾದ ವಿಮಾನ ನಿಲ್ದಾಣದ ರನ್‍ವೇನಲ್ಲಿ ಮೂರು ಮುಂಗುಸಿಗಳು ಮತ್ತು ಹಾವಿನ ಕಾದಾಟ ವೀಡಿಯೋದಲ್ಲಿ ಸೆರೆಯಾಗಿದ್ದು, ಅವಗಳು ತೀವ್ರ ಹಣಾಹಣಿ ನೋಡುಗರನ್ನು ಬೆರಗುಗೊಳಿಸುವಂತಿದೆ, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ, ಹಾವು ಮುಂಗುಸಿಗಳ ಕಚ್ಚಾಟದಿಂದಾಗಿ ವಿಮಾನಗಳ ಸಮಯದ ಮೇಲೆ ಯಾವುದೇ ವ್ಯತ್ಯಾಸವಾಗಿಲ್ಲ,

ಮೊದಲಿಗೆ ಒಂದು ಮುಂಗುಸಿ ಮತ್ತು ಹಾವಿನ ನಡುವಿನ ಕದನವಾಗಿತ್ತು ಬಳಿಕ ಮತ್ತೆರಡು ಮುಂಗುಸಿಗಳು ಸೇರಿ ಹಾವಿನ ಮೇಲೆ ದಾಳಿ ನಡೆಸಿವೆ, ಹಾವು ತನ್ನನ್ನು ರಕ್ಷಿಸಿಕೊಳ್ಳು ಪ್ರಯತ್ನಿಸುತ್ತಿದ್ದರೆ ಮುಂಗುಸಿಗಳು ದಾಳಿ ಮುಂದುವರಿಸಿವೆ, ಮೂರು ಮುಂಗುಸಿಗಳು ಬೇರೆ ಬೇರೆ ದಿಕ್ಕಿನಿಂದ ಹಾವಿನ ಮೇಲೆ ದಾಳಿ ನಡೆಸಿದೆ,
ಹಾವುಗಳು ಸಾಮಾನ್ಯವಾಗಿ ಮುಂಗಿಸಿಯ ಮರಿಗಳನ್ನು ಹುಡುಕಿ ತಿನ್ನತ್ತವೆ, ಮುಂಗುಸಿಗಳು ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ, ಹೀಗೆ ಮುಂಗಸಿ ಹಾವಿನ ಬೇಟೆಯಾಡುವ ದೃಶ್ಯಗಳು ಕೆಲವೊಮ್ಮೆ ಉಸಿರು ಬಿಗಿಹಿಡಿದು ನೋಡುವಂತಿರುತ್ತವೆ..

Trending

Exit mobile version